Home » Shingles meaning in kannada – ಕನ್ನಡ ಅರ್ಥ

Shingles meaning in kannada – ಕನ್ನಡ ಅರ್ಥ

by manager manager

Shingles Symptoms in Kannada

ಶಿಂಗಲ್ಸ್‌ ಅಥವಾ Shingles ಎಂದರೆ ಹಾವಿನ ಶಾಪ ಅಂತಲೇ, ಸರ್ಪಸುತ್ತಿನ ರೋಗ ಅಂತಲೇ ಕರೆಯಲಾಗುತ್ತದೆ.

ಸರ್ಪಸುತ್ತು ಎಂದರೇನು?

ಹರ್ಪೆಸ್ ಜೋಸ್ಟರ್ (Herpes Zoster) ಎಂದು ವೈದ್ಯಕೀಯ ಹೆಸರಿನಿಂದ ಸರ್ಪಸುತ್ತು ಚರ್ಮವ್ಯಾಧಿ ಸಿಡುಬು ಅಥವಾ ಚಿಕೆನ್ಪಾಕ್ಸ್‌ ಎಂಬ ಚರ್ಮ ರೋಗಕ್ಕೆ ಕಾರಣವಾಗುವ ವೈರಸ್‌ನ ಪುನಃಸಕ್ರಿಯಗೊಳಿಸುವ ಮೂಲಕ ಎದುರಾಗುತ್ತದೆ. ವೆರಿಸ್ಸಿಲ್ಲಾ ಜೋಸ್ಟರ್ ಎಂಬ ಹೆಸರಿನ ಈ ವೈರಸ್ಸು ನರಗಳ ಅಂಗಾಂಶದ ಮೇಲೆ ದಾಳಿಯಿಟ್ಟು ಸಿಡುಬನ್ನು ಪುನಃ ಸಕ್ರಿಯಗೊಳಿಸುತ್ತದೆ. ಪ್ರಾರಂಭದಲ್ಲಿ ಇದು ಚರ್ಮದ ಮೇಲೆ ಕೆಂಪನೆಯ ಗೆರೆ ಎಳೆದಂತೆ ಪ್ರಾರಂಭವಾಗಿ ಕ್ರಮೇಣ ಇದರಲ್ಲಿ ಚಿಕ್ಕ ಚಿಕ್ಕ ಗುಳ್ಳೆಗಳು ಮೂಡಲು ಆರಂಭವಾಗುತ್ತದೆ. ಸಾಮಾನ್ಯವಾಗಿ ಈ ಗೆರೆಗಳು ವರ್ಕಾಕಾರವಾಗಿರುವುದರಿಂದಲೇ ಇದಕ್ಕೆ ಸರ್ಪಸುತ್ತು ಎಂದು ಕರೆಯಲಾಗುತ್ತದೆ.

Shingles Symptoms and signs in Kannada

ಸರ್ಪಸುತ್ತಿನ ಲಕ್ಷಣಗಳು
ಮೇಲೆ ತಿಳಿಸಲಾದ ಗೆರೆಗಳು ಬರುವ ಮುನ್ನ ಚರ್ಮದ ಅಡಿಯಲ್ಲಿರುವ ನರದಲ್ಲಿ ವೈರಸ್ಸು ಹರಡಿದ ಕ್ಷಣದಿಂದಲೇ ಈ ಭಾಗದ ಚರ್ಮದಲ್ಲಿ ನವಿರಾಗಿ ಕಚಗುಳಿ ಇಟ್ಟಂತೆ ಚಿಕ್ಕದಾಗಿ ನೋವಿನ ಅನುಭವವಾಗುತ್ತದೆ. ಜೊತೆಗೆ ಈ ವೈರಸ್ಸನ್ನು ಎದುರಿಸಲು ದೇಹ ತಾಪಮಾನವನ್ನು ಏರಿಸುವ ಕಾರಣ ಜ್ವರವೂ, ಕೊಂಚ ಸುಸ್ತು ಸಹಾ ಆವರಿಸತೊಡಗುತ್ತವೆ. ಇವೇ ಸರ್ಪಸುತ್ತಿನ ಪ್ರಾರಂಭಿಕ ಲಕ್ಷಣ. ಈ ಭಾಗದಲ್ಲಿ ನಿಧಾನವಾಗಿ ಉರಿಯಾಗತೊಡಗುತ್ತದೆ. ಕೊಂಚ ನೋವು ಬರುತ್ತದೆ. ದಿನೇ ದಿನೇ ಗೆರೆಗಳು ವರ್ಕಾಕಾರದ ಗೆರೆಯಂತೆ ಚರ್ಮ ಕೆಂಪಾಗತೊಡಗುತ್ತದೆ.