Amaranth Leaves Benefits: ಸೊಪ್ಪು ಎಂದ ಕೂಡಲೇ ಕೆಲವರಲ್ಲಿ ಬೇಸರವಾಗಬಹುದು. ಕಾರಣ ಸೊಪ್ಪನ್ನು ಡೈಯಟ್ ಮಾಡುವವರು ಮಾತ್ರ ಬಳಸುತ್ತಾರೆ ಎಂದು. ಆದರೇ ಅಧ್ಯಾಯನಗಳ ಪ್ರಕಾರ ಸೊಪ್ಪುಗಳನ್ನು ತಿನ್ನುವವರು ಹೆಚ್ಚು ಆರೋಗ್ಯವಂತರಾಗಿರುತ್ತಾರೆ ಎಂದು ಸಾಭೀತಾಗಿದೆ. ಹಾಗಂತ ಕೈಗೆ ಸಿಗುವ ಸೊಪ್ಪನ್ನೆಲ್ಲ ತಿನ್ನಿ ಎಂದಲ್ಲ, ಸೊಪ್ಪುಗಳ ಬಗ್ಗೆ ತಿಳಿದುಕೊಂಡು ಯಾವ ರೀತಿಯ ಸೊಪ್ಪು ನಮ್ಮ ದೇಹವನ್ನು ತಾಜಾವಾಗಿ ಇಡಲು ಸಹಕಾರಿಯಾಗುತ್ತದೆ ಎಂಬುದನ್ನು ತಿಳಿದುಕೊಂಡು ತಿಂದರೇ ಒಳ್ಳೆಯದು ಅಂತಹ ಸೊಪ್ಪುಗಳಲ್ಲಿ ಈ ಹರಿವೆ ಸೊಪ್ಪು ಪ್ರೋಟೀನ್ ಅಧಿಕವಾಗಿ ಇರುವಂತಹ ಆಹಾರ. ಅದು ಹಸಿವು ಕಡಿಮೆ ಮಾಡಿ, ರಕ್ತದಲ್ಲಿನ ಇನ್ಸುಲಿನ್ ಮಟ್ಟ ಕಡಿಮೆ ಮಾಡಿ, ದೇಹಕ್ಕೆ ತೃಪ್ತಿ ಉಂಟು ಮಾಡುವುದು.
ಇಂತಹ ಸೊಪ್ಪು ಮತ್ತು ತರಕಾರಿಗಳನ್ನು ನಾವು ದೈನಂದಿನ ಆಹಾರ ಕ್ರಮದಲ್ಲಿ ಬಳಸಿಕೊಂಡರೆ ಆಗ ಖಂಡಿತವಾಗಿಯೂ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಸಿರೆಲೆ ತರಕಾರಿಗಳು ನೈಸರ್ಗಿಕವಾಗಿದ್ದು, ಹಲವಾರು ರೀತಿಯ ಪೋಷಕಾಂಶಗಳಿಂದ ನಮ್ಮ ದೇಹವನ್ನು ಆರೋಗ್ಯವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುವುದು.
ಹರಿವೆ ಸೊಪ್ಪು ಅಥವ ಅಮರ್‍ನಾಥ್ ಎಲೆಗಳು ಎಂದು ಕರೆಯುವ ಈ ಸೊಪ್ಪಿನ ಬಗ್ಗೆ ನೀವು ಇದುವರೆಗೆ ಕೇಳದೇ ಇರಬಹುದು ಆದರೆ ಇದು ಒಂದು ರೀತಿಯಲ್ಲಿ ಬಸಳೆ ಸೊಪ್ಪಿನಂತೆಯೇ ಇದೆ. ಇದು ದಕ್ಷಿಣ ಭಾರತದ ಕರಾವಳಿ ಪ್ರದೇಶ ಹಾಗೂ ಹಿಮಾಲಯದ ತಪ್ಪಲಿನಲ್ಲಿ ಸಿಗುತ್ತದೆ. ಇದು ಬಂಗಾರ, ಕೆಂಪು, ಹಸಿರು ಮತ್ತು ನೇರಳೆ ಬಣ್ಣದಲ್ಲಿ ಲಭ್ಯವಿದ್ದು. ಇದರಿಂದ ಹಲವಾರು ರೀತಿಯ ಲಾಭಗಳನ್ನು ನಾವು ಕಾಣಬಹುದು. ಅವುಗಳೆಂದರೇ
ಪೋಷಕಾಂಶಗಳ ಆಗರ :- ಹರಿವೆ ಸೊಪ್ಪಿನಲ್ಲಿ ಪ್ರಮುಖ ಪೋಷಕಾಂಶಗಳು ಹಾಗೂ ಆಂಟಿಆಕ್ಸಿಡೆಂಟ್ ಗಳು ಲಭ್ಯವಿದ್ದು, ಇದು ಉರಿಯೂತ ತಗ್ಗಿಸುವುದು ಮತ್ತು ಆರೋಗ್ಯಕ್ಕೆ ಪೋಷಕಾಂಶಗಳನ್ನು ನೀಡುವುದು.
– ಹರಿವೆ ಸೊಪ್ಪು ವಿಟಮಿನ್ ಎ ಅನ್ನು ಅತ್ಯಾಧಿಕವಾಗಿ ಹೊಂದಿದೆ :- ಹರಿವೆ ಸೊಪ್ಪು ವಿಟಮಿನ್ ಎ ಅತ್ಯಧಿಕವಾಗಿದ್ದು ಇದು ದೇಹಕ್ಕೆ ದಿನದ ಅಗತ್ಯಕ್ಕೆ ಬೇಕಾಗಿರುವ ಶೇ.97ರಷ್ಟು ವಿಟಮಿನ್ ಒದಗಿಸುವುದು. ಇದರಲ್ಲಿ ಹೆಚ್ಚಿನ ಪ್ರಮಾಣದ ಫ್ಲಾವನಾಯ್ಡ್ ಫಾಲಿಫೆನಾಲಿಕ್ ಆಂಟಿಆಕ್ಸಿಡೆಂಟ್‍ಗಳಾಗಿರುವಂತಹ ಬೆಟಾ ಕೆರೊಟೆನ್, ಝಿಯಕ್ಸಾಂಥಿನ್ ಮತ್ತು ಲುಟೇನ್ ಅಂಶವಿದೆ. ಇದು ಫ್ರೀ ರ್ಯಾಡಿಕಲ್ ನಿಂದ ಆಗುವಂತಹ ಆಕ್ಸಿಡೇಟಿವ್ ಒತ್ತಡದಿಂದ ರಕ್ಷಣೆ ಒದಗಿಸುವುದು. ವಿಟಮಿನ್ ಎ ಆರೋಗ್ಯಕಾರಿ ಚರ್ಮ ಹಾಗೂ ದೃಷ್ಟಿಗೆ ಅತೀ ಅಗತ್ಯ.
– ಈ ಸೊಪ್ಪಿನಲ್ಲಿ ವಿಟಮಿನ್ ಕೆ :- ಹರಿವೆ ಸೊಪ್ಪಿನಲ್ಲಿ ವಿಟಮಿನ್ ಕೆ ಹೆಚ್ಚಿದೆ. ಇದು ಮೂಳೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಇದು ರಕ್ತ ಹೆಪ್ಪುಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಆಸ್ಟಿಯೋಬ್ಲಾಸ್ಟ್ ಚಟುವಟಿಕೆ ವೃದ್ಧಿಸುವುದು ಮತ್ತು ಮೂಳೆಯ ದ್ರವ್ಯರಾಶಿಯನ್ನು ಬಲಪಡಿಸುವುದು. ಇದು ಅಲ್ಝೈಮರ್ ಕಾಯಿಲೆಯಿಂದ ಬಳಲುತ್ತಿರುವವರಿಗೆ ತುಂಬಾ ಒಳ್ಳೆಯದು.
– ವಿಟಮಿನ್ ಬಿ ಹೆಚ್ಚಿದೆ :- ಫಾಲಟೆ, ರಿಬೊಫ್ಲಾವಿನ್, ನಿಯಾಸಿನ್, ಥೈಮೇನ್, ವಿಟಮಿನ್ ಬಿ6 ಮತ್ತು ಇತರ ಕೆಲವೊಂದು ಅಂಶಗಳು ಈ ಹಸಿರೆಲೆಯಲ್ಲಿದೆ. ಇದು ಹುಟ್ಟುವ ಮಕ್ಕಳಲ್ಲಿ ಅಂಗನ್ಯೂನ್ಯತೆ ತಡೆಯುವುದು ಮತ್ತು ಮಾನಸಿಕ ಹಾಗೂ ದೈಹಿಕ ಆರೋಗ್ಯ ನೀಡುವುದು.
– ಕ್ಯಾಲರಿ ತುಂಬ ಕಡಿಮೆ :- ನೂರು ಗ್ರಾಂ ಅಮರನಾಥ ಎಲೆಗಳನ್ನು ಕೇವಲ 23 ಕ್ಯಾಲರಿ ಮಾತ್ರ ಇದೆ. ಸ್ವಲ್ಪವೇ ಸ್ವಲ್ಪ ಕೊಬ್ಬು ಮತ್ತು ಕೊಲೆಸ್ಟ್ರಾಲ್ ತುಂಬಾ ಕಡಿಮೆ ಇರುವ ಕಾರಣದಿಂದಾಗಿ ಇದು ಒಳ್ಳೆಯ ಆಯ್ಕೆಯಾಗಿದೆ. ತೂಕ ಇಳಿಸಲು ಬಯಸುವವರಿಗೆ ಇದು ಒಳ್ಳೆಯ ಆಯ್ಕೆ.
– ಕ್ಯಾಲ್ಸಿಯಂ ಅಧಿಕವಾಗಿದೆ :- ಹರಿವೆ ಸೊಪ್ಪಿನಲ್ಲಿ ಕ್ಯಾಲ್ಸಿಯಂ ಅಧಿಕವಾಗಿದೆ ಮತ್ತು ಅಸ್ಥಿರಂಧ್ರತೆ ಮತ್ತು ಮೂಳೆಗೆ ಸಂಬಂಧಿಸಿದ ಇತರ ಸಮಸ್ಯೆ ಎದುರಿಸುತ್ತಿರುವವರಿಗೆ ಇದು ತುಂಬಾ ಪರಿಣಾಮಕಾರಿ. ಕ್ಯಾಲ್ಸಿಯಂ ಕೊರತೆಯನ್ನು ಇದು ನೀಗಿಸುವುದು.
– ಅಧಿಕವಾದ ನಾರಿನಾಂಶದಿಂದ ಕೂಡಿದೆ :- ಹರಿವೆ ಸೊಪ್ಪಿನಲ್ಲಿ ಹೀರಿಕೊಳ್ಳುವ ಮತ್ತು ಹೀರಿಕೊಳ್ಳದ ನಾರಿನಾಂಶವು ಅತ್ಯಧಿಕ ಮಟ್ಟದಲ್ಲಿ ಇದೆ. ನಾರಿನಾಂಶವನ್ನು ತಿನ್ನುವುದರಿಂದ ತೂಕ ಇಳಿಸಲು ಮತ್ತು ಕೊಲೆಸ್ಟ್ರಾಲ್ ತಗ್ಗಿಸುವ ಪರಿಣಾಮ ಹೃದಯದ ಕಾಯಿಲೆ ನಿವಾರಣೆ ಮಾಡಲು ನೆರವಾಗುವುದು. ಅಧಿಕ ಪ್ರೋಟೀನ್ ಮತ್ತು ನಾರಿನಾಂಶವನ್ನು ಹೊಂದಿರುವಂತಹ ಹರಿವೆ ಸೊಪ್ಪು ಹಸಿವು ಕಡಿಮೆ ಮಾಡುವುದು ಮತ್ತು ತೂಕ ಇಳಿಸುವುದು.
– ರಕ್ತಹೀನತೆಗೆ ಪರಿಣಾಮಕಾರಿ ಸೊಪ್ಪು :- ಹರಿವೆ ಸೊಪ್ಪಿನಲ್ಲಿ ಇರುವಂತಹ ಕಬ್ಬಿನಾಂಶವು ಕೆಂಪು ರಕ್ತ ಕಣಗಳನ್ನು ಉತ್ಪಾದಿಸುವುದು ಮತ್ತು ಇದು ಚಯಾಪಚಯ ಕೋಶಗಳಿಗೂ ಅಗತ್ಯವಾಗಿರುವುದು.
– ನಿಮ್ಮಲ್ಲಿ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುತ್ತದೆ :- 100 ಗ್ರಾಂ ಅಮರನಾಥ ಎಲೆಗಳಲ್ಲಿ ಶೇ.70ರಷ್ಟು ದೇಹಕ್ಕೆ ನಿತ್ಯವೂ ಬೇಕಾಗುಷ್ಟು ವಿಟಮಿನ್ ಸಿ ಇದೆ. ಈ ವಿಟಮಿನ್ ನೀರಿನಲ್ಲಿ ಕರಗಬಲ್ಲಂತಹ ವಿಟಮಿನ್ ಆಗಿದ್ದು, ಸೋಂಕಿನ ವಿರುದ್ಧ ಹೋರಾಡುತ್ತದೆ ಮತ್ತು ಗಾಯವು ಬೇಗನೆ ಒಣಗುವುದು.
– ವಯಸ್ಸಾಗುವ ಲಕ್ಷಣ ತೋರಿಸುವ ಮತ್ತು ಹಲವಾರು ರೀತಿಯ ಕ್ಯಾನ್ಸರ್ ತಡೆಯುವಂತಹ ಫ್ರೀ ರ್ಯಾಡಿಕಲ್ ಪರಿಣಾಮವನ್ನು ಇದು ಕಡಿಮೆ ಮಾಡುತ್ತದೆ.
– ಸುಲಭವಾದ ಜೀರ್ಣಕ್ರಿಯೆ :- ಇದು ಸುಲಭವಾಗಿ ಜೀರ್ಣವಾಗುವುದು. ಹರಿವೆ ಸೊಪ್ಪು ಅತಿಸಾರ ಮತ್ತು ರಕ್ತಸ್ರಾವದ ಚಿಕಿತ್ಸೆಗೆ ತುಂಬಾ ಒಳ್ಳೆಯದು. ನಿಯಮಿತವಾಗಿ ನಾವು ಇದನ್ನು ಸೇವಿಸಿದರೆ ಅದರಿಂದ ಹೆಚ್ಚಿನ ಲಾಭವಾಗಲಿದೆ.
– ಪ್ರೋಟೀನ್ ಹೆಚ್ಚಿದೆ:- ಇದರಲ್ಲಿ ಓಟ್ಸ್ ಗಿಂತಲೂ ಹೆಚ್ಚಿನ ಪ್ರೋಟೀನ್ ಇದೆ. ಪ್ರಾಣಿಜನ್ಯ ಪ್ರೋಟೀನ್ ಸೇವನೆ ಮಾಡುವುದಕ್ಕಿಂತಲೂ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಕಡಿಮೆ ಇರುವ ಸಸ್ಯಜನ್ಯ ಪ್ರೋಟೀನ್ ದೇಹಕ್ಕೆ ತುಂಬಾ ಒಳ್ಳೆಯದು.
ಆರೋಗ್ಯ ಕಾಪಾಡಿಕೊಳ್ಳಲು ಪ್ರೋಟೀನ್ ಬೇಕೆಬೇಕು., ಯಾವೆಲ್ಲ ಪದಾರ್ಥಗಳಲ್ಲಿ ಪ್ರೋಟೀನ್ ಇರುತ್ತೆ ಗೊತ್ತೇ?