ಕರ್ನಾಟಕ ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳ 5ನೇ ತರಗತಿ, 8ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ) ನಿರ್ಧರಿಸಿದ್ದು, ಇದೀಗ ವೇಳಾಪಟ್ಟಿ ಬಿಡುಗಡೆ ಮಾಡಿದೆ.
2022-2023ನೇ ಸಾಲಿನ 5ನೇ ತರಗತಿ, 8ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳಿಗೆ ಈ ಪಬ್ಲಿಕ್ ಎಕ್ಸಾಮ್ ನಡೆಸಲು ನಿರ್ಧರಿಸಿದ್ದು, ನವೆಂಬರ್ 2022 ರಿಂದ ಮಾರ್ಚ್ 2023 ರವರೆಗೆ ಪಠ್ಯಪುಸ್ತಕ ಆಧರಿಸಿ ವಾರ್ಷಿಕ ಪರೀಕ್ಷೆಗಳು ನಡೆಯಲಿವೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಶ್ನೆ ಪತ್ರಿಕೆ ರೂಪಿಸಿ ಈ ಪರೀಕ್ಷೆ ನಡೆಸಲಾಗುತ್ತದೆ.
2023ರ ಮಾರ್ಚ್ ತಿಂಗಳಲ್ಲಿ 5ನೇ ತರಗತಿ ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪಬ್ಲಿಕ್ ಪರೀಕ್ಷೆಗಳನ್ನು ನಡೆಸಲು ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ. ಈ ಪರೀಕ್ಷೆಯನ್ನು 2 ಗಂಟೆ ಅವಧಿಗೆ 50 ಅಂಕಗಳನ್ನು ನಿಗದಿ ಮಾಡಿ ನಡೆಸಲು ತೀರ್ಮಾನಿಸಲಾಗಿದೆ. ಈ ಪರೀಕ್ಷೆಯು 40 ಅಂಕಗಳಿಗೆ ಲಿಖಿತ ರೂಪದಲ್ಲಿ, 10ಅಂಕಗಳಿಗೆ ಮೌಖಿಕ ಸಂದರ್ಶನ ಮಾದರಿಯಲ್ಲಿ ನಡೆಯಲಿದೆ. ಕಲಿಕಾ ಚೇತರಿಕೆ ಯೋಜನೆಯಡಿ ಈ ಪ್ರಶ್ನೆಗಳನ್ನು ಸಿದ್ಧಪಡಿಸಲು ಶಿಕ್ಷಣ ಇಲಾಖೆ ಮಾರ್ಗದರ್ಶನ ರೂಪಿಸಿದೆ.
5ನೇ ತರಗತಿ, 8ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಎಕ್ಸಾಮ್ 2023ರ ಮಾರ್ಚ್ 9 ರಿಂದ 17 ರವರೆಗೆ ನಡೆಯಲಿವೆ. ಮಾರ್ಚ್ 21 ರಿಂದ ಮಾರ್ಚ್ 28, 2023 ರವರೆಗೆ ನಡೆಯಲಿದ್ದು, ಮಾರ್ಚ್ 31 ರಿಂದ ಏಪ್ರಿಲ್ 05 ರೊಳಗೆ ಫಲಿತಾಂಶ ಸಿದ್ಧಪಡಿಸಿ, ಏಪ್ರಿಲ್ 8 ರಿಂದ 10 ರ ನಡುವೆ ರಿಸಲ್ಟ್ ಪ್ರಕಟಿಸಲು ಶಿಕ್ಷಣ ಇಲಾಖೆ ವೇಳಾಪಟ್ಟಿ ಸಿದ್ಧಪಡಿಸಿದೆ.