Home » ನವಧಾನ್ಯದ ದಾನವೇ ಶ್ರೇಷ್ಠ, ದಾನ ಕೊಟ್ಟರೆ ನಿಮ್ಮ ಆರೋಗ್ಯ ಸುಧಾರಿಸುತ್ತದೆಯೇ?

ನವಧಾನ್ಯದ ದಾನವೇ ಶ್ರೇಷ್ಠ, ದಾನ ಕೊಟ್ಟರೆ ನಿಮ್ಮ ಆರೋಗ್ಯ ಸುಧಾರಿಸುತ್ತದೆಯೇ?

by manager manager

ದಾನ ಕೊಟ್ಟರೆ ಮನಸ್ಸಿಗೆ ಸಮಾಧಾನವಾಗುತ್ತದೆ ಹಾಗಾಗೀ ಹಿರಿಯರು ದಾನಕೊಡುವುದರಲ್ಲಿ ತಮ್ಮ ನೆಮ್ಮದಿಯನ್ನು ಹುಡುಕುತ್ತಾರೆ. ದಾನ ಕೊಡುವುದೆಂದರೇ ಅದು ಕಷ್ಟದಲ್ಲಿರುವವರಿಗೆ ಅಥವ ಅವಶ್ಯಕತೆ ಇರುವವರಿಗೆ ದಾನ ಕೊಟ್ಟರೆ ಅವರ ಬಾಯಿಯಲ್ಲಿ ಬರುವ ಮತ್ತು ಮನಸ್ಸಲ್ಲಿ ಹುಟ್ಟುವ ಒಳ್ಳೆಯ ಭಾವನೆಗಳು ಮತ್ತು ಮಾತುಗಳಿಂದ ನಮಗೆ ಒಳ್ಳೆಯ ಫಲ ಲಭಿಸುತ್ತದೆ. ಅದರಲ್ಲೂ ನವಧಾನ್ಯದ ಬಗ್ಗೆ ಮಾತಾಡಬೇಕೆಂದರೆ ಅದು ಅಷ್ಟೇ ನವಧಾನ್ಯವನ್ನು ನವಗ್ರಹಗಳಿಗೆ ಹೋಲಿಸುತ್ತಾರೆ. ಆ ನವಗ್ರಹಗಳ ದೃಷ್ಟಿಯು ನಮಗೆ ಒಳ್ಳೆಯ ಫಲವನ್ನು ಕೊಡಲಿ ಎಂಬುದೇ ಈ ನವಧಾನ್ಯವನ್ನು ದಾನ ಕೊಡುವುದರ ಹಿಂದಿನ ಪದ್ದತಿಯಾಗಿದೆ. ನವಧಾನ್ಯಗಳ ಸೇವನೆಯಿಂದ ಆರೋಗ್ಯವಷ್ಟೇ ಸುಧಾರಿಸುವುದಲ್ಲ. ಅದರೊಂದಿಗೆ ಕರ್ಮಸಂಬಂಧಿತ ಕಾಯಿಲೆಗಳನ್ನು ಗುಣಪಡಿಸಿಕೊಳ್ಳಬಹುದು. ಅನೇಕ ತತ್ ಸಂಬಂಧಿ ದೋಷವನ್ನು ಪರಿಹರಿಸಿಕೊಳ್ಳಬಹುದು.

ನವಗ್ರಹಗಳಿಗೆ ಪ್ರದಕ್ಷಿಣೆ ಹಾಕಿ ನವಧಾನ್ಯಗಳ ದಾನ ಮಾಡಿದರೆ ಹಲವು ಕಾಯಿಲೆಗಳೂ ಗುಣವಾಗಬಲ್ಲವು. ನವಗ್ರಹ ಧಾನ್ಯಗಳನ್ನು ನವಗ್ರಹ ಹೋಮ/ಶಾಂತಿ , ಸತ್ಯನಾರಾಯಣ ಪೂಜೆಗಳಲ್ಲಿ ಉಪಯೋಗಿಸುತ್ತಾರೆ. ಕೆಳಗೆ ನವ ಧಾನ್ಯಗಳ ಹೆಸರು, ಯಾವ ಗ್ರಹಕ್ಕೆ ಯಾವ ಧಾನ್ಯ, ಯಾವ ದಿಕ್ಕಿಗೆ ಯಾವ ಧಾನ್ಯ ಇಡಬೇಕು ಎಂಬ ವಿವರಗಳಿವೆ.

ಯಾವ ದಿಕ್ಕಿಗೆ ಯಾವ ಧಾನ್ಯ ಇಡಬೇಕು ಗೊತ್ತೇ?

1. ಕಡಲೆ ಕಾಳು :- ಗುರು :- ಉತ್ತರ

2. ಉದ್ದಿನ ಕಾಳು :- ರಾಹು :- ನೈಋತ್ಯ

3. ಹೆಸರು ಕಾಳು :- ಬುಧ :- ಈಶಾನ್ಯ

4. ಹುರಳಿ ಕಾಳು :- ಕೇತು :- ವಾಯುವ್ಯ

5. ತೊಗರಿ ಬೆಳೆ :- ಕುಜ :- ದಕ್ಷಿಣ

6. ಭತ್ತ :- ಚಂದ್ರ :- ಆಗ್ನೇಯ

7. ಗೋಧಿ :- ಸೂರ್ಯ :- ಮಧ್ಯಭಾಗ

8. ಎಳ್ಳು :- ಶನಿ :- ಪಶ್ಚಿಮ

9. ಅವರೇಕಾಳು :- ಶುಕ್ರ :- ಪೂರ್ವ

ಯಾವ ಗ್ರಹಕ್ಕೆ ಯಾವ ಧಾನ್ಯ?

ಗೋಧಿ-ಸೂರ್ಯ:- ಪ್ರತಿ ಭಾನುವಾರ ನವಗ್ರಹಗಳಿಗೆ 2 ಪ್ರದಕ್ಷಿಣೆ ಹಾಕಿ 1/4 ಗೋಧಿ ದಕ್ಷಿಣೆ ಸಹಿತ ಧಾನ ಮಾಡಿದರೆ ಪುರುಷರ ಆರೋಗ್ಯ, ಹೃದಯ, ಕಣ್ಣು, ಪಿತ್ತ, ಪಿತ್ತಪ್ರಧಾನವಾದ ರೋಗಗಳು, ಬೆನ್ನು, ರಕ್ತದೊತ್ತಡ, ಮಿದುಳುವ್ಯಾಧಿ, ತಲೆ ಸುಡುವುದು, ಜಠರದ ಹುಣ್ಣು, ಸಣ್ಣಕರುಳು, ಕೆಂಪು ರಕ್ತಕಣ, ರಕ್ತದ ಪ್ಲೇಟ್‍ಲೆಟ್ಸ್ (ಡೆಂಗ್ಯೂ ಜ್ವರ), ಏಡ್ಸ್, ಸನ್‍ಸ್ಟ್ರೋಕ್ಸ್, ಪ್ರತಿರೋಧಕ ಶಕ್ತಿ, ಥೈರಾಯಿಡ್, ಪೋಲಿಯೋ ಗುಣವಾಗುತ್ತವೆ.

ಅಕ್ಕಿ-ಚಂದ್ರ:- ಪ್ರತಿ ಸೋಮವಾರ ನವಗ್ರಹಗಳಿಗೆ 5 ಪ್ರದಕ್ಷಿಣೆ ಹಾಕಿ 1/4 ಅಕ್ಕಿ ದಕ್ಷಿಣೆ ಸಹಿತ ದಾನ ಮಾಡಿದರೆ ಸ್ತ್ರೀಯರ ಆರೋಗ್ಯ, ಮಾನಸಿಕವಾಗಿ ಬಲಾಡ್ಯನಾಗಲು, ಏಕಾಗ್ರತೆ, ಮನಃಶಾಂತಿಗೆ, ರಕ್ತ ಚಲನೆಗೆ, ಮಧುಮೇಹ,ಕೋಮ, ಮೂರ್ಛೆ, ಸನ್ನಿವ್ಯಾಧಿ, ಗರ್ಭಾಶಯ, ತುಟಿ, ಬಾಣಂತಿಯರ ವ್ಯಾಧಿಗಳು, ಪುರುಷರಿಗೆ ಎಡಗಣ್ಣು, ಸ್ತ್ರೀಗೆ ಬಲಕಣ್ಣು, ಅಸ್ತಮ, ಕ್ಷಯ, ಅನ್ನಕೋಶ, ಸ್ತನಗಳು, ಜಲಧೋರ, ಹುಚ್ಚು, ಥೈರಾಯಿಡ್, ಪಾಶ್ರ್ವವಾಯು, ಬಿಕ್ಕಳಿಕೆ, ಸಣ್ಣ ಮಕ್ಕಳಿಗೆ ಬರುವ ಎಲ್ಲಾ ವ್ಯಾಧಿಗಳು ಗುಣವಾಗುತ್ತವೆ.

ತೊಗರಿ-ಕುಜ:- ಪ್ರತಿ ಮಂಗಳವಾರ ನವಗ್ರಹಗಳಿಗೆ 9 ಪ್ರದಕ್ಷಿಣೆ ಹಾಕಿ 100ಗ್ರಾಂ ತೊಗರಿಬೇಳೆ ದಕ್ಷಿಣೆ ಸಹಿತ ದಾನ ಮಾಡಿದರೆ ಶಸ್ತ್ರಚಿಕಿತ್ಸೆ, ಬೆಂಕಿ, ರಕ್ತ ಹೆಪ್ಪುಗಟ್ಟಲು, ಸ್ತ್ರೀಮಾಸಿಕ ರಕ್ತಸ್ರಾವ ಮತ್ತು ಹೊಟ್ಟೆ ನೋವು, ಅಸ್ತಮ, ಅಲ್ಸರ್, ಕ್ಯಾನ್ಸರ್, ಗಾಯ, ಕುರು, ಹುಣ್ಣು, ನೋವುಗಳಿಗೆ ಎಡ ಮಿದುಳು, ಆಂತರಿಕ ವ್ರಣ, ಆಮ್ಲ ಉಷ್ಣ ಪಿತ್ಥ, ತಾಪಾಮಾನ ವ್ಯಾದಿ, ಕತ್ತು, ಮಜ್ಜ, ಸ್ನಾಯು, ಹೃದಯದ ಕವಾಟಗಳು, ಮಂಗನ ಬಾವು ಪಿಸಾರ, ಪ್ಲೇಗ್, ಮೈಲಿ, ಒಣಕೆಮ್ಮು, ರೋಗ ನಿರೋಧಕ ಗುಣವಾಗುತ್ತವೆ.

ಹೆಸರು ಕಾಳು-ಬುಧ:- ಪ್ರತಿ ಬುಧವಾರ ನವಗ್ರಹಗಳಿಗೆ 4ಪ್ರದಕ್ಷಣೆ ಹಾಕಿ 100 ಗ್ರಾಂ ಹೆಸರುಕಾಳು ದಾನ ಮಾಡಿದರೆ ಚರ್ಮ, ತೊದಲು ಮಾತು,ನರಗಳು, ಬಲ ಮಿದುಳು, ತಲೆಸುತ್ತು, ನೆನಪಿನ ಶಕ್ತಿ, ಶ್ವಾಸಕೋಶ, ಗಂಟಲು, ಮೂಗಿನವ್ಯಾಧಿ, ಅಸ್ತಮಾ, ಉಸಿರಾಟ, ಅಪಸ್ಮಾರ, ಮೂಗಿನ ವ್ಯಾಧಿ, ದುಃಸ್ವಪ್ನ, ಮೈ ತುರಿಸುವಿಕೆ, ಚಿತ್ತಭ್ರಮೆ, ಉನ್ಮಾದ ಗುಣವಾಗುವಲ್ಲಿ ಪೂರಕ.

ಕಡಲೆಕಾಳು-ಗುರು:- ಪ್ರತಿ ಗುರುವಾರ ನವಗ್ರಹಗಳಿಗೆ 5 ಪ್ರದಕ್ಷಿಣೆ ಹಾಕಿ 100ಗ್ರಾಂ ಕಡಲೆಕಾಳು ಸಹಿತ ದಾನ ಮಾಡಿದರೆ ಮೂತ್ರಪಿಂಡ, ದುಮಾರ್ಂಸ, ಕಾಮಾಲೆ, ಜ್ವರ, ಟೈಫಾಯಿಡ್, ಮಧುಮೇಹ, ಗ್ಯಾಸ್ಟ್ರಿಕ್, ಯಕೃತ್, ಸುಖದಿಂದ ಬರುವ ವ್ಯಾಧಿ, ಬಲಕಿವಿ, ಜಠರಾಗ್ನಿ, ಮೇದೋಜೀರಕ ಗ್ರಂಥಿ ಸಂಬಂಧಿ ಸಮಸ್ಯೆ ಇತ್ಯಾದಿ ಶಮನವಾಗುತ್ತವೆ.

ಅವರೆಕಾಳು- ಶುಕ್ರ:- ಪ್ರತಿ ಶುಕ್ರವಾರ ನವಗ್ರಹಗಳಿಗೆ 6 ಪ್ರದಕ್ಷಿಣೆ ಹಾಕಿ 100 ಗ್ರಾಂ ಅವರೆಕಾಳು ದಕ್ಷಿಣೆ ಸಹಿತ ದಾನ ಮಾಡಿದರೆ ಗುಪ್ತವ್ಯಾಧಿಗಳು, ಬೆವರು, ಮೂತ್ರವ್ಯಾದಿ, ದಾಹ, ಮೇಧಾಶಕ್ತಿ, ಸ್ತ್ರೀವ್ಯಾಧಿಗಳು, ಏಡ್ಸ್, ವೀರ್ಯ ದೋಷ, ಮಧುಮೇಹ, ಮೂತ್ರಪಿಂಡ, ಜನನೇಂದ್ರೀಯ, ಸುಂದರ ಅಂಗ, ಥೈರಾಯಿಡ್, ಸಂಭೋಗದಲ್ಲಿ ತಡೆ ಇತ್ಯಾದಿ ಸಮಸ್ಯೆಗಳ ನಿರಾವಣೆಗೆ ಅನುಕೂಲ.

ಕಪ್ಪು ಎಳ್ಳು-ಶನಿ:- ಪ್ರತಿ ಶನಿವಾರ ನವಗ್ರಹಗಳಿಗೆ 7 ಪ್ರದಕ್ಷಿಣೆ ಹಾಕಿ 50ಗ್ರಾಂ ಕಪ್ಪು ಎಳ್ಳು ದಕ್ಷಿಣೆ ಸಹಿತ ದಾನ ಮಾಡಿದರೆ ಗ್ಯಾಸ್ಟ್ರಿಕ್, ಸಂಧಿವಾತ, ಪಾಶ್ರ್ವವಾಯು, ಮೂಳೆ, ದೊಡ್ಡ ಕರುಳವ್ಯಾಧಿ, ವಾಹನದುರಸ್ತಿಗೆ, ಹಲ್ಲು, ಕೀಲುನೋವು, ಸಂಧಿವಾತ, ಪಾಶ್ರ್ವವಾಯು, ಮೂಳೆ, ದೊಡ್ಡ ಕರುಳುವ್ಯಾಧಿ, ಶೀತದ ಅಸ್ತಮ, ಬಾಲಗ್ರಹ, ಕೋಮ, ಮಿದುಳಿನಲ್ಲಿ ರಕ್ತತಡೆ, ಕೊಲೆಸ್ಟ್ರಾಲ್, ಕೆಮ್ಮು, ಮೂಳೆಕ್ಷಯ, ಕಾಲರಾ, ಫಿಟ್ಸ್, ಹೃದಯ, ಪೋಲಿಯೋ, ಸನ್ನಿಪಾತ, ನಾಯಿಕೆಮ್ಮು, ಹಲ್ಲು, ಬೆನ್ನು ನೋವು, ಸಂಧಿವಾತ, ಕೀಳು, ಅತಿಸಾರ, ಮಲೇರಿಯಾ, ಕೂದಲು ಉದುರುವುದು, ಧರ್ನುವಾತ, ಒಣಕೆಮ್ಮು, ಹೃದಯದಲ್ಲಿ ರಂಧ್ರಸಮಸ್ಯೆ ನಿವಾರಣೆಗೆ ಪೂರಕ.

ಉದ್ದು- ರಾಹು:- ಪ್ರತಿ ಶನಿವಾರ ನವಗ್ರಹಗಳಿಗೆ 9 ಪ್ರದಕ್ಷಿಣೆ ಹಾಕಿ 100 ಗ್ರಾಂ ಉದ್ದಿನಬೇಳೆ ಸಹಿತ ದಾನ ಮಾಡಿದರೆ ಹೆದರಿಕೆ, ನಡುಗಿಸುವಿಕೆ, ಕ್ರೂರ ಜಂತುಗಳಿಂದ ಬಾಧೆ, ಅಮ್ಮ, ನಾಗರಸುತ್ತು, ಕುಷ್ಠ, ಚರ್ಮ, ತೊನ್ನು, ಭೂತವಿಕಾರಗಳು, ಕರು, ಸಾಂಕ್ರಾಮಿಕ ವ್ಯಾಧಿ, ಭಯ, ಹೃದಯ ಸ್ತಂಭನ, ರಕ್ತನ್ಯೂನತೆ, ಗರ್ಭಪಾತ, ಸ್ತ್ರೀಮಾಸಿಕ ದೋಷ, ದೃಷ್ಟಿ ದೋಷ ನಿವಾರಣೆಗೆ, ಅನುಸೂಚಿತ ವ್ಯಾಧಿ, ಮಾಟ ಶೂನ್ಯ, ಒಣಕೆಮ್ಮು.

ಹುರುಳಿ- ಕೇತು:- ಪ್ರತಿ ಮಂಗಳವಾರ ನವಗ್ರಹಗಳಿಗೆ 9 ಪ್ರದಕ್ಷಿಣೆ ಹಾಕಿ 100 ಗ್ರಾಂ ಹುರುಳಿಕಾಳು ದಕ್ಷಿಣೆ ಸಹಿತ ದಾನ ಮಾಡಿದರೆ ಎಲ್ಲಾ ವಿಧವಾದ ಕ್ಯಾನ್ಸರ್‍ಗಳು, ಅಲ್ಸರ್, ಗ್ರಂಥಿ ದೋಷ, ಜೀವಾಣುಗಳಿಂದ ಬರುವ ವ್ಯಾಧಿ, ಬುದ್ಧಿಭ್ರಮಣೆ, ಜೀವಕೋಶಗಳ ವ್ಯಾಧಿ ಶಮನಕ್ಕೆ ಪೂರಕವಾಗುತ್ತವೆ.

ಕುಜದೋಷಕ್ಕೆ ಪರಿಹಾರ ಇದೆಯೇ, ಜಾತಕದ ಕುಜದೋಷದಿಂದ ಏನೆಲ್ಲ ಆಗುತ್ತೆ?