Home » ಖ್ಯಾತ ಡಿಸ್ಕಸ್ ಥ್ರೋ ಆಟಗಾರ, ಕನ್ನಡಿಗ ವಿಕಾಸ್ ಗೌಡ ನಿವೃತ್ತಿ

ಖ್ಯಾತ ಡಿಸ್ಕಸ್ ಥ್ರೋ ಆಟಗಾರ, ಕನ್ನಡಿಗ ವಿಕಾಸ್ ಗೌಡ ನಿವೃತ್ತಿ

by manager manager

ನವದೆಹಲಿ: ಭಾರತದ ಖ್ಯಾತ ಡಿಸ್ಕಸ್ ಥ್ರೋ ಆಟಗಾರ, ಕಾಮನ್ ವೆಲ್ತ್ ಚಿನ್ನದ ಪದಕ ವಿಜೇತ, ಪದ್ಮಶ್ರೀ ಪ್ರಶಸ್ತಿ ವಿಜೇತ ಕನ್ನಡಿಗ ವಿಕಾಸ್ ಗೌಡ ಅವರು ತಮ್ಮ ವೃತ್ತಿಪರ ಕ್ರೀಡಾ ಜೀವನಕ್ಕೆ ವಿದಾಯ ಹೇಳಿದ್ದಾರೆ.

ಒಲಿಂಪಿಕ್ಸ್ ನಲ್ಲಿ 4 ಬಾರಿ ದೇಶವನ್ನು ಪ್ರತಿನಿಧಿಸಿರುವ 34ರ ಹರೆಯದ ವಿಕಾಸ್ ನಿವೃತ್ತಿ ನಿರ್ಧಾರ ಅಭಿಮಾನಿಗಳಲ್ಲಿ ಅಚ್ಚರಿ ತಂದಿದೆ. 15 ವರ್ಷಕ್ಕೂ ಹೆಚ್ಚು ಕಾಲ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧಿಸಿ ಭಾರತದ ಕೀರ್ತಿ ಪತಾಕೆ ಹಾರಿಸಿದ ವಿಕಾಸ್ ಗೌಡ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ. ಕಳೆದ ವರ್ಷ ಭುವನೇಶ್ವರದಲ್ಲಿ ನಡೆದ ಏಶ್ಯನ್ ಚಾಂಪಿಯನ್’‌ಶಿಪ್‌ನಲ್ಲಿ ಕಂಚಿನ ಪದಕ ಜಯಿಸಿದ ಬಳಿಕ ವಿಕಾಸ್ ಯಾವುದೇ ಪ್ರಮುಖ ಅಂತರ್‌ರಾಷ್ಟ್ರೀಯ ಟೂರ್ನಿಗಳಲ್ಲಿ ಭಾಗವಹಿಸಿರಲಿಲ್ಲ.

ಗ್ಲಾಸ್ಗೊ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಡಿಸ್ಕಸ್ ಥ್ರೋ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ ಭಾರತದ ಮೊದಲ ಪುರುಷ ಅಥ್ಲೀಟ್ ಎಂಬ ಕೀರ್ತಿಗೂ ವಿಕಾಸ್ ಗೌಡ ಭಾಜನರಾಗಿದ್ದರು. 2004, 2008, 2012 ಹಾಗೂ 2016ರ ಒಲಿಂಪಿಕ್ ಗೇಮ್ಸ್’ನಲ್ಲಿ ವಿಕಾಸ್ ಗೌಡ ಭಾಗವಹಿಸಿದ್ದರು. ನಾಲ್ಕು ಒಲಿಂಪಿಕ್ಸ್’‌ಗಳ ಪೈಕಿ 2012ರ ಲಂಡನ್ ಒಲಿಂಪಿಕ್ಸ್’ನಲ್ಲಿ ಮಾತ್ರ ಫೈನಲ್ ಸುತ್ತಿಗೆ ತಲುಪಿದ್ದರು. 2 ಏಷ್ಯನ್ ಕ್ರೀಡಾಕೂಟದಲ್ಲಿ 1 ಬೆಳ್ಳಿ, ಒಂದು ಕಂಚು ಗೆದ್ದಿದ್ದರು. ಕ್ರೀಡಾ ವಿಭಾಗದಲ್ಲಿ ವಿಕಾಸ್ ಸಲ್ಲಿಸಿರುವ ಗಣನೀಯ ಸೇವೆಯನ್ನು ಪರಿಗಣಿಸಿದ ಕೇಂದ್ರ ಸರ್ಕಾರ 2017ರಲ್ಲಿ ಕ್ರೀಡಾ ವಿಭಾಗದಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.

ಇನ್ನು ವಿಕಾಸ್ ನಿವೃತ್ತಿಯ ವಿಚಾರವನ್ನು ಭಾರತ ಅಥ್ಲೆಟಿಕ್ಸ್ ಫೆಡರೇಶನ್(ಎಎಫ್ಐ)ತನ್ನ ಟ್ವಿಟರ್ ಪೇಜ್‌ನಲ್ಲಿ ಪ್ರಕಟಿಸಿದ್ದು, ವಿಕಾಸ್ ಎಎಫ್ಐಗೆ ಪತ್ರ ಬರೆದು ತಮ್ಮ ನಿವೃತ್ತಿಯ ಇಂಗಿತ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

india’s greatest discuss thrower, Olympian, CWG2014 gold medallist Vikas Gowda retires from Athletics. Vikas Gowda has officially announced retirement. Vikas Gowda was the first Indian male athlete to win gold medal in the discus throw category at the Glasgow Commonwealth Games.

You may also like