Home » ಬೆಂಕಿಯ ಜ್ವಾಲೆಗೆ ಕರಗುತ್ತಿದ್ದರೂ ದೃಶ್ಯಗಳನ್ನು ಸೆರೆ ಹಿಡಿಯಿತು ಈ ಕ್ಯಾಮರಾ..!

ಬೆಂಕಿಯ ಜ್ವಾಲೆಗೆ ಕರಗುತ್ತಿದ್ದರೂ ದೃಶ್ಯಗಳನ್ನು ಸೆರೆ ಹಿಡಿಯಿತು ಈ ಕ್ಯಾಮರಾ..!

by manager manager

ವಾಷಿಂಗ್ಟನ್: ಇತ್ತೀಚೆಗೆ ನಾಸಾ ಸ್ಪೇಸ್ ಎಕ್ಸ್ ಫಾಲ್ಕನ್ 9 ಎಂಬ ರಾಕೆಟ್ ಉಡಾವಣೆ ಮಾಡಿತ್ತು. ರಾಕೆಟ್ ಉಡಾವಣೆಯ ಕ್ಷಣಗಳನ್ನು ಸೆರೆ ಹಿಡಿಯಲೆಂದು ಕ್ಯಾಮೆರಾವೊಂದನ್ನು ರಾಕೆಟ್ ಉಡಾವಣಾ ಸ್ಥಳದ ಸಮೀಪವೇ ಇಡಲಾಗಿತ್ತು. ನೌಕೆ ಉಗುಳಿದ ಬೆಂಕಿಯ ಜ್ವಾಲೆಗೆ ಕ್ಯಾಮರಾವೇ ಕರಗಿ ಹೋಗಿದೆ. ಆದರೆ ಬೆಂಕಿಯ ಜ್ವಾಲೆಗೆ ಕ್ಯಾಮರಾ ಕರಗುತ್ತಿದ್ದರೂ ಉಡಾವಣಾ ದೃಶ್ಯಗಳನ್ನೂ ಸೆರೆಹಿಡಿದು ಎಲ್ಲರಲ್ಲು ಅಚ್ಚರಿ ಮೂಡಿಸಿದೆ.

camera melts after capturing rocket launch

ಕ್ಯಾಲಿಫೋರ್ನಿಯಾದ ವಾಯುನೆಲೆಯಿಂದ ಮೇ 22 ರಂದು ಸ್ಪೇಸ್ ಎಕ್ಸ್ ಫಾಲ್ಕನ್ ರಾಕೆಟ್ ಉಡಾವಣೆ ಮಾಡಲಾಗಿತ್ತು. ರಾಕೆಟ್ ಉಡಾವಣಾ ಕೇಂದ್ರದಿಂದ 400 ಮೀಟರ್ ದೂರದಲ್ಲಿ ಕ್ಯಾಮರಾವನ್ನು ಇರಿಸಲಾಗಿತ್ತು. ಕಳೆದ 30 ವರ್ಷಗಳಿಂದ ನಾಸಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಲ್ ಇಂಗಲ್ಸ್ ಎಂಬ ಛಾಯಾಗ್ರಾಹಕ ತನ್ನ ಕ್ಯಾಮರಾವನ್ನು ಉಡಾವಣಾ ಸ್ಥಳದಲ್ಲಿ ಇರಿಸಿದ್ದ. ರಿಮೋಟ್ ಸಹಾಯದಿಂದ ಉಡಾವಣೆಯನ್ನು ಚಿತ್ರೀಕರಿಸುತ್ತಿದ್ದ ಚಾಯಾಗ್ರಾಹಕ ಸುರಕ್ಷಿತ ಸ್ಥಳದಲ್ಲಿದ್ದರು.

ರಾಕೆಟ್ ನಭಕ್ಕೆ ಹಾರುತ್ತಿದ್ದಂತೆ ಅಧಿಕ ತಾಪಮಾನದಿಂದ ಕ್ಯಾಮರಾ ಕರಗಿ ಹೋಗಿದೆ. ಕ್ಯಾಮರಾ ಕರಗಿದರೂ ರಾಕೆಟ್ ಉಡಾವಣೆಯ ಸಂಪೂರ್ಣ ದೃಶ್ಯಗಳು ಸೆರೆಯಾಗಿದೆ. ಘಟನೆಯಲ್ಲಿ ಕ್ಯಾಮರಾ ಮೆಮೊರಿ ಕಾರ್ಡ್’ಗೆ ಹಾನಿಯಾಗಿರಲಿಲ್ಲ ಹೀಗಾಗಿ ರಾಕೆಟ್ ಉಡಾವಣೆಯ ದೃಶ್ಯಗಳು ಸೆರೆಯಾಗಿದೆ.

ಕರಗಿಹೋಗಿರುವ ಈ ಕ್ಯಾಮರಾವನ್ನು ವಾಷಿಂಗ್ಟನ್’ನಲ್ಲಿರುವ ನಾಸಾ ಕೇಂದ್ರ ಕಛೇರಿಯಲ್ಲಿ ಪ್ರದರ್ಶನಕ್ಕಿಡುವ ಸಾಧ್ಯತೆ ಇದೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಇದರ ಫೋಟೊ, ವಿಡಿಯೋ ಸಖತ್ ವೈರಲ್ ಆಗಿದೆ.

Recently NASA launched the Space Xalcon 9 rocket. A camera was placed near rocket launch to capture moments of rocket launch. The camera is melt to the flame of the spit fire. But the camera is melting into the flame of the fire, but camera melts after capturing rocket launch

You may also like