Home » ಕರ್ನಾಟಕದಲ್ಲಿ ಟ್ರೆಂಡಿಂಗ್‌ನಲ್ಲಿರುವ ಪ್ರವಾಸಿ ತಾಣ ‘ಬೆಂಗಳೂರಿನ ಸಿ ಟನಲ್’ನ ವಿಶೇಷತೆಗಳೇನು? ಕಂಪ್ಲೀಟ್ ಡೀಟೇಲ್ಸ್‌ ಇಲ್ಲಿದೆ..

ಕರ್ನಾಟಕದಲ್ಲಿ ಟ್ರೆಂಡಿಂಗ್‌ನಲ್ಲಿರುವ ಪ್ರವಾಸಿ ತಾಣ ‘ಬೆಂಗಳೂರಿನ ಸಿ ಟನಲ್’ನ ವಿಶೇಷತೆಗಳೇನು? ಕಂಪ್ಲೀಟ್ ಡೀಟೇಲ್ಸ್‌ ಇಲ್ಲಿದೆ..

by manager manager

ವಾರಾಂತ್ಯದಲ್ಲಿ ಕಬ್ಬನ್ ಪಾರ್ಕ್, ಲಾಲ್ ಬಾಗ್, ಸ್ನೋ ಸಿಟಿ ಸುತ್ತಾಡಿ ಬೋರ್ ಆಯ್ತಾ. ಹೊಸದನ್ನೇನಾದರೂ ನೋಡೋ ಮನಸ್ಸಿದ್ಯಾ. ಹಾಗಿದ್ದರೆ ಇಲ್ಲಿ ಬನ್ನಿ, ಇದು ಮತ್ಸ್ಯ ಲೋಕ! ಹೌದು. ಬೆಂಗಳೂರಿನ ‘ಸಿ ಟನಲ್ ಅಕ್ವೇರಿಯಂ’ ನಿಮಗೆ ಸಮುದ್ರ ಲೋಕವನ್ನೇ ತೆರೆದು ಬಿಡುತ್ತದೆ. ಗೋಳಾಕಾರವಾಗಿ 360 ಡಿಗ್ರಿ ಪರಿದಿಯಲ್ಲಿ ನಿರ್ಮಿಸಲಾಗಿದೆ. ಸಿ ಟನಲ್ ಅಕ್ವೇರಿಯಂ ಬೆಂಗಳೂರಿನ ಕೆಂಗೇರಿ ಮತ್ತು ಜೆಪಿ ನಗರ ಗಳಲ್ಲಿ ಇದ್ದು, ಈ ಎರಡೂ ಕಡೆ ನ್ಯಾಷನಲ್ ಕನ್ಸ್ಯೂಮರ್‌ ಫೇರ್ ಗ್ರೂಪ್‌ ಉತ್ಸವವನ್ನು ಆಯೋಜಿಸಲಾಗುತ್ತಿದೆ.

ಸಿ ಟನಲ್ ವೈಶಿಷ್ಟ್ಯಗಳೇನು ಎಂದು ಇಲ್ಲಿ ಸಿಂಪಲ್‌ ಆಗಿ ಓದಿಕೊಳ್ಳಿ.
400 ಕ್ಕೂ ಅಧಿಕ ಜಾತಿಯ ಮೀನುಗಳಿವೆ.
ಅತಿ ದೊಡ್ಡ ಸುರಂಗ ಮಾರ್ಗದ ಮಾದರಿ.
100 ಕ್ಕೂ ಹೆಚ್ಚು ಜಾತಿಯ ಸಮುದ್ರ ಜೀವಿಗಳಿವೆ.
ಎಂಜೆಲ್‌ ಫಿಶ್, ಕ್ಲೌನ್‌ ಫಿಶ್, ಸಮುದ್ರದ ಕುದುರೆಗಳು, ವ್ರಾಸ್‌ಗಳು ಮತ್ತು ಬಾಕ್ಸ್‌ಫಿಶ್‌ಗಳು ಸೇರಿದಂತೆ ಇನ್ನು ಅನೇಕ ಅಪರೂಪದ ಸಮುದ್ರಜೀವಿಗಳನ್ನು ನೋಡಬಹುದು.
ಸಮುದ್ರ ಜೀವಿಗಳ ಜೊತೆಗೆ ಸಿಹಿ ನೀರಿನ ಜೀವಿಗಳನ್ನೂ ಕಾಣಬಹುದು.
ಈ ಅಕ್ವೇರಿಯಂ ನಿರ್ಮಾಣಕ್ಕೆ 8 ತಿಂಗಳು ತಗುಲಿರುವುದಾಗಿ ಹೇಳಲಾಗಿದೆ.
ಈ ಸಿ ಟನಲ್ ಅಕ್ವೇರಿಯಂ 9 ಮಧ್ಯಮ ಗಾತ್ರದ ಅಕ್ವೇರಿಯಂಗಳಿವೆ.
24 ಕೋಣೆಗಳನ್ನು ಒಳಗೆ ನಿರ್ಮಿಸಲಾಗಿದೆ.
ಈ ಕಾರಣದಿಂದಲೇ ಇದು ಭಾರತದಲ್ಲಿನ ಅತಿದೊಡ್ಡ ವಿಲಕ್ಷಣ ಸುರಂಗ ಎಂದು ಸಂಘಟಕರು ಹೇಳುತ್ತಾರೆ.
ಸಿಹಿನೀರು ಮತ್ತು ಸಮುದ್ರ ಜೀವಿಗಳಿಗೆ, ಪ್ರತ್ಯೇಕ ಗುಹೆಗಳಾಕಾರದ ಕೋಣೆಗಳನ್ನು ವಿನ್ಯಾಸ ಮಾಡಲಾಗಿದೆ.
ಮುಂಬರುವ ಉತ್ಸವದಲ್ಲಿ ಅಳಿವಿನಂಚಿನಲ್ಲಿರುವ ಅನೇಕ ಜೀವಿಗಳು ಮತ್ತು ಡೈನೋಸಾರ್‌ ಪ್ರಾಣಿಗಳ ಪ್ರತಿಕೃತಿಗಳನ್ನು ಪ್ರದರ್ಶನ ಕ್ಕೆ ಇಡಲಾಗಿದೆ.

ಬೆಂಗಳೂರು ಸೀ ಟನಲ್ ಪ್ರವೇಶ ಶುಲ್ಕ ರೂ.100.
ಬೆಂಗಳೂರು ಸೀ ಟನಲ್ ಪ್ರವೇಶ ಸಮಯ : ಸಂಜೆ 04 ಗಂಟೆಯಿಂದ ರಾತ್ರಿ 09-00 ಗಂಟೆವರೆಗೆ.
ಬೆಂಗಳೂರು ಸೀ ಟನಲ್ ಕೊನೆಗೊಳ್ಳುವ ದಿನಾಂಕ : ಫೆಬ್ರುವರಿ 02, 2023.