Home » ಮಂಡಿ ನೋವು, ಕೀಲು ನೋವಿಗೆ ಮನೆಯಲ್ಲೇ ಮಾಡಿ ಈ ಸರಳ ಪರಿಹಾರಗಳು

ಮಂಡಿ ನೋವು, ಕೀಲು ನೋವಿಗೆ ಮನೆಯಲ್ಲೇ ಮಾಡಿ ಈ ಸರಳ ಪರಿಹಾರಗಳು

by manager manager

ಸಂಧಿವಾತ, ಕೀಲು ನೋವು ಈಗ ಎಲ್ಲಾ ವಯೋಮಾನದವರಿಗೂ ಕಾಮನ್ ಆಗುತ್ತಿರುವ ಸಮಸ್ಯೆ. ಆದ್ರೆ ಅದಕ್ಕೆ ಪರಿಹಾರ ಇಲ್ಲವೇ ಇಲ್ಲ ಎಂದೇನಿಲ್ಲ.. ನೋವು ಅನುಭವಿಸಿ ಶ್ರಮ ಪಡುವುದಕ್ಕೆ ಬದಲಾಗಿ ನೋವು ನಿವಾರಿಸಿಕೊಳ್ಳಲು ಸ್ವಲ್ಪ ಶ್ರಮ ವಹಿಸಿದರಾಯಿತು.

ನಿಮಗೆ ಮಂಡಿ ನೋವು ಇದೆಯೇ? ಮೊಣಕೈ ನೋವಿದೆಯೇ? ಮಂಡಿಯ ಚಿಪ್ಪು ಸವೆದು ನೋವು ದಿನೇ ದಿನೇ ಹೆಚ್ಚಾಗುತ್ತಿದೆಯೇ? ಇದಕ್ಕೆ ಮನೆ ಮದ್ದುಗಳು ಇವೆ. ಆದೆ ಸ್ವಲ್ಪ ದಿನಗಳ ಕಾಲ ಸ್ವಲ್ಪ ಶ್ರಮ ವಹಿಸಿ ನಾವು ತಿಳಿಸುವ ಪರಿಹಾರಗಳನ್ನು ಫಾಲೋ ಮಾಡಿ.

ಆಯುರ್ವೇದಿಕ್ ಶಾಪ್‌ ಗೆ ಹೋಗಿ ಅಲ್ಲಿ ಮಹಾವೀರ ಬೀಜವನ್ನು ಖರೀದಿಸಿ ಸಂಗ್ರಹಿಸಿ. ಈ ಬೀಜವು ಎಲ್ಲಾ ದೊಡ್ಡ ಆಯುರ್ವೇದಿಕ್ ಶಾಪ್‌ಗಳಲ್ಲೂ ಲಭ್ಯ. ಅಲ್ಲದೇ ಆನ್‌ಲೈನ್‌ನಲ್ಲಿ ಸಹ ಖರೀದಿಗೆ ಲಭ್ಯ.

ಮಹಾವೀರ ಬೀಜದ ವೈಜ್ಞಾನಿಕ ಹೆಸರು ಹೈಡ್ರೋ ಫೀಲೀಯಾ ಸೀಡ್ಸ್‌, ಹಿಂದಿಯಲ್ಲಿ ತಾಲ್ ಮಕಾನಾ ಸೀಡ್ಸ್, ಸಂಸ್ಕೃತಿಯಲ್ಲಿ ಕೋಕಿಲಾಕ್ಸ ಎಂದು ಕರೆಯುತ್ತಾರೆ.

ಮಹಾವೀರ ಬೀಜವನ್ನು 200ml ನೀರಿಗೆ ಒಂದು ಟೀ ಚಮಚದಷ್ಟು ಹಾಕಿ ರಾತ್ರಿ ಇಡೀ ನೆನೆಸಬೇಕು. ನಂತರ ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಬೇಕು. ಈ ರೀತಿ ಮೂರು ತಿಂಗಳುಗಳ ಕಾಲ ನಿರಂತರವಾಗಿ ಸೇವಿಸಬೇಕು.

90 ದಿನಗಳ ಕಾಲ ಮಹಾವೀರ ಬೀಜವನ್ನು ನೆನೆಸಿದ ನೀರನ್ನು ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುತ್ತಾ ಬಂದಲ್ಲಿ ಮಂಡಿ ನೋವು ನಿವಾರಣೆ ಆಗುತ್ತದೆ. ಮಂಡಿಯ ಚಿಪ್ಪು ಸವೆದಿದ್ದರೂ ಅದು ಸಹ ಸರಿಹೋಗುತ್ತೆ. ಇತರೆ ಕೀಲು ನೋವುಗಳು ಸಹ ನಿವಾರಣೆ ಆಗುತ್ತವೆ.

ಈ ಮೇಲಿನ ಮೆಡಿಸನ್‌ ಜೊತೆಗೆ ಮಂಡಿನೋವಿನಿಂದ ದೂರವಾಗಲು ಮನೆಯಲ್ಲಿಯೇ ಮಾಡಬಹುದಾದ ಇತರೆ ಪರಿಹಾರಗಳು ಈ ಕೆಳಗಿನಂತಿವೆ.

ತೂಕ ಕಡಿಮೆಮಾಡಿಕೊಳ್ಳಿ

ದಿನ ನಿತ್ಯ ವ್ಯಾಯಾಮ ಮಾಡಿ, ದೇಹವನ್ನು ದಂಡಿಸುತ್ತಾ ಬರುವುದರಿಂದ ನಿಮ್ಮ ಆರೋಗ್ಯ ಸಮತೋಲನವಾಗಿರುತ್ತದೆ. ದೇಹದ ತೂಕ ತೀರ ಹೆಚ್ಚಿದ ನಂತರ ಸಂಧಿವಾತ, ಕೀಲುನೋವು ಸಮಸ್ಯೆಗೆ ಗುರಿಯಾಗುವುದು ಖಂಡಿತ. ಆದ್ದರಿಂದ ಹೆಚ್ಚಾದ ದೇಹದ ತೂಕವು ಈ ಸಮಸ್ಯೆಗಳಿಗೆ ಗುರಿಯಾಗುವುದನ್ನು ತಪ್ಪಿಸಲು ತೂಕ ಕಡಿಮೆ ಮಾಡಿಕೊಳ್ಳಲು ನಿರಂತರ ವ್ಯಾಯಾಮ ಮಾಡಿ.

ಫಿಸಿಕಲ್ ಥೆರಫಿ ಮಾಡಿಸಿ

ಎಲ್ಲಾ ವಯೋಮಾನದವರು ವ್ಯಾಯಾಮ ಮಾಡಬಹುದು. ಅಥವಾ ಮಾಡಲು ಸಾಧ್ಯವಾಗದೇ ಇರಬಹುದು. ಕಾರಣ ಕೀಲುನೋವು ಮತ್ತು ಸಂಧಿವಾತ ಅನುಭವಿಸುವವರು ಕೆಲವರು ವೀಕ್‌ ಸಹ ಇರಬಹುದು. ಇನ್ನೂ ಕೆಲವರು ವ್ಯಾಯಾಮ ಮಾಡಲು ಹೆಚ್ಚು ಸಾಧ್ಯವಾಗದಂತಹ ಸ್ಥಿತಿಯಲ್ಲಿರಬಹುದು. ಅಂತಹವರಿಗಾಗಿಯೇ ಫಿಸಿಕಲ್ ಥೆರಪಿಸ್ಟ್‌ಗಳು ಸರಳವಾಗಿ ಚಿಕಿತ್ಸೆ ನೀಡಿ ಈ ತೊಂದರೆಗಳನ್ನು ನಿವಾರಣೆ ಮಾಡುತ್ತಾರೆ.

ಸಾಸಿವೆ ಎಣ್ಣೆ ಮಸಾಜ್

ಸಂಧಿವಾತ ಮತ್ತು ಕೀಲು ನೋವು ಹೆಚ್ಚಾದಾಗ ಅದರಿಂದ ಪಾರಾಗಲು ಸಾಸಿವೆ ಎಣ್ಣೆಯನ್ನು ನೋವು ಇರುವ ಜಾಗಕ್ಕೆ ಹಚ್ಚಿ ಮಸಾಜ್ ಮಾಡಿರಿ. ಇದರಿಂದ ರಕ್ತ ಸಂಚಲನ ಸರಿಯಾಗಿ, ಊತವು ಇಳಿಯುತ್ತದೆ. ಸಾಸಿವೆ ಎಣ್ಣೆ ಮಸಾಜ್‌ ಅನ್ನು ನಿದ್ರೆಗೆ ಹೋಗುವ ಮುನ್ನ ಮಾಡಿ.

ಕೋಲ್ಡ್ ಅಥವಾ ಬಿಸಿ ಶಾಕ ನೀಡಿ

ಮಂಡಿ ನೋವು, ಕೀಲುನೋವು ಸ್ಥಳಕ್ಕೆ ಕೋಲ್ಡ್ ಪ್ಯಾಕ್‌ ಅಥವಾ ಶಾಕ ನೀಡುವುದರಿಂದ ನೋವು ಕಡಿಮೆಮಾಡಿಕೊಳ್ಳಬಹುದು.

ಮೀನು ಸೇವನೆ

ಒಮೆಗಾ 3 ಕೊಬ್ಬಿನಾಮ್ಲಗಳು ಹೆಚ್ಚಾಗಿ ಮೀನುಗಳಲ್ಲಿ ಇದೆ. ಇದು ದೇಹದಲ್ಲಿಯ ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ಆದ್ದರಿಂದ ಮೀನು ಸೇವನೆಯಿಂದ ಸಂಧಿವಾತ ನೋವು ಕಡಿಮೆ ಮಾಡಿಕೊಂಡು, ಊತವನ್ನು ಸಹ ನಿವಾರಣೆ ಮಾಡುವಲ್ಲಿ ಮೀನು ಸಹಾಯ ಮಾಡುತ್ತದೆ. ಆದ್ದರಿಂದ ನಿಮ್ಮ ಆಹಾರಕ್ಕೆ ಆಗಾಗ ಮೀನು ಸೇವನೆ ಒಮೆಗಾ 3 ಕೊಬ್ಬಿನಾಮ್ಲಕ್ಕಾಗಿ ಆದರೂ ಇರಲಿ.

ನಿಮ್ಮ ಸಮಸ್ಯೆ ಬಗ್ಗೆ ಮೊದಲು ತಿಳಿಯಿರಿ

ಯಾರೇ ಆದರೂ ತಮ್ಮ ಸಮಸ್ಯೆ ಬಗ್ಗೆ ಮೊದಲು ನಿಖರವಾಗಿ ಮತ್ತು ಸಂಪೂರ್ಣವಾಗಿ ತಿಳಿದುಕೊಂಡರೆ, ನಂತರ ಅದಕ್ಕೆ ಪರಿಹಾರ ಕಂಡುಕೊಳ್ಳಬಹುದು. ಹಾಗೂ ತಮ್ಮ ಲೈಫ್‌ಸ್ಟೈಲ್ ಅನ್ನು ತಾವೇ ನಿಯಂತ್ರಣಕ್ಕೆ ತೆಗೆದುಕೊಂಡು ಸ್ವಾಭಾವಿಕವಾಗಿ ನಿವಾರಣೆ ಮಾಡಿಕೊಳ್ಳಲು ಮುಂದಾಗಬಹುದು.

ಅಮೇಜಾನ್‌ನಲ್ಲಿ ಮಹಾವೀರ ಬೀಜ ಖರೀದಿಸಲು – ಕ್ಲಿಕ್ ಮಾಡಿ

You may also like