Home » ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶಕ್ಕೆ ಫೈನಲ್ ಡೇಟ್‌ ಫಿಕ್ಸ್‌.. ಇಲ್ಲಿದೆ ಮಾಹಿತಿ..

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶಕ್ಕೆ ಫೈನಲ್ ಡೇಟ್‌ ಫಿಕ್ಸ್‌.. ಇಲ್ಲಿದೆ ಮಾಹಿತಿ..

by manager manager

ಮಡಿಕೇರಿ: ಮೇ 13, 2022.

ಮೇ 19, 2022 ರಂದು Karnataka SSLC 2022 ಪರೀಕ್ಷೆ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ‌ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ. ನಾಗೇಶ್ ಅವರು ಮಡಿಕೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡುವ ವೇಳೆ‌ ಮಾಹಿತಿ‌ ನೀಡಿದರು.

ಪ್ರಕಟಗೊಂಡ ನಂತರದಲ್ಲಿ ಚೆಕ್‌ ಮಾಡಲು ವಿಧಾನವನ್ನು ಈ ಕೆಳಗಿನಂತೆ ತಿಳಿಯಿರಿ.

ಕರ್ನಾಟಕ SSLC ಫಲಿತಾಂಶ ಚೆಕ್‌ ಮಾಡುವುದು ಹೇಗೆ?

  • ಕರ್ನಾಟಕ ಸೆಕೆಂಡರಿ ಎಜುಕೇಷನ್‌ ಎಕ್ಸಾಮಿನೇಷನ್ ಬೋರ್ಡ್‌ ಫಲಿತಾಂಶದ ಅಧಿಕೃತ ವೆಬ್‌ಸೈಟ್‌ karresults.nic.in ಗೆ ಭೇಟಿ ನೀಡಿ.
  • ತೆರೆದ ಪೇಜ್‌ನಲ್ಲಿ ವಿದ್ಯಾರ್ಥಿಗಳು ತಮ್ಮ ಎಸ್‌ಎಸ್‌ಎಲ್‌ಸಿ ರಿಜಿಸ್ಟರ್ ನಂಬರ್ ಮತ್ತು ಜನ್ಮ ದಿನಾಂಕ ಮಾಹಿತಿ ನೀಡಿ.
  • ‘Submit’ ಎಂಬಲ್ಲಿ ಕ್ಲಿಕ್ ಮಾಡಿ.
  • ಫಲಿತಾಂಶ ಪೇಜ್‌ ತೆರೆಯುತ್ತದೆ. ಡೌನ್‌ಲೋಡ್ ಮಾಡಿಕೊಳ್ಳಿ.
  • ಮುಂದಿನ ರೆಫರೆನ್ಸ್‌ಗಾಗಿ ಪ್ರಿಂಟ್‌ ತೆಗೆದುಕೊಳ್ಳಿ.

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2021
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಕೋವಿಡ್‌ ಹಿನ್ನೆಲೆಯಲ್ಲಿ 2021ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಭಯದ ನಡುವೆಯೇ ಕಟ್ಟುನಿಟ್ಟಿನ ಮಾರ್ಗಸೂಚಿಗಳೊಂದಿಗೆ ಜುಲೈ 19, 22 ರಂದು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಹೊಸ ಮಾದರಿಯಲ್ಲಿಯೇ ಎರಡೇ ದಿನ ಪರೀಕ್ಷೆ ನಡೆಸಿತ್ತು. ಒಂದೊಂದು ದಿನ 3 ವಿಷಯಗಳಿಗೆ ಒಂದೇ ಪ್ರಶ್ನೆ ಪತ್ರಿಕೆಯನ್ನು ನೀಡಿ ಪರೀಕ್ಷೆ ನಡೆಸಿತ್ತು. ಪ್ರತಿ ವಿಷಯಕ್ಕೆ 40 ಅಂಕಗಳಿಗೆ ಪ್ರಶ್ನೆಗಳನ್ನು ಕೇಳುವ ಮೂಲಕ ಪರೀಕ್ಷೆ ನಡೆಸಿತ್ತು. ಈ ಸಾಲಿನಲ್ಲಿನ 157 ವಿದ್ಯಾರ್ಥಿಗಳು 625 ಕ್ಕೆ 625 ಅಂಕಗಳಿಕೆ. ಶೇಕಡ.99.9 ವಿದ್ಯಾರ್ಥಿಗಳು ಪಾಸ್. ಈ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಬೆಂಗಳೂರು ಉತ್ತರ ಪ್ರಥಮ ಸ್ಥಾನ ಪಡೆದುಕೊಂಡಿದೆ. ಬೆಂಗಳೂರು ಉತ್ತರ ದ್ವಿತೀಯ ಸ್ಥಾನವನ್ನು, ರಾಮನಗರ ಜಿಲ್ಲೆಯು ತೃತೀಯ ಸ್ಥಾನವನ್ನು ಪಡೆದುಕೊಂಡಿದೆ. ಬಳ್ಳಾರಿ ಜಿಲ್ಲೆಯು ಕೊನೆ ಸ್ಥಾನದಲ್ಲಿದೆ. ಒಟ್ಟಾರೆ ಪರೀಕ್ಷೆ ಬರೆದ ಎಲ್ಲ ವಿದ್ಯಾರ್ಥಿಗಳು ಸಹ ಎಸ್‌ಎಸ್‌ಎಲ್‌ಸಿ ಪಾಸ್‌ ಆಗಿದ್ದಾರೆ.

  • 625 ಕ್ಕೆ 620 ಅಂಕ ಪಡೆದ ವಿದ್ಯಾರ್ಥಿಗಳ ಸಂಖ್ಯೆ 28.
  • ಪ್ರಥಮ ಭಾಷೆಯಲ್ಲಿ 25,702 ವಿದ್ಯಾರ್ಥಿಗಳು 125ಕ್ಕೆ 125 ಅಂಕ ಗಳಿಸಿದ್ದಾರೆ.
  • ದ್ವಿತೀಯ ಭಾಷೆಯಲ್ಲಿ 36,628 ವಿದ್ಯಾರ್ಥಿಗಳು 100 ಕ್ಕೆ 100 ಅಂಕ ಗಳಿಸಿದ್ದಾರೆ.
  • ತೃತೀಯ ಭಾಷೆಯಲ್ಲಿ 36,776 ವಿದ್ಯಾರ್ಥಿಗಳು 100 ಕ್ಕೆ 100 ಅಂಕ ಗಳಿಸಿದ್ದಾರೆ.
  • ಗಣಿತದಲ್ಲಿ 6,321 ವಿದ್ಯಾರ್ಥಿಗಳು 100 ಕ್ಕೆ 100 ಅಂಕ ಗಳಿಸಿದ್ದಾರೆ.
  • ವಿಜ್ಞಾನ ವಿಷಯದಲ್ಲಿ 3,649 ವಿದ್ಯಾರ್ಥಿಗಳು 100 ಕ್ಕೆ 100 ಅಂಕ ಗಳಿಸಿದ್ದಾರೆ.
  • ಸಮಾಜ ವಿಜ್ಞಾನದಲ್ಲಿ 9,367 ವಿದ್ಯಾರ್ಥಿಗಳು 100 ಕ್ಕೆ 100 ಅಂಕ ಗಳಿಸಿದ್ದಾರೆ.

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2020
2020ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಮಾರ್ಚ್‌ ಬದಲು ಕೊರೊನಾ ಕಾರಣ ಮುಂದೂಡಿ, ನಂತರದಲ್ಲಿ ಜೂನ್‌ 25 ರಿಂದ ಜುಲೈ 04 ರವರೆಗೆ ಪರೀಕ್ಷೆಯನ್ನು ನಡೆಸಲಾಗಿತ್ತು. 8 ಲಕ್ಷಕ್ಕಿಂತ ಅಧಿಕ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ವರ್ಷ ಒಟ್ಟಾರೆ ಶೇಕಡ.71.80 ಫಲಿತಾಂಶ ಬಂದಿತ್ತು. 8,11,050 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 5,82,316 ವಿದ್ಯಾರ್ಥಿಗಳು ಉತ್ತೀರ್ಣ ರಾಗಿದ್ದರು.
ಸರ್ಕಾರಿ ಶಾಲೆಗಳ ಫಲಿತಾಂಶ ಶೇಕಡ.72.79 ಬಂದಿತ್ತು. ಪರೀಕ್ಷೆಬರೆದವರ ಪೈಕಿ 2.28,734 ಅನುತ್ತೀರ್ಣರಾಗಿದ್ದರು. ಈ ಬಾರಿ 6 ವಿದ್ಯಾರ್ಥಿಗಳು 625 ಕ್ಕೆ 625 ಅಂಕಗಳನ್ನು ಗಳಿಸಿದ್ದರು. 620 ಅಂಕಗಳನ್ನು 68 ವಿದ್ಯಾರ್ಥಿಗಳು ಗಳಿಸಿದ್ದರು.
ಅನುದಾನಿತ ಶಾಲೆಗಳ ಪೈಕಿ ಶೇಕಡ.70.60 ಫಲಿತಾಂಶ, ಅನುದಾನರಹಿತ ಶಾಲೆಗಳ ಪೈಕಿ ಶೇಕಡ.82.31 ಫಲಿತಾಂಶ ಬಂದಿತ್ತು.

2020ನೇ ಸಾಲಿನಲ್ಲಿ ಒಟ್ಟಾರೆ ಶೇಕಡ.71.79 ಫಲಿತಾಂಶ ಬಂದಿತ್ತು. 5,82,316 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಎಸ್‌ಎಸ್‌ಎಲ್‌ಸಿ ಜಿಲ್ಲಾವಾರು ಫಲಿತಾಂಶದಲ್ಲಿ ಒಟ್ಟು 10 ಜಿಲ್ಲೆಗಳು ‘ಎ’ ಗ್ರೇಡ್‌ ಫಲಿತಾಂಶವನ್ನು ಪಡೆದಿದ್ದವು. ಒಟ್ಟು 20 ಜಿಲ್ಲೆಗಳು ‘ಬಿ’ ಗ್ರೇಡ್‌ ಫಲಿತಾಂಶ ಪಡೆದಿದ್ದವು. ‘ಸಿ’ ಗ್ರೇಡ್‌ ಫಲಿತಾಂಶವನ್ನು 4 ಜಿಲ್ಲೆಗಳು ಪಡೆದಿದ್ದವು. ಚಿಕ್ಕಮಗಳೂರು, ಬೆಂಗಳೂರು ಗ್ರಾಮೀಣ, ಮಧುಗಿರಿ, ಮಂಡ್ಯ ಸೇರಿದಂತೆ ಒಟ್ಟು 10 ಜಿಲ್ಲೆಗಳಿಗೆ ‘ಎ’ ಗ್ರೇಡ್‌ ರಿಸಲ್ಟ್‌ ಪಡೆದಿದ್ದವು.

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2019
2019 ರಲ್ಲಿ ಏಪ್ರಿಲ್ 30 ರಂದು ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿತ್ತು. ಒಟ್ಟು 8,25,468 ವಿದ್ಯಾರ್ಥಿಗಳು ಬೋರ್ಡ್‌ ಪರೀಕ್ಷೆ ಬರೆದಿದ್ದರು. ಒಟ್ಟು ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇಕಡ.73.7 ರಷ್ಟು ವಿದ್ಯಾರ್ಥಿಗಳು ಪಾಸ್‌ ಆಗಿದ್ದರು. ಶೇಕಡ.79.59 ರಷ್ಟು ಹೆಣ್ಣು ಮಕ್ಕಳು, ಶೇಕಡ.68.46 ರಷ್ಟು ಗಂಡು ಮಕ್ಕಳು ಪಾಸ್ ಆಗಿದ್ದರು. ಫಲಿತಾಂಶದಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದರು.