Home » ಪಶ್ಚಿಮ ಕಮಾಂಡ್‌ನಲ್ಲಿ 600 ವಿವಿಧ ಹುದ್ದೆಗಳ ನೇಮಕಾತಿ

ಪಶ್ಚಿಮ ಕಮಾಂಡ್‌ನಲ್ಲಿ 600 ವಿವಿಧ ಹುದ್ದೆಗಳ ನೇಮಕಾತಿ

by manager manager
HQ western command recruitment 2019 notification

ಭಾರತೀಯ ಸೇನಾಪಡೆಯ 7 ಕಮಾಂಡ್‌ಗಳಲ್ಲಿ ಒಂದಾದ ಪಶ್ವಿಮ ಕಮಾಂಡ್‌ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಹುದ್ದೆಗಳ ವಿವರ ಈ ಕೆಳಗಿನಂತಿದೆ.

ಹುದ್ದೆಗಳ ಹೆಸರು ಮತ್ತು ಹುದ್ದೆಗಳ ಸಂಖ್ಯೆ

ಸಫಾಯಿವಾಲಾ :08

ಪೋರ್ಟರ್ : 541

ಮೇಟ್ : 51

ಶೈಕ್ಷಣಿಕ ಅರ್ಹತೆ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಮಾನ್ಯತೆ ಪಡೆದ ಶೈಕ್ಷಣಿಕ ಸಂಸ್ಥೆಗಳಲ್ಲಿ 10 ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆ ಪಡೆದಿರಬೇಕು.

ವಯೋಮಿತಿ

– ಕನಿಷ್ಠ 18 ವರ್ಷ, ಗರಿಷ್ಠ 40 ವರ್ಷ( ಮೀಸಲಾತಿ ನಿಯಮಗಳು ಅನ್ಷಯ ಸೇರಿದಂತೆ)

ನೇಮಕಾತಿ ವಿಧಾನ

– ಲಿಖಿತ ಪರೀಕ್ಷೆ ಹಾಗೂ ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಲಾಗುತ್ತದೆ.

– ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಶೈಕ್ಷಣಿಕ ಹಾಗೂ ಮೀಸಲಾತಿ ದಾಖಲೆಗಳೊಂದಿಗೆ ಸಂದರ್ಶನದಲ್ಲಿ ಪಾಲ್ಗೊಳ್ಳಬೇಕು.

ಸಂದರ್ಶನಕ್ಕೆ ಬೇಕಾದ ಅಗತ್ಯ ದಾಖಲೆಗಳು

– ಕಲರ್ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ

– ಗೆಜೆಟೆಡ್ ಅಧಿಕಾರಿಯಿಂದ ಪಡೆದ ನಡತೆ ಪ್ರಮಾಣ ಪತ್ರ

– ಜನನ ಮತ್ತು ಶೈಕ್ಷಣಿಕ ದಾಖಲೆಗಳ ಸ್ವ ದೃಢೀಕರಿಸಿದ 3 ಪ್ರತಿಗಳು

– ಚುನಾವಣೆ ಗುರುತಿನ ಚೀಟಿ

– ಪಡಿತರ ಚೀಟಿ ನಕಲಿ ಪ್ರತಿ

– ಆಧಾರ್ ಕಾರ್ಡ್ ಹಾಗೂ ಗ್ರಾಮ ಪಂಚಾಯಿತಿಯಿಂದ ಪಡೆದ ಪ್ರಮಾಣ ಪತ್ರಗಳು

– ತಮ್ಮ ಸ್ಥಳದ ಹತ್ತಿರದ ಪೊಲೀಸ್ ಸ್ಟೇಷನ್‌ನಿಂದ ಪಡೆದ ವೆರಿಫಿಕೇಷನ್ ಸರ್ಟಿಫಿಕೇಟ್‌ಗಳು

– ಮೆಡಿಕಲ್ ಸರ್ಟಿಫಿಕೇಟ್

ಸಂದರ್ಶನ ನಡೆಯುವ ವಿಳಾಸ

ಆರ್ಮಿ ಕ್ಯಾಂಪ್, ಪೋರ್ಲ್‌ ವಿಲೇಜ್, ಕಿನ್ನರ್ ಜಿಲ್ಲೆ, ಹಿಮಾಚಲ ಪ್ರದೇಶ

ಸಂದರ್ಶನ ನಡೆಯುವ ದಿನಾಂಕ: ಮೇ 06 ರಿಂದ ಮೇ 10

ಸಂದರ್ಶನ ಸಮಯ : ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆ ವರೆಗೆ

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 01786-26173215, 26175473, 26100487, 26196220

ಪಶ್ಚಿಮ ಕಮಾಂಡ್‌ನಲ್ಲಿ 600 ವಿವಿಧ ಹುದ್ದೆಗಳ ನೇಮಕಾತಿ ನೋಟಿಫಿಕೇಶನ್ ಗಾಗಿ – ಕ್ಲಿಕ್ ಮಾಡಿ