Home » ಬಿಎಂಟಿಸಿಯ ವಿವಿಧ ಹುದ್ದೆಗಳಿಗೆ ಸಾಮಾನ್ಯ ಸಾಮರ್ಥ್ಯ ಪರೀಕ್ಷಾ ದಿನಾಂಕ ಪ್ರಕಟ

ಬಿಎಂಟಿಸಿಯ ವಿವಿಧ ಹುದ್ದೆಗಳಿಗೆ ಸಾಮಾನ್ಯ ಸಾಮರ್ಥ್ಯ ಪರೀಕ್ಷಾ ದಿನಾಂಕ ಪ್ರಕಟ

by manager manager

ಬಿಎಂಟಿಸಿ(BMTC) ಇತ್ತೀಚೆಗೆ ಹೊರಡಿಸಿದ್ದ ಸಹಾಯಕ ಸಂಚಾರ ನಿರೀಕ್ಷಕ, ನಿರ್ವಾಹಕ, ಭದ್ರತಾ ರಕ್ಷಕ, ಕುಶಲಕರ್ಮಿ ತಾಂತ್ರಿಕ ಸಹಾಯಕ ಹಾಗೂ ಕಿರಿಯ ಸಹಾಯಕ-ಕಂ-ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳ ನೇಮಕಾತಿಗಾಗಿ ಹೊರಡಿಸಲಾಗಿದ್ದ ಅರ್ಜಿದಾರರಿಗೆ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯನ್ನು ನಡೆಸಲಾಗುವ ದಿನಾಂಕವನ್ನು ಪ್ರಕಟಿಸಿದೆ.

ಜಾಹೀರಾತು ಸಂಖ್ಯೆ 1/2017, 2/2017 ದಿನಾಂಕ 5/12/2017 ಹಾಗೂ 1/2018, 2/2018 ದಿನಾಂಕ 23/3/2018 ರ ಅನ್ವಯ ಅರ್ಜಿಸಲ್ಲಿಸಿರುವ ಅಭ್ಯರ್ಥಿಗಳು ಈ ಕೆಳಕಂಡ ದಿನಾಂಕಗಳಂದು ಹುದ್ದೆಗಳ ಅನುಸಾರವಾಗಿ ಸಾಮಾನ್ಯ ಸಾಮರ್ಥ್ಯ ಲಿಖಿತ ಪರೀಕ್ಷೆಗೆ ಹಾಜರಾಗಲು ಪ್ರಕಟಣೆ ಹೊರಡಿಸಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

ಹುದ್ದೆ : ಕುಶಲಕರ್ಮಿ

ಪರೀಕ್ಷಾ ದಿನಾಂಕ : 9/6/2018

ಸಮಯ : ಮಧ್ಯಾಹ್ನ 2 ಗಂಟೆಯಿಂದ 4 ಗಂಟೆವರೆಗೆ

 

ಹುದ್ದೆ : ಸಹಾಯಕ ಸಂಚಾರ ನಿರೀಕ್ಷಕ, ನಿರ್ವಾಹಕ, ಭದ್ರತಾ ರಕ್ಷಕ ಹಾಗೂ ಕಿರಿಯ ಸಹಾಯಕ-ಕಂ-ಡೇಟಾ ಎಂಟ್ರಿ ಆಪರೇಟರ್

ಪರೀಕ್ಷಾ ದಿನಾಂಕ : 10/6/2018

ಸಮಯ : ಬೆಳಿಗ್ಗೆ 10 ಗಂಟೆಯಿಂದ 12 ಗಂಟೆಯವರೆಗೆ

 

ಹುದ್ದೆ : ತಾಂತ್ರಿಕ ಸಹಾಯಕ

ಪರೀಕ್ಷಾ ದಿನಾಂಕ : 10/6/2018

ಸಮಯ : ಮಧ್ಯಾಹ್ನ 2 ಗಂಟೆಯಿಂದ 4 ಗಂಟೆವರೆಗೆ

ಸೂಚನೆ: ಈ ಮೇಲಿನ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯ ಪ್ರವೇಶ ಪತ್ರ(Hall Ticket) ವನ್ನು ಬಿಎಂಟಿಸಿ ಅಧಿಕೃತ ವೆಬ್‌ಸೈಟ್ www.mybmtc.com ಗೆ ಭೇಟಿ ನೀಡಿ ದಿನಾಂಕ 3/6/2018 ರಿಂದ ಪ್ರಿಂಟ್ ತೆಗೆದುಕೊಳ್ಳಬಹುದು. ಇದರಲ್ಲಿ ಸೂಚಿಸಲಾದ ಇತರೆ ದಾಖಲಾತಿಗಳೊಂದಿಗೆ ಪರೀಕ್ಷೆಗೆ ಹಾಜರಾಗತಕ್ಕದು ಎಂದು ಪ್ರಕಟಣೆಯಲ್ಲಿ ಸೂಚಿಸಲಾಗಿದೆ.

ಅರ್ಜಿಸಲ್ಲಿಸಿರುವ ಅಭ್ಯರ್ಥಿಗಳಿಗೆ ಅಂಚೆ ಅಥವಾ ಇತರೆ ಯಾವುದೇ ಮೂಲಗಳ ಮೂಲಕ ಹಾಲ್ ಟಿಕೆಟ್ ತಲುಪಿಸುವುದಿಲ್ಲ. ಪ್ರಕಟಣೆಯಲ್ಲಿ ಸೂಚಿಸಲಾದ ದಿನಾಂಕ ಮತ್ತುಸಮಯಕ್ಕೆ ಸರಿಯಾಗಿ ಸಾಮಾನ್ಯ ಪರೀಕ್ಷೆಗೆ ಹಾಜರಾಗದಿದ್ದಲ್ಲಿ ನಂತರ ಯಾವುದೇ ಮನವಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ.

ಯಾವುದೇ ಗೊಂದಲವಿದ್ದಲ್ಲಿ ಅಭ್ಯರ್ಥಿಗಳು ಸಹಾಯವಾಣಿ ಸಂಖ್ಯೆ 7760991125, 7760991127, 080-22537409, 080-22537405 ಗೆ ಕೆಲಸದ ದಿನಗಳಂದು ಕಛೇರಿ ಅವಧಿಯಲ್ಲಿ ಸಂಪರ್ಕಿಸಬಹುದಾಗಿದೆ.

The date for conducting common aptitude test to BMTC’S various jobs was out. The applicants can download the hall ticket 7 days before the exam in www.mybmtc.com website.

You may also like