Lalitha Sahasranamam: ಶ್ರೀ ಲಿಲತಾ ಸಹಸ್ರನಾಮ ಎಂಬುದು ಬ್ರಹ್ಮಪುರಾಣದ ಒಂದು ಪಠ್ಯ. ಲಲಿತಾ ಎಂಬುದು ಆನಂದ ದೇವತೆ, ಈಕೆ ಪರಶಿವನ ಪತ್ನಿ ಪಾರ್ವತಿ ದೇವಿಯ ರೂಪ. ಭಗವಾನ್ ಹಯಗ್ರೀವ ಮತ್ತು ಅಗಸ್ತ್ಯ ಮುನಿಗಳ ಚರ್ಚೆಯಿಂದ ಹೊರಹೊಮ್ಮಿದ ಮಂತ್ರವೇ ಶ್ರೀ ಲಿಲತಾ ಸಹಸ್ರನಾಮ. ಇದು ಅತ್ಯಂತ ಪವಿತ್ರವಾದ ಮಂತ್ರವಾಗಿದ್ದು ಅತ್ಯಂತ ಶಕ್ತಿಯುತವಾದ ಮಂತ್ರವಾಗಿದೆ.
ಮೊದಲಿಗೆ ಲಲಿತಾ ಸಹಸ್ರನಾಮವನ್ನು ಪಠಿಸುವ ಮುನ್ನ ಏನೆಲ್ಲ ಮಾಡಬೇಕು
– ಲಲಿತಾ ಸಹಸ್ರನಾಮವನ್ನು ಪಠಿಸುವ ಮೊದಲು ಸ್ನಾನ ಮಾಡಬೇಕು ಅಥವಾ ಕೈ – ಕಾಲುಗಳನ್ನು ತೊಳೆದುಕೊಳ್ಳಬೇಕು.
– ಕುಳಿತುಕೊಳ್ಳಲು ಆರಾಮದಾಯಕ ಸ್ಥಳವನ್ನು ಅಥವಾ ಆಸನವನ್ನು ಆಯ್ದುಕೊಳ್ಳಿ. ದೇವರ ಕೋಣೆಯಲ್ಲಿ ಚಾಪೆಯನ್ನು ಹಾಸಿಕೊಂಡು ಕೂಡ ಕುಳಿತುಕೊಳ್ಳಬಹುದು.
– ಮಾನಸಿಕ ಶುದ್ಧತೆಯನ್ನು ಕಾಪಾಡಿಕೊಳ್ಳುವತ್ತ ಗಮನ ಹರಿಸಬೇಕು. ಯಾವಾಗಲೂ ಸಕಾರಾತ್ಮಕ ಆಲೋಚನೆಯನ್ನೇ ಹೊಂದಲು ಪ್ರಯತ್ನಿಸಬೇಕು.
– ಶ್ರದ್ಧಾ ಮತ್ತು ಭಕ್ತಿಯಿಂದ ಶ್ರೀ ಲಲಿತಾ ಸಹಸ್ರನಾಮವನ್ನು ಪಠಿಸಬೇಕು.
– ಮಂತ್ರವನ್ನು ಸರಿಯಾದ ಉಚ್ಚಾರಣೆಯಲ್ಲಿ ನಿಧಾನವಾಗಿ ಮತ್ತು ಸ್ಪಷ್ಟವಾಗಿ ಮಂತ್ರವನ್ನು ಪಠಿಸಿಬೇಕು.
– ಸಂಪೂರ್ಣ ದಿನ ದೈಹಿಕವಾಗಿ ಅಥವಾ ಮಾನಸಿಕವಾಗಿ ಇತರರನ್ನು ನೋಯಿಸದಿರಿ.
– ಮಂತ್ರವನ್ನು ಓದುವಾಗ ಪ್ರತಿಯೊಂದು ಸಾಲುಗಳನ್ನು ಅರ್ಥಮಾಡಿಕೊಳ್ಳಿ.
– ಮಂತ್ರದ ಕೊನೆಯಲ್ಲಿ ದೇವಿಗೆ ಜಪವನ್ನು ಅರ್ಪಿಸಿ.
ಶ್ರೀ ಲಲಿತಾ ಸಹಸ್ರನಾಮದಿಂದಾಗುವ ಪ್ರಯೋಜನಗಳು
– ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲು ಸಾಧ್ಯವಾಗದಿದ್ದಾಗ ಈ ಮಂತ್ರವನ್ನು ಪಠಿಸಿ.
– ಪವಿತ್ರ ನದಿಯಲ್ಲಿ ಸ್ನಾನ ಮಾಡಲು ಸಾಧ್ಯವಾಗದಿದ್ದಾಗ ಈ ಮಂತ್ರವನ್ನು ಪಠಿಸಿ.
– ದಾನ ಧರ್ಮಗಳನ್ನು ಮಾಡಲು ಆಗದಿದ್ದಾಗ ಈ ಮಂತ್ರವನ್ನು ಪಠಿಸಿ.
– ಅಪೂರ್ಣವಾದ ಪೂಜೆಯಿಂದುಂಟಾಗುವ ಕಷ್ಟವನ್ನು ದೂರಾಗಿಸುತ್ತದೆ.
– ಅಕಾಲಿಕ ಮರಣದ ಭಯವನ್ನು ದೂರಾಗಿಸುತ್ತದೆ. ದೀರ್ಘ ಮತ್ತು ಉತ್ತಮ ಆರೋಗ್ಯಕರ ಜೀವನವನ್ನು ನೀಡುತ್ತದೆ.
– ವ್ಯಕ್ತಿಯ ಹಣೆಯನ್ನು ಹಿಡಿದು ಧಾರ್ಮಿಕವಾಗಿ ಲಲಿತಾ ಸಹಸ್ರನಾಮವನ್ನು ಜಪಿಸಿದರೆ ಜ್ವರವು ಕಡಿಮೆಯಾಗುತ್ತದೆ.
– ಗ್ರಹಗಳಿಗೆ ಸಂಬಂಧಿಸಿದ ಮತ್ತು ದುಷ್ಟ ಶಕ್ತಿಗಳಿಗೆ ಸಂಬಂಧಿಸಿದ ತೊಂದರೆಗಳಿಂದ ಹೊರಬರಲು ಒಂದು ಪಾತ್ರೆ ನೀರನ್ನು ಅಥವಾ ಒಂದು ಲೋಟ ನೀರನ್ನು ಧಾರ್ಮಿಕವಾಗಿ ತಲೆಯ ಮೇಲೆ ಸುರಿದುಕೊಂಡು ಶ್ರೀ ಲಲಿತಾ ಸಹಸ್ರನಾಮ ಜಪಿಸಬೇಕು.
– ಸಂತಾನ ಭಾಗ್ಯಕ್ಕಾಗಿ ಓರ್ವ ವ್ಯಕ್ತಿಯು ಲಲಿತಾ ಸಹಸ್ರನಾಮ ಜಪಿಸುವಾಗ ಇಟ್ಟುಕೊಂಡ ತುಪ್ಪವನ್ನು ಸೇವಿಸಬೇಕು.
– ವ್ಯಕ್ತಿಯಲ್ಲಿನ ಸೂಕ್ಷ್ಮ ಶಕ್ತಿಯು ಜಾಗೃತಗೊಳ್ಳುತ್ತದೆ.
– ಅಪಘಾತಗಳಿಂದ ಮತ್ತು ಶತ್ರುಗಳಿಂದುಂಟಾಗುವ ಸಮಸ್ಯೆಗಳನ್ನು ದೂರಾಗಿಸಿ, ಅವರನ್ನು ವಿಜಯಶಾಲಿಯಾಗುವಂತೆ ಮಾಡುತ್ತಾಳೆ.
– ಶುಕ್ರವಾರದಂದು ವಿಶೇಷವಾಗಿ ಶ್ರೀ ಲಲಿತಾ ಸಹಸ್ರನಾಮವನ್ನು ಪಠಿಸುವುದರಿಂದ ಆ ವ್ಯಕ್ತಿಯಲ್ಲಿ ಶಕ್ತಿ, ಖ್ಯಾತಿ, ಇಚ್ಛಾಶಕ್ತಿ ಹೆಚ್ಚಾಗುತ್ತದೆ.
– ಒಮ್ಮೆ ಲಲಿತಾ ದೇವಿಯ ಹೆಸರನ್ನು ಜಪಿಸುವುದರಿಂದ ಶಿವನ ಹೆಸರನ್ನು ಸಾವಿರ ಬಾರಿ ಜಪಿಸುವಷ್ಟು ಉತ್ತಮ.
– ಸಂಜೆ ಸಮಯದಲ್ಲಿ ಅಥವಾ ಬೆಳಗ್ಗೆ ಜಪಿಸುವುದರಿಂದ ಆ ಕುಟುಂಬದಲ್ಲಿ ಏಕತೆ, ಶಾಂತಿ, ಸ್ಪಷ್ಟ ಮನಸ್ಸು ಮತ್ತು ಸಮೃದ್ಧಿ ನೆಲೆಯಾಗುತ್ತದೆ.
– ಲಲಿತ ಸಹ್ರಸನಾಮದಿಂದ ಜೀವನದ ಮೂಲಭೂತ ಅವಶ್ಯಕತೆಗಳಿಗೆ ಎಂದಿಗೂ ಕೊರತೆಯಾಗುವುದಿಲ್ಲ.
– ಕಾಳಿ ಮಾತೆಯ, ದುರ್ಗಾ ದೇವಿಯ, ದೇವತೆಗಳ, ಪರಾಶಕ್ತಿಯ ಮತ್ತು ಭಗವತಿ ದೇವಿಯ ಆಶೀರ್ವಾದವನ್ನು ಪಡೆದುಕೊಳ್ಳಬಹುದು.
ನೀವು ಈ ರೀತಿಯಾಗಿ ಶ್ರೀ ಲಲಿತಾ ಸಹಸ್ರನಾಮವನ್ನು ಪಠಿಸುವುದು ಅದರಲ್ಲೂ ಶುಕ್ರವಾರ ಲಲಿತಾ ಸಹಸ್ರನಾಮ ಪಠಿಸುವುದಕ್ಕೆ ವಿಶೇಷ ಮಹತ್ವವಿದೆ. ಮೂಲಕ ಈ ಎಲ್ಲಾ ಅಂಶಗಳ ಶುಭ ಫಲವನ್ನು ಪಡೆದುಕೊಳ್ಳಬಹುದಾಗಿದೆ.
ಹೃದಯಾಘಾತದ ಲಕ್ಷಣಗಳೇನು? ಪ್ರಥಮ ಚಿಕಿತ್ಸೆ ಯಾವೆಲ್ಲಾ ನೀಡಬಹುದು..