Home » ಎರಡೂ ಕಡೆ ಡಿಸ್‌ಪ್ಲೇ ಇರುವ ನುಬಿಯಾ ಜಡ್‌20 ಬಿಡುಗಡೆ: ಬೆಲೆ, ವೈಶಿಷ್ಟತೆಗಳು ಇತ್ಯಾದಿ..

ಎರಡೂ ಕಡೆ ಡಿಸ್‌ಪ್ಲೇ ಇರುವ ನುಬಿಯಾ ಜಡ್‌20 ಬಿಡುಗಡೆ: ಬೆಲೆ, ವೈಶಿಷ್ಟತೆಗಳು ಇತ್ಯಾದಿ..

by manager manager

ಈ ವರೆಗೂ ಸ್ಮಾಟ್‌ಫೋನ್‌ಗಳಲ್ಲಿ ಮುಂಭಾಗದಲ್ಲಿ ಎರಡು ಸೆಲ್ಫಿ ಕ್ಯಾಮೆರಾ, ಹಿಂಬಾಗದಲ್ಲಿ ಮೂರು ಕ್ಯಾಮೆರಾಗಳು ಇರುವುದನ್ನು ನೋಡಿರುತ್ತೀರಾ. ಆದರೆ ಈಗ ಟೆಕ್ನಾಲಜಿ ಮೇಡ್ ಈಜೀ ಎಂವುದಕ್ಕೆ ಸಾಕ್ಷಿಯಾಗಿ, ಸ್ಮಾಟ್‌ಫೋನ್‌ ನ ಹಿಂಭಾಗ ಮತ್ತು ಮುಂಭಾಗ ಎರಡೂ ಕಡೆಗಳಲ್ಲೂ ಡಿಸ್‌ಪ್ಲೇ(Screen) ಇರುವ ಡಿವೈಸ್‌ ಬಿಡುಗಡೆ ಆಗಿದೆ. ಆ ವಿಶೇಷ ವೈಶಿಷ್ಟತೆ ಹೊಂದಿರುವ ಸ್ಮಾಟ್‌ಫೋನ್‌ ನುಬಿಯಾ ಜಡ್‌20(Nubia Z20).

ZTE ಕಂಪನಿಯ ನುಬಿಯಾ ಉಪ ಬ್ರ್ಯಾಂಡ್‌ ಆಗಿದ್ದು, ತನ್ನ ಲೇಟೆಸ್ಟ್ ಫ್ಲ್ಯಾಗ್‌ಶಿಪ್‌ನ Z20 ಡಿವೈಸ್‌ ಬಿಡುಗಡೆ ಮಾಡಿದೆ. ಇದು ಗಂಭೀರ ಹಾರ್ಡ್‌ವೇರ್ ವೈಶಿಷ್ಟತೆಯನ್ನು ಸ್ನಾಪ್‌ಡ್ರಾಗನ್ 855+ ಚಿಪ್‌ಸೆಟ್‌, 512GB ಶೇಖರಣೆ ಜೊತೆಗೆ ಅಭಿವೃದ್ಧಿಪಡಿಸಲಾಗಿದೆ.

ಅತ್ಯಾಧುನಿಕ ವೈಶಿಷ್ಟವಾದ ನುಬಿಯಾ ಜಡ್‌20 ಯ ಎರಡು ಕಡೆಗಳ ಡಿಸ್‌ಪ್ಲೇಗಳನ್ನು ಸ್ವತಂತ್ರವಾಗಿ ಶೀಘ್ರವಾಗಿ ಬಳಕೆಮಾಡಬಹುದಾಗಿದೆ. ಮುಂಭಾಗದ ಸ್ಕ್ರೀನ್‌ನಲ್ಲಿ ಬೇರೆ, ಹಿಂಭಾಗದ ಸ್ಕ್ರೀನ್‌ನಲ್ಲಿ ಬೇರೆ ಕಾರ್ಯಗಳನ್ನು ನಿರ್ವಹಣೆ ಮಾಡಬಹುದು. ಈ ಸ್ಮಾಟ್‌ಫೋನ್‌ 7.0 ಆಂಡ್ರಾಯ್ಡ್ ಪೈ ಕಾರ್ಯನಿರ್ವಹಣೆ ಹೊಂದಿದೆ.

ನುಬಿಯಾ ಜಡ್‌20 ಸ್ಮಾಟ್‌ಫೋನ್‌ನ ಮುಂಭಾಗದ ಸ್ಕ್ರೀನ್‌ ಬಾಗಿದ 6.42 ಇಂಚಿನ ಎಫ್‌ಎಚ್‌ಡಿ ಜೊತೆಗೆ ಅಮೋಲ್ಡ್‌ ಅಂಚುಪಟ್ಟಿಯನ್ನು ಹೊಂದಿದೆ. ಕನಿಷ್ಠ ಮೇಲಿನ ಮತ್ತು ಕೆಳಗಿನ ಬೆಜೆಲ್‌ಗಳನ್ನು ಹೊಂದಿದೆ. ಆದರೆ ಸೆಲ್ಫಿ ಕ್ಯಾಮೆರಾ ಇಲ್ಲ. ಆದರೆ ಎರಡನೇ ಡಿಸ್‌ಪ್ಲೇ ವೈಶಿಷ್ಟತೆಗೆ ಥ್ಯಾಂಕ್ಸ್‌ ಹೇಳಲೇಬೇಕು. ಕಾಣ ಇದು ಸಹ 5.1 ಇಂಚಿನ ಎಚ್‌ಡಿ ಅಮೋಲ್ಡ್‌ ಪ್ಯಾನೆಲ್‌ ಹೊಂದಿದ್ದು, ಅತ್ಯುತ್ತಮ ಸೆಲ್ಫಿಯನ್ನು ಕ್ಲಿಕ್ಕಿಸಬಹುದು. ಹಾಗೂ ಮೂರು ಹಿಂಭಾಗದ ಕ್ಯಾಮೆರಾಗಳಲ್ಲಿ ವಿಡಿಯೋ ಚಾಟ್‌ ಸಹ ಮಾಡಬಹುದು.

48MP ಸೋನಿ ಐಎಂಎಕ್ಸ್ 585 ಸೆನ್ಸಾರ್ ಮತ್ತು ಓಐಎಸ್‌ನ ಪ್ರಾಥಮಿಕ ಕ್ಯಾಮೆರಾ ಫೀಚರ್ ಹೊಂದಿದ್ದು, ಇತರೆ ಎರಡು ಕ್ಯಾಮೆರಾಗಳು 16MP ಅಲ್ಟ್ರಾವೈಡ್‌ ಆಂಗಲ್, 8MP ಟೆಲಿಫೋಟೋ ಜೊತೆಗೆ 3ಎಕ್ಸ್ ಆಪ್ಟಿಕಲ್ ಜೂಮ್ ಫೀಚರ್ ಹೊಂದಿದೆ. ಈ ಕ್ಯಾಮೆರಾಗಳಿಂದ 8K ರೆಸಲ್ಯೂಶನ್‌ನ ವಿಡಿಯೋ ಸೆರೆಹಿಡಿಯಬಹುದಾಗಿದೆ.

ಆಕ್ಟಾಕೋರ್ ಕ್ವಾಲ್ಕಂ ಸ್ನಾಪ್‌ಡ್ರಾಗನ್ 855+ ಪ್ರೊಸೆಸರ್, 6GB ಮತ್ತು 8GB RAM ಮತ್ತು 128/512GB ಯ ಶೇಖರಣ ಸಾಮರ್ಥ್ಯ ಹೊಂದಿದೆ. 4000mAh ಸಾಮರ್ಥ್ಯ ಮತ್ತು 27w ಸಪೋರ್ಟ್‌ ವೇಗದ ಚಾರ್ಜಿಂಗ್ ವೈಶಿಷ್ಟ ಹೊಂದಿದೆ.

ಸ್ಮಾಟ್‌ಫೋನ್‌ ಎರಡು ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ಚಾಸಿಸ್ ಅಂಚಿನಲ್ಲಿ ಹೊಂದಿದೆ. ಆದ್ದರಿಂದ ಯಾವುದೇ ಭಾಗದ ಡಿಸ್‌ಪ್ಲೇ ಬಳಸಬೇಕಾದರೆ ಬಲಭಾಗದ ಸೆನ್ಸಾರ್‌ ಅನ್ನು ಬಳಸಬಹುದು.

ನುಬಿಯಾ ಜಡ್‌20 ಕಪ್ಪು, ನೀಲಿ ಮತ್ತು ಆರೆಂಜ್‌ ಬಣ್ಣಗಳಲ್ಲಿ ಮಾರುಕಟ್ಟೆಗೆ ಬಂದಿದ್ದು, ಮುಂಗಡವಾಗಿ ಚೀನದಲ್ಲಿ ಸದ್ಯದಲ್ಲಿ ಬುಕ್‌ ಮಾಡಿಕೊಳ್ಳಬಹುದಾಗಿದೆ. ಅಧಿಕೃತವಾಗಿ ಆಗಸ್ಟ್ 16 ರಿಂದ ಮಾರಾಟ ಆಗಲಿದೆ. ಅಂತರರಾಷ್ಟ್ರೀಯವಾಗಿ ಸೆಪ್ಟೆಂಬರ್ ನಲ್ಲಿ ಮಾರಾಟವಾಗಲಿದೆ.

ಭಾರತದಲ್ಲೂ ಸ್ಮಾಟ್‌ಫೋನ್‌ ಪ್ರಿಯರು ಈ ಡಿವೈಸ್‌ ಖರೀದಿಸಬೇಕು ಅಂದ್ರೆ ಸೆಪ್ಟೆಂಬರ್ ವರೆಗೂ ಕಾಯಲೇಬೇಕು. ಈ ಡಿವೈಸ್‌ನ ಚೀನ ಮೇಲೆ 3,499 ಯುವಾನ್ ಆಗಿದ್ದು, ಭಾರತದಲ್ಲಿ ಸುಮಾರು ಇದರ ಬೆಲೆ ರೂ.34989 ಆಗಿದೆ.

ಎರಡು ಕಡೆ ಡಿಸ್‌ಪ್ಲೇ ಬಳಕೆ ಹೇಗಿರುತ್ತೆ ಈ ಕೆಳಗಿನ ವಿಡಿಯೋ ನೋಡಿ.