Home » ಆಸಿಡಿಟಿಗೆ ಕಾರಣಗಳೇನು ಮತ್ತು ಅದನ್ನು ನಿಯಂತ್ರಿಸುವುದು ಹೇಗೆ ?

ಆಸಿಡಿಟಿಗೆ ಕಾರಣಗಳೇನು ಮತ್ತು ಅದನ್ನು ನಿಯಂತ್ರಿಸುವುದು ಹೇಗೆ ?

by manager manager

ಆಸಿಡಿಟಿ ಎಂಬುದು ತಮ್ಮ ದೇಹವನ್ನು ಕುಗ್ಗಿಸುವ ಒಂದು ರೀತಿಯ ಕಾಯಿಲೆ. ಹಾಗಾಗೀ ಈ ಆಸಿಡಿಟಿಯನ್ನು ನಿರ್ಲಕ್ಷೀಸಿದರೆ ಮುಂದೆ ದೊಡ್ಡ ರೀತಿಯ ಅನಾಹುತ ಕಟ್ಟಿಟ್ಟ ಬುತ್ತಿ. ಇದರ ಮುಖ್ಯ ಲಕ್ಷಣಗಳೆಂದರೇ ಬಾಯಿಯಲ್ಲಿ ಹುಳಿ ರುಚಿ, ಬಾಯಿ ಮತ್ತು ಹೊಟ್ಟೆಯಲ್ಲಿ ಉರಿ, ದೇಹದಲ್ಲಿ ಭಾರ, ಎದೆ ನೋವು, ಮಲಬದ್ಧತೆ. ಸಾಮಾನ್ಯವಾಗಿ ಯಾವುದಾದರು ಅಜೀರ್ಣ ಸಮಸ್ಯೆಯು ಜೀರ್ಣ ಮಾಡುವ ಆಸಿಡ್‍ಗಳಲ್ಲಿ ಅಸಮತೋಲನವನ್ನುಂಟು ಮಾಡಿದಾಗ ನಿಮಗೆ ಅಸಿಡಿಟಿ ಸಮಸ್ಯೆ ಕಂಡು ಬರುತ್ತದೆ. ಆಗ ಇದರಿಂದ ಮುಕ್ತಿ ಪಡೆಯಲು ನೀವು ಕೆಲವೊಂದು ಆಂಟಾಸಿಡ್‍ಗಳ ನೆರವನ್ನು ಪಡೆಯಬೇಕಾಗುತ್ತದೆ. ಆದರೆ ಇದೇ ಸಮಯದಲ್ಲಿ ನೀವು ಮನೆಯಲ್ಲಿಯೇ ದೊರೆಯುವ ಮನೆ ಮದ್ದುಗಳ ನೆರವಿನಿಂದ ಸಹ ಅಸಿಡಿಟಿಯಿಂದ ಮುಕ್ತಿ ಪಡೆಯಬಹುದು.


ಈ ಸಮಸ್ಯೆಗಳನ್ನು ಕೆಲವೊಂದು ಔಷಧಗಳ ಸೇವನೆಯಿಂದ ನಿವಾರಿಸಿಕೊಳ್ಳಬಹುದು. ಆದರೆ ಅದರ ಮೇಲೆಯೇ ಅವಲಂಬನೆಗೊಳ್ಳುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ.

  • ತಂಪಾದ ಮಜ್ಜಿಗೆಯು ಇದಕ್ಕೆ ರಾಮಬಾಣವಿದ್ದಂತೆ ಅಸಿಡಿಟಿ ಆಗದಂತೆ ತಡೆಯಲು ಊಟದ ಬಳಿಕ ಮಜ್ಜಿಗೆ ಕುಡಿಯುವ ಪದ್ದತಿ ಈಗಲೂ ಇದೆ. ಹಾಗಾಗಿ ಇದನ್ನು ಊಟದ ನಂತರ ಸೇವಿಸುವುದರಿಂದ ನಮ್ಮ ದೇಹಕ್ಕೆ ತುಂಬ ಒಳ್ಳೆಯದು.
  • ಎಳನೀರನ್ನು ಪವಿತ್ರವಾದ ನೈಸರ್ಗಿಕ ಕೊಡುಗೆ, ಎಳೆನೀರು ಸೇವನೆ ಅಸಿಡಿಟಿ ನಿವಾರಣೆಗೆ ಉತ್ತಮ ಔಷಧಿಯಾಗಿದೆ. ಹೊಟ್ಟೆಯಲ್ಲಿ ಲೋಳೆ ಪ್ರಮಾಣವನ್ನು ಹೆಚ್ಚಿಸಿ ಪಿತ್ತವನ್ನು ಇದು ಕಡಿಮೆ ಮಾಡುತ್ತದೆ.
  • ಕ್ಯಾಮೋಮೈಲ್ ಟೀ ಕುಡಿಯುವುದರಿಂದ ಆಸಿಡಿಟಿಗೆ ಗುಡ್‍ಬೈ ಹೇಳಬಹುದು ಇದೊಂದು ರೀತಿಯ ಹೂವಾಗಿದ್ದು ಇದರ ದಳಗಳನ್ನು ಒಣಗಿಸಿ ಮಾಡಿದ ಪುಡಿಯನ್ನು ಕುದಿಸಿ ತಯಾರಿಸಿದ ಟೀ ಸೇವನೆಯಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ.
  • ನಿತ್ಯವೂ ಶುಂಠಿಯ ಟೀಯನ್ನು ಕುಡಿಯುವ ಅಭ್ಯಾಸವಿದ್ದರೆ ಹಲವಾರು ಪ್ರಯೋಜನಗಳನ್ನು ನೀಡುವ ಮೂಲಕ ಆರೋಗ್ಯವನ್ನು ಉತ್ತಮವಾಗಿ ಇರಿಸುತ್ತದೆ. ಶುಂಠಿ ಅತ್ಯುತ್ತಮ ಉರಿಯೂತ ನಿವಾರಕ ಗುಣ ಹೊಂದಿದ್ದು ಹೊಟ್ಟೆಯುರಿಯನ್ನು ತಕ್ಷಣವೇ ಶಮನಗೊಳಿಸುತ್ತದೆ.
  • ಜೀರ್ಣಕ್ರಿಯೆಯನ್ನು ಸರಿಪಡಿಸುವಲ್ಲಿ ತುಳಸಿಯನ್ನು ಔಷಧಿ ಎಂದೇ ಪರಿಗಣಿಸಲಾಗಿದೆ. ತುಳಸಿ ಎಲೆಯನ್ನು ಹಾಗೆಯೇ ತಿನ್ನಬಹುದು, ಅಥವಾ ಎಲೆಯನ್ನು ನೀರಿನಲ್ಲಿ ಹಾಕಿ ಕುದಿಸಿಯೂ ಸೇವಿಸಬಹುದು.
  • ಅಸಿಡಿಟಿ ತಡೆಯಲು ಏನೇನು ಮಾಡಬೇಕು?
  • ಊಟದ ಬಳಿಕ ಮಲಗಬೇಡಿ, ಸ್ವಲ್ಪ ಹೊತ್ತು ಕೆಲಸ ಮಾಡಿ ಆ ನಂತರ ಮಲಗಿ.
  • ಮಾರುಕಟ್ಟೆಯಲ್ಲಿ ಸಿಗುವ ತಂಪು ಪಾನಿಯಗಳನ್ನು ಆದಷ್ಟು ಆವೈಡ್ ಮಾಡಿ. ಮುಖ್ಯವಾಗಿ ನಿಂಬು ಪಾನೀಯ, ಕಿತ್ತಳೆ ಜ್ಯೂಸ್, ದ್ರಾಕ್ಷಿ ಜ್ಯೂಸ್ ಕುಡಿಯಬೇಡಿ.
  • ಹುಳಿಯಂಶ ಇರುವ ಪದಾರ್ಥಗಳನ್ನು ಬಳಸಬೇಡಿ.
  • ಹೊರಗೆ ಮಸಾಲೆಯುಕ್ತ ಪದಾರ್ಥಗಳನ್ನು ಹೆಚ್ಚಾಗಿ ತಿನ್ನುವುದನ್ನು ಕಡಿಮೆಮಾಡಿ.
  • ಅತೀ ಹೆಚ್ಚಾಗಿ ನೀರನ್ನು ಕುಡಿಯಿರಿ.
  • ಸರಿಯಾದ ಸಮಯಕ್ಕೆ ಊಟವನ್ನು ಮಾಡಿ.
  • ಒಂದು ದಿನಕ್ಕಿಂತ ಹೆಚ್ಚಾಗಿ ಉಪವಾಸ ಇರಬೇಡಿ.
  • ನೀರಿನಂಶವಿರುವ ಪದಾರ್ಥಗಳನ್ನಿ ಅತಿ ಹೆಚ್ಚು ಸೇವಿಸಿ.
  • ಆಗಾಗ ಒಂದು ಚಮಚ ಕೊತ್ತಂಬರಿ ಬೀಜವನ್ನು ಎರಡು ಲೋಟ ತಣ್ಣೀರಿನಲ್ಲಿ ಹಾಕಿ ನೆನೆಸಿ. ನಂತರ ಸೋಸಿದ ನೀರನ್ನು ಕುಡಿಯಿರಿ.
  • ದಿನನಿತ್ಯ ನಿಮ್ಮ ದೇಹಕ್ಕೆ ಬೇಕಾದ ಆಹಾರ ಪದಾರ್ಥಗಳನ್ನು ಅಳೆತೆಗೆ ತಕ್ಕಂತೆ ತೆಗೆದುಕೊಳ್ಳಿ.
  • ದಿನನಿತ್ಯ ವ್ಯಾಯಾಮ ಮಾಡುವುದನ್ನು ಮರೆಯಬೇಡಿ.
  • ಯೋಗಾಸನ ಮಾಡುವುದರಿಂದ ನೀವು ನಿಮ್ಮ ದೇಹವನ್ನಷ್ಟೆ ಅಲ್ಲ ಆಸಿಡಿಟಿಯನ್ನು ಕಂಟ್ರೋಲ್ ಮಾಡಬಹುದು.
  • ವಾರಕ್ಕೊಮ್ಮೆ ಅಂದರೆ ಒಂದು ದಿನ ಉಪವಾಸ ಮಾಡುವುದರಿಂದ ದೇಹವು ನಿಯಂತ್ರಣದಲ್ಲಿದ್ದು ಆಸಿಡಿಟಿಗೆ ಅವಕಾಶ ಮಾಡಿಕೊಡುವುದಿಲ್ಲ.

Basale Soppu: ಬಸಳೆ ಸೊಪ್ಪು ನೋಡಲು ಸುಂದರ., ಹಾಗೇ ಆರೋಗ್ಯಕ್ಕೂ ಒಳ್ಳೆಯದು ಅದು ಹೇಗೆ?