Home » ಕುವೆಂಪು ವಿವಿ ಅತಿಥಿ ಉಪನ್ಯಾಸಕರ ನೇಮಕಾತಿಗಾಗಿ ಅರ್ಜಿ ಆಹ್ವಾನ

ಕುವೆಂಪು ವಿವಿ ಅತಿಥಿ ಉಪನ್ಯಾಸಕರ ನೇಮಕಾತಿಗಾಗಿ ಅರ್ಜಿ ಆಹ್ವಾನ

by manager manager
kuvempu university guest faculty notification 2019-20

ಕುವೆಂಪು ವಿಶ್ವವಿದ್ಯಾಲಯದ ವಿವಿಧ ಸ್ನಾತಕೋತ್ತರ ಅಧ್ಯಯನ ವಿಭಾಗಗಳು, ಸ್ನಾತಕೋತ್ತರ ಕೇಂದ್ರ, ಕಡೂರು/ ಚಿಕ್ಕಮಗಳೂರು ಹಾಗೂ ವಿವಿಯ ಅಧೀನಕ್ಕೊಳಪಡುವ ಘಟಕ/ನೇರ ಆಡಳಿತಕ್ಕೊಳಪಟ್ಟ ಕಾಲೇಜಿನ 2019-20ನೇ ಶೈಕ್ಷಣಿಕ ಸಾಲಿನ ಹೆಚ್ಚುವರಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಬೋಧನಾ ಕಾರ್ಯಭಾರದ ನಿರ್ವಹಣೆಗಾಗಿ ಅತಿಥಿ ಉಪನ್ಯಾಸಕರುಗಳ ಸೇವೆಯನ್ನು ಪಡೆಯಲು ಈ ಕೆಳಕಂಡ ವಿಷಯಗಳ ಬೋಧನಾ ಕಾರ್ಯಕ್ಕನುಗುಣವಾಗಿ ಖಾಲಿ ಇರುವ ಸಂಖ್ಯೆಯಲ್ಲಿ ಅರ್ಹ ಅಭ್ಯರ್ಥಿಗಳಿಂದ ದ್ವಿ-ಪ್ರತಿಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. (kuvempu university guest faculty notification 2019-20)

ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 28-02-2019 (ಸಂಜೆ 4 ರ ಒಳಗೆ ತಲುಪುವಂತೆ ಅರ್ಜಿ ತಲುಪಿಸುವುದು)

– ನಿಗದಿತ ಅರ್ಜಿ ನಮೂನೆಗಳನ್ನು ವಿವಿಯ ಅಧಿಕೃತ ವೆಬ್‌ಸೈಟ್ www.kuvempu.ac.in ಗೆ ಭೇಟಿ ನೀಡಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಥವಾ ಅರ್ಜಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಅರ್ಜಿ ಸಲ್ಲಿಸಬೇಕಾದ ವಿಳಾಸ

– ಕುಲಸಚಿವರು, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ -577 451 ಈ ವಿಳಾಸಕ್ಕೆ ದಿನಾಂಕ 28-02-2019 ರಂದು ಸಂಜೆ 4 ಗಂಟೆ ಒಳಗೆ ತಲುಪುವಂತೆ ಕಳುಹಿಸುವುದು.

ಅರ್ಜಿ ಶುಲ್ಕ ಎಷ್ಟು?

ಪ.ಜಾ/ಪ.ಪಂ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ – ರೂ.100

ಸಾಮಾನ್ಯ ವರ್ಗ : ರೂ.200

ವಿಕಲಚೇತನ ಅಭ್ಯರ್ಥಿಗಳಿಗೆ – ಶುಲ್ಕ ವಿನಾಯ್ತಿ ನೀಡಲಾಗಿದೆ.

ಅರ್ಜಿ ಶುಲ್ಕ ಪಾವತಿಸುವುದು ಹೇಗೆ?

ಅರ್ಜಿ ಶುಲ್ಕದ ಡಿ.ಡಿ.ಯನ್ನು ಹಣಕಾಸು ಅಧಿಕಾರಿಗಳು, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ – ಇವರ ಹೆಸರಿಗೆ ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ಪಡೆದು ಪಾವತಿಯಾಗುವಂತೆ ಸಲ್ಲಿಸುವುದು.

ಸೂಚನೆ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಸಂದರ್ಶನಕ್ಕೆ ಪ್ರತ್ಯೇಕ ಪತ್ರಗಳನ್ನುಕಳುಹಿಸಲಾಗುವುದಿಲ್ಲ. ಸಂದರ್ಶನ ದಿನಾಂಕ ಮತ್ತು ಇತರೆ ಮಾಹಿತಿಗಳಿಗೆ ವಿವಿ ವೆಬ್‌ಸೈಟ್ www.kuvempu.ac.in ನಲ್ಲಿ ಆಗಾಗ ಚೆಕ್‌ ಮಾಡಬಹುದು.

ಕುವೆಂಪು ವಿಶ್ವವಿದ್ಯಾಲಯ ಅತಿಥಿ ಉಪನ್ಯಾಸಕರ ನೇಮಕಾತಿ ಅಧಿಸೂಚನೆ 2019-20 ಕನ್ನಡಕ್ಕಾಗಿ – ಕ್ಲಿಕ್ ಮಾಡಿ

ಕುವೆಂಪು ವಿಶ್ವವಿದ್ಯಾಲಯ ಅತಿಥಿ ಉಪನ್ಯಾಸಕರ ನೇಮಕಾತಿ ಅಧಿಸೂಚನೆ 2019-20 ಇಂಗ್ಲೀಷ್‌ಗಾಗಿ – ಕ್ಲಿಕ್ ಮಾಡಿ

ಕುವೆಂಪು ವಿಶ್ವವಿದ್ಯಾಲಯ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿಗಾಗಿ – ಕ್ಲಿಕ್ ಮಾಡಿ

ವಿಷಯವಾರು ಖಾಲಿ ಹುದ್ದೆಗಳು ಮತ್ತು ಇತರೆ ಸೂಚನೆಗಳು, ಮಾಹಿತಿಗಳಿಗಾಗಿ – ಕ್ಲಿಕ್ ಮಾಡಿ

Kuvempu University has invited application from eligible candidates for guest faculty positions. Kuvempu University guest faculty notification 2019-20 is here..

You may also like