Home » ನವೋದಯ ವಿದ್ಯಾಲಯದಲ್ಲಿನ 2370 ಬೋಧಕ-ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ

ನವೋದಯ ವಿದ್ಯಾಲಯದಲ್ಲಿನ 2370 ಬೋಧಕ-ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ

by manager manager

ನವೋದಯ ವಿದ್ಯಾಲಯ ಸಮಿತಿಯಲ್ಲಿ ಖಾಲಿ ಇರುವ ಬೋಧಕ ಮತ್ತು ಬೋಧಕೇತರ ಒಟ್ಟು 2370 ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು ಹುದ್ದೆಗಳ ಸಂಖ್ಯೆ: 2370

ಹುದ್ದೆಗಳು

– ಸಹಾಯಕ ಆಯುಕ್ತರು

– ಸ್ನಾತಕೋತ್ತರ ಶಿಕ್ಷಕರು

– ತರಬೇತಿ ಪಡೆದ ಪದವೀಧರ ಶಿಕ್ಷಕರು

– ವಿಷಯಕ್ಕೆ ಸಂಬಂಧಪಟ್ಟಂತೆ ವಿವಿಧ ಶಿಕ್ಷಕ ಹುದ್ದೆಗಳು

– ಕಾನೂನು ಸಹಾಯಕ

– ಮಹಿಳಾ ಸಿಬ್ಬಂದಿ

– ಅಡುಗೆ ಸಹಾಯಕರು

– ಗುಮಾಸ್ತ ಹುದ್ದೆಗಳು

ಹುದ್ದೆವಾರು ಖಾಲಿ ಪೋಸ್ಟ್‌ಗಳ ಮಾಹಿತಿಗಾಗಿ ಕೆಳಗೆ ನೀಡಲಾದ ನೋಟಿಫಿಕೇಶನ್‌ ಫೈಲ್‌ ಮೇಲೆ ಕ್ಲಿಕ್‌ ಮಾಡಿ ನೋಡಬಹುದು.

ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ: 10/07-2019

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 09/08/2019

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್‌

ಅರ್ಜಿ ಶುಲ್ಕ ವಿವರ

ಸಹಾಯಕ ಆಯುಕ್ತರು – ರೂ.1500

ಶಿಕ್ಷಕ ಮತ್ತು ಸಿಬ್ಬಂದಿ – ರೂ.1200

ಕಾನೂನು ಸಹಾಯಕ, ಅಡುಗೆ ಮತ್ತು ಎಲ್‌ಡಿಸಿ – ರೂ.1000

ಆಯ್ಕೆ ವಿಧಾನ: ಸಂಭವನೀಯ ಪರೀಕ್ಷಾ(ಕಂಪ್ಯೂಟರ್ ಆಧಾರಿತ ಪರೀಕ್ಷೆ) ಮೂಲಕ ಹುದ್ದೆಗಳ ಆಯ್ಕೆ ಮಾಡಲಾಗುತ್ತದೆ.

ವಯೋಮಿತಿ

ಸಹಾಯಕ ಆಯುಕ್ತರು – 45 ವರ್ಷಗಳು

ಸ್ನಾತಕೋತ್ತರ ಶಿಕ್ಷಕರು – 40 ವರ್ಷಗಳು

ವಿಷಯವಾರು ಪದವೀಧರ ಶಿಕ್ಷಕರು – 35 ವರ್ಷಗಳು

ಕಾನೂನು ಸಹಾಯಕ – 18 ರಿಂದ 32 ವರ್ಷಗಳು

ಬಿ ಗ್ರೂಪ್ ಮಹಿಳಾ ಸಿಬ್ಬಂದಿ (ದಾದಿಯರು) – 35 ವರ್ಷಗಳು

ಅಡುಗೆ ಸಹಾಯಕರು – 35 ವರ್ಷಗಳು

ಗುಮಾಸ್ತ ಹುದ್ದೆಗಳು – 18 ರಿಂದ 27 ವರ್ಷಗಳು

ಯಾವ ಯಾವ ಹುದ್ದೆಗೆ ಎಷ್ಟು ಪೋಸ್ಟ್‌ಗಳು ಇವೆ ಎಂದು ತಿಳಿಯಲು, ನವೋದಯ ವಿದ್ಯಾಲಯ ನೇಮಕಾತಿ 2019 ರ ಪ್ರಕಟಣೆಯ ಪಿಡಿಎಫ್‌ಗಾಗಿ – ಕ್ಲಿಕ್ ಮಾಡಿ

ಆನ್‌ಲೈನ್‌ ಅರ್ಜಿ ಸಲ್ಲಿಸಲು ನವೋದಯ ವಿದ್ಯಾಲಯದ ಅಧಿಕೃತ ವೆಬ್‌ಸೈಟ್‌ ವಿಳಾಸಕ್ಕಾಗಿ – ಕ್ಲಿಕ್ ಮಾಡಿ

You may also like