Home » Flax Seeds: ಅಗಸೆ ಬೀಜಗಳಿಂದಾಗುವ ಪ್ರಯೋಜನಗಳೇನು? ನಮ್ಮ ಆರೋಗ್ಯಕ್ಕೆ ಹೇಗೆ ಫಲಕಾರಿಯಾಗಿದೆ?

Flax Seeds: ಅಗಸೆ ಬೀಜಗಳಿಂದಾಗುವ ಪ್ರಯೋಜನಗಳೇನು? ನಮ್ಮ ಆರೋಗ್ಯಕ್ಕೆ ಹೇಗೆ ಫಲಕಾರಿಯಾಗಿದೆ?

by manager manager

್ಲಾಕ್ಸ್ ಬೀಜಗಳು ಅಥವಾ ಅಗಸೆ ಬೀಜಗಳು ನಮ್ಮ ಆರೋಗ್ಯಕ್ಕೆ ತುಂಬ ಫಲಕಾರಿಯಾಗಿವೆ ಅದು ಹೇಗೆ ಎಂದರೇ ಇದನ್ನು ಪ್ರಾಚೀನ ಕಾಲದಿಂದಲೂ ಸಹ ಬಳಸಿಕೊಂಡು ಬರುತ್ತಿದ್ದು. ಪ್ರಾಚೀನ ಪ್ರಾಚ್ಯ ವಸ್ತುಗಳ ಉತ್ಪನ್ನಗಳಲ್ಲಿ ಕಂಡು ಬಂದ ಅಂಶಗಳ ಪ್ರಕಾರ ಇದನ್ನು ಮೊದಲು ಈಜಿಪ್ಟ್‍ನಲ್ಲಿ ನೆಫೆರೆಟಿಗಳು ಇದ್ದ ಕಾಲದಲ್ಲಿ ಬಳಸಲು ಆರಂಭಿಸಿದರಂತೆ. ಇದರಲ್ಲಿರುವ ಸ್ವಾಭಾವಿಕ ನಾರಿನಂಶಕ್ಕಾಗಿ ಬೆಳೆಯಲು ಆರಂಭಿಸುತ್ತ ಬಂದು ಇದು ಇಂದು ಬಹು ಬೇಡಿಕೆಯ ಬೀಜಗಳಲ್ಲಿ ಒಂದಾಗಿದೆ ಎಂದು ಹೇಳಬಹುದು.

ಈ ಬೀಜಗಳಲ್ಲಿ ಪೋಷಕಾಂಶಗಳು ಅಧಿಕ ಪ್ರಮಾಣದಲ್ಲಿದ್ದು, ವೈದ್ಯಕೀಯ ಲಾಭಗಳು ಕೂಡ ಸಾಕಷ್ಟಿವೆ. ಇಂದಿಗೂ ಸಹ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಅದ್ಭುತ ಬೀಜಗಳು ಎಂದು ಇವು ಹೆಸರಾಗಿವೆ. ಇವು ಮಾನವನ ದೇಹವನ್ನು ಬೆಚ್ಚಗೆ ಮಾಡುತ್ತವೆ. ಇದರ ಮತ್ತೊಂದು ವಿಶೇಷತೆ ಏನೆಂದರೆ ಇದನ್ನು ಪುಡಿ ಮಾಡಿ ಸೇವಿಸಬಹುದು. ಇದನ್ನು ಹಾಗೆಯೇ ಸೇವಿಸಿದರೆ ಜೀರ್ಣ ಮಾಡಿಕೊಳ್ಳಲು ಕಷ್ಟಪಡಬೇಕಾಗುತ್ತದೆ. ಹಾಗಾಗೀ ಇದನ್ನು ಪುಡಿ ಮಾಡಿ ಸೇವಿಸಬೇಕು. ಇದನ್ನು ಬಳಸುವ ನಾನಾ ವಿಧಾನಗಳನ್ನು ಅನುಸರಿಸುತ್ತ ಬಂದರೇ ನಮ್ಮ ದೇಹದಲ್ಲಿನ ಹಲವಾರು ಸಮಸ್ಯೆಗಳಿಗೆ ಇದು ಪರಿಹಾರವನ್ನು ಒದಗಿಸುತ್ತದೆ. ಮುಖ್ಯವಾಗಿ ಈ ಕೆಳಗಿನಂತೆ ನೊಡಬಹುದು.

• ಪುಡಿ ಮಾಡಿದ ಅಗಸೆ ಬೀಜಗಳನ್ನು ನೀರಿನ ಜೊತೆ ಪ್ರತಿದಿನವೂ ಸೇವಿಸಬಹುದು. ಇದು ನಿಮ್ಮ ದೇಹಕ್ಕೆ ಅಗತ್ಯವಾದ ನಾರಿನಂಶವನ್ನು ಒದಗಿಸುತ್ತದೆ. ಇವುಗಳನ್ನು ಸೇವಿಸಿದ ಸಂದರ್ಭದಲ್ಲಿ ತಪ್ಪದೆ ನೀರನ್ನು ಹೆಚ್ಚು ಸೇವಿಸುತ್ತಾ ಇರಿ.
• ಒಂದೆರಡು ಚಮಚ ಫ್ಲಾಕ್ಸ್ ಬೀಜಗಳಲ್ಲಿ ಒಮೆಗಾ 3 ಕೊಬ್ಬಿನ ಆಮ್ಲಗಳ ಸಣ್ಣ ಸಂಗ್ರಹವೇ ಇರುತ್ತದೆ. ಮೀನು ಸೇವಿಸಲು ಬಯಸದೆ ಇರುವವರು ಫ್ಲಾಕ್ಸ್ ಬೀಜಗಳನ್ನು ಸೇವಿಸಿ ತಮ್ಮ ಕೊಲೆಸ್ಟ್ರಾಲ್ ಕಡಿಮೆ ಮಾಡಿಕೊಳ್ಳಬಹುದು ಮತ್ತು ಸುಂದರವಾದ ತ್ವಚೆಯನ್ನು ಪಡೆಯಬಹುದು.
• ಸ್ವಾಭಾವಿಕವಾಗಿ ದೊರೆಯುವ ಪೆಸ್ಕಾಟರಿಯನ್‍ಗಳನ್ನು ಸೇವಿಸಲು ಇರುವ ಒಳ್ಳೆಯ ಮಾರ್ಗಗಳಾಗಿವೆ. ಇವುಗಳಲ್ಲಿ ಸಾಮಾನ್ಯವಾಗಿ ಆಲ್ಫಾ ಲಿನಿಯೊಕ್ ಆಮ್ಲಗಳು ಇರುತ್ತವೆ. ಈ ಆಮ್ಲವು ಹೃದ್ರೋಗ, ಅರ್ಥರಿಟಿಸ್, ಅಸ್ತಮಾ, ಮಧುಮೇಹ ಮುಂತಾದ ಸಮಸ್ಯೆಗಳ ಮೂಲಕ ಬರುವ ಉರಿಯೂತಗಳನ್ನು ತಡೆಯುತ್ತದೆ. ಜೊತೆಗೆ ಕೋಲನ್ ಕ್ಯಾನ್ಸರ್ ಮುಂತಾದ ಕ್ಯಾನ್ಸರ್‍ಗಳ ಮೇಲೆ ಸಹ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
• ಫ್ಲಾಕ್ಸ್ ಬೀಜಗಳಲ್ಲಿರುವ ಅಧಿಕ ಪ್ರಮಾಣದ ನಾರಿನಂಶವು ನಮ್ಮ ದೇಹದಲ್ಲಿರುವ ನಾರಿನಂಶವನ್ನು ಕಡಿಮೆ ಮಾಡಲು ಸಹಕರಿಸುತ್ತದೆ. ಇದರಲ್ಲಿರುವ ನಾರಿನಂಶವು ನಿಮ್ಮ ಹೊಟ್ಟೆ ತುಂಬಿದ ಅನುಭವವನ್ನು ನೀಡಿ, ನೀವು ಕಡಿಮೆ ಊಟ ಮಾಡುವಂತೆ ಮಾಡುತ್ತದೆ. ಇದರಿಂದ ನಿಮ್ಮ ರಕ್ತದಲ್ಲಿ ಸಕ್ಕರೆ ಪ್ರಮಾಣ ಕಡಿಮೆಯಾಗುತ್ತದೆ ಮತ್ತು ನಿಮ್ಮ ಕರುಳು ಚೆನ್ನಾಗಿ ಕೆಲಸ ಮಾಡುತ್ತದೆ.
• ಸಂತಾನ ಶಕ್ತಿಯನ್ನು ಹೆಚ್ಚಿಸಲು ಸಹಾಯಕವಾದ ಆಂಟಿ ಆಕ್ಸಿಡೆಂಟ್‍ಗಳು ಮತ್ತು ಫೈಟೋ ಕೆಮಿಕಲ್‍ಗಳನ್ನು ಹೊಂದಿದ್ದು. ಇವುಗಳಲ್ಲಿ ಲಿಗನ್‍ಗಳು ಇರುತ್ತವೆ. ಇವು ಕರುಳುಗಳಲ್ಲಿ ಕೆಲಸ ಮಾಡುತ್ತವೆ ಮತ್ತು ಹೆಂಗಸರ ಹಾರ್ಮೋನುಗಳನ್ನು ಸಮತೋಲನದಲ್ಲಿಡುತ್ತದೆ. ಇವುಗಳು ಸಂತಾನ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.
• ಅಗಸೆ ಬೀಜಗಳು ಕೇವಲ ನಮ್ಮ ದೇಹದ ಆಂತರಿಕ ಆರೋಗ್ಯವನ್ನು ಕಾಪಾಡಿ ನಮ್ಮನ್ನು ಹಲವಾರು ಬಗೆಯ ಕಾಯಿಲೆಗಳಿಂದ ರಕ್ಷಣೆ ಮಾಡುತ್ತದೆ ಎಂದು ನೀವು ತಿಳಿದಿದ್ದರೆ ಅದು ತಪ್ಪು. ಅಗಸೆ ಬೀಜಗಳು ನಮ್ಮ ಸೌಂದರ್ಯ ನಿರ್ವಹಣೆಯಲ್ಲಿ ಕೂಡ ತಮ್ಮದೇ ಆದ ರೀತಿಯಲ್ಲಿ ಪ್ರಭಾವ ಬೀರುತ್ತವೆ. ಇದಕ್ಕೆ ಉದಾಹರಣೆ ಎಂಬಂತೆ ಅಗಸೆ ಬೀಜಗಳನ್ನು ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ರುಬ್ಬಿ ಪೇಸ್ಟ್ ತಯಾರಿಸಿಕೊಂಡು ನಮ್ಮ ನೆತ್ತಿ ಹಾಗೂ ತಲೆಯ ಸಂಪೂರ್ಣ ಭಾಗದಲ್ಲಿ ಕೂದಲಿಗೆ ಮಸಾಜ್ ಮಾಡಿದರೆ ನಮ್ಮ ತಲೆ ಕೂದಲು ಸಾಕಷ್ಟು ಸದೃಢವಾಗುವುದರೊಂದಿಗೆ ತುಂಬಾ ಮೃದುವಾಗಿ ಮತ್ತು ಹೊಳಪಾಗಿ ಕಾಣಿಸುತ್ತದೆ.

• ಕೂದಲಿನ ಸಮಸ್ಯೆಗಳಾದ ಕೂದಲು ಉದುರುವಿಕೆ, ತಲೆ ಹೊಟ್ಟು ನಿವಾರಣೆ ಇತ್ಯಾದಿಗಳಲ್ಲಿ ಅಗಸೆ ಬೀಜಗಳು ಮಹತ್ವದ ಪಾತ್ರ ಬೀರುತ್ತವೆ.
• ಮಾರುಕಟ್ಟೆಯಲ್ಲಿ ಸುಲಭವಾಗಿ ನಮಗೆ ಅಗಸೆ ಬೀಜದ ಎಣ್ಣೆ ಲಭ್ಯವಿದ್ದು. ಇದನ್ನು ಮನೆಗೆ ತಂದು ನಮ್ಮ ತಲೆ ಕೂದಲಿಗೆ ಹೇರ್ ಮಾಸ್ಕ್ ರೀತಿ ಬಳಸಬಹುದು. ನೀವು ಇದುವರೆಗೂ ತಲೆಗೆ ಕೊಬ್ಬರಿ ಎಣ್ಣೆ ಅಥವಾ ಆಲ್ಮಂಡ್ ಆಯಿಲ್ ಹಚ್ಚಿ ಚೆನ್ನಾಗಿ ಮಸಾಜ್ ಮಾಡುತ್ತಿದ್ದ ರೀತಿಯಲ್ಲಿ ಅಗಸೆ ಬೀಜದ ಎಣ್ಣೆಯನ್ನು ಸಹ ತಲೆಯ ನೆತ್ತಿಯ ಭಾಗಕ್ಕೆ ಹಚ್ಚಿ ಸುಮಾರು 15 ರಿಂದ 20 ನಿಮಿಷಗಳ ಕಾಲ ಚೆನ್ನಾಗಿ ಮಸಾಜ್ ಮಾಡಿ ನಂತರ ನಿಮ್ಮ ಕೂದಲನ್ನು ಆಯುರ್ವೇದ ಶಾಂಪೂ ಬಳಸಿ ತೊಳೆದುಕೊಳ್ಳಬಹುದು.

ಅಗಸೆ ಬೀಜದ ಎಣ್ಣೆಯನ್ನು ತಲೆ ಕೂದಲಿನ ಕಂಡೀಷನರ್ ಆಗಿ ಕೂಡ ಉಪಯೋಗಿಸಬಹುದು. ನಿಮ್ಮ ಕೂದಲು ಒಂದು ವೇಳೆ ತುಂಬಾ ಒರಟಾಗಿದ್ದರೆ, ನೀವು ಶಾಂಪೂ ಬಳಸಿ ತಲೆ ಸ್ನಾನ ಮಾಡಿದ ನಂತರ ಅಗಸೆ ಬೀಜದ ಎಣ್ಣೆಯನ್ನು ತಲೆ ಕೂದಲಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ ನಿಮ್ಮ ಕೂದಲಿನ ರಕ್ಷಣೆ ಮಾಡಿಕೊಳ್ಳಬಹುದು.
• ಅಗಸೆ ಬೀಜಗಳನ್ನು ನಿಮ್ಮ ತಲೆ ಕೂದಲಿಗೆ ಮೊದಲೇ ಹೇಳಿದಂತೆ ಹೇರ್ ಮಾಸ್ಕ್ ರೀತಿಯಲ್ಲಿ ಕೂಡ ಬಳಸಬಹುದು. ಇದಕ್ಕಾಗಿ ಮೊದಲು ಅಗಸೆ ಬೀಜಗಳನ್ನು ಸ್ವಲ್ಪ ನೀರು ಸೇರಿಸಿ ಒಂದು ಮಿಕ್ಸರ್ ಗ್ರೈಂಡರ್ ನಲ್ಲಿ ಚೆನ್ನಾಗಿ ರುಬ್ಬಿಕೊಂಡು ಪೇಸ್ಟ್ ತಯಾರಿಸಿಕೊಳ್ಳಿ. ಹೀಗೆ ತಯಾರಾದ ಅಗಸೆ ಬೀಜಗಳ ಪೇಸ್ಟ್ ಗೆ ಸ್ವಲ್ಪ ಜೇನು ತುಪ್ಪ ಮತ್ತು ತಾಜಾ ನಿಂಬೆ ಹಣ್ಣಿನ ರಸ ಹಿಂಡಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ತಲೆ ಕೂದಲಿಗೆ ಎಲ್ಲಾ ಕಡೆ ಹರಡುವಂತೆ ಹಚ್ಚಿ ಸುಮಾರು 30 ರಿಂದ 45 ನಿಮಿಷಗಳು ಹಾಗೆ ಇರಲು ಬಿಡಿ. ವಾರಕ್ಕೆ ಒಂದು ಬಾರಿ ನೀವು ಈ ರೀತಿ ಮಾಡುವುದರಿಂದ ಕೆಲವೇ ದಿನಗಳಲ್ಲಿ ನಿಮ್ಮ ಕೂದಲು ಅತ್ಯಂತ ಮೃದುವಾಗಿ ಮತ್ತು ಹೊಳಪಿನಿಂದ ಕೂಡಿರುತ್ತದೆ.

ತುಳಸಿ ನಮ್ಮ ಆರೋಗ್ಯಕ್ಕೆ ಹೇಗೆ ಸಹಕಾರಿ? ಪ್ರಯೋಜನಗಳ ಬಗ್ಗೆ ನಿಮಗೆ ತಿಳಿದಿದಿಯೇ?