Home » ಮದರ್‌ಹುಡ್ ಹಾಸ್ಪಿಟಲ್ ನಿಂದ ಭಾರತದಾದ್ಯಂತ ಮೊದಲ ವರ್ಚುವಲ್ ನಿಯೋನಾಟಲ್ ಇಂಟೆನ್ಸಿವ್ ಕೇರ್ ಯೂನಿಟ್ ನೆಟ್‌ವರ್ಕ್, NICU ಲೈವ್‌ಗೆ ಚಾಲನೆ

ಮದರ್‌ಹುಡ್ ಹಾಸ್ಪಿಟಲ್ ನಿಂದ ಭಾರತದಾದ್ಯಂತ ಮೊದಲ ವರ್ಚುವಲ್ ನಿಯೋನಾಟಲ್ ಇಂಟೆನ್ಸಿವ್ ಕೇರ್ ಯೂನಿಟ್ ನೆಟ್‌ವರ್ಕ್, NICU ಲೈವ್‌ಗೆ ಚಾಲನೆ

by manager manager

ನವಜಾತ ಶಿಶುಗಳ ತೀವ್ರ ನಿಗಾ ಸೌಲಭ್ಯದಲ್ಲಿ ನಗರ ಮತ್ತು ಗ್ರಾಮೀಣ ಭಾರತದ ನಡುವಿರುವ ಅಂತರವನ್ನು ನೀಗಿಸುವ ಸೇತುವೆಯಾಗಿರುವ ಟೆಲಿಹೆಲ್ತ್ ನವೀನ ಹಾಗೂ ಏಕೈಕ ಕಾರ್ಯಕ್ರಮವಾಗಿದೆ

NICU ಲೈವ್ ಭಾರತದಲ್ಲಿ 5 ದುರ್ಗಮ ಪ್ರದೇಶಗಳಿಗೆ ಸಂಪರ್ಕ ಹೊಂದಿದೆ (ಅನಂತಪುರ, ಹಿಂದೂಪುರ, ಮದನಪಲ್ಲಿ, ಪಟನಾ ಮತ್ತು ಹಿಸಾರ್).

ಅಪಾಯದಲ್ಲಿದ್ದ 300ಕ್ಕೂ ಹೆಚ್ಚು ನವಜಾತ ಶಿಶುಗಳಿಗೆ NICU LIVE ಮೂಲಕ ಚಿಕಿತ್ಸೆ ನೀಡಲಾಗಿದೆ

ಬೆಂಗಳೂರು 19 ಏಪ್ರಿಲ್, 2023: ಭಾರತದ ಸ್ತ್ರೀ ಮತ್ತು ಶಿಶು ಆಸ್ಪತ್ರೆಗಳ ಪ್ರಮುಖ ನೆಟ್‌ವರ್ಕ್ ಆಗಿರುವ ಮದರ್‌ಹುಡ್ ಹಾಸ್ಪಿಟಲ್ಸ್, ನವೀನ ವರ್ಚುವಲ್ ನವಜಾತ ಶಿಶುಗಳ ತೀವ್ರ ನಿಗಾ ಘಟಕ (NICU)ಗಳ ಜಾಲ – NICU ಲೈವ್ ಗೆ ಚಾಲನೆ ನೀಡುವುದಾಗಿ ಘೋಷಿಸಿದೆ. ಅತ್ಯಾಧುನಿಕ ರಿಮೋಟ್ ಮಾನಿಟರಿಂಗ್ ತಂತ್ರಜ್ಞಾನದೊಂದಿಗೆ, ದುರ್ಗಮ ಪ್ರದೇಶಗಳಲ್ಲಿ ತೀವ್ರ ಅಸ್ವಸ್ಥತೆಯಿಂದ ಬಳಲುತ್ತಿರುವ ನವಜಾತ ಶಿಶುಗಳು ಮದರ್‌ಹುಡ್‌ನ ನಿಯೋನಾಟಾಲಜಿ ಕೇರ್ ಟೀಮ್‌ನ ಆರೈಕೆಯನ್ನು ರಾತ್ರಿ-ಹಗಲೆನ್ನದೆ ಪಡೆಯಬಹುದು

NICU ಲೈವ್ ರಿಮೋಟ್ ಮಾನಿಟರಿಂಗ್ ತಂತ್ರಜ್ಞಾನವನ್ನು ಬಳಸುತ್ತದೆ ಮತ್ತು ದುರ್ಗಮ ಪ್ರದೇಶದಲ್ಲಿರುವ ಹೆಚ್ಚಿನ ಅಪಾಯದ ನವಜಾತ ಶಿಶುಗಳಿಗೆ NICU ಗಳಲ್ಲಿ ಚಿಕಿತ್ಸೆ ನೀಡಲು ವಿಶೇಷ ಡಿಜಿಟಲ್ ಸೌಲಭ್ಯಗಳನ್ನು ಬಳಸುತ್ತದೆ. ಮದರ್‌ಹುಡ್ ಹಾಸ್ಪಿಟಲ್ಸ್ ಬೆಂಗಳೂರಿನಲ್ಲಿರುವ ತನ್ನ ಆಸ್ಪತ್ರೆಯೊಂದರಲ್ಲಿ ಕೇಂದ್ರೀಯ ಆರೈಕೆ ಕೇಂದ್ರವನ್ನು (ಹಬ್ ಸೆಂಟರ್) ಸ್ಥಾಪಿಸಿದೆ. ಇದು ಅನಂತಪುರ, ಹಿಂದೂಪುರ, ಮದನಪಲ್ಲಿ, ಪಟನಾ ಮತ್ತು ಹಿಸಾರ್‌ನಲ್ಲಿರುವ 5 ದೂರಸ್ಥ NICU ಗಳಿಗೆ ಸಂಪರ್ಕ ಹೊಂದಿದೆ. ಹಬ್ ಮತ್ತು ಸ್ಪೋಕ್ ಮಾದರಿಯು ರೋಗಿಗಳನ್ನು ಸದಾಕಾಲ ನಿರ್ವಹಿಸಿ, ವೈದ್ಯಕೀಯ ಬೆಂಬಲ ನೀಡುವತ್ತ ಗಮನ ಹರಿಸಿದೆ. ಕೇಂದ್ರೀಯ ಆರೈಕೆ ತಂಡವು (ಹಬ್) ಲೈವ್ ವೀಡಿಯೊ ಫೀಡ್ ಒದಗಿಸುವ ಅಧಿಕ ರೆಸಲ್ಯೂಶನ್ PTZ ಕ್ಯಾಮೆರಾಗಳನ್ನು ಬಳಸಿಕೊಂಡು ದೂರಸ್ಥ NICU (ಸ್ಪೋಕ್) ಕೇಂದ್ರಗಳಿಗೆ 24/7 ಮೇಲ್ವಿಚಾರಣೆ ಮತ್ತು ಚಿಕಿತ್ಸೆಯ ಬೆಂಬಲವನ್ನು ಒದಗಿಸುತ್ತದೆ. ಎಲ್ಲ ಪ್ರಮುಖ ಮಾಹಿತಿಗಳನ್ನು ಡಿಜಿಟಲ್ ಸ್ವರೂಪದಲ್ಲಿ ಹಂಚಿಕೊಳ್ಳುವ ಡಿಜಿಟಲ್ ಪ್ಲಾಟ್‌ಫಾರ್ಮ್ ಇದ್ದು, ತಂಡಗಳ ನಡುವೆ ನಿರಂತರ ಸಂವಹನ ಸಂಪರ್ಕದ ಮೂಲಕ ನವಜಾತ ಶಿಶುಗಳಿಗೆ ವೈದ್ಯಕೀಯ ಫಲಿತಾಂಶಗಳನ್ನು ಗಣನೀಯವಾಗಿ ಸುಧಾರಿಸುತ್ತದೆ. ಅಲ್ಲದೆ, ನವಜೀತ ಶಿಶು ತಜ್ಞರು ಮತ್ತು NICU ನರ್ಸ್‌ಗಳ ಅನುಭವಿ ತಂಡವು NICU ಚಿಕಿತ್ಸಾ ವಿಧಾನಗಳ ಕುರಿತು ಸ್ಪೋಕ್ ಸೆಂಟರ್ ಕೇರ್ ತಂಡಕ್ಕೆ ನಿಯಮಿತವಾಗಿ ಕೌಶಲ್ಯ ಮತ್ತು ತರಬೇತಿಯನ್ನು ನೀಡುತ್ತದೆ.

ಮದರ್‌ಹುಡ್ ಹಾಸ್ಪಿಟಲ್ಸ್ ಸಿಇಒ ವಿಜಯರತ್ನ ವೆಂಕಟರಾಮನ್ ಮಾತನಾಡಿ, “ನವಜಾತ ಶಿಶುಗಳ ತೀವ್ರ ಆರೋಗ್ಯ ಸಮಸ್ಯೆಗಳಿಗೆ ಅತ್ಯಾಧುನಿಕ ಪರಿಹಾರಗಳನ್ನು ಒದಗಿಸುವಲ್ಲಿ ಮದರ್‌ಹುಡ್ ಹಾಸ್ಪಿಟಲ್ಸ್ ಮುಂಚೂಣಿಯಲ್ಲಿದೆ. ದೇಶದ ಅತ್ಯಂತ ದುರ್ಗಮ ಭಾಗಗಳಿಗೆ NICU ಆರೈಕೆಯನ್ನು ಒದಗಿಸುವ ನಮ್ಮ ಧ್ಯೇಯ ಮತ್ತು ಬದ್ಧತೆಗೆ ಅನುಗುಣವಾಗಿ NICU ಲೈವ್ ಆರಂಭಿಸಲಾಗಿದೆ. ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿ ಹಲವಾರು ನವಜಾತ ಶಿಶುಗಳಿಗೆ ತಕ್ಷಣದ NICU ಆರೈಕೆಯ ಅಗತ್ಯವಿರುತ್ತದೆ. ಕೊರತೆಯನ್ನು ನೀಗಿಸುವ ಮತ್ತು NICU ಸೌಲಭ್ಯವು ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ಗುರಿಯನ್ನು ಹೊಂದಿದ್ದೇವೆ. ತಂತ್ರಜ್ಞಾನವು ಅದ್ಭುತವಾಗಿದೆ. ಅದನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬ ಸಂಗತಿಯು ಇತಿಹಾಸದಲ್ಲಿ ಹೆಗ್ಗುರುತನ್ನು ಮೂಡಿಸುತ್ತದೆ. ನಾವೀನ್ಯವು ನಮ್ಮ ಪ್ರತಿ ಹೆಜ್ಜೆಗಳಲ್ಲೂ ಇರುತ್ತದೆ. ಮುಂದಿನ ವರ್ಷಗಳಲ್ಲಿ ಹೆಚ್ಚು ಸಾರ್ವಜನಿಕ ಸ್ನೇಹಿ ಪರಿಹಾರಗಳನ್ನು ಹೊರತರುತ್ತೇವೆ” ಎಂದರು.

ಮದರ್‌ಹುಡ್ ಹಾಸ್ಪಿಟಲ್ಸ್‌ನ ನವಜಾತ ತಜ್ಞ ಮತ್ತು ಮಕ್ಕಳ ತಜ್ಞ ಡಾ. ಪ್ರತಾಪ್ ಚಂದ್ರ ಅಭಿಪ್ರಾಯ ವ್ಯಕ್ತಪಡಿಸಿ, “NICU ಲೈವ್‌ ಮೂಲಕ, ಆಸ್ಪತ್ರೆಯಲ್ಲಿ ದಾಖಲಾಗುವ ಅವಧಿ ಕಡಿಮೆಯಾಗುತ್ತದೆ. ನಿರ್ಣಾಯಕ ಪ್ರಕರಣಗಳನ್ನು ನಿಭಾಯಿಸುವ ಸಾಮರ್ಥ್ಯ ವೃದ್ಧಿಸುವ ಜೊತೆಗೆ ಸಂತೋಷ ತರುವಂತಹ ಫಲಿತಾಂಶಗಳನ್ನು ನಿರೀಕ್ಷಿಸಬಹುದು. ವೈದ್ಯಕೀಯ ದೃಷ್ಟಿಕೋನದಿಂದ, ಈ ಪ್ರಯೋಗವು ಕ್ರಾಂತಿಕಾರಿಯಾಗಿದೆ. ದಾಖಲಾತಿಯಿಂದ ಡಿಸ್ಚಾರ್ಜ್‌ವರೆಗೆ ಸಂಪೂರ್ಣ ಪ್ರಕ್ರಿಯೆಯನ್ನು ಇದು ಸರಳೀಕರಿಸುತ್ತದೆ. ಈ ಕಾರ್ಯಕ್ರಮಕ್ಕೆ ಇನ್ನಷ್ಟು ಆಸ್ಪತ್ರೆಗಳನ್ನು ಒಳಪಡಿಸಿದರೆ NICU ಲೈವ್‌ನ ಪೂರ್ವಭಾವಿ ಮಧ್ಯಸ್ಥಿಕೆಗಳು ಮತ್ತು ಮಾರ್ಗದರ್ಶಿ ತುರ್ತು ನಿರ್ವಹಣೆಯು ನವಜಾತ ಶಿಶುಗಳ ಆರೈಕೆಯಲ್ಲಿ ಮಾನದಂಡಗಳನ್ನು ನಿಗದಿಗೊಳಿಸುತ್ತದೆ” ಎಂದರು.

NICU ಲೈವ್ ಆರೈಕೆಯ ಗುಣಮಟ್ಟವನ್ನು ರಾಜಿ ಮಾಡಿಕೊಳ್ಳದೆ ಭೌತಿಕ NICU ವೆಚ್ಚವನ್ನು ಕಡಿಮೆ ಮಾಡುತ್ತದೆ, ಜೊತೆಗೆ ತಜ್ಞ ವೈದ್ಯರ ಕೊರತೆಯನ್ನೂ ನಿವಾರಿಸುತ್ತದೆ. ದುರ್ಗಮ ಸ್ಥಳಗಳಲ್ಲಿ ನೆಲೆಗೊಂಡಿರುವ NICU ಗಳ ಅನನುಕೂಲಗಳೆಂದರೆ, ಎಲ್ಲ ಸಮಯದಲ್ಲೂ ತಜ್ಞ ವೈದ್ಯರು ಲಭ್ಯರಿರುವುದಿಲ್ಲ, ಆಧುನಿಕ ಶುಶ್ರೂಷಾ ಪರಿಣತಿಯ ಕೊರತೆ ಇರುತ್ತದೆ ಮತ್ತು ರಿಮೋಟ್-ಮೇಲ್ವಿಚಾರಣಾ ವ್ಯವಸ್ಥೆಯ ಮೂಲಕ ತಿಳಿಸಲಾದ ದಾಖಲೆಗಳ ನಿರ್ವಹಣೆಯೂ ಕಳಪೆಯಾಗಿರುತ್ತದೆ. ದೂರದ ಪ್ರದೇಶಗಳಲ್ಲಿ ಸುಧಾರಿತ NICU ಆರೈಕೆ ತಕ್ಷಣ ಲಭ್ಯವಾಗಿ, ವೈದ್ಯಕೀಯ ವೆಚ್ಚಗಳು ಕಡಿಮೆಯಾಗುವುದನ್ನು ನವಜಾತ ಶಿಶುಗಳಿರುವ ಕುಟುಂಬಗಳು ನಿರೀಕ್ಷಿಸಬಹುದು.

ಮದರ್‌ಹುಡ್ ಹಾಸ್ಪಿಟಲ್ಸ್‌ನ ಈ ಯೋಜನೆಯು ಲೆವೆಲ್-3ಯಲ್ಲಿ 300ಕ್ಕೂ ಹೆಚ್ಚು ಬೆಡ್‌ಗಳ ಉತ್ತಮ ನಿರ್ವಹಣೆ ಮತ್ತು ದೇಶದ ಅತ್ಯಂತ ಸಂಕೀರ್ಣ ಪ್ರಕರಣಗಳನ್ನು ನಿರ್ವಹಿಸುವ ಜ್ಞಾನವನ್ನು ಸಂಯೋಜಿಸುವ ನವಜಾತ ಶಿಶುಗಳ ಆರೋಗ್ಯ ರಕ್ಷಣಾ ಕ್ಷೇತ್ರದಲ್ಲಿ ಸುದೀರ್ಘ ಅನುಭವ ಮತ್ತು ನಾವೀನ್ಯದ ಫಲಿತಾಂಶವಾಗಿದೆ. ಕಳೆದ 7 ವರ್ಷಗಳಲ್ಲಿ ಮದರ್‌ಹುಡ್ NICU ಗಳಲ್ಲಿ 15,000ಕ್ಕೂ ಹೆಚ್ಚು ಶಿಶುಗಳನ್ನು ಆರೈಕೆ ಮಾಡಲಾಗಿದೆ. ಪ್ರಸ್ತುತ, ಭಾರತದಾದ್ಯಂತ 15 ಆನ್-ವ್ಹೀಲ್ NICU ಗಳಿವೆ, ಗ್ರಾಮೀಣ ಪ್ರದೇಶಗಳಿಂದ 3,500 ಶಿಶುಗಳನ್ನು ಕರೆತಂದು ಚಿಕಿತ್ಸೆ ಕೊಡಿಸಲಾಗಿದೆ: ಮದರ್‌ಹುಡ್ 74 ಪಟ್ಟಣಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಶಿಶುಗಳನ್ನು ತಲುಪು, ಆರೈಕೆ ನೀಡಲು 1 ಲಕ್ಷ ಕಿಲೋಮೀಟರ್‌ಗಳಿಗಿಂತ ಹೆಚ್ಚು ಪ್ರಯಾಣಿಸಿದೆ.