ಕರ್ನಾಟಕ ಸರ್ಕಾರ ಕಂದಾಯ ಇಲಾಖೆಯ ಎಲ್ಲಾ ರೀತಿಯ ನೋಂದಣಿಗಳನ್ನು ಸರಳಗೊಳಿಸಿದ್ದು, ಹಲವು ರೀತಿಯ ಸೇವೆಗಳನ್ನು ‘ಕಾವೇರಿ ಆನ್‌ಲೈನ್ ಸೇವೆ'(https://kaverionline.karnataka.gov.in/) ಮೂಲಕ ಕಲ್ಪಿಸಲಾಗಿದೆ.(kaveri online service)
ಕಾವೇರಿ ಆನ್‌ಲೈನ್ ಸೇವೆ’ಯಲ್ಲಿ 9 ಸೇವೆಗಳು ಒಳಪಟ್ಟಿವೆ. ಸ್ಥಿರಾಸ್ತಿಗಳ ಋಣಭಾರ ಪ್ರಮಾಣ ಪತ್ರ, ನೋಂದಾಯಿತ ದಸ್ತಾವೇಜುಗಳ ದೃಢೀಕೃತ ನಕಲು ಪ್ರತಿ ಪೂರೈಕೆ, ಸ್ಥರಾಸ್ತಿಗಳ ಮೌಲ್ಯ ಮತ್ತು ಮುದ್ರಾಂಕ ಶುಲ್ಕಗಳ ಲೆಕ್ಕ ಹಾಕುವಿಕೆ, ದಸ್ತಾವೇಜು ನೋಂದಣಿ ಮುಂಗಡ ಕಾಲ ನಿಗದಿ, ಉಪನೋಂದಣಾಧಿಕಾರಿ ಕಚೇರಿಗಳ ಗುರುತಿಸುವಿಕೆ, ಆನ್‌ಲೈನ್ ಇ-ಸ್ಟ್ಯಾಂಪ್, ಮುದ್ರಾಂಕ ಕಾಗದ ಮುಂತಾದ ಸೇವೆಗಳು ಇದರಲ್ಲಿ ಲಭ್ಯವಾಗುತ್ತವೆ.
‘kaverionline.karnataka.gov.in’ ನಲ್ಲಿ ರಿಜಿಸ್ಟರ್ ಆದವರಿಗೆ ಸೇವೆಗಳು ಮತ್ತು ಗೆಸ್ಟ್ ಯೂಸರ್‌ಗಳಿಗೆ ಸೇವೆಗಳು ಎಂದು ಎರಡು ವಿಧದಲ್ಲಿ ಸೇವೆಗಳು ಲಭ್ಯವಿವೆ. ಅವುಗಳನ್ನು ಈ ಕೆಳಗೆ ನೋಡಬಹುದು.
ಕಾವೇರಿ ಆನ್‌ಲೈನ್ ಸೇವೆಗಾಗಿ ಮತ್ತು ಸೇವೆಗಳನ್ನು ಪಡೆಯಲು ಆನ್‌ಲೈನ್ ರಿಜಿಸ್ಟ್ರೇಶನ್ ಮಾಡಿಕೊಳ್ಳಲು – ಕ್ಲಿಕ್ ಮಾಡಿ
ಗ್ರಾಮ ಲೆಕ್ಕಾಧಿಕಾರಿಗಳನ್ನು ಆಯಾ ಜಿಲ್ಲಾಧಿಕಾರಿಗಳೇ ನೇಮಕ ಮಾಡಲು ಪವರ್ ನೀಡಿದ್ದ ಸರ್ಕಾರ, ಈಗ ಎರಡನೇ ದರ್ಜೆ ಸಹಾಯಕರ ನೇಮಕ ಮಾಡುವ ಪವರ್ ಅನ್ನು ಜಿಲ್ಲಾಧಿಕಾರಿಗಳಿಗೆ ನೀಡಿದೆ. ಇದರಿಂದ ಖಾಲಿ ಹುದ್ದೆಗಳು ಅತೀ ಶೀಘ್ರದಲ್ಲಿ ಭರ್ತಿ ಆಗಲಿವೆ.
50 ಹೊಸ ತಾಲೂಕುಗಳ ರಚನೆ, ಇಲ್ಲಿ ಮಿನಿ ವಿಧಾನಸೌಧ ಹಾಗೂ 14 ಪ್ರಮುಖ ಇಲಾಖೆಗಳ ತಾಲೂಕು ಮಟ್ಟದ ಕಚೇರಿಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ. ಪೋಡಿ ಮುಕ್ತ ಅಭಿಯಾನದಡಿ 11 ಸಾವಿರ ಗ್ರಾಮಗಳ ಸರ್ವೇಕಾರ್ಯ ಮುಗಿದಿದೆ. 700 ಕಂದಾಯ ಗ್ರಾಮಗಳ ರಚನೆಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. 5 ಜಿಲ್ಲೆಗಳಲ್ಲಿ ಡ್ರೋಣ್ ಆಧಾರಿತ ಮರುಭೂಮಾಪನಾ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
KAVERI online service is a web based application of Department of stamps and Registration, Government of Karnataka.