Home » ತೋಟಗಾರ ಹುದ್ದೆ ನೇಮಕ: ದಾಖಲಾತಿ ಪರಿಶೀಲನೆಗೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ ಪ್ರಕಟ

ತೋಟಗಾರ ಹುದ್ದೆ ನೇಮಕ: ದಾಖಲಾತಿ ಪರಿಶೀಲನೆಗೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ ಪ್ರಕಟ

by manager manager

ತೋಟಗಾರಿಕೆ ಇಲಾಖೆಯಲ್ಲಿ ತೋಟಗಾರ ಹುದ್ದೆಗಳನ್ನು (ಗ್ರೂಪ್ ಡಿ) ನೇರ ನೇಮಕಾತಿ ಮುಖಾಂತರ ಭರ್ತಿ ಮಾಡುವ ಸಲುವಾಗಿ ರಾಜ್ಯ ಉಳಿಕೆ ಮೂಲ ವೃಂದ ಮತ್ತು ಹೈದ್ರಾಬಾದ್ ಕರ್ನಾಟಕ ಸ್ಥಳೀಯ ವೃಂದಕ್ಕೆ ಸಂಬಂಧಿಸಿದಂತೆ “ಮೂಲ ದಾಖಲಾತಿಗಳ ಪರಿಶೀಲನೆಗೆ ಅರ್ಹ ಅಭ್ಯರ್ಥಿಗಳ ಆಯ್ಕೆ ಪಟ್ಟಿ” ಪ್ರಕಟಿಸಲಾಗಿದೆ.

“ಮೀಸಲಾತಿ ಅಡಿ ಕೊನೆ ಅಭ್ಯರ್ಥಿಯ ಕಟ್-ಆಫ್ ಅಂಕ’ ಕುರಿತು ಮಾಃಇತಿಯನ್ನು ತೋಟಗಾರಿಕೆ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಸದರಿ ಅರ್ಹ ಪಟ್ಟಿಯಲ್ಲಿನ ಅಭ್ಯರ್ಥಿಗಳು ನಿಗದಿತ ದಿನಾಂಕದಂದು ಮೂಲ ದಾಖಲಾತಿಗಳ ಪರಿಶೀಲನೆಗೆ ಹಾಜರಾಗತಕ್ಕದ್ದು. ಹಾಗೂ ಸದರಿ ಅರ್ಹತಾ ಪಟ್ಟಿಯನ್ನು ನಿರ್ದೇಶನಾಲಯದ ವತಿಯಿಂದ ಯಾವುದೇ ಅಭ್ಯರ್ಥಿಗೆ ಪ್ರತ್ಯೇಕವಾಗಿ ರವಾನಿಸುವ ವ್ಯವಸ್ಥೆ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅರ್ಹತಾ ಪಟ್ಟಿಗಳನ್ನು ನೋಡಲು ಈ ಕೆಳಗಿನ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿ.

ತೋಟಗಾರ ಹುದ್ದೆಯ ಮೂಲ ದಾಖಲಾತಿ ಪರಿಶೀಲನೆಗೆ ಅರ್ಹವಿರುವ ಅಭ್ಯರ್ಥಿಗಳ ಪಟ್ಟಿ ಹಾಗೂ ಪರಿಶೀಲನಾ ವೇಳಾ ಪಟ್ಟಿಗಳು ಈ ಕೆಳಗಿನಂತಿವೆ.

ಅಂಗವೈಕಲ್ಯತೆ ಹಾಗೂ ಮಾಜಿ ಸೈನಿಕ ಮೀಸಲಾತಿ – ಕ್ಲಿಕ್ ಮಾಡಿ

ಹೈದ್ರಬಾದ್-ಕರ್ನಾಟಕ ಸ್ಥಳೀಯ ವೃಂದ ಮೀಸಲಾತಿ – ಕ್ಲಿಕ್ ಮಾಡಿ

ರಾಜ್ಯ ಉಳಿಕೆ ವೃಂದ ಮೀಸಲಾತಿ – ಕ್ಲಿಕ್ ಮಾಡಿ

ತೋಟಗಾರಿಕೆ ಹುದ್ದೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಕಟ್-ಆಫ್‌ ಅಂಕ ಪಟ್ಟಿ – ಕ್ಲಿಕ್ ಮಾಡಿ

ತೋಟಗಾರಿಕೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ ಗಾಗಿ – ಕ್ಲಿಕ್ ಮಾಡಿ

ತೋಟಗಾರಿಕೆ ಇಲಾಖೆಯಲ್ಲಿ ನೇಮಕಾತಿ: ವಿದ್ಯಾರ್ಹತೆ SSLC