ಸ್ವತಂತ್ರ ಪೂರ್ವ ಮತ್ತು ಸ್ವತಂತ್ರ ನಂತರದಲ್ಲಿ ಭಾರತದಲ್ಲಿ ಬೆಳಕಿಗೆ ಬಂದ ಹಲವು ಹೆಸರಾಂತ ದಿನ ಪತ್ರಿಕೆಗಳನ್ನು ಆರಂಭಿಸಿದವರು ಮತ್ತು ಆ ಪತ್ರಿಕೆಗಳ ಪ್ರಸ್ತುತ ಸಂಪಾದಕರ ಹೆಸರನ್ನು ನೀಡಲಾಗಿದೆ.
ಸಾಮಾನ್ಯವಾಗಿ ಭಾರತದ ಹಲವು ಹೆಸರಾಂತ ಪತ್ರಿಕೆಗಳು ಮತ್ತು ಪ್ರಕಟಿಸಿದವರು ಯಾರು? ಯಾವಾಗ ಪ್ರಕಟಣೆ ಮಾಡಲಾಯಿತು? ಪ್ರಸ್ತುತ ಸಂಪಾದಕರು ಯಾರು ಎಂಬ ಪ್ರಶ್ನೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾಗುತ್ತಿರುತ್ತದೆ. ಆದ್ದರಿಂದ ಈ ಮಾಹಿತಿ ಸ್ಪರ್ಧಾಮಿತ್ರರಿಗೆ ಅನುಕೂಲವಾಗಲೆಂದು ನೀಡಲಾಗಿದೆ.
ದಿನ ಪತ್ರಿಕೆಗಳು ಮತ್ತು ಸ್ಥಾಪಕರು(Indian News Papers and Founders list)
ಜೇಮ್ಸ್ ಅಗಸ್ಟಸ್ ಹಿಕಿ – ಬೆಂಗಾಲ್ ಗೆಜೆಟ್
ಅನಿಬೆಸೆಂಟ್ – ನ್ಯೂ ಇಂಡಿಯಾ (ದಿನಪತ್ರಿಕೆ), ಕಾಮನ್‌ವೀಲ್
ಬಿಪಿನ್ ಚಂದ್ರ ಪಾಲ್ – ನ್ಯೂ ಇಂಡಿಯಾ (ವಾರಪತ್ರಿಕೆ)
ಮಹಾತ್ಮ ಗಾಂಧೀಜಿ – ನವಜೀವನ್, ಇಂಡಿಯನ್ ಒಪಿನಿಯನ್, ಯಂಗ್ ಇಂಡಿಯಾ, ಹರಿಜನ್
ಡಾ. ಬಿ.ಆರ್.ಅಂಬೇಡ್ಕರ್ – ಮೂಕನಾಯಕ, ಬಹಿಷ್ಕೃತ್ ಭಾರತ್
ಸ್ವಾಮಿ ವಿವೇಕನಂದ – ಪ್ರಬುದ್ಧ ಭಾರತ, ಉದ್ಬೋಧನ್
ಬಾಲಗಂಗಾಧರ್ ತಿಲಕ್ – ಕೇಸರಿ, ಮರಾಠ
ದಾದಾಬಾಯಿ ನವರೋಜಿ – ವಾಯ್ಸ್ ಆಫ್ ಇಂಡಿಯಾ
ಮೊತಿಲಾಲ್ ನೆಹರು – ದಿ ಇಂಡಿಪೆಂಡೆಂಟ್(ಇಂಡಿಯಾ)
ಬಾಲಶಾಸ್ತ್ರೀ ಜಂಬೇಕರ್ – ದರ್ಪಣ್
ಬರ್ತೆಂಡು ಹರಿಶ್ಚಂದ್ರ – ಕವಿ ವಚನ್ ಸುಧಾ
ದೇವೇಂದ್ರ ನಾಥ್ ಟ್ಯಾಗೋರ್ – ಇಂಡಿಯನ್ ಮಿರರ್
ದಯಾಲ್ ಸಿಂಗ್ ಮಜಿಥಿಯಾ – ದಿ ಟ್ರಿಬ್ಯೂನ್
ಶ್ರೀ ಫಿರೋಜ್‌ಶಾ ಮೆಹ್ತಾ – ಬಾಂಬೆ ಕ್ರಾನಿಕಲ್
ಜಿ ಸುಬ್ರಹ್ಮಣ್ಯ ಅಯ್ಯರ್ – ದಿ ಹಿಂದು, ಸ್ವದೇಶಮಿತ್ರನ್
ರಾಜಾರಾಂ ಮೋಹನ್‌ರಾಯ್ – ಸಂಬಂಧ್ ಕೌಮುದಿ, ಮೀರತ್ ಉಲ್-ಅಕ್ಬರ್
ರಾಬರ್ಟ್ ನೈಟ್ – ದಿ ಸ್ಟೇಟ್ಸ್‌ಮನ್
ರಾಬರ್ಟ್ ನೈಟ್ & ಥಾಮಸ್ ಬೆನ್ನೆಟ್ – ಬಾಂಬೆ ಟೈಮ್ಸ್(ದಿ ಟೈಮ್ಸ್ ಆಫ್ ಇಂಡಿಯಾ)
ಕೃಷ್ಣವರ್ಮ – ದಿ ಇಂಡಿಯನ್ ಸೋಶಿಯೋಲಾಜಿಸ್ಟ್
ಸೈಯದ್ ಅಹ್ಮೆದ್ ಖಾನ್ – ತೆಹ್ಜೀಬ್-ಉಲ್-ಅಖ್ಲಾಕ್
ತಾರಕ್ ನಾಥ್ ದಾಸ್ – ಫ್ರೀ ಹಿಂದೂಸ್ತಾನ್
ವಿ.ಎನ್ ಮಂಡ್ಲಿಕ್ – ನೇಟಿವ್ ಒಪಿನಿಯನ್
ಗೋಪಾಲ್ ಗಣೇಶ್ ಅಗರ್‌ಕರ್ – ಸುಧಾರಕ್
ಗಣೇಶ್ ಶಂಕರ್ ವಿದ್ಯಾರ್ಥಿ – ಪ್ರತಾಪ್
ಗುಲಾಬ್ ಹುಸೇನ್ ಹಿದಾಯತುಲ್ಲಾ – ಇನ್‌ಕ್ವಿಲಾಬ್
ಸುಂದರ್ ಸಿಂಗ್ ಲ್ಯಾಲ್‌ಪುರಿ – ಹಿಂದೂಸ್ತಾನ್ ಟೈಮ್ಸ್
ಲಾಲ ಲಜಪತ್ ರಾಯ್ – ಆರ್ಯ ಗೆಜೆಟ್
ಮದನ್ ಮೋಹನ್ ಮಾಳವಿಯ – ದಿ ಲೀಡರ್, ಹಿಂದೂಸ್ತಾನ್
ಮುಕುಂದರಾವ್ ಪಾಟಿಲ್ – ದೀನ್ ಮಿತ್ರ
ಭಾಸ್ಕರ್ ರಾವ್ ಜಾಧವ್ – ದೀನ್ ಬಂಧು
ಮುಜಾಫರ್ ಅಹ್ಮೆದ್ – ನವಯುಗ್
ಪೆರಿಯಾರ್ ಇ.ವಿ.ರಾಮಸ್ವಾಮಿ – ಕುಡಿ ಅರಸು
ಮೌಲಾನಾ ಮೊಹಮ್ಮದ್ ಆಲಿ – ದಿ ಕಾಂಮ್ರೇಡ್
ಮೀರಜ್‌ಕರ್, ಜೋಗ್ಲೆಕರ್, ಘಾಟೆ – ಕ್ರಾಂತಿ
ಗೋಪಾಲ್ ಹರಿ ದೇಶ್‌ಮುಖ್ – ಇಂದುಪ್ರಕಾಶ್
ಕೃಷ್ಣಶಾಸ್ತ್ರಿ ಚಿಪ್ಲುಂಕರ್ – ವಿಚಾರ್ ಲಹರಿ
ದ್ವಾರಕನಾಥ್ ವಿದ್ಯಾಭೂಷಣ್ – ಸೋಂಪ್ರಕಾಶ್
ಶ್ರೀ ಅರಬಿಂದೋ – ಬಂದೇ ಮಾತರಂ
ವಿರೇಂದ್ರನಾಥ್ ಚಟ್ಟೋಪಾಧ್ಯಾಯ – ತಳ್ವಾರ್
ಬಿಬಿ ಉಪಧ್ಯಾಯ – ಸಂಧ್ಯಾ
ಶಿಶಿರ್ ಕುಮಾರ್ ಘೋಶ್ & ಮೋತಿ ಲಾಲ್ ಘೋಶ್ – ಅಮೃತ ಬಜಾರ್ ಪತ್ರಿಕಾ
ಅಬ್ದುಲ್ ಕಲಾಮ್ ಅಜಾದ್ – ಆಲ್ ಹಿಲಾಲ್ (ದಿನಪತ್ರಿಕೆ), ಆಲ್ ಬಲಾಘ್ (ವಾರಪತ್ರಿಕೆ)
ದಾದಾಬಾಯಿ ನವರೋಜಿ ಮತ್ತು ಕರ್ದೇಶ್ಜಿ ಕಾಮಾ – ರಾಸ್ತ್ ಗೋಫ್ಟರ್
ಭೂಪೇಂದ್ರ ದತ್ತ ಮತ್ತು ಬರಿಂದ್ರ ಕುಮಾರ್ ಘೋಶ್ – ಜುಗಾಂತರ್
ಗಿರೀಶ್ ಚಂದ್ರ ಘೋಶ್ ಮತ್ತ ಹರಿಶ್ ಚಂದ್ರ ಮುಖರ್ಜಿ – ಹಿಂದೂ ಪೆಟ್ರಿಯಾಟ್
ದಿನಪತ್ರಿಕೆಗಳು ಮತ್ತು ಪ್ರಸ್ತುತ ಸಂಪಾದಕರು (Indian News Papers and their current Editors list)
ದಿ ಹಿಂದು – ಮುಕುಂದ್ ಪದ್ಮನಾಭನ್ (2019 ಮಾರ್ಚ್ 1 ರಿಂದ ಸುರೇಶ್ ನಂಭತ್)
ದಿ ಟೈಮ್ಸ್ ಆಫ್ ಇಂಡಿಯಾ – ಜೈದೀಪ್ ಬೋಸ್
ಇಂಡಿಯನ್ ಎಕ್ಸ್‌ಪ್ರೆಸ್ – ರಾಜ್ ಕಮಲ್ ಝಾ
ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್- ಜಿ.ಎಸ್.ವಾಸು
ಹಿಂದುಸ್ತಾನ್ ಟೈಮ್ಸ್ – ಸುಕುಮಾರ್ ರಂಗನಾಥನ್
ಇಂಡಿಯಾ ಟುಡೇ – ಅರುಣ್ ಪೂರಿ
ಔಟ್‌ಲುಕ್ – ರುಬೆನ್ ಬ್ಯಾನರ್ಜಿ
ತುಘ್‌ಲಕ್ – ಸ್ವಾಮಿನಾಥನ್ ಗುರುಮೂರ್ತಿ
ಹಿಂದುಸ್ತಾನ್ – ಶಶಿ ಶೇಖರ್
ದೈನಿಕ್ ಜಾಗರಣ್ – ಸಂಜಯ್ ಗುಪ್ತಾ
ದೈನಿಕ್ ಭಾಸ್ಕರ್ – ಕಲ್ಪೇಶ್ ಯಾಗ್ನಿಕ್
ದಿ ಟ್ರಿಬ್ಯೂನ್ – ಹರಿಶ್ ಖಾರೆ (Harish Khare)
ದಿ ಎಕನಾಮಿಕ್ ಟೈಮ್ಸ್ -ಬೋಧಿಸತ್ವ ಗಂಗೂಲಿ
ಈನಾಡು – ರಾಮೋಜಿ ರಾವ್
ಬ್ಯುಸಿನೆಸ್ ಸ್ಟ್ಯಾಂಡರ್ಡ್ – ಸ್ಯಾಮಲ್ ಮಜುಂದರ್
ದಿ ಫೈನಾನ್ಸಿಯಲ್ ಎಕ್ಸ್‌ಪ್ರೆಸ್ – ಸುನಿಲ್ ಜೈನ್
ಬ್ಯುಸಿನೆಸ್ ಲೈನ್ – ರಾಘವನ್ ಶ್ರೀನಿವಾಸನ್
Indian Daily News Papers founders list and Their current Editors list are here. Thei information usefull for competitive exam seekers.