ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಇಂದು 2021-22ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಬಿಡುಗಡೆ ಮಾಡಿದೆ. ಈ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ https://www.karresults.nic.in/ ಗೆ ಭೇಟಿ ನೀಡಿ ಫಲಿತಾಂಶ ಚೆಕ್ ಮಾಡಬಹುದು. ಈ ಪರೀಕ್ಷೆಯಲ್ಲಿ ಒಟ್ಟು 7,30, 881 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಇನ್ನು ಪರೀಕ್ಷೆಗೆ ಹಾಜರಾದವರಲ್ಲಿ ಒಟ್ಟು 1,22,555 ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ. ಈ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ನಡೆಸಲು ಇದೀಗ ಪರೀಕ್ಷಾ ಮಂಡಳಿ ವೇಳಾಪಟ್ಟಿ ಬಿಡುಗಡೆ ಮಾಡಿದೆ. 2021-22ನೇ ಸಾಲಿನಲ್ಲಿ ಫೇಲ್ ಆದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯನ್ನು ಜೂನ್ 27, 2022 ರಂದು ನಡೆಸಲಿದ್ದು, ಸದರಿ ಪರೀಕ್ಷೆ ವೇಳಾಪಟ್ಟಿ, ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು, ಎಸ್ಎಸ್‌ಎಲ್‌ಸಿ ಪೂರಕ ಪರೀಕ್ಷೆ ಶುಲ್ಕ ಎಷ್ಟು ಎಂದು ಈ ಕೆಳಗಿನಂತೆ ತಿಳಿಸಲಾಗಿದೆ.
ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಪಡೆಯಲು ಫೇಲಾದ ವಿದ್ಯಾರ್ಥಿಯ ಹೆಸರು, ತಂದೆಯ -ತಾಯಿಯ ಹೆಸರು, ಪರೀಕ್ಷೆ ಮಾಧ್ಯಮ, ದೈಹಿಕ ಸ್ಥಿತಿ, ಜನ್ಮ ದಿನಾಂಕ ಮಾಹಿತಿಗಳು ಬೇಕಾಗುತ್ತದೆ.
ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ತೆಗೆದುಕೊಳ್ಳುತ್ತಿರುವ ವಿದ್ಯಾರ್ಥಿಗಳ ಭಾಷಾ ಸಂಯೋಜನೆ ಹಾಗೂ ಕೋರ್ ವಿಷಯಗಳ ಬದಲಾವಣೆ ಮಾಡಲು ಅವಕಾಶ ಇಲ್ಲ. 2011 ರಿಂದ 2019ರ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ವರೆಗೆ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ 6 ಪ್ರಯತ್ನಗಳು ಮುಕ್ತಾಯಗೊಂಡಿರುವುದರಿಂದ ಜೂನ್ 2022 ರ ಪೂರಕ ಪರೀಕ್ಷೆಯನ್ನು ಈ ಅಭ್ಯರ್ಥಿಗಳು ತೆಗೆದುಕೊಳ್ಳಲು ಅವಕಾಶ ಇಲ್ಲ. ಈ ಅಭ್ಯರ್ಥಿಗಳು ಮಾರ್ಚ್ /ಏಪ್ರಿಲ್ 2023 ರ ಪರೀಕ್ಷೆಗೆ ಹೊಸದಾಗಿ ಖಾಸಗಿ ವಿದ್ಯಾರ್ಥಿಯಾಗಿ ನೋಂದಾಯಿಸಿಕೊಂಡು ಎಲ್ಲಾ 06 ವಿಷಯಗಳ ಪರೀಕ್ಷೆಗೆ ಹಾಜರಾಗಬೇಕಿರುತ್ತದೆ.
ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ತೆಗೆದುಕೊಳ್ಳಲು ಫೇಲ್ ಆದ ವಿದ್ಯಾರ್ಥಿಗಳು ಪಾವತಿಸಬೇಕಾದ ಶುಲ್ಕ
1 ವಿಷಯಕ್ಕೆ ರೂ.370.
2 ವಿಷಯಕ್ಕೆ ರೂ.461.
3 ವಿಷಯಕ್ಕೆ ರೂ.620.
ಪೂರಕ ಪರೀಕ್ಷೆ ಅರ್ಜಿ ಪ್ರಕ್ರಿಯೆ, ಪರೀಕ್ಷೆ ದಿನಾಂಕಗಳು
ಪೂರಕ ಪರೀಕ್ಷೆಗೆ ಅಪ್ಲಿಕೇಶನ್ ಸಲ್ಲಿಸಲು ಆರಂಭ ದಿನಾಂಕ : 20-05-2022
ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 30-05-2022
ಶುಲ್ಕ ಪಾವತಿಗೆ ಕೊನೆ ದಿನಾಂಕ: 03-06-2022
ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಆರಂಭ ದಿನಾಂಕ: ಜೂನ್ 27, 2022
ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಜೂನ್ 2022 ವೇಳಾಪಟ್ಟಿಯನ್ನು ವೆಬ್ ವಿಳಾಸ -https://sslc.karnataka.gov.in/ ಅಥವಾ https://sslc.karnataka.gov.in/new-page/SSLC%20Circular/kn ಗೆ ಭೇಟಿ ನೀಡಲು ಸೂಚನೆ ನೀಡಲಾಗಿದೆ.