Home » ಪಿ.ಎಂ.ಕಿಸಾನ್ ಸೌಲಭ್ಯಕ್ಕೆ ಇ-ಕೆವೈಸಿ ಕಡ್ಡಾಯ: ಸೆ.7 ರವರೆಗೆ ಅವಕಾಶ

ಪಿ.ಎಂ.ಕಿಸಾನ್ ಸೌಲಭ್ಯಕ್ಕೆ ಇ-ಕೆವೈಸಿ ಕಡ್ಡಾಯ: ಸೆ.7 ರವರೆಗೆ ಅವಕಾಶ

by manager manager

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪಿ ಎಂ ಕಿಸಾನ್ ಯೋಜನೆಯಡಿ ಪರಿಹಾರ ಪಡೆಯಲು ರೈತರು ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ ಎಂದು ಹಾವೇರಿ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಬಿ ಮಂಜುನಾಥ ಅವರು ತಿಳಿಸಿದ್ದಾರೆ.


ಇ-ಕೆವೈಸಿ ಮಾಡದಿದ್ದಲ್ಲಿ ಆರ್ಥಿಕ ನೆರವು ಸ್ಥಗಿತಗೊಳ್ಳಲಿದೆ. ಕಾರಣ ಪಿ ಎಂ ಕಿಸಾನ ಯೋಜನೆಯ ಎಲ್ಲಾ ಫಲಾನುಭವಿಗಳು ನಾಗರಿಕ ಸೇವಾ ಕೇಂದ್ರ (ಸಿಎಸ್‍ಸಿ) ಮತ್ತು ಗ್ರಾಮ್ ಒನ್ ಸೇವಾ ಕೇಂದ್ರದಲ್ಲಿ OTPಮುಖಾಂತರ ಹಾಗೂ ಬಯೋ ಮೆಟ್ರಿಕ್ ಆಧಾರಿತವಾಗಿ ಇ-ಕೆವೈಸಿಯನ್ನು 07-09-2022 ರೊಳಗೆ ಮಾಡಿಸಬೇಕು. ಪೋಸ್ಟ ಆಫೀಸ್‍ಗಳಲ್ಲಿಯೂ ಇ-ಕೆವೈಸಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.