Home » Basale Soppu: ಬಸಳೆ ಸೊಪ್ಪು ನೋಡಲು ಸುಂದರ., ಹಾಗೇ ಆರೋಗ್ಯಕ್ಕೂ ಒಳ್ಳೆಯದು ಅದು ಹೇಗೆ?

Basale Soppu: ಬಸಳೆ ಸೊಪ್ಪು ನೋಡಲು ಸುಂದರ., ಹಾಗೇ ಆರೋಗ್ಯಕ್ಕೂ ಒಳ್ಳೆಯದು ಅದು ಹೇಗೆ?

by manager manager

ನಿಮ್ಮ ಮನೆ ಅಂಗಲದಲ್ಲಿ ಬೆಳೆಯುವ ಈ ಬಸಳೆ ಸೊಪ್ಪು ಆರೋಗ್ಯಕ್ಕೆ ಒಳ್ಳೆಯದು ಮತ್ತು ಮನೆಯ ಮುಂಭಾಗದ ಒಂದು ಕುಂಡದಲ್ಲಿ ಬಳ್ಳಿಯ ರೀತಿಯಲ್ಲಿ ಹಬ್ಬಿ ಮನೆ ಮಂದಿಯ ಆರೋಗ್ಯ ರಕ್ಷಣೆಯಲ್ಲಿ ತನ್ನದೇ ಆದ ರೀತಿಯಲ್ಲಿ ನೆರವಿಗೆ ಬರುತ್ತದೆ. ಇದನ್ನು ಹಳ್ಳಿಗಾಡಿನಲ್ಲಿ “ಬಚ್ಚಲೇ ಸೊಪ್ಪು” ಎನ್ನುತ್ತಾರೆ. ತುಂಬ ಹೆಚ್ಚಾಗಿ ನಮ್ಮ ಭಾರತದಲ್ಲಿ ಕಂಡು ಬರುವ ಈ ಸಸ್ಯ ಪಕ್ಕದ ಚೀನಾ, ಸಿಲೋನ್, ಮಲೇಷಿಯಾ, ಆಫ್ರಿಕಾ, ಅಮೇರಿಕಾ ಮತ್ತು ಬ್ರೆಜಿಲ್ ದೇಶಗಳಲ್ಲೂ ಇದೆ. ಇದೊಂದು ಸದಾ ಕಾಲ ಹಚ್ಚ ಹಸಿರಿನಿಂದ ಕಂಗೊಳಿಸುವ ಬಳ್ಳಿಯಾಗಿದ್ದು, ಸುಮಾರು 9 ಮೀಟರ್ ಎತ್ತರ ಬೆಳೆಯಬಲ್ಲದು. ಬಸಳೆ ಬಳ್ಳಿಯ ಎಲೆಗಳು ನೋಡಲು ವೀಳ್ಯದೆಲೆಗಳಂತಿದೆ. ಇದು ಹಲವಾರು ಬಗೆಯ ಪೌಷ್ಟಿಕ ಸತ್ವಗಳನ್ನು ಹೊಂದಿದ್ದು ಮನುಷ್ಯನ ಆರೋಗ್ಯಕ್ಕೆ ತುಂಬ ಒಳ್ಳೆಯದು, ಇದರಲ್ಲಿ ಕ್ಯಾಲೋರಿ ಅಂಶವಿದ್ದು ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಬಿ9, ಕಬ್ಬಿಣ, ಕ್ಯಾಲ್ಸಿಯಂ, ತಾಮ್ರ, ಮೆಗ್ನೀಷಿಯಂ, ಪೋಸ್ಫ್ಯಾರಸ್, ಪೊಟ್ಯಾಸಿಯಂ ಮತ್ತು ಇನ್ನಿತರ ಖನಿಜಾಂಶಗಳಿದ್ದು, ಲ್ಯೂಟೀನ್ ಮತ್ತು ಬೀಟಾ – ಕೆರೋಟಿನ್ ಎಂಬ ಎರಡು ಆಂಟಿ – ಆಕ್ಸಿಡೆಂಟ್‌ನಿಂದ ಕೂಡಿದೆ.

ಬಸಳೆ ಸೊಪ್ಪಿನಿಂದ ಮನುಷ್ಯನ ಆರೋಗ್ಯಕ್ಕೆ ಹೇಗೆ ಉಪಕಾರಿ ಎಂದು ನೋಡೋಣ :
ನಿಮಗೆ ಹೃದಯ ಸಂಬಂಧಿ ಖಾಯಿಲೆ ಇದೇಯೇ ?
ಈ ಸೊಪ್ಪಿನಲ್ಲಿ ಫೋಲೇಟ್ ಅಂಶ ಅಧಿಕವಾಗಿದ್ದು ರಕ್ತದಲ್ಲಿನ ಹಿಮೋಸಿಸ್ಟಿನ್ ಮಟ್ಟವನ್ನು ತಗ್ಗಿಸುತ್ತದೆ. ಮನುಷ್ಯನಲ್ಲಿ ಹೀಮೋಸಿಸ್ಟಿನ್ ಅಂಶವು ಹಾರ್ಟ್ ಅಟ್ಯಾಕ್ ಮತ್ತು ಪಾಶ್ರ್ವವಾಯುವಿಗೆ ಕಾರಣವಾಗುವ ಅಂಶವಾಗಿದ್ದು ಇದನ್ನು ತಗ್ಗಿಸುವುದರಿಂದ ತುಂಬ ಒಳ್ಳೆಯದು.

ಗರ್ಭಿಣಿಯರಿಗೆ ತುಂಬ ಒಳ್ಳೆಯದು
ಕೆಲವು ಮಹಿಳೆಯರಿಗೆ ದೇಹದಲ್ಲಿ ಕೆಲವು ಅಗತ್ಯವಾದ ಅಂಶಗಳ ಕೊರತೆಯಿಂದ ಗರ್ಭದಲ್ಲಿರುವ ಮಕ್ಕಳ ಹೃದಯ, ಕೈ ಕಾಲುಗಳು, ಬೆನ್ನು ಹುರಿಗೆ ಸಂಬಂಧ ಪಟ್ಟ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಮತ್ತು ಫೋಲೇಟ್ ಅಂಶದ ಕೊರತೆಯಿಂದ ಮಗು ಹುಟ್ಟಿದ ಮೇಲೆ ಕೆಲವು ಸಮಸ್ಯೆಗಳು ಹಾಗೆ ಮುಂದುವರೆಯುತ್ತದೆ. ಆದ್ದರಿಂದ ಗರ್ಭಿಣಿ ಮಹಿಳೆಯರು ತಮ್ಮ ಗರ್ಭಾವಸ್ಥೆಯ ಸಮಯದಲ್ಲಿ ನಿತ್ಯ ನಿಯಮಿತವಾಗಿ ವೈದ್ಯರ ಸೂಚನೆಯ ಮೇರೆಗೆ ಬಸಳೆ ಸೊಪ್ಪನ್ನು ಸೇವಿಸುವ ಅಭ್ಯಾಸ ಇಟ್ಟುಕೊಂಡರೆ ಎಲ್ಲ ವಿಧದಲ್ಲೂ ಒಳ್ಳೆಯದು.
ದೇಹಕ್ಕೆ ಶಕ್ತಿ ಮತ್ತು ಚೈತನ್ಯವನ್ನು ಕೊಡುತ್ತದೆ
ಮನುಷ್ಯನ ದೇಹದಲ್ಲಿ ಕಬ್ಬಿಣದ ಅಂಶದ ಕೊರತೆ ಉಂಟಾದರೆ ಅದು ಹಲವಾರು ಸಮಸ್ಯೆಗಳು ಕಾರಣವಾಗಬಹುದು ಹಾಗಾಗೀ ಈ ಬಸಳೆ ಸೊಪ್ಪು ನಮ್ಮ ದೇಹಕ್ಕೆ ಬೇಕಾಗುವ ಕಬ್ಬಿಣದ ಅಂಶದ ಜೊತೆಗೆ ಇದು ನಮಗೆ ಮೂಡ್ ಆಫ್ ಆಗಿದ್ದರೆ, ಮತ್ತು ಮನಸ್ಸಿಗೆ ಸಂಬಂಧಿಸಿದ ಖಾಯಿಲೆಗಳಿಗೆ ಸ್ವಲ್ಪ ಪ್ರಮಾಣದಲ್ಲಿ ನೆರವಾಗುತ್ತದೆ.

ನಿಮಗೆ ಮಾನಸೀಕವಾಗಿ ನೆಮ್ಮದಿ ಇಲ್ಲದೆ ಖಿನ್ನತೆಯಿಂದ ಇದ್ದೀರಾ ?
ಈ ಸೊಪ್ಪನ್ನು ಸೇವಿಸುವುದರಿಂದ ಪ್ರತಿ ದಿನದ ಕೆಲವು ಕ್ಲಿಷ್ಟಕರ ಅನುಭವಗಳಿಂದ ಉಂಟಾಗುವ ಮಾನಸಿಕ ಖಿನ್ನತೆ ಮತ್ತು ಆತಂಕವಿಲ್ಲದೆ ಯಾವುದೇ ಔಷಧಿಗಳಿಲ್ಲದೆ ದೂರವಾಗುತ್ತದೆ. ಖಿನ್ನತೆಗೆ ಒಳಗಾಗಿರುವ ಜನರು ಈ ಬಸಳೆ ಸೊಪ್ಪನ್ನು ಹೆಚ್ಚು ಉಪಯೋಗಿಸುವುದರಿಂದ ಅವರಲ್ಲಿ ಚೈತನ್ಯ ತುಂಬುತ್ತದೆ. ಇದಕ್ಕೂ ಕಾರಣ ಬಸಳೆ ಸೊಪ್ಪಿನಲ್ಲಿರುವ ಫೋಲೇಟ್ ಅಂಶ ಎಂದರೆ ತಪ್ಪಾಗಲಾರದು. ಕ್ಯಾನ್ಸರ್‍ನಿಂದಾಗುವ ತೊಂದರೆಗಳನ್ನು ದೂರಮಾಡುತ್ತದೆ
ಜನರಿಗೆ ತಮ್ಮ ಜೀವಿತಾವಧಿಯಲ್ಲಿ ಎದುರಾಗುವ ಕರುಳಿನ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಶ್ವಾಸಕೋಶ ಮತ್ತು ಬ್ರೈನ್ ಟ್ಯೂಮರ್ ನಂತಹ ಆರೋಗ್ಯ ಸಮಸ್ಯೆಗಳು ನಿಯಮಿತವಾದ ಬಸಳೆ ಸೊಪ್ಪಿನ ಖಾದ್ಯಗಳ ಸೇವನೆಯಿಂದ ದೂರಾಗುತ್ತವೆ ಎಂದು ಹೇಳಲಾಗಿದೆ.

ಬ್ರಾಹ್ಮಿ ಎಣ್ಣೆಯು ಕೂದಲಿಗೆ ಮತ್ತು ಚರ್ಮಕ್ಕೆ ಏನೆಲ್ಲಾ ಅನುಕೂಲತೆಗಳನ್ನು ನೀಡುತ್ತದೆ ಗೊತ್ತೇ?