Home » ಪೈಲ್ಸ್ ಸಮಸ್ಯೆ ಉಂಟಾಗಲು ಪ್ರಮುಖ ಕಾರಣಗಳು ಯಾವುವು ಗೊತ್ತೇ? ಇಲ್ಲಿದೆ ಮಾಹಿತಿ..

ಪೈಲ್ಸ್ ಸಮಸ್ಯೆ ಉಂಟಾಗಲು ಪ್ರಮುಖ ಕಾರಣಗಳು ಯಾವುವು ಗೊತ್ತೇ? ಇಲ್ಲಿದೆ ಮಾಹಿತಿ..

by manager manager

causes for piles lifestyle lead to painful symptoms of piles

ಈ ಲೇಖನದಲ್ಲಿ ಪೈಲ್ಸ್ (ಮೂಲವ್ಯಾದಿ) ಬೆಳವಣಿಗೆಗೆ ಪ್ರಮುಖ ಕಾರಣಗಳು ಯಾವುವು ಎಂಬುದನ್ನು ಮಾತ್ರ ತಿಳಿಸಿದ್ದೇವೆ. ಆ ಅಂಶಗಳು ಈ ಕೆಳಗಿನಂತಿವೆ. (Main reasons or causes for painful piles)

– ದೀರ್ಘಕಾಲದ ಮಲಬದ್ಧತೆ

– ದೀರ್ಘಕಾಲದ ಅತಿಸಾರ

– ದೀರ್ಘಕಾಲ ಅತ್ಯಧಿಕ ತೂಕ ಎತ್ತುವುದು

– ಗರ್ಭಧರಿಸುವುದು

– ಅನುವಂಶಿಕವಾಗಿಯೂ ಪೈಲ್ಸ್ ಸಮಸ್ಯೆ ಬರುತ್ತದೆ

– ಆಹಾರದಲ್ಲಿ ಫೈಬರ್ ಕೊರತೆ

– ಕಡಿಮೆ ಪ್ರಮಾಣದ ನೀರು ಸೇವನೆ

– ಜಡ ಜೀವನಶೈಲಿ(ಕುಳಿತಲ್ಲೇ ಹೆಚ್ಚು ಕೂರುವುದು)

– ಒತ್ತಡ

– ದೀರ್ಘಾವಧಿ ನಿಲ್ಲುವುದು ಮತ್ತು ಕೂರುವುದು

– ಟಾಯ್ಲೆಟ್‌ನಲ್ಲಿ ದೀರ್ಘಕಾಲದವರೆಗೆ ಕುಳಿತುಕೊಳ್ಳುವುದು

– ಅತಿಯಾದ ಬೊಜ್ಜು

– ಕರುಳಿನ ಶಸ್ತ್ರಚಿಕಿತ್ಸೆಯಿಂದ

– ಲೂ (ಫಾರಿನ್ ಟಾಯ್ಲೆಟ್) ನಲ್ಲಿ ದೀರ್ಘಕಾಲ ಕೂರುವುದರಿಂದ ಗುದ ನಾಳಗಳಿಗೆ ರಕ್ತ ಪಂಪ್‌ ಆಗಿ ಗುದ ನಾಳಗಳು ಊದಿಕೊಳ್ಳುತ್ತವೆ.ಈ ಪ್ರಕ್ರಿಯೆ ಪೈಲ್ಸ್ ಬೆಳವಣಿಗೆಗೆ ಕಾರಣವಾಗುತ್ತದೆ.

– ಚೇರಿನ ಮೇಲೆ ದೀರ್ಘ ಸಮಯ ಕೂರುವುದರಿಂದ ಪುಷ್ಠದ ಮೇಲೆ ಒತ್ತಡ ಉಂಟಾಗಿ ಪೈಲ್ಸ್‌ಗೆ ಕಾರಣವಾಗುತ್ತದೆ.

– ದೀರ್ಘಕಾಲ ನಿಲ್ಲವುದರಿಂದ ದೇಹದ ಕೆಳ ಭಾಗಕ್ಕೆ ರಕ್ತ ಸಂಚಾರವಾಗುವುದರಿಂದ ರಕ್ತನಾಳಗಳು ಊದಿಕೊಂಡು ಮೂಲವ್ಯಾಧಿ ಉರಿಯೂತಕ್ಕೆ ಕಾರಣವಾಗುತ್ತದೆ.

– ದೇಹದ ಅತಿಯಾದ ತೂಕ ಗುದದ್ವಾರದ ಸ್ನಾಯುಗಳ ಮೇಲೆ ಒತ್ತಡವನ್ನು ತಂದು ಏರಿಳಿತ ಉಂಟಾಗಿ ನರಗಳು ಹೊರಹೊಮ್ಮಲು ಕಾರಣವಾಗುತ್ತವೆ.

– ಅತ್ಯಧಿಕ ಮಾಂಸ ತಿನ್ನವುದು, ಹೆಚ್ಚು ಫ್ರೈ ಮಾಡಿದ ಆಹಾರ, ಜಂಕ್ ಫುಡ್, ಅತಿಯಾದ ಖಾರದ ಪದಾರ್ಥಗಳು, ದ್ರವರೂಪದ ಆಹಾರದ ಕಡಿಮೆ ಸೇವನೆ(ಹಣ್ಣಿನ ಜ್ಯೂಸ್) ಈ ಆಹಾರ ಪದ್ಥತಿಯಿಂದ ಮಲಬದ್ಥತೆಯಲ್ಲಿ ಒತ್ತಡ ಉಂಟಾಗುತ್ತದೆ. ಇದು ಪೈಲ್ಸ್‌ಗೆ ಕಾರಣವಾಗುತ್ತದೆ.

ಪೈಲ್ಸ್(ಮೂಲವ್ಯಾದಿ)ನಿಂದ ಪಾರಾಗಲು ಮನೆಯಲ್ಲೇ ಮಾಡಬಹುದಾದ ಸರಳ ಪರಿಹಾರಗಳು ಇವು..

ಪೈಲ್ಸ್ (ಮೂಲವ್ಯಾದಿ) ಲಕ್ಷಣಗಳು

– ಗುದದ್ವಾರ ಊದಿಕೊಳ್ಳುವುದು

– ಗುದದ್ವಾರದಲ್ಲಿ ತುರಿಕೆ ಉಂಟಾಗುವುದು ಮತ್ತು ಟಾಯ್ಲೆಟ್ ಕ್ರಿಯೆ ಸಂದರ್ಭದಲ್ಲಿ ನೋವು ಉಂಟಾಗುವುದು.

– ಗುದದ್ವಾರದಲ್ಲಿ ರಕ್ತ ಬರುವುದು

– ಪೈಲ್ಸ್ ಇರುವವರು ಬಹುಬೇಗ ಗುಣಪಡಿಸಿಕೊಳ್ಳದಿದ್ದಲ್ಲಿ ರಕ್ತಶ್ರಾವ ದಿನದಿಂದ ದಿನಕ್ಕೆ ಹೆಚ್ಚಾಗಿ ದೇಹ ವೀಕ್ ಆಗುತ್ತದೆ. ದೇಹದಲ್ಲಿ ರಕ್ತ ಕಡಿಮೆ ಆದಾಗ ಇತರೆ ರೋಗಗಳಿಗೆ ಗುರಿಯಾಗುವ ಸಾಧ್ಯತೆಯೂ ಹೆಚ್ಚು.

These above lifestyle are causes lead to painful symptoms of piles. Read also How to reduce piles or Hemorrhoids?

You may also like