Home » ಪೊಲೀಸ್‌ ಇಲಾಖೆಯಿಂದ PSI ಹುದ್ದೆಗೆ ಅರ್ಜಿ ಆಹ್ವಾನ: ಪದವಿ ವಿದ್ಯಾರ್ಹತೆ

ಪೊಲೀಸ್‌ ಇಲಾಖೆಯಿಂದ PSI ಹುದ್ದೆಗೆ ಅರ್ಜಿ ಆಹ್ವಾನ: ಪದವಿ ವಿದ್ಯಾರ್ಹತೆ

by manager manager

ಪೊಲೀಸ್ ಇಲಾಖೆಯು ವಿಶೇಷ ಮೀಸಲು ಸಬ್‌-ಇನ್ಸ್‌ಪೆಕ್ಟರ್ (KSRP- IRB) (ಪುರುಷ, ಮಹಿಳಾ ಮತ್ತು ತೃತೀಯ ಲಿಂಗ) ಹಾಗೂ ಸೇವಾನಿರತರನ್ನೊಳಗೊಂಡ (ಮಿಕ್ಕುಳಿದ ಹಾಗೂ ಕಲ್ಯಾಣ -ಕರ್ನಾಟಕ) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಹೆಚ್ಚಿನ ವಿವರಗಳ ಕೆಳಗಿನಂತಿದೆ.

ಹುದ್ದೆ ಹೆಸರು: ವಿಶೇಷ ಮೀಸಲು ಸಬ್‌-ಇನ್ಸ್‌ಪೆಕ್ಟರ್
ಹುದ್ದೆಗಳ ಸಂಖ್ಯೆ: 70

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 20-12-2021
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 18-01-2022
ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ: 20-01-2022
ನೇಮಕಾತಿ ವಿಧಾನ: ಸಹಿಷ್ಣುತೆ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ಲಿಖಿತ ಪರೀಕ್ಷೆ.
ವಿದ್ಯಾರ್ಹತೆ : ಯಾವುದೇ ಪದವಿ
ಕೆಎಸ್‌ಆರ್‌ಪಿ ಪಿಎಸ್‌ಐ ನೇಮಕಾತಿ ವೆಬ್‌ಸೈಟ್‌ : http://siksrp21.ksponline.co.in/

ಅರ್ಜಿ ಶುಲ್ಕ ವರ್ಗಾವಾರು ಮಾಹಿತಿ
ಜೆನೆರಲ್ ಅಭ್ಯರ್ಥಿಗಳಿಗೆ ರೂ.500
ಪ್ರವರ್ಗ 2ಎ, 2ಬಿ, 3ಎ, 3ಬಿ ಗೆ ಸೇರಿದ ಅಭ್ಯರ್ಥಿಗಳಿಗೆ ರೂ.500.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ ರೂ.250.
ಆನ್‌ಲೈನ್ ಅರ್ಜಿ ಸಲ್ಲಿಕೆ ನಂತರ ಜೆನೆರೇಟ್‌ ಆಗುವ ಅರ್ಜಿ ಶುಲ್ಕ ಚಲನ್‌ ನೊಂದಿಗೆ ಅಧಿಕೃತ ಬ್ಯಾಂಕ್ ಶಾಖೆಗಳ ಅಥವಾ ಅಂಚೆ ಕಛೇರಿಗಳಲ್ಲಿ ಪಾವತಿಸಬೇಕು.

ವಯೋಮಿತಿ
ಅಭ್ಯರ್ಥಿಗೆ ಕನಿಷ್ಠ 21 ವರ್ಷ ಆಗಿರಬೇಕು.
ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ 26 ವರ್ಷ ವಯೋಮಿತಿ ಮೀರಿರಬಾರದು.
ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ 28 ವರ್ಷ ಗರಿಷ್ಠ ವಯೋಮಿತಿ.
ಸೇವಾನಿರತ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷ ಗರಿಷ್ಠ ವಯೋಮಿತಿ.
ಸೇವಾನಿರತ ಇತರೆ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು 40 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.

ಅಪ್ಲಿಕೇಶನ್‌ ಸಲ್ಲಿಸುವ ವಿಧಾನ
ಪೊಲೀಸ್ ಇಲಾಖೆಯ ಅಧಿಕೃತ ವೆಬ್‌ಸೈಟ್ http://siksrp21.ksponline.co.in/ ಗೆ ಭೇಟಿ ನೀಡಿ. ‘My Application’ ಎಂಬಲ್ಲಿ ಕ್ಲಿಕ್ ಮಾಡಿ. ಓಪನ್‌ ಆದ ಪೇಜ್‌ನಲ್ಲಿ ಅಗತ್ಯ ಮಾಹಿತಿಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು.

ಕರ್ನಾಟಕ ಸಿವಿಲ್ ಸರ್ವಿಸ್‌ಗಳ ಪ್ರೋಬೆಷನರಿ ಅವಧಿ ನಿಯಮಗಳಿವು..