Home » LIC ADO Jobs: 9394 ಎಲ್‌ಐಸಿ ಅಪ್ರೆಂಟಿಸ್ ಡೆವಲಪ್ಮೆಂಟ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ

LIC ADO Jobs: 9394 ಎಲ್‌ಐಸಿ ಅಪ್ರೆಂಟಿಸ್ ಡೆವಲಪ್ಮೆಂಟ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ

by manager manager

ಭಾರತೀಯ ಜೀವ ವಿಮಾ ನಿಗಮವು 9394 ಎಲ್‌ಐಸಿ ಅಪ್ರೆಂಟಿಸ್ ಡೆವಲಪ್ಮೆಂಟ್ ಆಫೀಸರ್ ಹುದ್ದೆಗೆ ಅಧಿಸೂಚಿಸಿ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಅರ್ಜಿ ಸಲ್ಲಿಸಿ. ಯಾವುದೇ ಪದವಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಕರ್ನಾಟಕದ ಎಲ್‌ಐಸಿ ಹೆಡ್‌ ಆಫೀಸ್ ಗಳಲ್ಲಿ ಒಟ್ಟು 696 ಹುದ್ದೆಗಳು ಖಾಲಿ ಇದ್ದು, ಆ ಹುದ್ದೆಗಳ ವಿವರ ಕೆಳಗಿನಂತಿದೆ.

ಬೆಂಗಳೂರು-1-115
ಬೆಂಗಳೂರು-2-117
ಬೆಳಗಾಂ- 66
ಧಾರವಾಡ-72
ಮೈಸೂರು-108
ರಾಯಚೂರು-83
ಶಿವಮೊಗ್ಗ-51
ಉಡುಪಿ-84

ಮಾಸಿಕ ವೇತನ: ರೂ.51,500.
ವಯಸ್ಸಿನ ಅರ್ಹತೆ: ಕನಿಷ್ಠ 21 ವರ್ಷ ಆಗಿರಬೇಕು. ಗರಿಷ್ಠ 30 ವರ್ಷ ವಯಸ್ಸು ಮೀರಿರಬಾರದು.
ವಿದ್ಯಾರ್ಹತೆ: ಪದವಿ ಪಾಸ್.
ಅರ್ಜಿಗೆ ಕೊನೆ ದಿನಾಂಕ : 10-02-2023
ಸಿಬಿಟಿ ಪರೀಕ್ಷೆಗೆ ಪ್ರವೇಶ ಪತ್ರ ಡೌನ್‌ಲೋಡ್‌ ಮಾಡಲು ದಿನಾಂಕ : 04-03-2023 ರ ನಂತರ.
ಸಿಬಿಟಿ ಪರೀಕ್ಷೆ ದಿನಾಂಕ: 12-03-2023
ಆನ್‌ಲೈನ್‌ ಮುಖ್ಯ ಪರೀಕ್ಷೆ ದಿನಾಂಕ : 08-04-2023

ಎಲ್‌ಐಸಿ ದೇಶದ ಈ ಕೆಳಗಿನ ಎಲ್ಲ ವಲಯಗಳಲ್ಲಿ ನಮೂದಿಸಿದ ಸಂಖ್ಯೆಯ ಹುದ್ದೆಗಳನ್ನು ಭರ್ತಿ ಮಾಡಲಿದೆ.
ದಕ್ಷಿಣ ಕೇಂದ್ರ ವಲಯ ಹುದ್ದೆಗಳು: 1408
ದಕ್ಷಿಣ ವಲಯ ಹುದ್ದೆಗಳು: 1516
ಪೂರ್ವ ಕೇಂದ್ರ ವಲಯ ಹುದ್ದೆಗಳು: 669
ಪೂರ್ವ ವಲಯ ಹುದ್ದೆಗಳು: 1049
ಪಶ್ಚಿಮ ವಲಯ ಕಚೇರಿ ಹುದ್ದೆಗಳು: 1942
ಕೇಂದ್ರ ವಲಯ ಹುದ್ದೆಗಳು: 561
ಉತ್ತರ ಕೇಂದ್ರ ವಲಯ ಹುದ್ದೆಗಳು: 1033
ಉತ್ತರ ವಲಯ ಹುದ್ದೆಗಳು: 1216
ಒಟ್ಟು ಹುದ್ದೆಗಳು: 9394

ಅರ್ಜಿ ಸಲ್ಲಿಸಲು ಲಿಂಕ್: https://licindia.in/Bottom-Links/careers