Home » ರೈಲ್ವೆ ಇಲಾಖೆಯಲ್ಲಿನ 1.3 ಲಕ್ಷ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ರೈಲ್ವೆ ಇಲಾಖೆಯಲ್ಲಿನ 1.3 ಲಕ್ಷ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

by manager manager
rrb recruitment 2019 notification

ಭಾರತೀಯ ರೈಲ್ವೆ ನೇಮಕಾತಿ ಮಂಡಳಿ(RRB) ಮತ್ತು ರೈಲ್ವೆ ನೇಮಕಾತಿ ಜಾಲಗಳು ಒಟ್ಟಾರೆ 1,30,000 ಖಾಲಿ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿವೆ.

ಒಟ್ಟಾರೆ 1,30,000 ಹುದ್ದೆಗಳ ಪೈಕಿ 1,00,000 ಖಾಲಿ ಹುದ್ದೆಗಳು ಶ್ರೇಣಿ-1 ರ ಪೋಸ್ಟ್‌ಗಳು ಮತ್ತು ಇತರೆ ಉಳಿದ 30,000 ಹುದ್ದೆಗಳು ಪ್ಯಾರಾಮೆಡಿಕಲ್ ಸಿಬ್ಬಂದಿಗಳು, ತಾಂತ್ರಿಕೇತರ ಹುದ್ದೆಗಳು(NTPC), ಸಚಿವಾಲಯದ ಮತ್ತು ಇತರೆ ಪ್ರತ್ಯೇಕ ವಿಭಾಗಗಳಲ್ಲಿನ ಹುದ್ದೆಗಳಾಗಿವೆ.

ಈ ಹುದ್ದೆಗಳ ಭರ್ತಿಗೆ ಸಂಬಂಧಿಸಿದ ಸಂಪೂರ್ಣ ವಿವರದ ಅಧಿಸೂಚನೆ RRB ಮತ್ತು RRC ಗಳ ಪ್ರಾದೇಶಿಕ ನೇಮಕಾತಿ ಮಂಡಳಿಗಳ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಆನ್‌ಲೈನ್‌ ಅರ್ಜಿಗೆ ಅವಕಾಶ ನೀಡಿದ ದಿನಾಂಕದಂದು ಬಿಡುಗಡೆ ಮಾಡಲಾಗುತ್ತದೆ.

ಕೇವಲ ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕಾಗಿದ್ದು, ಯಾವ ಯಾವ ಹುದ್ದೆಗಳಿಗೆ ಯಾವ ದಿನಾಂಕಗಳಂದು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂಬುದು ಈ ಕೆಳಗಿನಂತಿದೆ.

ಹುದ್ದೆಗಳವಾರು ಆನ್‌ಲೈನ್‌ ಅರ್ಜಿ ಸ್ವೀಕಾರ ದಿನಾಂಕ ಮತ್ತು ಸಮಯ

ತಾಂತ್ರಿಕೇತರ ವಿಭಾಗಗಳ ಹುದ್ದೆಗಳು(RRB ಯಲ್ಲಿ) – 28/02/2019 ರಂದು ಬೆಳಿಗ್ಗೆ 10 ಗಂಟೆಗೆ

ಪ್ಯಾರಾ ಮೆಡಿಕಲ್ ಸಿಬ್ಬಂದಿ – 04/03/2019 ರಂದು ಬೆಳಿಗ್ಗೆ 10 ಗಂಟೆಗೆ

ಸಚಿವಾಲಯ ಸಿಬ್ಬಂದಿ ಮತ್ತು ಇತರೆ ಪ್ರತ್ಯೇಕ ವಿಭಾಗಗಳ ಹುದ್ದೆಗಳು(RRB ಯಲ್ಲಿ) – 08/03/2019 ರಂದು ಬೆಳಿಗ್ಗೆ 10 ಗಂಟೆಗೆ

ಶ್ರೇಣಿ-1 ರ ಹುದ್ದೆಗಳು(RRB ಯಲ್ಲಿ) – 12/03/2019 ರಂದು ಬೆಳಿಗ್ಗೆ 10 ಗಂಟೆಗೆ

ಈ ಎಲ್ಲಾ ಹುದ್ದೆಗಳಿಗೆ ಮೊದಲ ಹಂತದಲ್ಲಿ ಕಡ್ಡಾಯ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸಲಾಗುತ್ತದೆ. ಇತರೆ ವಿವರಗಳು, ಪರೀಕ್ಷಾ ಮಾದರಿ, ಪರೀಕ್ಷಾ ದಿನಾಂಕಗಳನ್ನು ಅಧಿಸೂಚನೆ ಪಿಡಿಎಫ್‌ನಲ್ಲಿ ನೀಡಲಾಗುತ್ತದೆ.

ತಾಂತ್ರಿಕೇತರ ವಿಭಾಗದಲ್ಲಿ ಕಿರಿಯ ಸಹಾಯಕ ಮತ್ತು ಟೈಪಿಸ್ಟ್, ಲೆಕ್ಕ ಸಹಾಯಕ ಮತ್ತು ಟೈಪಿಸ್ಟ್, ರೈಲ್ವೆ ಸಹಾಯಕ, ಟ್ರಾಫಿಕ್ ಸಹಾಯಕ, ಗೂಡ್ಸ್ ಗಾರ್ಡ್, ಹಿರಿಯ ವಾಣಿಜ್ಯ ಟಿಕೆಟ್ ಕ್ಲರ್ಕ್, ಹಿರಿಯ ಕ್ಲರ್ಕ್ ಕಮ್ ಟೈಪಿಸ್ಟ್, ಜೂನಿಯರ್ ಅಕೌಂಟ್ ಅಸಿಸ್ಟಂಟ್ ಕಮ್ ಟೈಪಿಸ್ಟ್, ಕಮರ್ಷಿಯಲ್ ಅಪ್ರೆಂಟಿಸ್, ಸ್ಟೇಷನ್ ಮಾಸ್ಟರ್ ಮತ್ತು ಇತರೆ ಹುದ್ದೆಗಳು.

ಪ್ಯಾರಾಮೆಡಿಕಲ್ ವಿಭಾಗಗಳಲ್ಲಿ ಸಿಬ್ಬಂದಿ ನರ್ಸ್, ಆರೋಗ್ಯ ಮತ್ತು ಮಲೇರಿಯಾ ಪರೀಕ್ಷಕರು, ಫಾರ್ಮಸಿಸ್ಟ್, ಇಸಿಜಿ ಟೆಕ್ನಿಷಿಯನ್, ಲ್ಯಾಬ್ ಅಸಿಸ್ಟಂಟ್, ಲ್ಯಾಬ್ ಸೂಪರಿಟೆಂಡೆಂಟ್ ಮತ್ತು ಇತರೆ.

ಆರ್‌ಆರ್‌ಬಿ ಸಚಿವಾಲಯ ಮತ್ತು ಇತರೆ ವಿಭಾಗಗಳಲ್ಲಿ ಸ್ಟೆನೋಗ್ರಾಫರ್, ಮುಖ್ಯ ಕಾನೂನು ಸಹಾಯಕ, ಕಿರಿಯ ಭಾಷಾಂತರಕಾರರು(ಹಿಂದಿ) ಮತ್ತು ಇತರೆ.

ಶ್ರೇಣಿ-1 ರ ವಿಭಾಗಗಳಲ್ಲಿ ಟ್ರ್ಯಾಕ್ ನಿರ್ವಾಹಕ ಶ್ರೇಣಿ-4, ಹಲವು ವಿಭಾಗಗಳಲ್ಲಿ ಸಹಾಯಕ ಹುದ್ದೆಗಳು, ಪಾಯಿಂಟ್ ಮ್ಯಾನ್, ಇತರೆ ವಿಭಾಗಗಳಲ್ಲಿ ಶ್ರೇಣಿ-1 ಹುದ್ದೆಗಳು.

ಅರ್ಜಿ ಶುಲ್ಕ ಎಷ್ಟು?

ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ : ರೂ. 500

ಹಿಂದುಳಿದ ವರ್ಗಗಳು, ಪ.ಜಾ/ಪ.ಪಂ ಮತ್ತು ಮೀಸಲಾತಿ ವರ್ಗಗಳ ಅಭ್ಯರ್ಥಿಗಳಿಗೆ : ರೂ.250

Railway recruitment board(RRB) and Railway recruitment cells(RRCs) has invited application for 1.3 lakh various post.