ಬ್ಯಾಚುಲರ್‌ಗಳು ಅದು ಗಂಡು ಆಗಲಿ ಅಥವಾ ಹೆಣ್ಣೇ ಆಗಲಿ. ಇಬ್ಬರಿಗೂ ಹೆಚ್ಚು ಕಾಡುವ ಬ್ಯಾಚುಲರ್ಸ್ ಬಾಧೆಗಳ ಪೈಕಿ ಹಸ್ತಮೈಥುನವು ಒಂದು. ಹಸ್ತಮೈಥುನವು ಜನನಾಂಗಗಳನ್ನು ಒಂದು ಲೈಂಗಿಕ ರೀತಿಯಲ್ಲಿ ಒಂದು ಪರಾಕಾಷ್ಟೆ ತಲುಪುವ ಹಂತದಲ್ಲಿ ಸ್ವಯಂ- ಉತ್ತೇಜಿಸುತ್ತದೆ. ಸರಳವಾಗಿ ಹೇಳುವುದಾದರೆ ಒಬ್ಬ ವ್ಯಕ್ತಿ ತನಗೆ ತಾನೆ ಲೈಂಗಿಕ ತೃಪ್ತಿ ಪಡೆದುಕೊಳ್ಳುವ ವಿಧಾನವೇ ಹಸ್ತಮೈಥುನ.
ಹಸ್ತಮೈಥುನ ಕ್ರಿಯೆ ಪುರುಷ ಮತ್ತು ಮಹಿಳೆ ಇಬ್ಬರಲ್ಲಿಯೂ ಸಾಮಾನ್ಯವಾಗಿದ್ದು, ಮಕ್ಕಳಿಂದ ದೊಡ್ಡವರಾಗುವ ಸಮಯದಲ್ಲಿ ಒಂದು ಸಾಧಾರಣ ಕ್ರಿಯೆಯೂ ಹೌದು.
ಹಸ್ತಮೈಥುನ ಕ್ರಿಯೆ ಗಂಡು ಮತ್ತು ಹೆಣ್ಣು ಮಕ್ಕಳ ಬೆಳವಣಿಗೆ ಹಂತದಲ್ಲಿ ಸ್ವಾಭಾವಿಕವಾಗಿ ಪ್ರಚೋದನೆ ಹೊಂದುವ ಚಟುವಟಿಕೆ. ಇದು ಕೆಲವು ವೇಳೆ ಗುಡ್ ಅಥವಾ ಬ್ಯಾಡ್ ಆಗಿರಬಹುದು. ಆದರೆ ಈ ಕ್ರಿಯೆಯನ್ನು ಧಾರ್ಮಿಕ ನಂಬಿಕೆಗಳ ಹಿನ್ನೆಲೆಯಲ್ಲಿ ಜನರು ಕೆಟ್ಟ ಚಟುವಟಿಕೆಯೇ ಎಂದು ಹೇಳುತ್ತಾರೆ.
ಮಕ್ಕಳು ಹಂತ ಹಂತವಾಗಿ ಬೆಳೆಯುತ್ತಾ ಅವರ ದೈಹಿಕ ಬೆಳವಣಿಗೆ, ಮಾನಸಿಕ ಬೆಳವಣಿಗೆ, ಭಾಷೆಯ ಬೆಳವಣಿಗೆ, ಸಂವಹನ ಬೆಳವಣಿಗೆ, ಕೌಶಲ್ಯ ಬೆಳವಣಿಗೆಗಳ ಅಭಿವೃದ್ಧಿ ಹೇಗೆ ಅಗತ್ಯವೋ ಹಾಗೆಯೇ ಸೆಕ್ಸುವಲ್ ಡೆವಲಪ್‌ಮೆಂಟ್ ಸಹ ತುಂಬಾ ಒಳ್ಳೆಯದು.
ಸಾಮಾನ್ಯವಾಗಿ ಹಸ್ತಮೈಥುನ ಮಾಡುವುದು ಕೆಟ್ಟದ್ದು ಎನ್ನುವ ಹಾಗಿಲ್ಲ. ಅಥವಾ ಮಾಡದೇ ಇದ್ದರೂ ಓಕೆ. ಕೆಲವರು ಸ್ವಾಭಾವಿಕವಾಗಿ ಕಡಿಮೆ ಲೈಂಗಿಕ ಆಸೆಗಳನ್ನು ಹೊಂದಿರುತ್ತಾರೆ. ಇನ್ನೂ ಕೆಲವರು ತಮ್ಮ ವೈಯಕ್ತಿಕ ಮತ್ತು ಧಾರ್ಮಿಕ ಕಾರಣಗಳಿಂದ ಹಸ್ತಮೈಥುನ ದಿಂದ ದೂರವಿರಲು ಇಷ್ಟಪಡುತ್ತಾರೆ. ಅವರವರ ಅನುಕೂಲಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಳ್ಳುವುದು ಉತ್ತಮ.
ಈ ಲೇಖನದಲ್ಲಿ ಹಸ್ತಮೈಥುನದ ಸೈಡ್ ಎಫೆಕ್ಟ್ ಏನು? ಪ್ರಯೋಜನಗಳು ಏನು? ಅಪಾಯಗಳು ಏನು? ಹಾಗೂ ಇನ್ನೂ ಇತರೆ ಇದರ ಬಗ್ಗೆ ಇರುವ ಹಲವು ಪ್ರಶ್ನೆಗಳ ಬಗ್ಗೆ ಹಂತ ಹಂತವಾಗಿ ತಿಳಿಸಲಾಗಿದೆ. ಮುಂದೆ ಓದಿರಿ.
ಹಸ್ತಮೈಥುನ ಸಾಮಾನ್ಯ ವರ್ತನೆಯೇ?
ಲೈಂಗಿಕ ಆರೋಗ್ಯ ತಜ್ಞರು ಮತ್ತು ಸಂಶೋಧಕರು ಹಸ್ತಮೈಥುನವು ಸಂಪೂರ್ಣವಾಗಿ ಒಂದು ಸಾಮಾನ್ಯ ಸ್ವಾಭಾವಿಕ ಕ್ರಿಯೆ. ಇದು ಮಾನವನ ಆರೋಗ್ಯಕರ ಲೈಂಗಿಕ ಚಟುವಟಿಕೆ ಎನ್ನುತ್ತಾರೆ. ಆದರೆ ಈ ಚಟುವಟಿಕೆ ವೈಯಕ್ತಿಕವಾಗಿ ವ್ಯಕ್ತಿಗಳ ಗೌರವಕ್ಕೆ ಧಕ್ಕೆ ತರುವ ಕ್ರಿಯೆ ಎಂದು, ಯಾರೇ ಆಗಲಿ ಎಷ್ಟೇ ಆತ್ಮೀಯ ಗೆಳೆಯರಿಗೂ ಈ ಬಗ್ಗೆ ಚರ್ಚಿಸುವುದಿಲ್ಲ.
ಹಸ್ತಮೈಥುನ ಹಾನಿಕಾರಕವೇ?
ಖಂಡಿತ ಇಲ್ಲ. ಆರೋಗ್ಯ ವಿಜ್ಞಾನ ದೃಷ್ಟಿಯಲ್ಲಿ ಹಸ್ತಮೈಥುನ ಯಾವುದೇ ಕಾರಣದಿಂದಲೂ ವ್ಯಕ್ತಿಗೆ ಹಾನಿಕಾರಕವಲ್ಲ. ನೈತಿಕ ಕಾರಣಗಳಿಗಾಗಿ ಇದು ಕೆಟ್ಟದು ಎಂದು ಹಲವರು ಭಾವಿಸುತ್ತಾರೆ. ಆದರೆ ಅವರವರ ಆಯ್ಕೆಗೆ ಬಿಟ್ಟಿದ್ದು.
ಪ್ರತಿದಿನ ಹಸ್ತಮೈಥುನ ಮಾಡುವುದು ಆರೋಗ್ಯಕರವೇ?
ಈ ಪ್ರಶ್ನೆಗೆ ಸರಿಯಾದ ಉತ್ತರವಿಲ್ಲ. ಕೆಲವರಿಗೆ ದಿನನಿತ್ಯ ಹಸ್ತಮೈಥುನ ಮಾಡುವುದು ಸಾಮಾನ್ಯವಾಗಿರುತ್ತದೆ. ಕೆಲವರಿಗೆ ಇದು ತುಂಬಾ ಹೆಚ್ಚು ಅನಿಸುತ್ತದೆ. ಆದರೆ ಹಸ್ತಮೈಥುನ ಮಾಡುವುದು ನಿಮ್ಮ ಒಟ್ಟಾರೆ ಎನರ್ಜಿಯ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ. ಅಲ್ಲದೇ ದಿನನಿತ್ಯದ ಚಟುವಟಿಕೆಗಳ ಮೇಲೆ ಅತಿಕ್ರಮಣ ಮಾಡುವುದಿಲ್ಲ. ನೀವು ಚೆನ್ನಾಗೆ ಇರುತ್ತೀರಿ.
ಕೆಲವು ಲೈಂಗಿಕ ತಜ್ಞರ ಪ್ರಕಾರ, ದಿನನಿತ್ಯ ಹೆಚ್ಚು ಬಾರಿ ಹಸ್ತಮೈಥುನ ಮಾಡುವುದರಿಂದ ಕೆಲವರು ವೀಕ್ ಆಗುತ್ತಾರೆ, ಆಯಾಸಗೊಳ್ಳುತ್ತಾರೆ, ಶೀಘ್ರ ಸ್ಖಲನಗೊಳ್ಳುವಿಕೆ ಮತ್ತು ಸಂಗಾತಿಯೊಂದಿಗಿನ ಸರಸಕ್ಕೆ ಹಿನ್ನೆಡೆ ಆಗುತ್ತದೆ. ಎನ್ನುತ್ತಾರೆ.
ಇನ್ನೊಂದು ಕಡೆ ಕೆಲವರಿಗೆ ಪ್ರತಿದಿನದ ತಮ್ಮ ಸ್ವಯಂ-ಲೈಂಗಿಕ ತೃಪ್ತಿಯನ್ನು ಮಿಸ್ ಮಾಡಿಕೊಂಡರೇ ಅವರಿಗೆ ಒತ್ತಡ ಹೆಚ್ಚುತ್ತದೆ. ಮಾನಸಿಕ ಆರೋಗ್ಯ ಕೆಡುತ್ತದೆ, ಹತಾಶರಾಗುತ್ತಾರೆ. ಸಂತೋಷಕಳೆದುಕೊಳ್ಳುತ್ತಾರೆ. ಆದರೆ ಹಸ್ತಮೈಥುನ ದಿಂದ ಕೆಲವರು ತಮ್ಮ ಒತ್ತಡವನ್ನು ಕಡಿಮೆಮಾಡಿಕೊಳ್ಳುತ್ತಾರೆ. ತಮ್ಮ ಮಾನಸಿಕ ಆರೋಗ್ಯ ಸ್ಥಿತಿಯನ್ನು ಸಮವಾಗಿ ಕಾಪಾಡಿಕೊಳ್ಳುತ್ತಾರೆ.
ಮುಂದುವರೆಯುವುದು..
Is the question like What is the meaning of hastmaithun in kannada, hastamaithun problem in kannada, hastamaithun benefits in kannada, hastamaithun side effects in kannada.. answer is here..