Home » ಸ್ಯಾಂಡಲ್‌ವುಡ್‌ ನಲ್ಲಿ ಐತಿಹಾಸಿಕ ದಾಖಲೆ ಬರೆದ ಯಶ್ ‘ಕೆ.ಜಿ.ಎಫ್’

ಸ್ಯಾಂಡಲ್‌ವುಡ್‌ ನಲ್ಲಿ ಐತಿಹಾಸಿಕ ದಾಖಲೆ ಬರೆದ ಯಶ್ ‘ಕೆ.ಜಿ.ಎಫ್’

by manager manager
yash and srinidhi shettys KGF chapter 1 box office collection

ರಾಕಿಂಗ್ ಸ್ಟಾರ್, ರಾಕಿ ಬೈ ಎಂದೇ ಪ್ರಖ್ಯಾತಗೊಂಡ ಯಶ್ ಅಭಿನಯದ ಕೆಜಿಎಫ್ (KGF) ಸಿನಿಮಾ ಈಗ ಸ್ಯಾಂಡಲ್‌ವುಡ್‌ ನಲ್ಲೇ ಮೊದಲ ಬಾರಿಗೆ ಹೊಸ ಐತಿಹಾಸಿಕ ದಾಖಲೆ ಒಂದನ್ನು ಸೃಷ್ಟಿಸಿದೆ.

ದೊಡ್ಡ ಸಿನಿಮಾ ಅಂದ್ರೆ ಕೇವಲ ಚಿತ್ರದ ಎಲ್ಲಾ ಮಜಲುಗಳ ಜೊತೆಗೆ ಅದರ ಬಾಕ್ಸ್‌ ಆಫೀಸ್ ಕಲೆಕ್ಷನ್ ಮೇಲು ಹೆಚ್ಚು ಕುತೂಹಲವ ಅಭಿಮಾನಿಗಳಲ್ಲೂ ಇರುತ್ತದೆ. ಈ ಕುತೂಹಲಕ್ಕೆ ಕೆಜಿಎಫ್ ಫ್ಯಾನ್ಸ್‌ಗಳಿಗೆ ಸ್ವಲ್ಪ ಹೆಚ್ಚಿನ ಮಟ್ಟದಲ್ಲೇ ಸಂತೋಷ ನೀಡಿದೆ.

ಮೊದಲ ದಿನ 25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದ ಕೆಜಿಎಫ್, ಎರಡನೇ ದಿನವೂ ಸಹ 25 ಕೋಟಿಗೂ ಮೀರಿ ಬಾಕ್ಸ್ ಆಫೀಸ್ ಬಾಚಿದ್ದು ಎರಡು ದಿನಗಳಿಗೆ ಒಟ್ಟಾರೆ 50 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಇದು ಕನ್ನಡ ಸಿನಿಮಾಗಳ ಮಟ್ಟಿಗೆ ಹೊಸ ದಾಖಲೆ ಆಗಿದೆ.

ಇನ್ನೂ ಕರ್ನಾಟಕದ ಮಟ್ಟಿಗೆ ಕೆಜಿಎಫ್ ಮೊದಲ ದಿನ 13 ಕೋಟಿ, ಎರಡನೇ ದಿನ 14 ಕೋಟಿ ಕಲೆಕ್ಷನ್ ಮಾಡಿದೆ ಎಂಬುದು ತಿಳಿದಿದೆ.

ಹಿಂದಿಯಲ್ಲಿ ಮೊದಲ ದಿನ ರೂ.2.10 ಕೋಟಿ ಮತ್ತು ಎರಡನೇ ದಿನ 3 ಕೋಟಿ ಕಲೆಕ್ಷನ್ ಮಾಡಿತ್ತು. ಒಟ್ಟಾರೆ ಹಿಂದಿಯಲ್ಲಿ 5.10 ಕೋಟಿ ಹಣ ಗಳಿಸಿದೆ.

Yash and Srinidhi Shetty starrer KGF movie running successfully worlwide. Here is box office collection details of KGF movie.

You may also like