Home » ಆರ್ಟಿಕಲ್ 370 ಬಗ್ಗೆ ನಿಮಗೆ ತಿಳಿದಿದೆಯೇ ?

ಆರ್ಟಿಕಲ್ 370 ಬಗ್ಗೆ ನಿಮಗೆ ತಿಳಿದಿದೆಯೇ ?

by manager manager

ಭಾರತದ ಸಂವಿಧಾನವು ಭಾರತದ ಜನರನ್ನು ಆಳುವ ಸರಕಾರದ ಮೂಲ ರಚನೆಯನ್ನು ನಿರ್ದಿಷ್ಟಪಡಿಸುತ್ತದೆ. ಅದು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳನ್ನು ಸರಕಾರದ ಮೂರು ಮುಖ್ಯ ಅಂಗಗಳಾಗಿ ಏರ್ಪಡಿಸುತ್ತದೆ. ಸಂವಿಧಾನವು ಪ್ರತಿ ಅಂಗದ ಅಧಿಕಾರದ ವ್ಯಾಖ್ಯೆಯನ್ನು ನೀಡುವುದಲ್ಲದೆ ಅವುಗಳ ಜವಾಬ್ದಾರಿಯನ್ನೂ ಖಚಿತಗೊಳಿಸುತ್ತದೆ.

ಜಮ್ಮು ಕಾಶ್ಮಿರ ಭಾರತದ ಅವಿಭಾಜ್ಯ ಅಂಗ ಎನ್ನುತ್ತೇವೆ. ಆದರೆ ಸಂವಿಧಾನದ ೩೭೦ನೇ ವಿಧಿಯ ಪ್ರಕಾರ ಆ ರಾಜ್ಯಕ್ಕೆ ವಿಶೇಷವಾದ ಸ್ಥಾನಮಾನವಿದೆ. ಈ ವಿಶೇಷತೆಯೇ ಕಾಶ್ಮೀರವನ್ನು ಭಾರತದಿಂದ ಅನೇಕ ವಿಷಯಗಳಲ್ಲಿ ಪ್ರತ್ಯೇಕಿಸುತ್ತೇವೆ, ೧೯೫೦ರ ಜನವರಿ ೨೬ರಂದು ಅಸ್ತಿತ್ವಕ್ಕೆ ಬಂದ ೩೭೦ನೇ ವಿಧಿಯ ಹಿಂದೆ ದೊಡ್ಡ ಇತಿಹಾಸವೇ ಇದೆ.

೧೯೪೭ರ ಅಕ್ಟೋಬರ್ ೨೪ರಂದು ಪಾಕಿಸ್ತಾನ ಮೂಲದ ದಾಳಿಕೋರರು ಕಾಶ್ಮೀರವನ್ನು ಆಕ್ರಮಿಸಿದಾಗ ಅಲ್ಲಿನ ಮಹಾರಾಜ ಹರಿ ಸಿಂಗ್ ಭಾರತ ಸರಕಾರದ ನೆರವು ಯಾಚಿಸುತ್ತಾರೆ. ದಾಳಿಕೋರರನ್ನು ಭಾರತೀಯ ಸೇನಾ ಪಡೆ ಹಿಮ್ಮೆಟ್ಟಿಸುತ್ತದೆ. ೧೯೪೭ರ ಅಕ್ಟೋಬರ್ ೨೬ರಂದು ರಕ್ಷಣೆ, ವಿದೇಶ ವ್ಯವಹಾರ ಮತ್ತು ಸಂಪರ್ಕ ಇಲಾಖೆಯನ್ನು ಭಾರತ ಸರಕಾರದ ವಶಕ್ಕೊಪ್ಪಿಸುತ್ತಾರೆ. ಭಾರತದ ಇತರ ರಾಜ್ಯಗಳ ರಾಜರುಗಳೂ ಇದೇ ರೀತಿ ಭಾರತದ ಜತೆ ತಮ್ಮ ಸಂಸ್ಥಾನಗಳನ್ನು ವಿಲೀನಗೊಳಿಸುವ ಪ್ರಕ್ರಿಯೆಯನ್ನು ಆರಂಭಿಸುತ್ತಿದ್ದರು. ಜಮ್ಮು ಕಾಶ್ಮೀರ ವಿಚಾರದಲ್ಲಿ ಅಂದಿನ ಭಾರತ ಸರಕಾರದ ಒತ್ತಾಯದ ಮೇರೆಗೆ, ಅಂತಿಮ ನಿರ್ಧಾರವನ್ನು ಜಮ್ಮು ಕಾಶ್ಮೀರದ ಅಸೆಂಬ್ಲಿ ತೆಗೆದುಕೊಳ್ಳಬೇಕೆಂದು ನಿರ್ಣಯಿಸಲಾಯಿತು. ಆದರೆ ಈ ಮಧ್ಯಂತರ ಅವಧಿಯಲ್ಲಿ ಭಾರತದ ಸಂವಿಧಾನದ ಅಡಿಯಲ್ಲಿ ತಾತ್ಕಾಲಿಕ ವ್ಯವಸ್ಥೆಯೊಂದನ್ನು ಕಲ್ಪಿಸಲು ಸೃಷ್ಟಿಯಾಗಿದ್ದೇ ೩೭೦ನೇ ವಿಧಿ!

ರಾಜ್ಯದಲ್ಲಿ ಆಡಳಿತ ನಡೆಸುವ ಸರ್ಕಾರದ ಸಹಮತ ಅಗತ್ಯ ೩೭೦ನೇ ಜಾರಿ ಇರುವ ಕಾಶ್ಮೀರದಲ್ಲಿ ಪೌರತ್ವ, ನಿರ್ದಿಷ್ಟ ಆಸ್ತಿಯ ಮಾಲೀಕತ್ವ, ಮೂಲಭೂತ ಹಕ್ಕುಗಳ ಅನುಷ್ಠಾನ ಮುಂತಾದ ವಿಚಾರಗಳಲ್ಲಿ ವಿಶೇಷ ಕಾನೂನುಗಳು ಅನುಷ್ಠಾನಗೊಳ್ಳುತ್ತವೆ. ಕೇಂದ್ರ ಸರ್ಕಾರದ ಯಾವುದೇ ನಿರ್ಧಾರಗಳನ್ನು ಆ ರಾಜ್ಯದಲ್ಲಿ ಜಾರಿಗೊಳಿಸಬೇಕಾದಲ್ಲಿ, ಅದಕ್ಕೆ ಆ ನಿರ್ದಿಷ್ಟ ರಾಜ್ಯದಲ್ಲಿ ಆಡಳಿತ ನಡೆಸುವ ಸರ್ಕಾರದ ಸಹಮತ ಅಗತ್ಯ.

  • ರಕ್ಷಣೆ, ಹಣಕಾಸು, ವಿದೇಶಾಂಗ ವ್ಯವಹಾರ ಹಾಗೂ ಸಂಪರ್ಕ ಕ್ಷೇತ್ರಗಳಲ್ಲಿ ಭಾರತದ ಸಂವಿಧಾನ ವಿಧಿ ವಿಧಾನಗಳಂತೆ ನಡೆದುಕೊಳ್ಳಬೇಕು.
  • ಭಾರತದ ಗಣರಾಜ್ಯದ ಅಂಗವಾದರೂ ಪ್ರತ್ಯೇಕ ಸಂವಿಧಾನವನ್ನು ಹೊಂದಬಹುದು.ಕಾಶ್‌ಮೀರ ಸಮಸ್ಯೆಯ ಬೇರು ಆರ್ಟಿಕಲ್ 370, ಏನಿದು ಅಸಲಿ ಸಮಸ್ಯೆ? ಇಲ್ಲಿದೆ ವಿವರ
    ಈ ಆರ್ಟಿಕಲ್ ೩೭೦ರ ಅಡಿಯಲ್ಲಿ ಭಾರತದ ಉಳಿದ ಯಾವುದೇ ರಾಜ್ಯಗಳಿಗೆ ಸಿಗದಿರುವಂಥ ವಿಶೇಷ ಅಧಿಕಾರಗಳನ್ನು ಜಮ್ಮು ಕಾಶ್‌ಮೀರಕ್ಕೆ ಒದಗಿಸಲಾಯಿತು. ಅಂತೂ ೧೯೫೬ರ ಫೆಬ್ರವರಿಯಲ್ಲಿ ಜಮ್ಮು ಕಾಶ್ಮೀರ ಅಸೆಂಬ್ಲಿಯು ಭಾರತದೊಡನೆ ಸೇರ್ಪಡೆಯಾಗಲು ಅಧಿಕೃತ ಒಪ್ಪಿಗೆ ಕೊಟ್ಟಿತು. ಆದರೆ ರಕ್ಷಣೆ, ವಿದೇಶ ವ್ಯವಹಾರ ಮತ್ತು ಸಂಪರ್ಕ ಹೊರತುಪಡಿಸಿ ಉಳಿದ ವಿಚಾರಗಳನ್ನು ಫ್ಲೆಕ್ಸಿಬಲ್ ಆಗಿ ಉಳಿಸಿಕೊಳ್ಳಲಾಯಿತು. ಅಲ್ಲಿಂದ ಇಲ್ಲಿಯವರೆಗೆ ರಕ್ಷಣೆ, ವಿದೇಶಾಂಗ ವ್ಯವಹಾರ, ಸಂಪರ್ಕ ಹೊರತುಪಡಿಸಿ ಹಲವು ವಲಯಗಳಿಗೆ ವಿಷಯಗಳಿಗೆ ಸಂಬAಧಿಸಿ ಭಾರತದ ಸಂವಿಧಾನದ ವಿಧಿಗಳನ್ನು ಕಾಶ್‌ಮೀರಕ್ಕೆ ವಿಸ್ತರಿಸಲಾಗಿದೆ. ಅವುಗಳಲ್ಲಿ ಮುಖ್ಯವಾಗಿ ಸುಪ್ರೀಂ ಕೋರ್ಟ್, ಚುನಾವಣಾ ಆಯೋಗ, ಸಿಎಜಿ ವ್ಯಾಪ್ತಿಯನ್ನು ಅಲ್ಲಿಗೆ ವಿಸ್ತರಿಸಿರುವುದು ಇತ್ಯಾದಿ. ಹೀಗಿದ್ದರೂ, ಈಗಲೂ ಭಾರತದ ಬೇರಾವ ರಾಜ್ಯದಲ್ಲಿ ಇಲ್ಲದಿರುವ ವಿಶೇಷ ಸ್ಥಾನ ಮಾನಗಳು ಉಳಿದಿವೆ.

ಆರ್ಟಿಕಲ್ 370 ವಿಧಿಯು ಈ ರೀತಿ ಇದೆ
• ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಾಗುತ್ತಿದೆ. ಅಂದರೆ ಸಂವಿಧಾನದ 370ನೇ ವಿಧಿ ಹಾಗೂ 35(ಎ) ಕೂಡ ರದ್ದು ಆಗುತ್ತದೆ.
• ಇನ್ನು ದೇಶದ ಯಾವುದೇ ಪ್ರಜೆ ಅಲ್ಲಿ ಜಮೀನು ಖರೀದಿಸಬಹುದು.
• ಕಾಶ್ಮೀರಕ್ಕೆ ಪ್ರತ್ಯೇಕ ಧ್ವಜ ಇರುವುದಿಲ್ಲ, ಭಾರತದ್ದೇ ಏಕ ಧ್ವಜ.
• ಕಾಶ್ಮೀರದವರಿಗೆ ದ್ವಿಪೌರತ್ವ ಇನ್ನು ಇರುವುದಿಲ್ಲ. ಅವರು ಭಾರತದ ಪ್ರಜೆಯೇ.
• ಇನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಬೇರೆ ರಾಜ್ಯದವರು ಹೂಡಿಕೆ ಮಾಡಿ, ಕೈಗಾರಿಕೆ, ಉದ್ಯಮಗಳ ಅಭಿವೃದ್ಧಿಗೆ ಮುಂದಾಗಬಹುದು.
• ಬೇರೆ ರಾಜ್ಯದಿಂದ ಬಂದು ನೆಲೆಸಿದವರಿಗೂ ಅಲ್ಲಿ ಮತದಾನದ ಹಕ್ಕು ಇರುತ್ತದೆ.
• ಇತರ ರಾಜ್ಯಗಳಲ್ಲಿರುವಂತೆಯೇ ಅಲ್ಲಿ ದಲಿತರಿಗೆ, ಹಿಂದುಳಿದವರಿಗೆ ಮೀಸಲಾತಿ ನಿಯಮಗಳು ಅನ್ವಯವಾಗುತ್ತವೆ.
• ಕಾಶ್ಮೀರದ ಹುಡುಗಿಯರು ದೇಶದ ಬೇರೆ ರಾಜ್ಯಗಳ/ಜಮ್ಮು ಮತ್ತು ಕಾಶ್ಮೀರದ ಕಾಯಂ ಅಲ್ಲದ ನಿವಾಸಿ ಹುಡುಗರನ್ನು ವರಿಸಿದರೆ, ಅವರ ಮಕ್ಕಳು ಈ ರಾಜ್ಯದಲ್ಲಿ ಉತ್ತರಾಧಿಕಾರದ ಹಕ್ಕುಗಳು ಇರಲಿಲ್ಲ. ಇನ್ನು ಈ ನಿಯಮವೂ ಹೋಗುತ್ತದೆ
• ಕೇಂದ್ರದ ಎಲ್ಲ ಕಾನೂನುಗಳು, ಉದಾಹರಣೆಗೆ ಕರ್ನಾಟಕ ರಾಜ್ಯದಂತೆ, ಗೋವಾದಂತೆ, ದಿಲ್ಲಿಯಂತೆ, ಇನ್ನು ನೇರವಾಗಿ ಜಮ್ಮು ಮತ್ತು ಕಾಶ್ಮೀರಕ್ಕೂ ಲಾಗೂ ಆಗಲಿದೆ.
• ಕಾಶ್ಮೀರದ ಕಾನೂನು ಸುವ್ಯವಸ್ಥೆಯ ಜವಾಬ್ದಾರಿ ಇನ್ನು ಸಂಪೂರ್ಣವಾಗಿ ಕೇಂದ್ರದ ಹಿಡಿತದಲ್ಲಿರುತ್ತದೆ. ಇಲ್ಲಿ ರಾಜ್ಯಪಾಲರೇ ಪರಮಾಧಿಕಾರ ಹೊಂದಿರುತ್ತಾರೆ.
• ಇದುವರೆಗೆ ಕೆಲವರಿಗೆ ಮಾತ್ರ ದೊರೆಯುತ್ತಿದ್ದ ತಾರತಮ್ಯದ ಸೌಲಭ್ಯಗಳು ಇರುವುದಿಲ್ಲ.
• ಒಟ್ಟಾರೆ ಹೇಳುವುದಾದರೆ, ಜಮ್ಮು ಮತ್ತು ಕಾಶ್ಮೀರವು ಭಾರತ ಸರಕಾರದ ಸಂಪೂರ್ಣ ಹಿಡಿತಕ್ಕೆ ಬರುತ್ತದೆ.
• ನಿರ್ಭೀತಿಯಿಂದ ಅಲ್ಲಿ ಭಾರತೀಯ ತ್ರಿವರ್ಣ ಧ್ವಜ ಹಾರಾಡಬಹುದು
• ಜಮ್ಮು ಮತ್ತು ಕಾಶ್ಮೀರಕ್ಕೆ ದಿಲ್ಲಿಯಂತೆಯೇ ಪ್ರತ್ಯೇಕ ಶಾಸಕಾಂಗ, ವಿಧಾನಸಭೆ, ಸರಕಾರ ಇರುತ್ತದೆ.
• ಲಡ್ಢಾಖ್ ಪ್ರದೇಶವೂ ಮತ್ತೊಂದು ಕೇಂದ್ರಾಡಳಿತ ಪ್ರದೇಶವಾಗಲಿದ್ದು, ಇಲ್ಲಿ ಪ್ರತ್ಯೇಕ ಶಾಸಕಾಂಗ ಇರುವುದಿಲ್ಲ (ಚಂಡೀಗಢದAತೆ).

ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು ಮತ್ತು ಕರ್ತೃಗಳ ಬಗ್ಗೆ ನಿಮಗೆಷ್ಟು ಗೊತ್ತು?