Home » SSC CHSL 2022 ಪರೀಕ್ಷೆಗೆ ಆನ್‌ಲೈನ್‌ ಅರ್ಜಿ ಆಹ್ವಾನ

SSC CHSL 2022 ಪರೀಕ್ಷೆಗೆ ಆನ್‌ಲೈನ್‌ ಅರ್ಜಿ ಆಹ್ವಾನ

by manager manager

SSC CHSL Exam 2022 ; ಸಿಬ್ಬಂದಿ ನೇಮಕಾತಿ ಆಯೋಗವು ಕಂಬೈನ್ಡ್‌ ಹೈಯರ್ ಸೆಕೆಂಡರಿ ಲೆವೆಲ್‌ ಪರೀಕ್ಷೆಗೆ ಅರ್ಜಿ ಆಹ್ವಾನ. ಮಾರ್ಚ್‌ 07, 2022 ರವರೆಗೆ ಅರ್ಜಿಗೆ ಅವಕಾಶ.

ನೇಮಕಾತಿ ಆಯೋಗ : ಸ್ಟಾಫ್‌ ಸೆಲೆಕ್ಷನ್‌ ಕಮಿಷನ್
ಹುದ್ದೆ ಹೆಸರು : ಎಸ್‌ಎಸ್‌ಸಿ ಸಿಹೆಚ್‌ಎಸ್‌ಎಲ್
ವಿದ್ಯಾರ್ಹತೆ : ದ್ವಿತೀಯ ಪಿಯುಸಿ / 12ನೇ ತರಗತಿ ಪಾಸ್‌
ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 01-02-2022
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 07-03-2022
ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ : 08-03-2022
ಆಫ್‌ಲೈನ್‌ ಚಲನ್ ಪಡೆಯಲು ಕೊನೆ ದಿನಾಂಕ : 09-03-2022
ಚಲನ್‌ ಮೂಲಕ ಅರ್ಜಿ ಶುಲ್ಕ ಪಾವತಿಗೆ ಕೊನೆ ದಿನಾಂಕ : 10-03-2022
ಅಪ್ಲಿಕೇಶನ್‌ ಮತ್ತು ಆನ್‌ಲೈನ್‌ ಪೇಮೆಂಟ್‌ ಕರೆಕ್ಷನ್‌ಗೆ ಅವಕಾಶ : 11-03-2022 ರಿಂದ 15-03-2022 ರ ರಾತ್ರಿ 23-00 ರವರೆಗೆ.
SSC CHSL ಟೈಯರ್-1 ಸಿಬಿಟಿ ಪರೀಕ್ಷೆ ದಿನಾಂಕ : ಮೇ 2022
ಟೈಯರ್-2 ವಿವರಣಾತ್ಮಕ ಪತ್ರಿಕೆ ಪರೀಕ್ಷೆ ದಿನಾಂಕ : ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುತ್ತದೆ.

ಎಸ್‌ಎಸ್‌ಸಿ ಸಿಹೆಚ್‌ಎಸ್‌ಎಲ್‌ ಪರೀಕ್ಷೆ ಮೂಲಕ ಲೋವರ್ ಡಿವಿಷನ್ ಕ್ಲರ್ಕ್‌(LDC) ಮತ್ತು ಜೂನಿಯರ್ ಸೆಕ್ರೇಟರಿಯಟ್ ಅಸಿಸ್ಟಂಟ್ (JSA), ವಿಂಗಡಣೆ ಸಹಾಯಕ (SA), ಪೋಸ್ಟಲ್ ಅಸಿಸ್ಟಂಟ್ (PA), ಡಾಟಾ ಎಂಟ್ರಿ ಆಪರೇಟರ್ (DEO), ಡಾಟಾ ಎಂಟ್ರಿ ಆಪರೇಟರ್ ಗ್ರೇಡ್ ಎ ಹುದ್ದೆಗಳನ್ನು, ಕೇಂದ್ರ ಸರ್ಕಾರ ಅಧೀನದ ಸಚಿವಾಲಯಗಳು, ಇಲಾಖೆಗಳಿಗೆ ನೇಮಕ ಮಾಡಲು ಅಭ್ಯರ್ಥಿಗಳ ಆಯ್ಕೆ ಮಾಡುತ್ತದೆ.

ಮೇಲೆ ತಿಳಿಸಿದ ಹುದ್ದೆಗಳಿಗೆ ದಿನಾಂಕ 01-01-2022 ಕ್ಕೆ ಸರಿಯಾಗಿ ಕನಿಷ್ಠ 18 ವರ್ಷ, ಗರಿಷ್ಠ 27 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಜಾತಿವಾರು ವಯೋಮಿತಿ ಸಡಿಲಿಕೆ ನಿಯಮ ಅನ್ವಯವಾಗಲಿದೆ.

ಶೈಕ್ಷಣಿಕ ಅರ್ಹತೆ
ಮೇಲಿನ ಹುದ್ದೆಗಳಿಗೆ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಪಡೆದಿರಬೇಕು.
ಡಾಟಾ ಎಂಟ್ರಿ ಆಪರೇಟರ್ ಗ್ರೇಡ್‌-1 ಹುದ್ದೆಗೆ ವಿಜ್ಞಾನ ವಿಭಾಗದಲ್ಲಿ ಪಿಯುಸಿ ಪಾಸ್ ಮಾಡಿರಬೇಕು. ಗಣಿತ ವಿಷಯ ಕಡ್ಡಾಯವಾಗಿ ಓದಿರಬೇಕು.

ಅರ್ಜಿ ಶುಲ್ಕ : ರೂ.100.
SSC CHSL ಪರೀಕ್ಷೆ ಮಾದರಿ
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೂರು ಹಂತಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ.

  • ಟೈಯರ್-1 ಪರೀಕ್ಷೆ ಕಂಪ್ಯೂಟರ್ ಆಧಾರಿತವಾಗಿರುತ್ತದೆ.
  • ಟೈಯರ್-2 ಪರೀಕ್ಷೆ ವಿವರಣಾತ್ಮಕ ಪರೀಕ್ಷೆ ಆಗಿರುತ್ತದೆ.
  • ಟೈಯರ್-3 ಪರೀಕ್ಷೆ ಸ್ಕಿಲ್‌ ಟೆಸ್ಟ್‌ ಮತ್ತು ಟೈಪಿಂಗ್ ಟೆಸ್ಟ್‌ ನಡೆಸಲಾಗುತ್ತದೆ.

ಅರ್ಜಿ ಸಲ್ಲಿಕೆ ಹೇಗೆ?

  • ವೆಬ್‌ಸೈಟ್‌ https://ssc.nic.in/ ಗೆ ಭೇಟಿ ನೀಡಿ.
  • ಓಪನ್ ಆದ ಪೇಜ್‌ನ ಬಲಭಾಗದಲ್ಲಿ ‘New User’ ಎಂದು ಕ್ಲಿಕ್‌ ಮಾಡಿ.
  • ನಂತರ ಓಪನ್‌ ಆಗುವ ಪೇಜ್‌ನಲ್ಲಿ ರಿಜಿಸ್ಟ್ರೇಷನ್‌ ಪಡೆದು, ನಂತರ ಅರ್ಜಿ ಪೂರ್ಣಗೊಳಿಸಿ.
  • ಈಗಾಗಲೇ ರಿಜಿಸ್ಟ್ರೇಷನ್‌ ಪಡೆದವರು ಹಳೆಯ ಯೂಸರ್‌ ನೇಮ್‌, ಪಾಸ್‌ವರ್ಡ್‌ ಮೂಲಕವೇ ಲಾಗಿನ್‌ ಆಗಿ ಅರ್ಜಿ ಹಾಕಿ.

KPTCL ನಿಂದ ಉದ್ಯೋಗ ಅಧಿಸೂಚನೆ: 1492 ಹುದ್ದೆಗೆ ಅರ್ಜಿ ಆಹ್ವಾನ