Home » ನಿಮ್ಮ ಸ್ಮಾರ್ಟ್ ಫೋನ್ ಬ್ಯಾಟರಿ ಬೇಗ ಖಾಲಿಯಾಗಲು ಕಾರಣ ತಿಳಿಯಲು ಇಲ್ಲಿದೆ ಸುಲಭ ಮಾರ್ಗ..

ನಿಮ್ಮ ಸ್ಮಾರ್ಟ್ ಫೋನ್ ಬ್ಯಾಟರಿ ಬೇಗ ಖಾಲಿಯಾಗಲು ಕಾರಣ ತಿಳಿಯಲು ಇಲ್ಲಿದೆ ಸುಲಭ ಮಾರ್ಗ..

by manager manager

Smartphone Battery Draining Fast Reason :

ನಾವು ಸರಿಯಾಗಿ ಊಟ ಮಾಡುತ್ತೇವೆಯೋ ಇಲ್ಲವೋ ಆದರೆ ನಾವು ಹೊಂದಿರುವ ಮೊಬೈಲ್‍ಗಳಿಗೆ ಸರಿಯಾಗಿ ಊಟ ಹಾಕಲಿಲ್ಲ ಎಂದಾದರೇ ಅವು ತಮ್ಮ ಜೀವವವನ್ನ ಕಳೆದುಕೊಳ್ಳುವುದು ಖಚಿತ. ಯಾಕಪ್ಪ ಈ ವಿಷಯ ಹೇಳ್ತಾ ಇದ್ದೀನಿ ಅಂದ್ರೆ ನಮ್ಮ ಬಳಿ ಇರುವ ಮೊಬೈಲ್ ಫೋನ್‍ಗಳು ಅತೀ ಬೇಗ ತಮ್ಮ ಬ್ಯಾಟರಿಯನ್ನು ಕಳೆದುಕೊಂಡರೆ ನಾವು ವಿಚಲಿತರಾಗುತ್ತೇವೆ ಕಾರಣ ಇಂದು ನಾವೆಲ್ಲರು ಮೊಬೈಲ್‍ಗಳ ಮೇಲೆ ಅವಲಂಭಿತರಾಗಿದ್ದೇವೆ, ಸಾಮಾನ್ಯವಾಗಿ ಎಲ್ಲಾ ಸ್ಮಾರ್ಟ್‍ಫೋನ್ ಬಳಕೆದಾರರು ಎದುರಿಸುವ ಬಹುದೊಡ್ಡ ತೊಂದರೆ ಎಂದರೆ ಅದು ಬ್ಯಾಟರಿ ಬ್ಯಾಕಪ್ ಸಮಸ್ಯೆ. ಇದಕ್ಕೆ ತುಂಬ ಕಾರಣಗಳಿವೇ ಆದರೆ ಮೂಖ್ಯವಾಗಿ ಇರುವ ಒಂದು ಕಾರಣ ಎಂದರೇ ಅದು ಕೆಲವೊಂದು ಆ್ಯಪ್‍ಗಳು.

“ದಿ ಇಂಡಿಪೆಂಡೆಂಟ್” ಬಿಡುಗಡೆ ಮಾಡಿರುವ ವರದಿ ಪ್ರಕಾರ, ಹಲವು ಅಪ್ಲಿಕೇಶನ್‌ಗಳು ಸ್ಮಾರ್ಟ್‍ಫೋನ್ ಬ್ಯಾಟರಿಯನ್ನು ಲೀಲಜಾಲವಾಗಿ ಖಾಲಿ ಮಾಡುತ್ತದೆ. ಹೀಗಿರುವಾಗ ಆ ರೀತಿ ಬ್ಯಾಟರಿ ಖಾಲಿ ಮಾಡುವಲ್ಲಿ ಪ್ರಥಮವಾಗಿ ಕಾಣಿಸುವುದೇ ಫೇಸ್‍ಬುಕ್ ಎಂದು ಹೇಳಿದೆ. ತುಂಬ ಜನ ಸ್ಮಾಟ್ರ್ಫೋನ್ ಖರೀದಿಸುವಾಗ ಗಮನಿಸುವ ಮುಖ್ಯ ಅಂಶಗಳಲ್ಲಿ ಫೋನಿನ ರ್ಯಾಮ್ ಕೂಡ ಒಂದು. ಉತ್ತಮ ರ್ಯಾಮ್ ಹೊಂದಿರುವ ಮೊಬೈಲ್ಗಳು ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಗ್ರಾಫಿಕ್ಸ್ ಕ್ವಾಲಿಟಿಯನ್ನು ಹೊಂದಿರುತ್ತದೆ. ಈ ಕಾರಣಕ್ಕಾಗಿ ರ್ಯಾಮ್ ಸಾಮಥ್ರ್ಯ ಹೆಚ್ಚಿರುವ ಮೊಬೈಲ್ಗಳನ್ನು ಹೆಚ್ಚಿನವರು ಖರೀದಿಸುತ್ತಾರೆ.

ಈಗೀನ ದಿನಗಳಲ್ಲಿ 8ಜಿಬಿ ಮತ್ತು 12ಜಿಬಿ ರ್ಯಾಮ್‍ಗಳ ಸ್ಮಾಟ್ರ್ಫೋನ್ಗಳನ್ನೇ ಹೆಚ್ಚು ಖರೀದಿಸುತ್ತಾರೆ. ಕಾರಣ ಇಂತಹ ಮೊಬೈಲ್ಗಳು ವೇಗದಿಂದ ಕಾರ್ಯ ನಿರ್ವಹಿಸುತ್ತದೆ. ಕಡಿಮೆ ರ್ಯಾಮ್ ಇದ್ದರೆ ಮೊಬೈಲ್ನಲ್ಲಿ ಹ್ಯಾಂಗ್ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.

– ಕೆಲ ಫೋನ್ಗಳು ನಿಧಾನಗೊಳ್ಳಲು ಬಳಸುವ ಕೆಲ ಅಪ್ಲಿಕೇಶನ್ಗಳು ಕೂಡ ಕಾರಣವಾಗಿರುತ್ತದೆ. ಇಂತಹ ಆ್ಯಪ್ ಅನ್ನು ಅನ್ ಇನ್ಸ್ಟಾಲ್ ಮಾಡುವುದರಿಂದ ಕಾರ್ಯಕ್ಷಮತೆಯ ವೇಗ ಮತ್ತು ಪ್ರಮುಖವಾಗಿ ಬ್ಯಾಟರಿ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.

– ಈಗೀನ ಕೆಲವು ವರದಿಗಳ ಪ್ರಕಾರ ಫೇಸ್ಬುಕ್, ಇನ್ಸ್ಟಾಗ್ರಾಂ ಮತ್ತು ನೆಟ್ಫ್ಲಿಕ್ಸ್ ಬಳಕೆಯಿಂದ ಸ್ಮಾಟ್ರ್ಫೋನ್ಗಳ ಬ್ಯಾಟರಿ ಬೇಗನೆ ಡ್ರೈ ಆಗುತ್ತಿದೆ. ಹಾಗೆಯೇ ಈ ಆ್ಯಪ್‍ಗಳು ಅತಿ ಹೆಚ್ಚಿನ ಸ್ಟೋರೇಜ್ನ್ನು ಬಳಸುವ ಮೂಲಕ ಮತ್ತು ಇದನ್ನು ದಿನಂಪ್ರತಿ ಪರಿಶೀಲಿಸುವ ಮೂಲಕ ರ್ಯಾಮ್ ವೇಗವನ್ನು ಹೆಚ್ಚಿಸಿ, ಬ್ಯಾಟರಿ ಸಾಮಥ್ರ್ಯವನ್ನು ಕಾಪಾಡಿಕೊಳ್ಳಬಹುದು.

– ಸ್ಮಾಟ್ರ್ಫೋನ್ಗಳು ಸ್ಲೋ ಆಗುತ್ತಿದ್ದರೆ ಅಪ್ಲಿಕೇಶನ್ ಸೆಟ್ಟಿಂಗ್ಗಳನ್ನು ಪರಿಶೀಲಿಸಿ ಅತ್ಯಂತ ಮೃದುವಾಗಿ ಕಾರ್ಯ ನಿರ್ವಹಿಸುವಂತೆ ಮಾಡಿಕೊಳ್ಳಬಹುದು.

ಇದಕ್ಕೆ ನೀವು ಫೋನ್ನಲ್ಲಿ ಸೆಟ್ಟಿಂಗ್ಸ್ ಆಯ್ಕೆ ಮಾಡಿಕೊಳ್ಳಿ, ಸ್ಟೋರೆಜ್/ಮೆಮೋರಿ ಆಯ್ಕೆಯನ್ನು ಒತ್ತಿರಿ. ಮೆಮೋರಿ ಎಂಬ ವಿಭಾಗವನ್ನು ಆಯ್ಕೆ ಮಾಡಿದರೆ, ಮೆಮೋರಿ ಯೂಸಡ್ ಬೈ ಆ್ಯಪ್ಸ್ ಅನ್ನೋ ಆಪ್ಷನ್ ಕಾಣುತ್ತದೆ. ಅದನ್ನು ಕ್ಲಿಕ್ ಮಾಡಿದರೆ ನಿಮಗೆ ಅಪ್ಲಿಕೇಶನ್‌ ಬಳಸಿರುವ ರ್ಯಾಮ್ ಮಾಹಿತಿ ಲಭ್ಯವಾಗುತ್ತದೆ. ಇಲ್ಲಿ ಒಂದೊಂದು ಆ್ಯಪ್ ಅನ್ನು ಕ್ಲಿಕ್ ಮಾಡುವ ಮೂಲಕ ಕೂಡ ಮಾಹಿತಿ ಪಡೆದುಕೊಳ್ಳಬಹುದು. ಅಲ್ಲದೆ ಬ್ಯಾಟರಿ ಸೆಟ್ಟಿಂಗ್ಸ್‍ಗೆ ಹೋದರೆ ಅತಿ ಹೆಚ್ಚು ಬ್ಯಾಟರಿ ಬಳಸಿದ ಈ ಆ್ಯಪ್‍ಗಳ ಸ್ಪಷ್ಟ ಮಾಹಿತಿ ಸಿಗುತ್ತದೆ. ಇದರಿಂದ ನಿಮ್ಮ ಬ್ಯಾಟರಿಯನ್ನು ಯಾವ ಆ್ಯಪ್ ಹೆಚ್ಚು ಉಪಯೋಗಿಸುತ್ತಿದೆ ಎಂಬುದನ್ನು ಕಂಡುಹಿಡಿದು ಬ್ಯಾಟರಿ ಉಳಿತಾಯಕ್ಕೆ ಸಹಾಯ ಮಾಡಬಹುದು.

ನಿಮ್ಮ ಮೊಬೈಲ್ ಬ್ಯಾಟರಿ ಬೇಗ ಡೌನ್ ಆಗಬಾರದು ಎಂದಾದರೇ ಈ ಕೆಳಗಿನ ಟಿಪ್ಸ್‍ಗಳನ್ನು ಫಾಲೋ ಮಾಡಿ :

– ನಿಮ್ಮ ಮೊಬೈಲ್‍ಗೆ ಸರಿಹೊಂದುವ ಚಾರ್ಜರ್‍ನಿಂದಲೇ ಚಾರ್ಜ್‍ಗೆ ಹಾಕಿ, ಬೇರೆ ಚಾರ್ಜರ್ ಅನ್ನು ಬಳಸಿದರೆ ಅದು ನಿಮ್ಮ ಬ್ಯಾಟರಿ ಬ್ಯಾಕಪ್ ಮೇಲೆ ಸಮಸ್ಯೆಯನ್ನು ಉಂಟುಮಾಡುತ್ತದೆ.

– ರಾತ್ರಿ ಇಡೀ ನಿಮ್ಮ ಮೊಬೈಲ್ ಅನ್ನು ಚಾರ್ಜ್‍ಗೆ ಹಾಕಿ ಮಲಗುವುದನ್ನು ಬಿಡಿ. ಇದು ಅದರ ಸಾಮಾಥ್ರ್ಯಕ್ಕಿಂತ ಹೆಚ್ಚಿಗೆ ಚಾರ್ಜ್ ಆಗಿ ತನ್ನ ಬ್ಯಾಟರಿ ಬ್ಯಾಕಪ್ ಅನ್ನು ಹಾಳು ಮಾಡಿಕೊಳ್ಳುತ್ತದೆ. ಅದಕ್ಕೊಸ್ಕರ ಊಟವು ಮಿತವಾಗಿದ್ದರೆ ಮನುಷ್ಯನಿಗೂ ಒಳಿತು ಹಾಗೇ ಮೊಬೈಲ್‍ಗು ಕೂಡ.

– ನಿಮ್ಮ ಮೊಬೈಲ್‍ನಲ್ಲಿ ನೀವು ಯೂಸ್ ಮಾಡದೇ ಇರುವ ಆ್ಯಪ್‍ಗಳು ಬ್ಯಾಕ್‍ಗ್ರೌಂಡ್‍ನಲ್ಲಿ ರನ್ ಆಗುತ್ತಿರುತ್ತದೆ. ಅದನ್ನು ನಿಲ್ಲಿಸಿ.

– ಈಗ ಹೊಸದಾಗಿ ಯಾವ್ಯಾವುದೋ ಆ್ಯಪ್‍ಗಳು ನಿಮಗೆ ಮೊಬೈಲ್ ಸ್ಟೋರ್‍ಗಳಲ್ಲಿ ಸಿಗುತ್ತವೆ. ಸಿಕ್ಕಸಿಕ್ಕಿದ್ದೆಲ್ಲವನ್ನು ಡೌನ್‍ಲೋಡ್ ಮಾಡಿಕೊಳ್ಳಬೇಡಿ. ಅವಶ್ಯಕತೆ ಇರುವ ಆ್ಯಪ್‍ಗಳನ್ನು ಮಾತ್ರ ಡೌನ್‍ಲೋಡ್ ಮಾಡಿಕೊಳ್ಳಿ.

– ಪ್ರತಿಯೊಂದು ಆ್ಯಪ್‍ಗಳನ್ನು ತಿಂಗಳಿಗೊಮ್ಮೆ ಅನ್ ಇನ್ಸ್ಟಾಲ್ ಮಾಡಿ ಪುನಃ ಇನ್ಸ್ಟಾಲ್ ಮಾಡಿಕೊಳ್ಳಿ ಆಗ ಅದರಲ್ಲಿರುವ ಜಂಕ್ ಫೈಲ್ಸ್ ಹೊರಹೋಗುತ್ತವೆ ಆಗ ನಿಮ್ಮ ಬ್ಯಾಟರಿಗೆ ಸ್ವಲ್ಪ ಉಸಿರಾಡುವ ಜಾಗ ಸಿಗುತ್ತದೆ.

– ಮೊಬೈಲ್ ಅನ್ನು ಚಾರ್ಜ್‍ಗೆ ಹಾಕಿ ಬಳಸುವುದನ್ನು ಕಡಿಮೆ ಮಾಡಿ ಇದು ನಿಮಗೂ ಒಳ್ಳೆಯದು ಮೊಬೈಲ್ ಬ್ಯಾಟರಿಗೂ ಒಳ್ಳೆಯದು.

ಕರ್ನಾಟಕದಲ್ಲಿ ಡ್ರೈವಿಂಗ್ ಲೈಸೆನ್ಸ್ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಸುಲಭ ವಿಧಾನ..