Home » ಸತ್ವ ಗ್ಲೋಬಲ್ ಸಿಟಿ ಫೆಸ್ಟ್ -2023 ನೊಂದಿಗೆ ಕ್ರೀಡೆ ಮತ್ತು ಸುಸ್ಥಿರತೆಯನ್ನು ಬೆಸದ ಸತ್ವ ಗ್ರೂಪ್

ಸತ್ವ ಗ್ಲೋಬಲ್ ಸಿಟಿ ಫೆಸ್ಟ್ -2023 ನೊಂದಿಗೆ ಕ್ರೀಡೆ ಮತ್ತು ಸುಸ್ಥಿರತೆಯನ್ನು ಬೆಸದ ಸತ್ವ ಗ್ರೂಪ್

by manager manager

· ಸತ್ವ ಗ್ಲೋಬಲ್ ಸಿಟಿ ಫೆಸ್ಟ್ನ ಮೊದಲ ಆವೃತ್ತಿ ಅತ್ಯಂತ ಉತ್ಸಾಹ ಮತ್ತು ಉಲ್ಲಾಸದಿಂದ ಕೂಡಿತ್ತು.

· ಉತ್ತಮ ಭವಿಷ್ಯಕ್ಕಾಗಿ ತ್ಯಾಜ್ಯವನ್ನು ಕಡಿಮೆ ಮಾಡಲು IISc ಮತ್ತು ಆರ್.ವಿ ಎಂಜಿನಿಯರಿಂಗ್ ಕಾಲೇಜಿನೊಂದಿಗೆ ಸತ್ವ ಗ್ರೂಪ್ ಸಹಭಾಗಿತ್ವ.

· ಸತ್ವ ಗ್ರೂಪ್ ನ ದೀರ್ಘಕಾಲೀನ ಸಮುದಾಯ ದೃಷ್ಟಿಕೋನದ ಭಾಗವಾಗಿ ಹಲವು ಸುಸ್ಥಿರ ಕಾರ್ಯ ಕ್ರಮಗಳನ್ನು ಶೀಘ್ರದಲ್ಲಿ ಹಮ್ಮಿಕೊಳ್ಳಲಾಗುವುದು.

ಬೆಂಗಳೂರು, ಫೆಬ್ರವರಿ 19, 2023: ಭಾರತದ ಪ್ರಮುಖ ಪ್ರಾಪರ್ಟಿ ಡೆವಲಪ್ ಮೆಂಟ್ , ನಿರ್ವಹಣೆ, ಮತ್ತು ಸಲಹಾ ಸಂಸ್ಥೆಗಳಲ್ಲಿ ಒಂದಾದ ಸತ್ವ ಗ್ರೂಪ್, ಸತ್ವ ಗ್ಲೋಬಲ್ ಸಿಟಿ ಫೆಸ್ಟ್ 2023 ಎಂಬ ಎರಡು ದಿನಗಳ ಮೆಗಾ ಕಾರ್ಯಕ್ರಮವನ್ನು ಆಯೋಜಿಸಿತ್ತು. ಸಮುದಾಯ ಅಭಿವೃದ್ಧಿ ಮತ್ತು ಜಾಗೃತಿಯನ್ನು ಸಾಧಿಸಲು ಕ್ರೀಡೆ ಮತ್ತು ಸುಸ್ಥಿರ ಪ್ರಯತ್ನಗಳ ಮೂಲಕ ಜನರನ್ನು ಒಟ್ಟುಗೂಡಿಸಲು ಈ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ.

ಫೆಬ್ರವರಿ 18 ಮತ್ತು 19 ರಂದು ಟೆಕ್ ಪಾರ್ಕ್ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮದಲ್ಲಿ ಅದ್ಭುತ ಯಶಸ್ಸನ್ನು ಕಂಡರು. ಸತ್ವ ಸೇರಿದಂತೆ ಒಟ್ಟು 14 ತಂಡಗಳು ಎರಡೂ ದಿನ ಅತ್ಯುತ್ತಮ ಪ್ರದರ್ಶನ ನೀಡಿದವು. ವಿಶೇಷ ರೀತಿಯಲ್ಲಿ ಮೊದಲ ಆವೃತ್ತಿಯ ಕಾರ್ಯಕ್ರಮ ಮುಕ್ತಾಯಗೊಂಡಿತು.

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (IISc ) ಮತ್ತು ಆರ್.ವಿ ಎಂಜಿನಿಯರಿಂಗ್ ಕಾಲೇಜಿನ ತಂಡವು ಕಾರ್ಯಕ್ರಮ ಪರಿಸರ ಸ್ನೇಹಿ ಮತ್ತು ಸುಸ್ಥಿರವಾಗಿರಲು ಉತ್ತಮ ರೀತಿಯಲ್ಲಿ ಹೆಚ್ಚು ಪ್ರರಿಶ್ರಮದಿಂದ ಕೆಲಸ ಮಾಡಿದೆ. ಪರಿಸರ ವ್ಯವಸ್ಥೆಗೆ ಕೊಡುಗೆ ನೀಡುವ ಅಭ್ಯಾಸಗಳನ್ನು ಬೆಳೆಸುವ ಉದ್ದೇಶದಿಂದ, ಇದಕ್ಕೆ ಎಲ್ಲಾ ಭಾಗಗಳಿಂದ ಭಾಗವಹಿಸುವಿಕೆ ಮತ್ತು ಪ್ರೋತ್ಸಾಹದ ಅಗತ್ಯವಿದೆ. ಇಂತಹ ಸಂಘಗಳು ನಿರಂತರ ಪ್ರಯತ್ನಗಳಿಗೆ ದಾರಿ ಮಾಡಿಕೊಡುತ್ತವೆ. ಸತ್ವ ಗ್ಲೋಬಲ್ ಸಿಟಿ SEZ ಗಳನ್ನು ಒಂದಾಗಿ ಹೊರಹೊಮ್ಮಿದೆ.

ಎರಡು ದಿನಗಳ ಕಾಲ ನಡೆದ ಈ ಉತ್ಸವದಲ್ಲಿ ಚಾಂಪಿಯನ್ ಕ್ರಿಕೆಟರ್, ಬೆಂಗಳೂರಿನ ಡೇವಿಡ್ ಜಾನ್ಸನ್ ಭಾಗವಹಿಸಿದ್ದರು. ಅವರ ಉಪಸ್ಥಿತಿಯು ಭಾಗವಹಿಸಿದ ಎಲ್ಲರಲ್ಲು ಉತ್ಸಾಹವನ್ನು ಹೆಚ್ಚಿಸಿದೆ. ಪ್ರೇಕ್ಷಕರಲ್ಲಿ ಹೊಸ ಉಲ್ಲಾಸದ ಅಲೆಯನ್ನು ತಂದಿತು. ಕ್ರಿಕೆಟಿಗ ಮೈದಾನದಲ್ಲಿ ತನ್ನ ಪ್ರತಿಭೆಯ ಪ್ರದರ್ಶನ ನೀಡಿದ್ದು ಮಾತ್ರವಲ್ಲದೆ ಪ್ರೇಕ್ಷಕರೊಂದಿಗೆ ಸಂವಹನ ನಡೆಸಿ, ಕಲಾಪಗಳಿಗೆ ಮೆರುಗು ನೀಡಿದರು. ಸತ್ವ ಗ್ಲೋಬಲ್ ಸಿಟಿಯಲ್ಲಿ ವಿವಿಧ ನಿಗಮಗಳಿಂದ ನೂರಾರು ಮಂದಿ ಪಾಲ್ಗೊಳ್ಳುವಿಕೆಯಿಂದ ಉತ್ಸವದ ಮೊದಲ ಆವೃತ್ತಿಯು ಅದ್ಭುತ ಯಶಸ್ಸನ್ನು ಕಂಡಿತು. ಪಂದ್ಯಗಳು ಉತ್ತಮ ಕ್ರೀಡಾ ಮನೋಭಾವದಿಂದ ನಡೆದವು. ಪ್ರೇಕ್ಷಕರಿಗೆ ಅದ್ಭುತ ಕ್ರಿಕೆಟ್ ಕೌಶಲ್ಯಗಳನ್ನು ನೀಡಲಾಯಿತು.

ಅಂತಿಮ ಪಂದ್ಯವನ್ನು ಕ್ಯಾಪ್ ಜೆಮಿನಿ ಮತ್ತು ಡಿಮಾಗ್ ಎಐ ತಂಡಗಳ ನಡುವೆ ನಡೆಯಿತು. ಚಾಂಪಿಯನ್ ಆಗಿ ಕ್ಯಾಪ್ ಜೆಮಿನಿ ತಂಡ ಹೊರಹೊಮ್ಮಿತು.

ಉತ್ಸವದ ಯಶಸ್ಸಿನ ಬಗ್ಗೆ ಪ್ರತಿಕ್ರಿಯಿಸಿದ ಸತ್ವ ಗ್ರೂಪ್ ನ ಕಾರ್ಯತಂತ್ರ ಅಭಿವೃದ್ಧಿ ಉಪಾಧ್ಯಕ್ಷ ಶಿವಂ ಅಗರ್ ವಾಲ್ ಅವರು, “ಸತ್ವ ಗ್ಲೋಬಲ್ ಸಿಟಿ ಫೆಸ್ಟ್ ಇನ್ನೂ ಪ್ರಾರಂಭದ ಹಂತದಲ್ಲಿದೆ. ಬಲವಾದ ಸಂಬಂಧಗಳನ್ನು ನಿರ್ಮಿಸುವ ಮತ್ತು ಸಮುದಾಯ ಪ್ರಜ್ಞೆಯನ್ನು ಬೆಳೆಸುವ ದೊಡ್ಡ ಗುರಿಯೊಂದಿಗೆ ಜನರು ಉತ್ಸಾಹ, ಉಲ್ಲಾಸದಿಂದ ಒಗ್ಗೂಡಲು ಏನನ್ನಾದರೂ ಸರಿ ಮಾಡಲು ನಾವು ಬಯಸಿದ್ದೇವೆ. ಇಂದು, ನಮ್ಮ ಆಲೋಚನೆಗಳು ಎಷ್ಟು ಸುಂದರವಾಗಿ ಅರಳಿವೆ ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ನಮ್ಮ ದೃಷ್ಟಿಕೋನವು ಎಷ್ಟು ಜೀವಂತವಾಗಿದೆ ಎಂಬುದನ್ನು ನೋಡಲು ನಾವು ಕಾತುರರಾಗಿದ್ದೇವೆ.

ತಮ್ಮ ಉತ್ಸಾಹವನ್ನು ಹಂಚಿಕೊಂಡ ಸತ್ವ ಗ್ರೂಪ್ ನ ಉಪಾಧ್ಯಕ್ಷ ಶ್ರೀ ಸಂಜಯ್ ಅಗರ್ ವಾಲ್ , ಅವರು “ಸತ್ವ ಜಿಸಿಎಫ್23 ರ ಕೇಂದ್ರ ವಿಷಯವು ಭವಿಷ್ಯದ ಪೀಳಿಗೆಗೆ ಉತ್ತಮ ಜಗತ್ತನ್ನು ನಿರ್ಮಿಸುವ ನಮ್ಮ ಸಮರ್ಪಣೆಗೆ ಸಾಕ್ಷಿಯಾಗಿದೆ. ತ್ಯಾಜ್ಯವನ್ನು ಶೇ.9 ಕ್ಕಿಂತ ಕಡಿಮೆ ಮಾಡುವ ಮತ್ತು ಇಂಗಾಲದ ಪ್ರಮಾಣವನ್ನು ಸರಿದೂಗಿಸುವ ಗುರಿಯೊಂದಿಗೆ, ಬದಲಾವಣೆಯನ್ನು ಅನುಸರಿಸಲು ಮತ್ತು ಪ್ರೇರೇಪಿಸಲು ಇತರರಿಗೆ ಮಾದರಿಯಾಗಲು ನಾವು ಆಶಿಸುತ್ತೇವೆ. ಇದನ್ನು ಸಾಧ್ಯವಾಗಿಸಿದ ಎಲ್ಲಾ ಭಾಗವಹಿಸುವವರು ಮತ್ತು ಸ್ವಯಂಸೇವಕರಿಗೆ ನಮ್ಮ ಪ್ರಾಮಾಣಿಕ ಕೃತಜ್ಞತೆಯನ್ನು ಅರ್ಪಿಸಲು ನಾವು ಬಯಸುತ್ತೇವೆ. ನಮ್ಮ ಸಮುದಾಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವುದನ್ನು ನಾವು ಎದುರು ನೋಡುತ್ತೇವೆ ಎಂದರು.

ಸತ್ವ ಗ್ಲೋಬಲ್ ಸಿಟಿ ಫೆಸ್ಟ್ 2023 ರ ಕೇಂದ್ರ ವಿಷಯವೆಂದರೆ ‘ಸುಸ್ಥಿರತೆ ಮತ್ತು ಪರಿಸರ ಸಂರಕ್ಷಣೆ’, ಇದು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳೊಂದಿಗೆ ಹೊಂದಿಕೆಯಾಗಿದೆ. ಇದರ ಭಾಗವಾಗಿ, ಈವೆಂಟ್ ತ್ಯಾಜ್ಯವನ್ನು 9% ಕ್ಕಿಂತ ಕಡಿಮೆ ಮಾಡುವಲ್ಲಿ ಸತ್ವ ಗ್ರೂಪ್ ಯಶಸ್ವಿಯಾಗಿದೆ. ಭವಿಷ್ಯದಲ್ಲಿ ಎಲ್ಲಾ ಸತ್ವ ಗ್ಲೋಬಲ್ ಸಿಟಿ ಕಾರ್ಯಕ್ರಮದಲ್ಲಿ ಇಂತಹ ಹೆಚ್ಚಿನ ಪರಿಸರ ಸ್ನೇಹಿ ಕ್ರಮಗಳನ್ನು ಅಳವಡಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಉತ್ಪತ್ತಿಯಾಗುವ ಈವೆಂಟ್ ತ್ಯಾಜ್ಯವನ್ನು ಹೋಲಿಸಬಹುದಾದ ಮಟ್ಟಕ್ಕಿಂತ 9% ಕ್ಕಿಂತ ಕಡಿಮೆ ಇಡುವ ಗುರಿಯೊಂದಿಗೆ ನಮ್ಮ ತಂಡವು ‘ಮಿಷನ್ 9” ಅನ್ವಯ ಥೀಮ್ ಅನ್ನು ಪ್ರಸ್ತಾಪಿಸಿದೆ ಎಂದರು.

ಉತ್ಸವವು ಸುಸ್ಥಿರತೆ, ಸಾಮಾಜಿಕ ಪರಿಣಾಮದ ಪ್ರಯತ್ನಗಳು ಮತ್ತು ಕ್ರಿಕೆಟ್ ನ ಸಂಯೋಜನೆಯಾಗಿತ್ತು. ಇದು ಎಲ್ಲರಿಗೂ ಉತ್ತಮ ಜಗತ್ತನ್ನು ಸೃಷ್ಟಿಸುವಲ್ಲಿ ಸತ್ವ ಸಮೂಹದ ಬದ್ಧತೆಗೆ ಸಾಕ್ಷಿಯಾಗಿದೆ. ಉತ್ಸವ ಅತ್ಯುತ್ತಮವಾಗಿ ಯಶಸ್ಸನ್ನು ಕಂಡಿತು, ಮತ್ತು ಮುಂಬರುವ ವರ್ಷಗಳಲ್ಲಿ ಮತ್ತಷ್ಟು ದೊಡ್ಡದಾಗಿ ಮತ್ತು ಉತ್ತಮವಾದ ಯಶಸ್ಸನ್ನು ಸಾಧಿಸಲು ಇಂತಹ ಕಾರ್ಯಕ್ರಮಗಳನ್ನು ನಡೆಸಲು ಸತ್ವ ಉದ್ದೇಶಿಸಿದೆ.

ಸತ್ವ ಗ್ರೂಪ್ ಕುರಿತು.

3 ದಶಕಗಳ ಪರಿಣತಿಯೊಂದಿಗೆ ಸತ್ವ ಗ್ರೂಪ್ ಇಂದು ದೇಶದ ಅತ್ಯಂತ ವಿಶ್ವಾಸಾರ್ಹ ಬಿಲ್ಡರ್ ಗಳಲ್ಲಿ ಒಂದಾಗಿದೆ. ಭಾರತದ ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಇದು ಹೈದರಾಬಾದ್, ಕೋಲ್ಕತಾ, ಪುಣೆ, ಕೊಯಮತ್ತೂರು ಮತ್ತು ಗೋವಾದಲ್ಲಿ ಖ್ಯಾತ ಬಿಲ್ಡರ್ ಆಗಿ ಹೊರಹೊಮ್ಮಿದೆ. ಸತ್ವ ಗ್ರೂಪ್ ಶೀಘ್ರದಲ್ಲೇ ಮುಂಬೈನಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸಲಿದೆ. 56 ಮಿಲಿಯನ್ ಚದರ ಅಡಿ ಸ್ಥಳಗಳು ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿವೆ., 34 ಮಿಲಿಯನ್ ಚದರ ಅಡಿ ನಿರ್ಮಾಣ ಹಂತದಲ್ಲಿದೆ. 32 ಮಿಲಿಯನ್ ಚದರ ಅಡಿ ಯೋಜನಾ ಹಂತದಲ್ಲಿದೆ, ಗ್ರೂಪ್ ಇಂದು ಭಾರತದಲ್ಲಿ ಅತ್ಯಂತ ಪ್ರೀಮಿಯಂ ಬಿಲ್ಡರ್ ಗಳಲ್ಲಿ ಒಂದಾಗಿದೆ.

ಹೈದರಾಬಾದ್ ನಲ್ಲಿ ಗ್ರೂಪ್ ನ ಅತ್ಯಾಧುನಿಕ ಮಾರ್ಕ್ಯೂ ಯೋಜನೆಗಳಿವೆ. ಜ್ಞಾನ ನಗರ, ಜ್ಞಾನ ರಾಜಧಾನಿ, ಜ್ಞಾನ ಉದ್ಯಾನ ಮತ್ತು ಇಮೇಜ್ ಟವರ್ಸ್ (ಅನಿಮೇಷನ್ ಗಾಗಿ ತೆಲಂಗಾಣ ರಾಜ್ಯ ಸರ್ಕಾರದೊಂದಿಗೆ ಪಿಪಿಪಿ ಆಧಾರಿತ ಮಾದರಿ). ಗ್ರೂಪ್ ಬೆಂಗಳೂರಿನಲ್ಲಿ ವಿಶ್ವ ದರ್ಜೆಯ ವಸತಿ ಯೋಜನೆಗಳನ್ನು ನಿರ್ಮಿಸಿದೆ. ಇದು 100 ಕ್ಕೂ ಹೆಚ್ಚು ಸೌಲಭ್ಯಗಳನ್ನು ಒದಗಿಸುತ್ತದೆ. ಇದು ಎಕ್ಸೋಟಿಕ್, ಲಕ್ಸುರಿಯಾ, ಮ್ಯಾಗ್ನಿಫಿಸಿಯಾ ಮತ್ತು ಅನುಗ್ರಹ ಮತ್ತು ವಾಣಿಜ್ಯ ಸ್ಥಳಗಳಲ್ಲಿ ಜಿಆರ್ ಟೆಕ್ ಪರ್ಕ್ , ಅರೆನಾ, ಇನ್ಫಿನಿಟಿ ಮತ್ತು ಸಾಫ್ಟ್ ಝೋನ್ ಮುಂತಾದವು ಸೇರಿವೆ. ಸಹ-ಕೆಲಸ, ಸಹ-ಜೀವನ, ಶಿಕ್ಷಣ, ಹೋಟೆಲ್ ಗಳು , ಸೌಲಭ್ಯಗಳ ನಿರ್ವಹಣೆ ಮತ್ತು ಗೋದಾಮುಗಳಂತಹ ವಿವಿಧ ಕೋನಗಳಲ್ಲಿ ಮತ್ತಷ್ಟು ವಿಸ್ತರಿಸುವ ಮೂಲಕ ಗ್ರೂಪ್ ಇಂದು ಭಾರತದ ಬೆಳವಣಿಗೆಯ ಮಾರ್ಗವನ್ನು ರೂಪಿಸಲು ಮುಂಚೂಣಿಯಲ್ಲಿ ನಿಂತಿದೆ. ಗುಣಮಟ್ಟಕ್ಕಾಗಿ ದೇಶದ ಬಿಲ್ಡರ್ ಗಳಲ್ಲಿ “ವಿಶ್ವಾಸಾರ್ಹ ” ಟ್ಯಾಗ್ ಅನ್ನು ಪಡೆದುಕೊಂಡಿದೆ. ಇದು ಒಂದು ದಶಕಕ್ಕೂ ಹೆಚ್ಚು ಕಾಲ “ಎ ಸ್ಟೇಬಲ್” CRISIL ರೇಟಿಂಗ್ ಗೆ ಹೆಸರಾಗಿದೆ.