Home » ಪಾನ್‌ಕಾರ್ಡ್‌ನಲ್ಲಿನ ಹೆಸರು, ವಿಳಾಸ ಆನ್‌ಲೈನ್‌ನಲ್ಲೇ ತಿದ್ದುಪಡಿ ಹೇಗೆ?

ಪಾನ್‌ಕಾರ್ಡ್‌ನಲ್ಲಿನ ಹೆಸರು, ವಿಳಾಸ ಆನ್‌ಲೈನ್‌ನಲ್ಲೇ ತಿದ್ದುಪಡಿ ಹೇಗೆ?

by manager manager

PAN Card :

ನಾವು ವ್ಯವಹರಿಸುವ ಪ್ರತಿಯೊಂದು ಕ್ಷೇತ್ರಕ್ಕು ಪಾನ್‍ಕಾರ್ಡ್ ಬೇಕೆ ಬೇಕು. ಪ್ರತಿಯೊಬ್ಬರಿಗೂ ಒಂದು ಸೀಮಿತ ಖಾತೆಯ ಸಂಖ್ಯೆಯನ್ನು ಭಾರತೀಯ ಸರ್ಕಾರ ನೀಡುತ್ತದೆ. ಆ ಸಂಖ್ಯೆಯಲ್ಲಿ ನಿಮ್ಮ ಪ್ರತಿಯೊಂದು ವ್ಯವಹಾರವು ದಾಖಲಾಗುತ್ತದೆ. ಆ ರೀತಿ ಪಾನ್‍ಕಾರ್ಡ್ ಅನ್ನು ಪರ್ಮನೆಂಟ್ ಅಕೌಂಟ್ ನಂಬರ್(ಪಾನ್) ಅಥವಾ ಖಾಯಂ ಖಾತೆ ಸಂಖ್ಯೆ ಎಂದು ಕರೆಯಲಾಗುತ್ತದೆ. ಇದು ಆದಾಯ ತೆರಿಗೆ ರಿಟನ್ರ್ಸ್ ಸಲ್ಲಿಸಲು ತುಂಬ ಅಗತ್ಯ. ಆದ್ದರಿಂದ ಪಾನ್ ಕಾರ್ಡ್‌ನ ಎಲ್ಲಾ ವಿವರಗಳನ್ನು ಅಪ್ ಡೇಟ್ ಮಾಡಿ ಇತ್ತೀಚಿನ ದಿನಾಂಕಕ್ಕೆ ಸರಿಹೊಂದಿಸುವುದು ಒಂದು ಮುಖ್ಯ ಕರ್ತವ್ಯವಾಗಿದೆ.

ಪಾನ್ ಕಾರ್ಡ್ ಹಲವಾರು ಉಪಯೋಗಗಳನ್ನು ಹೊಂದಿದೆ. ಉದ್ಯಮದ ನೋಂದಾವಣೆ, ಹಣಕಾಸು ವಹಿವಾಟುಗಳು, ಬ್ಯಾಂಕ್ ಖಾತೆಯನ್ನು ತೆರೆಯಲು, ಫೋನ್/ಗ್ಯಾಸ್ ಸಂಪರ್ಕ ಪಡೆಯಲು, ಮ್ಯೂಚ್ಯುವಲ್ ಫಂಡ್‍ಗಳಲ್ಲಿ ಹೂಡಿಕೆ ಮಾಡಲು ಇತ್ಯಾದಿಗಳಿಗೂ ಪಾನ ಕಾರ್ಡ್‍ನ್ನು ಬಳಸಬಹುದು.

ನಾವು ಪಾನ್‍ಕಾರ್ಡ್ ಮಾಡಿಸಲು ಹೋದಾಗ ಅಲ್ಲಿ ಕೆಲವೊಮ್ಮೆ ನಿಗದಿತ ನಮೂನೆಗಳನ್ನು ತುಂಬುವುದೂ ಸವಾಲಿನ ಕೆಲಸವಾಗುತ್ತದೆ. ಹಾಗಾಗೀ ಪಾನ್ ಕಾರ್ಡ್ ಅರ್ಜಿಯಲ್ಲಿ ಹೆಸರು ಬರೆಯುವಾಗ ತಪ್ಪುಗಳೂ ಆಗಬಹುದು. ಇಂತಹ ತಪ್ಪುಗಳನ್ನು ನೀವು ನೇರವಾಗಿ ಆಫ್‌ಲೈನ್‌ ಮೂಲಕ ಕಛೇರಿಗಳಿಗೆ ಬೇಟಿ ನೀಡಿ ನಾನು ಸರಿಪಡಿಸುತ್ತೇನೆ ಎಂದಾದರೇ ಅದಕ್ಕೆ ತುಂಬ ಸಮಯ ಹಿಡಿಯುತ್ತದೆ. ಆದರೇ ನೀವು ಆನ್‌ಲೈನ್‌ನಲ್ಲಿ ಸುಲಭವಾಗಿ ಸರಿಪಡಿಸಿಕೊಳ್ಳಬಹುದು. ಅದು ಹೇಗೆ ಎಂಬ ಪ್ರಶ್ನೆ ಮೂಡುತ್ತಿದ್ದರೆ ಈ ಕೆಳಗಿನಂತೆ ಅನುಸರಿಸಿ ನಿಮ್ಮ ಹೆಸರು ವಿಳಾಸವನ್ನು ಸರಿಪಡಿಸಿಕೊಳ್ಳಬಹುದು.

– ಮೊದಲು ನೀವು TIN & NSDL, UTIITSL ಅಧಿಕೃತ ವೆಬ್ ತಾಣಕ್ಕೆ ಭೇಟಿ ನೀಡಿ. ಅದರಲ್ಲಿರುವ ‘ಅಪ್ಲಿಕೇಷನ್ ಟೈಪ್’ ಆಯ್ಕೆಯನ್ನು ಕ್ಲಿಕ್ ಮಾಡಿ ಡ್ರಾಪ್ ಡೌನ್ ಮೆನುವಿನಿಂದ ‘ಚೇಂಜಸ್ ಆರ್ ಕರೆಕ್ಷನ್ ಇನ್ ಎಕ್ಸಿಸ್ಟಿಂಗ್ ಪಾನ್ ಕಾರ್ಡ್(ಈಗಿರುವ ಪಾನ್ ಕಾರ್ಡ್‍ನಲ್ಲಿ ಬದಲಾವಣೆಗಳು ಅಥವಾ ತಿದ್ದುಪಡಿ)’ನ್ನು ಆಯ್ಕೆ ಮಾಡಿಕೊಳ್ಳಿ.

– ಇದಾದ ಬಳಿಕ ‘ಅಪ್ಲಿಕಂಟ್ ಇನ್ಫಾರ್ಮೇಷನ್(ಅರ್ಜಿದಾರರ ಮಾಹಿತಿ)’ವಿಭಾಗವನ್ನು ಆಯ್ದುಕೊಂಡು ಅದರಲ್ಲಿರುವ ಟೈಟಲ್, ಅಡ್ಡಹೆಸರು/ಕೊನೆಯ ಹೆಸರು, ಮೊದಲ ಹೆಸರು, ಮಧ್ಯದ ಹೆಸರು, ಜನ್ಮ ದಿನಾಂಕ, ಇ-ಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಸೇರಿದಂತೆ ಎಲ್ಲ ವಿವರಗಳನ್ನು ಸಲ್ಲಿಸಿ. ಇವುಗಳನ್ನು ಸರಿಯಾಗಿ ದಾಖಲಿಸಿದ ಬಳಿಕ ‘ವೆದರ್ ಸಿಟಿಜನ್ ಆಫ್ ಇಂಡಿಯಾ(ಭಾರತದ ಪ್ರಜೆಯೇ)’ ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ 10 ಅಂಕಿಗಳ ಪಾನ್ ಕಾರ್ಡ್ ಸಂಖ್ಯೆಯನ್ನು ದಾಖಲಿಸಿ.

– ಈಗ ಕ್ಯಾಪ್ಚಾ ಕೋಡ್ ಅನ್ನು ತುಂಬಿ ’ಸಬ್‍ಮಿಟ್’ ಗುಂಡಿಯನ್ನು ಒತ್ತಿರಿ. ಇದಾದ ನಂತರ ನಿಮ್ಮ ಕೋರಿಕೆಯು ದಾಖಲಾಗುತ್ತದೆ ಮತ್ತು ಟೋಕನ್ ಸಂಖ್ಯೆಯನ್ನು ಸೃಷ್ಟಿಸಿ ನೀವು ಪಾನ್ ಅರ್ಜಿಯಲ್ಲಿ ನಮೂದಿಸಿರುವ ಇಮೇಲ್ ಐಡಿಗೆ ಅದನ್ನು ರವಾನಿಸಲಾಗುತ್ತದೆ. ಮುಂದುವರಿಯಲು ಬಿಲೋವ್ ಬಟನ್‍ನ್ನು ಕ್ಲಿಕ್ ಮಾಡಿ ಪಾನ್ ಅರ್ಜಿಯ ಉಳಿದ ಭಾಗವನ್ನು ಭರ್ತಿ ಮಾಡಿ.

– ಈ ಬಾರಿ ಫಾರ್ಮ್ ಅನ್ನು ಸರಿಯಾಗಿ ತುಂಬಿ ಮತ್ತು ಅಗತ್ಯ ಗುರುತಿನ ಪುರಾವೆಯನ್ನು ಒದಗಿಸಿ. ‘ಸೇವ್ ಡ್ರಾಫ್ಟ್’ ಆಯ್ಕೆಯನ್ನು ಕ್ಲಿಕ್ ಮಾಡುವ ಮುನ್ನ ಎಲ್ಲ ವಿವರಗಳನ್ನು ಸರಿಯಾಗಿ ಪರಿಶೀಲಿಸಿ. ಈಗ ಹಣಪಾವತಿಯನ್ನು ಮಾಡುವ ಮೂಲಕ ಆನ್‍ಲೈನ್ ಫಾರ್ಮ್ ಸಲ್ಲಿಕೆಯನ್ನು ಪೂರ್ಣಗೊಳಿಸಿ.

ಇದಿಷ್ಟು ನೀವು ಆನ್‍ಲೈನ್‍ನಲ್ಲಿ ನಿಮ್ಮ ತಪ್ಪಾದ ಹೆಸರು ಅಥವ ವಿಳಾಸ ಅಥವಾ ಇನ್ಯಾವುದೇ ವಿಷಯವನ್ನು ಸರಿಪಡಿಸಿಕೊಳ್ಳಬಹುದು. ಆದರೆ ನಿಮಗೆ ಆನ್‍ಲೈನ್‍ನಲ್ಲಿ ಕಾರ್ಯ ನಿರ್ವಹಿಸಲು ಬಾರದಿದ್ದರೆ ಅಂತಹವರು ಪಾನ್ ಕಾರ್ಡ್‍ನಲ್ಲಿಯ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಆಫ್ ಲೈನ್ ವಿಧಾನವನ್ನು ಬಳಸಬಹುದು.

15 ಸಾವಿರ ಬಜೆಟ್‌ನಲ್ಲಿ ಖರೀದಿಸಬಹುದಾದ ಬೆಸ್ಟ್‌ ಸ್ಮಾರ್ಟ್‌ಗಳ ಲಿಸ್ಟ್‌ ಇಲ್ಲಿದೆ..

You may also like