Home » ಹಿಂಗಾರು ಬೆಳೆ ಸಮೀಕ್ಷೆಗೆ ಹೆಚ್ಚು ಗಮನಹರಿಸಲು ಸೂಚನೆ

ಹಿಂಗಾರು ಬೆಳೆ ಸಮೀಕ್ಷೆಗೆ ಹೆಚ್ಚು ಗಮನಹರಿಸಲು ಸೂಚನೆ

by manager manager

ಹಾಸನ: ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ರಾಬಿ ಬೆಳೆ ಸಮೀಕ್ಷೆಯನ್ನು ತುರ್ತಾಗಿ ಪೂರ್ಣಗೊಳಿಸಲು ಹಾಗೂ ಹೆಚ್ಚಿನ ಗಮನಹರಿಸಿ ಬೆಳೆ ಸಮೀಕ್ಷೆ ಮಾಡುವಂತೆ ಜಿಲ್ಲಾಧಿಕಾರಿ ಆರ್ ಗಿರೀಶ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಹಿಂಗಾರು ಬೆಳೆ ಸಮೀಕ್ಷೆ ಕುರಿತು ಎಲ್ಲಾ ತಾಲ್ಲೂಕು ತಹಸೀಲ್ದಾರ್ ಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು ವೇಗವಾಗಿ ಹಿಂಗಾರು ಬೆಳೆ ಸಮೀಕ್ಷೆ ಸರ್ವೆ ಕಾರ್ಯ ನಡೆಯಬೇಕು. ಸೂಪರ್‌ವೈಸರ್ ಹಾಗೂ ನೋಡಲ್ ಅಧಿಕಾರಿಗಳು ಬೆಳೆಗಳೊಂದಿಗೆ ಬೆಳೆದಿರುವ ಮಿಶ್ರ ಬೆಳೆಯನ್ನು ನಮೂದಿಸುವಂತೆ ಪಿಆರ್ ಗಳಿಗೆ ತಿಳಿಸಬೇಕು ತಹಸೀಲ್ದಾರ್‍ಗಳು ಬೆಳೆ ಸಮೀಕ್ಷೆಗೆ ಹೆಚ್ಚಿನ ಗಮನ ಹರಿಸುವಂತೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಈಗಾಗಲೇ ಆಲೂರು ತಾಲ್ಲೂಕಿನಲ್ಲಿ 1395 ಎಕರೆ, ಅರಕಲಗೂಡು ತಾಲ್ಲೂಕಿನಲ್ಲಿ 3438 ಎಕರೆ, ಅರಸೀಕೆರೆ ತಾಲ್ಲೂಕಿನಲ್ಲಿ 15.035 ಎಕರೆ, ಬೇಲೂರು ತಾಲ್ಲೂಕಿನಲ್ಲಿ 14958 ಎಕರೆ, ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ 6813ಎಕರೆ, ಹಾಸನ ತಾಲ್ಲೂಕಿನಲ್ಲಿ 8648 ಎಕರೆ, ಹೊಳೆನರಸೀಪುರ ತಾಲ್ಲೂಕಿನಲ್ಲಿ 4822 ಎಕರೆ ಸೇರಿದಂತೆ ಒಟ್ಟು 55109 ಎಕರೆ ಸರ್ವೆ ಕಾರ್ಯ ನಡೆದಿದೆ .ಕೆಲವು ತಾಲ್ಲೂಕುಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ಸರ್ವೆ ಕಾರ್ಯಕ್ಕೆ ಪ್ರಾಮುಖ್ಯತೆಯನ್ನು ವಹಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

You may also like