Home » 75ನೇ ಸ್ವಾತಂತ್ರ್ಯ ದಿನಾಚರಣೆ ಭಾಷಣಕ್ಕೆ ಸಲಹೆಗಳು

75ನೇ ಸ್ವಾತಂತ್ರ್ಯ ದಿನಾಚರಣೆ ಭಾಷಣಕ್ಕೆ ಸಲಹೆಗಳು

by manager manager

Independence Day Speech:

75ನೇ ಸ್ವಾತಂತ್ರ್ಯೋತ್ಸವ ಭಾಷಣ
ಎಲ್ಲ ಗೌರವಾನ್ವಿತ ಶಿಕ್ಷಕರು, ಆತ್ಮೀಯ ಗೆಳೆಯ – ಗೆಳತಿಯರಿಗೆ ಶುಭೋದಯ. ನಾವು ಇಂದು 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ.

ಭಾರತದ ಸ್ವಾತಂತ್ರ್ಯ ದಿನವು ಎಲ್ಲ ಭಾರತೀಯ ನಾಗರೀಕರಿಗೆ ಅತ್ಯಂತ ಅಮೂಲ್ಯ ದಿನವಾಗಿದೆ. ಇದನ್ನು ಇತಿಹಾಸದಲ್ಲಿ ಶಾಶ್ವತವಾಗಿ ಉಲ್ಲೇಖಿಸಲಾಗಿದೆ. ಭಾರತದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ಹಲವು ವರ್ಷಗಳ ಕಠಿಣ ಹೋರಾಟದ ನಂತರ ನಮಗೆ ಬ್ರಿಟಿಷ್ ಆಡಳಿತದಿಂದ ಸ್ವಾತಂತ್ರ್ಯ ದೊರೆತ ದಿನ ಅದು.

ಭಾರತದ ಸ್ವಾತಂತ್ರ್ಯದ ಮೊದಲ ದಿನವನ್ನು ನೆನಪಿಟ್ಟುಕೊಳ್ಳಲು ಹಾಗೂ ಭಾರತಕ್ಕೆ ಸ್ವಾತಂತ್ರ್ಯ ಪಡೆಯುವಲ್ಲಿ ತಮ್ಮ ಪ್ರಾಣ ತ್ಯಾಗ ಮಾಡಿದ ಮಹಾನ್ ನಾಯಕರ ಎಲ್ಲ ತ್ಯಾಗಗಳನ್ನು ನೆನಪಿಸಿಕೊಳ್ಳಲು ಆಗಸ್ಟ್‌ 15 ರಂದು ಪ್ರತಿ ವರ್ಷ ಸ್ವಾತಂತ್ರ್ಯ ದಿನ ಆಚರಿಸುತ್ತೇವೆ. 1947 ರ ಆಗಸ್ಟ್‌ 15 ರಂದು ಬ್ರಿಟಿಷ್ ಆಡಳಿತದಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಅನಂತರ ಭಾರತೀಯರಾದ ನಾವೆಲ್ಲರೂ ನಮ್ಮ ಮೂಲಭೂತ ಹಕ್ಕುಗಳನ್ನು ಪಡೆದುಕೊಂಡಿದ್ದೇವೆ. ಇದಕ್ಕೆ ನಾವು ಹೆಮ್ಮೆ ಪಡಬೇಕು. ನಮ್ಮ ಈ ಅದೃಷ್ಟಕ್ಕೆ ಕಾರಣರಾದ ಎಲ್ಲ ಸ್ವಾತಂತ್ರ್ಯ ಹೋರಾಟಗಾರರನ್ನು ಈ ಸುಸಂದರ್ಭದಲ್ಲಿ ನೆನಪಿಸಿಕೊಂಡು ಅವರಿಗೆ ನಮಿಸಬೇಕು.

ಭಾರತದ ಸ್ವಾತಂತ್ರ್ಯಕ್ಕೆ 1857 ರಿಂದ 1947 ರವರೆಗೆ ಹಲವು ದಶಕಗಳ ಕಾಲ ನಮ್ಮ ಪೂರ್ವಜ್ಜರು ಹೋರಾಡಿರುವುದನ್ನು ಈ ಸಂದರ್ಭದಲ್ಲಿ ನಾವು ನೆನಪಿಸಿಕೊಳ್ಳಲೇಬೇಕು. ಅವರುಗಳಲ್ಲಿ ಮಹಾತ್ಮ ಗಾಂಧಿ, ಮಂಗಲಪಾಂಡೆ, ಭಗತ್‌ಸಿಂಗ್, ಸುಭಾಸ್ ಚಂದ್ರ ಬೋಸ್, ಚಂದ್ರ ಶೇಖರ್ ಆಜಾದ್ ಅವರ ತ್ಯಾಗವನ್ನು ನಾವು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ.

ಸ್ವಾತಂತ್ರ್ಯ ಎಂದರೆ ಪ್ರತಿಯೊಬ್ಬ ವ್ಯಕ್ತಿಗೆ ಈ ಭಾರತದಲ್ಲಿ ಎಲ್ಲ ರೀತಿಯ ಮೂಲಭೂತ ಹಕ್ಕು ಇದೆ. ಎಲ್ಲ ರೀತಿಯ ಸ್ವಾತಂತ್ರ್ಯ ಇದೆ. ಆದರೆ ಒಬ್ಬ ವ್ಯಕ್ತಿಯು ತನ್ನ ಸ್ವಾತಂತ್ರ್ಯ ಹಕ್ಕಿನಿಂದ ಮತ್ತೊಬ್ಬರ ಸ್ವಾತಂತ್ರ್ಯಕ್ಕೆ ಅಡ್ಡಿ ಆಗುವ ಯಾವುದೇ ಕೆಲಸವನ್ನು ಮಾಡಬಾರದು ಎಂಬುದನ್ನು ಸದಾ ನೆನಪಿನಲ್ಲಿ ಇಟ್ಟುಕೊಂಡಿರಬೇಕು. ಈ ಮಾತನ್ನು ಪೋಷಕರು, ಶಿಕ್ಷರು ಎಲ್ಲ ಮಕ್ಕಳಿಗೆ ಹೇಳಿಕೊಟ್ಟು, ಅರ್ಥ ಮಾಡಿಸಬೇಕು. ಹೆಚ್ಚಿನ ನೈತಿಕ ಶಿಕ್ಷಣವನ್ನು ನೀಡಲೇಬೇಕು.

ಇದಿಷ್ಟು ಹೇಳುತ್ತ, ನನಗೆ ಇಷ್ಟು ಮಾತನಾಡಲು ಅವಕಾಶ ಕೊಟ್ಟ ನಿಮ್ಮೆಲ್ಲರಿಗೂ ನಾನು ಋಣಿ ಆಗಿರುತ್ತೇನೆ ಎಂದು ಹೇಳಿ ನನ್ನ ಮಾತನ್ನು ಮುಗಿಸುತ್ತೇನೆ. ಜೈ ಹಿಂದ್, ಜೈ ಭಾರತ್.

ನಮ್ಮ ದೇಶದ ರಾಷ್ಟ್ರ ಧ್ವಜದಲ್ಲಿರುವ 3 ಬಣ್ಣಗಳ ಅರ್ಥವೇನು?