Home » ನಾವು ವೀಡಿಯೊಗಳನ್ನು ನೋಡುವ ಮೂಲಕ ಹಣವನ್ನು ಗಳಿಸಬಹುದೇ?

ನಾವು ವೀಡಿಯೊಗಳನ್ನು ನೋಡುವ ಮೂಲಕ ಹಣವನ್ನು ಗಳಿಸಬಹುದೇ?

by manager manager

ಇದು ಆನ್ಲೈನ್ ಯುಗ. 4G, 5G ಗಳ ಕಾರುಬಾರು ಹೆಚ್ಚಾಗಿದೆ. ತಿಂಗಳಿಗೆ 1 GB ಡೇಟಾ ಇದ್ದ ಕಾಲ ಮರೆಯಾಗಿ ದಿನಕ್ಕೆ 2 GB ಡೇಟಾ ಬಳಸೋ ದಿನಗಳಿವು. ಮೊದಲಿಗೆ ಸಾವಿಲ್ಲದ ಮನೆಯಿಲ್ಲ ಎನ್ನುತ್ತಿದ್ದ ಕಾಲ ಬದಲಾಗಿ ಈಗ ಮೊಬೈಲ್ ಮಟ್ಟದ ಮನುಷ್ಯರಿಲ್ಲ ಎಂಬಂತಾಗಿದೆ. ಸದ್ಯ ಇಂಟರ್ನೆಟ್ ಬಳಕೆ ಏರುತ್ತಿರುವ ಸಮಯದಲ್ಲಿ ಅದೇ ಇಂಟರ್ನೆಟ್ ಮತ್ತು ಮೊಬೈಲ್ ನಿಂದ ಹಣ ಮಾಡೋ ಒಂದು ಪ್ಲಾನ್ ನಿಮಗೆ ಬೇಕಾ?. ದಿನ ಪೂರ್ತಿ ರೀಲ್ಸ್ ವೀಡಿಯೋ ನೋಡೊ ಬದಲಿ ಈ ಕೆಲವು ವೆಬ್ ಸೈಟ್ ಮತ್ತು ಆ್ಯಪ್ ಗಳಲ್ಲಿ ನಿಮ್ಮ ಅಮೂಲ್ಯವಾದ ಸಮಯ ಹಾಗೂ ಇಂಟರ್ನೆಟ್ ಖರ್ಚು ಮಾಡಿದರೆ ನೀವು ಫ್ರೀ ಟೈಮ್ ನಲ್ಲಿ ಒಂದಿಷ್ಟು ಹಣ ಮಾಡಬಹುದು.

ಹೌದು ಸ್ನೇಹಿತರೆ ಕೆಲವು ಕಂಪನಿ ಮತ್ತು ಸಂಸ್ಥೆಗಳು , ತಾವು ಉತ್ಪಾದಿಸಿದ ಉತ್ಪನ್ನ ಮತ್ತು ಸೇವೆಗಳ ಪ್ರಚಾರಕ್ಕಾಗಿ ಜಾಹೀರಾತು ವಿಡಿಯೋಗಳನ್ನು ತಮ್ಮ ವೆಬ್ ಸೈಟ್ ಮತ್ತು ಆ್ಯಪ್ ಗಳಲ್ಲಿ ಅಪ್ಲೋಡ್ ಮಾಡುತ್ತವೆ. ಅವುಗಳನ್ನ ವೀಕ್ಷಿಸುವ ಮೂಲಕ ನೀವು ಹಣ ಗಳಿಸಬಹುದು. ಕಂಪನಿಗಳು ತಮ್ಮ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿಸುವ ನಿಟ್ಟಿನಲ್ಲಿ, ಬಳಕೆದಾರರನ್ನು ತನ್ನತ್ತ ಸೆಳೆಯುವ ನಿಟ್ಟಿನಲ್ಲಿ ಈ ಪ್ರಯತ್ನ ಮಾಡುತ್ತಿದೆ. ಇಲ್ಲಿ ಬರಿಯ ಜಾಹೀರಾತುಗಳು ಅಲ್ಲದೆ ವಿಡಿಯೋ ಗೇಮ್, ಆನ್ಲೈನ್ ಶಾಪಿಂಗ್, ಚಿತ್ರರಂಗಕ್ಕೆ ಸಂಬಂಧಿಸಿದ ಗಾಸಿಪ್ ಮತ್ತು ಹೊಸ ಆ್ಯಪ್ ಗಳ ಮಾಹಿತಿ ಇರುವ ವೀಡಿಯೋಗಳನ್ನು ವೀಕ್ಷಿಸುವ ಮೂಲಕ ಹಣ ಮಾಡಬಹುದು. ನೀವು ವೀಕ್ಷಿಸಲು ಇಚ್ಛಿಸುವ ಪ್ರತಿ ವೆಬ್ ಸೈಟ್ ನೀಡುವ ಹಣ ಒಂದರಿಂದ ಇನ್ನೊಂದಕ್ಕೆ ಭಿನ್ನವಾಗಿರುತ್ತದೆ. ಮತ್ತು ವಿಡಿಯೋ ವೀಕ್ಷಿಸಲು ಸಿಗುವ ಹಣ ವಿಡಿಯೋ ಅವಧಿ ಮತ್ತು ಕಂಪನಿ ಟಾರ್ಗೆಟ್ ಮೇಲೆ ನಿರ್ಧರಿಸಲಾಗುತ್ತಿದೆ.

ವಿಡಿಯೊಗಳನ್ನು ವೀಕ್ಷಿಸಿದರೆ ಯಾವ ಅಪ್ಲಿಕೇಶನ್ ನಮಗೆ ಹಣವನ್ನು ನೀಡುತ್ತದೆ?
Swagbucks, InboxDollars, MyPoints, Nielsen Computer and Mobile PrizeRebel, iRazoo App ನಂತಹ ವಿವಿಧ ಅಪ್ಲಿಕೇಶನ್‌ಗಳು ನಿಮಗೆ ವಿಡಿಯೋಗಳನ್ನು ವೀಕ್ಷಿಸಲು ಮತ್ತು ಹಣವನ್ನು ಗಳಿಸಲು ಅನುವು ಮಾಡಿಕೊಡುತ್ತದೆ. ಈ ಎಲ್ಲಾ ಅಪ್ಲಿಕೇಶನ್‌ಗಳು ಅತ್ಯಂತ ಸುರಕ್ಷಿತ ಮತ್ತು ಬಳಸಲು ಸುಲಭವಾಗಿದೆ. ನೀವು ಬಿಡುವಿರುವಾಗ ಈ ಅಪ್ಲಿಕೇಶನ್‌ಗಳನ್ನು ಬಳಸಬಹುದು ಮತ್ತು ಆನ್‌ಲೈನ್‌ನಲ್ಲಿ ಸ್ವಲ್ಪ ಹೆಚ್ಚುವರಿ ಹಣವನ್ನು ಗಳಿಸಬಹುದು.

ವಿಡಿಯೋಗಳನ್ನು ಯಾವ ವೇದಿಕೆಗಳಲ್ಲಿ ನೋಡಬಹುದು ಮತ್ತು ಹೇಗೆ ಹಣ ಪಡೆಯಬಹುದು?
ನೀವು ವಿಡಿಯೋಗಳನ್ನು ವೀಕ್ಷಿಸಲು ಮತ್ತು ಹಣವನ್ನು ಗಳಿಸಲು ವಿವಿಧ ವೇದಿಕೆಗಳಿವೆ. Swagbucks ನೀವು ವೀಡಿಯೊಗಳನ್ನು ವೀಕ್ಷಿಸಲು ಮತ್ತು ಹಣ ಗಳಿಸಲು ಅನುಮತಿಸುವ ಅತ್ಯಂತ ಜನಪ್ರಿಯ ವೆಬ್‌ಸೈಟ್ ಆಗಿದೆ. MyPoints, PrizeRebel ಮತ್ತು InboxDollars ಗಳು ಆನ್‌ಲೈನ್‌ನಲ್ಲಿ ವಿಡಿಯೋಗಳನ್ನು ವೀಕ್ಷಿಸುವ ಮೂಲಕ ಹಣವನ್ನು ಗಳಿಸಲು ನಿಮಗೆ ಅನುಮತಿಸುವ ಕೆಲವು ಇತರ ರೀತಿಯ ವೇದಿಕೆಗಳಾಗಿವೆ. ಈ ಎಲ್ಲಾ ವೆಬ್‌ಸೈಟ್‌ಗಳು ಅತ್ಯಂತ ಜನಪ್ರಿಯವಾಗಿವೆ.

ಆನ್‌ಲೈನ್‌ನಲ್ಲಿ ವಿಡಿಯೋಗಳನ್ನು ನೋಡುವ ಮೂಲಕ ಯಾರಾದರೂ ಹಣವನ್ನು ಗಳಿಸಬಹುದು. ಅದಕ್ಕೆ ಬೇಕಾಗಿರುವುದು ಇಂಟರ್ನೆಟ್ ಸಂಪರ್ಕವನ್ನು ಹೊಂದಿರುವ ಸ್ಮಾರ್ಟ್‌ಫೋನ್ . ನಿಮ್ಮ ಮನೆಯ ಸೌಕರ್ಯಕ್ಕಾಗಿ ಸ್ವಲ್ಪ ಹೆಚ್ಚುವರಿ ಹಣವನ್ನು ಗಳಿಸಲು ಇದು ಉತ್ತಮ ಮಾರ್ಗವಾಗಿದೆ. ಆನ್‌ಲೈನ್‌ನಲ್ಲಿ ವಿಡಿಯೋಗಳನ್ನು ನೋಡುವ ಮೂಲಕ ಯಾರು ಬೇಕಾದರೂ ಕೂಡ ಸಾಕಷ್ಟು ಹಣವನ್ನು ಗಳಿಸಬಹುದು ಎನ್ನಲಾಗುತ್ತದೆ.

ಸೂಚನೆ
ಮೇಲೆ ತಿಳಿಸಿರುವ ಮಾಹಿತಿಗಳು ಸದರಿ ಅಪ್ಲಿಕೇಶನ್‌ಗಳಲ್ಲಿ ತಿಳಿಸಿರುವ ಮಾಹಿತಿಗಳಾಗಿವೆ. ಖಂಡಿತ ಅವು ಸುರಕ್ಷಿತವೇ ಎಂಬುದನ್ನು ಹಾಗೂ ಹಣ ಗಳಿಸಬಹುದೇ ಎಂದು ಈಗಾಗಲೇ ಬಳಸುತ್ತಿರುವವರು ನೀಡಿರುವ ವಿಮರ್ಶೆ, ಅಭಿಪ್ರಾಯಗಳನ್ನು ಇನ್ನೂ ಹಲವು ಮೂಲಗಳಿಂದ ತಿಳಿದು ಬಳಕೆ ಮಾಡಿದರೆ ಸೂಕ್ತ. ಅಲ್ಲದೇ ಮೊಬೈಲ್‌ನಲ್ಲಿ ಈ ಅಪ್ಲಿಕೇಶನ್‌ ಇನ್‌ಸ್ಟಾಲ್‌ ಮಾಡಬೇಕಾದರೆ ಜಾಗ್ರತೆ ವಹಿಸಬೇಕು. ಒಟಿಪಿ ನೀಡಬೇಕಾದರೆ ಮೊದಲು ಯೋಚಿಸಿ, ಕೂಲಂಕಷವಾಗಿ ಆಲೋಚಿಸಬೇಕು.