Home » ಮೌಲಾನಾ ಅಜಾದ್ ಮಾದರಿ ಶಾಲೆಗಳಲ್ಲಿನ ಗ್ರೂಪ್ ಬಿ ಮತ್ತು ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮೌಲಾನಾ ಅಜಾದ್ ಮಾದರಿ ಶಾಲೆಗಳಲ್ಲಿನ ಗ್ರೂಪ್ ಬಿ ಮತ್ತು ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನ

by manager manager

Recruitment for Head Masters Teachers in various Subjects in Moulana Azad Residential Schools 1

Recruitment for Head Masters, Teachers in various Subjects in Moulana Azad Residential Schools

ಕರ್ನಾಟಕ ಲೋಕ ಆಯೋಗವು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇರ ನೇಮಕಾತಿ ಹಾಗೂ ಆಯ್ಕೆ (ಸಾಮಾನ್ಯ) ನಿಯಮಗಳು 2006 ಹಾಗೂ 2013 ಮತ್ತು 2015 ರ ತಿದ್ದುಪಡಿ ನಿಯಮಗಳನ್ವಯ ವಿವಿಧ ಗ್ರೂಪ್ ‘ಬಿ’ ತಾಂತ್ರಿಕ ಮತ್ತು ಗ್ರೂಪ್ ‘ಸಿ’ ತಾಂತ್ರೀಕೇತರ ಉಳಿಕೆ ಮೂಲ ವೃಂದದ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ಈ ಹುದ್ದೆಗಳು ಅಲ್ಪ ಸಂಖ್ಯಾತರ ಇಲಾಖೆಯ ಅಲ್ಪ ಸಂಖ್ಯಾತರ ಮೌಲಾನಾ ಅಜಾದ್ ಮಾದರಿ ಶಾಲೆಗಳಲ್ಲಿನ ವಿವಿಧ ಹುದ್ದೆಗಳು. ಈ ನೇಮಕಾತಿ ಕುರಿತಂತೆ ಮಾಹಿತಿ ಈ ಕೆಳಗಿನಂತಿದೆ.

ಗ್ರೂಪ್ ‘ಬಿ’ ಹುದ್ದೆಗಳಾದ ಮುಖ್ಯೋಪಾಧ್ಯಾಯರ ಹುದ್ದೆಗಳ ಸಂಖ್ಯೆ : 80

ಗ್ರೂಪ್ ‘ಸಿ’ ಹುದ್ದೆಗಳಾದ ವಿವಿಧ ವಿಷಯಗಳಿಗೆ ಶಿಕ್ಷಕರ ಹುದ್ದೆಗಳು ಈ ಕೆಳಗಿನಂತಿವೆ

ಕನ್ನಡ ಭಾಷಾ ಶಿಕ್ಷಕರ ಹುದ್ದೆಗಳ ಸಂಖ್ಯೆ : 79

ಇಂಗ್ಲೀಷ್ ಭಾಷಾ ಶಿಕ್ಷಕರ ಹುದ್ದೆಗಳ ಸಂಖ್ಯೆ : 79

ಉರ್ದು ಭಾಷಾ ಶಿಕ್ಷಕರ ಹುದ್ದೆಗಳ ಸಂಖ್ಯೆ : 79

ವಿಜ್ಞಾನ ಶಿಕ್ಷಕರ ಹುದ್ದೆಗಳ ಸಂಖ್ಯೆ : 79

ಸಮಾಜ ವಿಜ್ಞಾನ ಶಿಕ್ಷಕರ ಹುದ್ದೆಗಳ ಸಂಖ್ಯೆ : 79

ಗಣಿತ ಶಿಕ್ಷಕರ ಹುದ್ದೆಗಳ ಸಂಖ್ಯೆ : 79

ಒಟ್ಟು : 554

ಅರ್ಜಿಗಳನ್ನು ಸಲ್ಲಿಸಲು ಆರಂಭಿಕ ದಿನಾಂಕ: 23-11-2018

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 22-12-2018

ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 24-12-2018

ಈ ಹುದ್ದೆಗಳಿಗೆ ಕರ್ನಾಟಕ ಲೋಕ ಸೇವಾ ಆಯೋಗವು 2019 ನೇ ಸಾಲಿನ ಫೆಬ್ರವರಿ ತಿಂಗಳಿನ 3, 9, 10 ನೇ ದಿನಾಂಕಗಳಲ್ಲಿ ನಡೆಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಅರ್ಜಿ ಶುಲ್ಕ ಮಾಹಿತಿ ಈ ಕೆಳಗಿನಂತಿದೆ.

ಸಾಮಾನ್ಯ ವರ್ಗ ಅಭ್ಯರ್ಥಿಗಳಿಗೆ : 600 ರೂಪಾಯಿಗಳು

ಪ್ರವರ್ಗ 2ಎ/ಬಿ/3ಎ/3ಬಿ : 300 ರೂಪಾಯಿಗಳು

ಮಾಜಿ ಸೈನಿಕ ಅಭ್ಯರ್ಥಿಗಳಿಗೆ : 50 ರೂಪಾಯಿಗಳು

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ1/ಅಂಗವಿಕಲ ಅಭ್ಯರ್ಥಿಗಳಿಗೆ : ಶುಲ್ಕ ಪಾವತಿಯಿಂದ ವಿನಾಯಿತಿ ಇದೆ.

– ಅರ್ಜಿ ಗಳನ್ನು ಆನ್‌ಲೈನ್ ಮೂಲಕ ಭರ್ತಿ ಮಾಡಿದ ನಂತರ ಶುಲ್ಕವನ್ನು ಯಾವುದೇ ಕಾಮನ್ ಸರ್ವೀಸ್ ಸೆಂಟರ್‌ಗಳಲ್ಲಿ(CSC) ಅಥವಾ ನೆಟ್‌ ಬ್ಯಾಂಕಿಂಗ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮೂಲಕ ಸಂದಾಯ ಮಾಡಬಹುದು.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು

– ಭಾವಚಿತ್ರ

– ಸಹಿ ಮಾಡಿದ ಸ್ಕ್ಯಾನ್ ಫೋಟೋ

– ವಯೋಮಿತಿ ಆಧಾರ ಪ್ರಮಾಣ ಪತ್ರ(ಎಸ್‌ಎಸ್‌ಎಲ್‌ಸಿ ಪ್ರಮಾಣ ಪತ್ರ ಜೆರಾಕ್ಸ್)

– ವಿದ್ಯಾರ್ಹತೆಗೆ ಸಂಬಂಧ ಪಟ್ಟ ದಾಖಲೆಗಳ ಸ್ಕ್ಯಾನ್‌ ಫೋಟೋಗಳು

– ಮೀಸಲಾತಿಗೆ ಕೋರಿದ್ದಲ್ಲಿ, ಅದಕ್ಕೆ ಸಂಬಂಧಪಟ್ಟ ದಾಖಲೆ ಪತ್ರಗಳ ಸ್ಕ್ಯಾನ್‌ ಮಾಡಿದ ಫೋಟೋಗಳು.

ಈ ನೇಮಕಾತಿಗೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯಲು ಪ್ರಕಟಣೆಯ ಪಿಡಿಎಫ್ ಗಾಗಿ ಕ್ಲಿಕ್ ಮಾಡಿ

Head Masters and Teachers in various Subjects in Moulana Azad Residential Schools (RPC) Recruitment 2018-19 notification.

Head Masters and Teachers in various Subjects in Moulana Azad Residential Schools (RPC) Recruitment 2018-19 notification. Read more here.

You may also like