Home » ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗದಲ್ಲಿಯ ಹುದ್ದೆಗಳ ನೇಮಕಾತಿಗೆ ಅರ್ಜಿ ಅಹ್ವಾನ

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗದಲ್ಲಿಯ ಹುದ್ದೆಗಳ ನೇಮಕಾತಿಗೆ ಅರ್ಜಿ ಅಹ್ವಾನ

by manager manager

ರಾಜ್ಯದ ಸ್ವತಂತ್ರ ನಿಯಂತ್ರಣ ಸಂಸ್ಥೆಯಾಗಿರುವ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗ(KERC)ದಲ್ಲಿ ಶೀಘ್ರದಲ್ಲಿಯೇ ತೆರವುಗೊಳ್ಳಲಿರುವ ಇಬ್ಬರು ಸದಸ್ಯರು(ಕಾನೂನು) ಮತ್ತು ಅಧ್ಯಕ್ಷರ ನೇಮಕಾತಿಗಾಗಿ ಅರ್ಜಿ ಅಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27/11/2018 ರ ಸಂಜೆ 5.30 ರೊಳಗಾಗಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ, ಕೊಠಡಿ ಸಂಖ್ಯೆ:236, 2ನೇ ಮಹಡಿ, ವಿಕಾಸ ಸೌಧ, ಡಾ.ಬಿ.ಆರ್.ಅಂಬೇಡ್ಕರ್ ಬೀದಿ, ಬೆಂಗಳೂರು-560 001 ಇವರಿಗೆ ಸಲ್ಲಿಸುವುದು.

ಆಯೋಗದ ಅಧ್ಯಕ್ಷರ ಹುದ್ದೆಗೆ ಅರ್ಜಿ ಸಲ್ಲಿಸಲು ಇರಬೇಕಾದ ವಿದ್ಯಾರ್ಹತೆ ಮತ್ತು ಅನುಭವ

– ಆಯೋಗದ ಅಧ್ಯಕ್ಷರ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅರ್ಜಿದಾರರುಗಳು ಇಂಜಿನಿಯರಿಂಗ್, ಆರ್ಥಿಕ, ಅರ್ಥಶಾಸ್ತ್ರ, ವಾನಿಜ್ಯ ಶಾಸ್ತ್ರ, ಕಾನೂನು ಅಥವಾ ಆಡಳಿತ ವಿಷಯಗಳಲ್ಲಿ ಪರಿಪೂರ್ಣ ಜ್ಞಾನ, ನಿಷ್ಠೆ ಮತ್ತು ಅನುಭವವುಳ್ಳವರಾಗಿರುವುದಲ್ಲದೆ ಈ ವಿಷಯಗಳನ್ನು ವ್ಯವಹರಿಸುವಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದವರಾಗಿರಬೇಕು.

– ಭಾರತದ ಪ್ರಜೆಯಾಗಿರಬೇಕು ಮತ್ತು ಕನ್ನಡ ವ್ಯವಹಾರ ಜ್ಞಾನವುಳ್ಳವರಾಗಿರಬೇಕು.

– ಅಭ್ಯರ್ಥಿಯು ಕನಿಷ್ಠ 25 ವರ್ಷಗಳ ಅನುಭವವುಳ್ಳವರಾಗಿರತಕ್ಕದ್ದು. ಹಾಗೂ ಈ ಕ್ಷೇತ್ರದಲ್ಲಿ ಹಿರಿಯ ಹುದ್ದೆಯಲ್ಲಿ ಸೇವೆ ಸಲ್ಲಿಸಿರಬೇಕು.

ಆಯೋಗದ ಸದಸ್ಯರು(ಕಾನೂನು) ಹುದ್ದೆಗೆ ಅರ್ಜಿ ಸಲ್ಲಿಸಲು ಇರಬೇಕಾದ ವಿದ್ಯಾರ್ಹತೆ ಮತ್ತು ಅನುಭವ

– ಕಾನೂನು ವಿಷಯದಲ್ಲಿ ಪರಿಪೂರ್ಣ ಜ್ಞಾನ, ನಿಷ್ಠೆ ಮತ್ತು ಅನುಭವವುಳ್ಳವರಾಗಿರಬೇಕು.

– ಅರ್ಜಿದಾರರು ನ್ಯಾಯಾಂಗದ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವವರು ಅಥವಾ ಸಲ್ಲಿಸಿರುವವರಾಗಿರಬೇಕಾಗಿದ್ದು, ಅಥವಾ ಅರ್ಜಿದಾರರು ಕಾನೂನು ವಿಷಯದಲ್ಲಿ ವಿದ್ಯಾರ್ಹತೆ ಉಳ್ಳವರಾಗಿ, ವಕೀಲ ವೃತ್ತಿಯಲ್ಲಿ ಹೆಚ್ಚಿನ ಅನುಭವವುಳ್ಳವರಾಗಿ, ಉಚ್ಛ ನ್ಯಾಯಾಲಯದ ನ್ಯಾಯಾದೀಶರಾಗಿ ಅಥವಾ ಜಿಲ್ಲಾ ನ್ಯಾಯಾದೀಶರಾಗಿ ನೇಮಕಾತಿಗೆ ಅರ್ಹತೆ ಹೊಂದಿರಬೇಕು.

– ಭಾರತದ ಪ್ರಜೆಯಾಗಿರಬೇಕು ಮತ್ತು ಕನ್ನಡ ವ್ಯವಹಾರ ಜ್ಞಾನವುಳ್ಳವರಾಗಿರಬೇಕು.

ಸದಸ್ಯರು(ಕಾನೂನು) ಮತ್ತು ಅಧ್ಯಕ್ಷರ ಹುದ್ದೆಗಳ ನೇಮಕಾತಿ ಪ್ರಕಟಣೆ ಮತ್ತು ಇನ್ನೂ ಹೆಚ್ಚಿನ ಮಾಹಿತಿ ತಿಳಿಯಲು ಕ್ಲಿಕ್ ಮಾಡಿ

Application invited for appointment of posts in Karnataka Electricity Regulatory Commission. Read more in this article.

You may also like