Home » CBSE 10 ಮತ್ತು 12 ನೇ ತರಗತಿ ಪರೀಕ್ಷಾ ದಿನಾಂಕ ಪ್ರಕಟ: ಸಂಪೂರ್ಣ ಮಾಹಿತಿ ಇಲ್ಲಿದೆ

CBSE 10 ಮತ್ತು 12 ನೇ ತರಗತಿ ಪರೀಕ್ಷಾ ದಿನಾಂಕ ಪ್ರಕಟ: ಸಂಪೂರ್ಣ ಮಾಹಿತಿ ಇಲ್ಲಿದೆ

by manager manager
cbse class 10 examination date cbse class 12 examination date anounced

ಕೇಂದ್ರಿಯ ಪ್ರೌಢ ಶಿಕ್ಷಣ ಮಂಡಳಿ (The Central Board of Secondary Education – CBSE) ಭಾನುವಾರ 10 ಮತ್ತು 12 ನೇ ತರಗತಿಗಳ ಪರೀಕ್ಷಾ ದಿನಾಂಕಗಳನ್ನು ಬಿಡುಗಡೆ ಮಾಡಿದೆ.

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ ಇಂದು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ 2019 ರಲ್ಲಿ ನಡೆಯಲಿರುವ 10 ಮತ್ತು 12 ನೇ ತರಗತಿಗಳ ಪರೀಕ್ಷಾ ದಿನಾಂಕಗಳನ್ನು ಬಿಡುಗಡೆ ಮಾಡಿದ್ದು, ಸಂಪೂರ್ಣವಾಗಿ ಪರೀಕ್ಷಾ ದಿನಾಂಕಗಳನ್ನು ವೆಬ್‌ನಲ್ಲಿ ಅಪ್‌ಲೋಡ್ ಮಾಡಲಾಗಿರುವ ಶೀಟ್‌ ನಲ್ಲಿ ಪ್ರಕಟಿಸಿದೆ.

ಶೀಟ್‌ನಲ್ಲಿ ಅಪ್‌ಲೋಡ್ ಮಾಡಲಾದ ಮಾಹಿತಿ ಪ್ರಕಾರ CBSE 12 ನೇ ತರಗತಿ ಪರೀಕ್ಷೆಯು 2019 ರ ಫೆಬ್ರವರಿ 15 ರಿಂದ ಏಪ್ರಿಲ್ 03 ವರೆಗೆ ನಡೆಯಲಿದೆ.

CBSE 10 ನೇ ತರಗತಿ ಪರೀಕ್ಷೆಗಳು ದಿನಾಂಕ 2019 ಫೆಬ್ರವರಿ 21 ರಿಂದ ಮಾರ್ಚ್ 29 ವರೆಗೆ ನಡೆಯಲಿದೆ.

ಸಿಬಿಎಸ್‌ಇ ಪರೀಕ್ಷಾ ದಿನಾಂಕಗಳನ್ನು ಸಿದ್ಧಪಡಿಸುವಾಗ ಪ್ರಮುಖ ವಿಷಯಗಳ ಮೇಲೆ ಗಮನಹರಿಸಿ ಸಿದ್ಧಪಡಿಸಿದ್ದು ಈ ದಿನಾಂಕಗಳ ಮಾದರಿ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ. ಅಲ್ಲದೇ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಈ ದಿನಾಂಕಗಳಿಂದ ತೊಂದರೆ ಆಗದಂತೆ ಎಚ್ಚರವಹಿಸಲಾಗಿದೆ.

CBSE 10 ನೇ ತರಗತಿ ಪರೀಕ್ಷಾ ದಿನಾಂಕಗಳನ್ನು ನೋಡಲು ಕ್ಲಿಕ್ ಮಾಡಿ

CBSE 12 ನೇ ತರಗತಿ ಪರೀಕ್ಷಾ ದಿನಾಂಕಗಳನ್ನು ನೋಡಲು ಕ್ಲಿಕ್ ಮಾಡಿ

The Central Board of Secondary Education – CBSE has announced class 10th and class 12th board exams 2019 date sheet.

You may also like