Home » ಕೆನರಾ ಬ್ಯಾಂಕ್‌ನಲ್ಲಿ ಭದ್ರತಾ ಮ್ಯಾನೇಜರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಕೆನರಾ ಬ್ಯಾಂಕ್‌ನಲ್ಲಿ ಭದ್ರತಾ ಮ್ಯಾನೇಜರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

by manager manager

Canara Bank recruitment for the post of Manager Security

ಕೆನರಾ ಬ್ಯಾಂಕ್(Canara Bank Recruitment) ಖಾಲಿ ಇರುವ ಭದ್ರತಾ ಮ್ಯಾನೇಜರ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಅಹ್ವಾನಿಸಿದೆ.

ಕೆನರಾ ಬ್ಯಾಂಕ್ ನಲ್ಲಿನ ಮಧ್ಯಮ ಶ್ರೇಣಿಯ ಭದ್ರತಾ ಮ್ಯಾನೇಜರ್‌ ಸ್ಕೇಲ್-II ಹುದ್ದೆಗಳಿಗೆ ಈ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.

ಹುದ್ದೆಗಳ ಸಂಖ್ಯೆ: 31

ಅರ್ಜಿಸಲ್ಲಿಸಲು ಪ್ರಾರಂಭಿಕ ದಿನಾಂಕ : 07-11-2018

ಅರ್ಜಿಸಲ್ಲಿಸಲು ಕೊನೆಯ ದಿನಾಂಕ : 27-11-2018

ಚಲನ್ ಪಡೆದು ಶುಲ್ಕ ಪಾವತಿಸಲು ಕೊನೆಯ ದಿನ : 27-11-2018

ಅರ್ಜಿ ಸಲ್ಲಿಸುವುದು ಹೇಗೆ?

ಕೆನರಾ ಬ್ಯಾಂಕ್ ಅಧಿಕೃತ ವೆಬ್‌ಸೈಟ್ www.canarabank.com ಭೇಟಿ ನೀಡಿ ಅರ್ಜಿ ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ ಸಲ್ಲಿಸಬೇಕು.

– ಭರ್ತಿ ಮಾಡಿದ ಅರ್ಜಿ ಸಲ್ಲಿಸಲು ಡಿಸೆಂಬರ್ 3, 2018 ಕೊನೆಯ ದಿನಾಂಕ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತೆಗಳು ಈ ಕೆಳಗಿನಂತಿವೆ

– 2018 ನವೆಂಬರ್ 1 ರ ಒಳಗಾಗಿ ಅಭ್ಯರ್ಥಿಯು ಪದವಿ ಪಡೆದಿರಬೇಕು ಅಥವಾ ತತ್ಸಮಾನ ಶಿಕ್ಷಣ ಪಡೆದಿರಬೇಕು

– 25 ರಿಂದ 40 ವರ್ಷದೊಳಗೆ ವಯೋಮಿತಿ ಇರತಕ್ಕದು

– ಮಿಲಿಟರಿ, ವಾಯುಪಡೆ, ನೌಕಾಪಡೆ ಗಳಲ್ಲಿ ಕನಿಷ್ಟ 5 ವರ್ಷ ಕ್ಯಾಪ್ಟನ್ ಕೆಳಗಿನ ಹಂತದ ಶ್ರೇಣಿಗಳಲ್ಲಿ ಉದ್ಯೋಗ ನಿರ್ವಹಿಸಿರಬೇಕು.

ಉದ್ಯೋಗದ ವಿವರ

– ಭದ್ರತಾ ಕಾರ್ಯ ನಿರ್ವಹಣೆ ಮತ್ತು ಬೆಂಕಿ ಅನಾಹುತಗಳಿಂದ ರಕ್ಷಣೆ, ಪೊಲೀಸ್ ಮತ್ತು ಇತರ ಭದ್ರತಾ ಅಧಿಕಾರಿಗಳೊಂದಿಗೆ ತರಬೇತಿ.

ಅರ್ಜಿ ಶುಲ್ಕ :SC/ST/PWBD ಅಭ್ಯರ್ಥಿಗಳಿಗೆ ರೂ.118

ಹಾಗೂ ಇತರೆ ಅಭ್ಯರ್ಥಿಗಳಿಗೆ ರೂ.708.

Canara Bank has invited the applications for the post of manager security. Candidates can through bank official website.

You may also like