ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯು ಇದೀಗ ಎಸ್‌ಎಸ್ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆ ಮಾಡಿದೆ. ವಿದ್ಯಾರ್ಥಿಗಳು ಈ ಕೆಳಗಿನಂತೆ ಚೆಕ್ ಮಾಡಿಕೊಳ್ಳಬಹುದು. ನಂತರ ಹೆಚ್ಚು ಅಂಕಗಳನ್ನು ಪಡೆಯಲು ಯಾವ ರೀತಿ ತಯಾರಿ ಇರಬೇಕು ಎಂದು ಓದಿಕೊಳ್ಳಿ.
ಎಸ್‌ಎಸ್ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆಯ ವೇಳಾಪಟ್ಟಿ 2022-23
ಪ್ರಥಮ ಭಾಷೆ- ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು , ಉರ್ದು, ಇಂಗ್ಲಿಷ್, ಇಂಗ್ಲಿಷ್ (NCERT), ಸಂಸ್ಕೃತ : 23-02-2023
ದ್ವಿತೀಯ ಭಾಷೆ -ಇಂಗ್ಲಿಷ್, ಕನ್ನಡ: 24-02-2023 –
ತೃತೀಯ ಭಾಷೆ- ಹಿಂದಿ, ಕನ್ನಡ, ಇಂಗ್ಲಿಷ್, ತುಳು, ಕೊಂಕಣಿ, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ: 25-02-2023 –
ಗಣಿತ : 27-02-2023
ವಿಜ್ಞಾನ: 28-02-2023
ಸಮಾಜ : 01-02-2023
ಎಸ್ಎಸ್‌ಎಲ್‌ಸಿ ಪರೀಕ್ಷೆ ವಾರ್ಷಿಕ ಪರೀಕ್ಷೆ ವೇಳಾಪಟ್ಟಿ 2023 ಮಾರ್ಚ್/ ಏಪ್ರಿಲ್
ಪ್ರಥಮ ಭಾಷೆ- ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು , ಉರ್ದು, ಇಂಗ್ಲಿಷ್, ಇಂಗ್ಲಿಷ್ (NCERT), ಸಂಸ್ಕೃತ: 31-03-2023
ಗಣಿತ ಶಾಸ್ತ್ರ, ಸಮಾಜ ಶಾಸ್ತ್ರ: 03-04-2023
ದ್ವಿತೀಯ ಭಾಷೆ -ಇಂಗ್ಲಿಷ್, ಕನ್ನಡ : 06-04-2023
ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ : 10-04-2023
ತೃತೀಯ ಭಾಷೆ- ಹಿಂದಿ, ಕನ್ನಡ, ಇಂಗ್ಲಿಷ್, ತುಳು, ಕೊಂಕಣಿ, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ: 12-04-2023
ಸಮಾಜ ವಿಜ್ಞಾನ: 15-04-2023
SSLC ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಟಾಪರ್‌ಗಳ ಟಿಪ್ಸ್
-ಮೊದಲು ಪ್ರಶ್ನೆ ಪತ್ರಿಕೆ ಓದಿ, ಅರ್ಥ ಮಾಡಿಕೊಳ್ಳಿ. ಉತ್ತರ ಬರೆಯುವ ಮೊದಲು ಎಷ್ಟು ಅಂಕಗಳಿಗೆ ಪ್ರಶ್ನೆ ಕೇಳಲಾಗಿದೆ, ಪ್ರಶ್ನೆಗೆ ಎಷ್ಟು ಉತ್ತರ ಬರೆಯಬೇಕು ಎಂದು ಪ್ಲಾನ್ ಮಾಡಿಕೊಳ್ಳಿ.
-ಮೊದಲು ನಿಮಗೆ 15 ನಿಮಿಷಗಳು ಪ್ರಶ್ನೆ ಪತ್ರಿಕೆಯನ್ನು ಓದಿಕೊಳ್ಳಲು ಅವಕಾಶ ಇರುತ್ತದೆ. ಮೊದಲು 15 ನಿಮಿಷ ಪರಿಣಾಮಕಾರಿಯಾಗಿ ಬಳಸಿಕೊಳ್ಳಿ.
-ಕಠಿಣ ಪ್ರಶ್ನೆಗಳ ಬಗ್ಗೆ ಹೆಚ್ಚು ಚಿಂತಿಸದಿರಿ
-ಮೊದಲು ಸುಲಭದ ಪ್ರಶ್ನೆಗಳಿಗೆ ಉತ್ತರ ನೀಡಲು ಆಧ್ಯತೆ ಇರಲಿ
-ನಿಖರತೆ ಮತ್ತು ವೇಗ ಖಚಿತಪಡಿಸಿಕೊಳ್ಳಿ. ಅಂದರೆ ಎಷ್ಟು ವೇಗವಾಗಿ ಉತ್ತರ ಬರೆಯಬೇಕು, ಉತ್ತರ ಎಷ್ಟು ಸ್ಪಷ್ಟನೆ ಇದೆ ಎಂದು ಗಮನವಿರಲಿ.
-ಸಮಯದ ಮೇಲೆ ಗಮನವಿರಲಿ. ಎಷ್ಟು ಪ್ರಶ್ನೆಗಳಿವೆ, ಒಂದು ಪ್ರಶ್ನೆಗೆ ಎಷ್ಟು ಸಮಯ ನೀಡಬೇಕು ಎಂದು ಮೊದಲೇ ಮಾದರಿ ಪ್ರಶ್ನೆ ಪತ್ರಿಕೆ ಓದಿಕೊಂಡು ಲೆಕ್ಕಚಾರ ಹಾಕಿಕೊಂಡಿರಬೇಕು.
-ಒಂದೇ ಪ್ರಶ್ನೆಗೆ ಹೆಚ್ಚು ಚಿಂತಿಸದಿರಿ. ಉತ್ತರ ಗೊತ್ತಿಲ್ಲವಾದರೆ ಮುಂದಿನ ಪ್ರಶ್ನೆಗೆ ಹೋಗಿ ಉತ್ತರಿಸಿ.
-ಉತ್ತರವನ್ನು ಬರೆದ ನಂತರ ಒಮ್ಮೆ ಪುನರ್‌ಪರಿಶೀಲನೆ ಮಾಡಿ. ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆಯೇ, ಪ್ರಶ್ನೆ ಸಂಖ್ಯೆ ಸರಿಯಾಗಿ ಹಾಕಲಾಗಿದೆಯೇ, ರಿಜಿಸ್ಟರ್ ನಂಬರ್ ಬರೆಯಲಾಗಿದೆಯೇ ಎಂದು ಪರಿಶೀಲಿಸಿಕೊಳ್ಳಿ
-ಪ್ರಶ್ನೆಗಳಿಗೆ ಉತ್ತರ ಆಯ್ಕೆಯಲ್ಲಿ ಬುದ್ಧಿವಂತಿಕೆ ಇರಲಿ
-ಉತ್ತರದಲ್ಲಿ ಪದಗಳ ಸಂಖ್ಯೆ, ಭಾಷಾ ಬಳಕೆ ಚೆನ್ನಾಗಿರಲಿ.
-ಹೆಚ್ಚು ಅಂಕಗಳಿಸಬಹುದಾದ ವಿಷಯಗಳು : ಗಣಿತ