Home » ಓದುವ ವೇಳೆ ನಿದ್ರೆ ಬಂದರೆ ಕಂಟ್ರೋಲ್ ಮಾಡುವುದು ಹೇಗೆ? ಈ ಸರಳ ಟ್ರಿಕ್ಸ್ ತಿಳಿಯಿರಿ

ಓದುವ ವೇಳೆ ನಿದ್ರೆ ಬಂದರೆ ಕಂಟ್ರೋಲ್ ಮಾಡುವುದು ಹೇಗೆ? ಈ ಸರಳ ಟ್ರಿಕ್ಸ್ ತಿಳಿಯಿರಿ

by manager manager

How to control sleep during studying or reading in kannada

How to control sleep during studying or reading tips in kannada here..

ರಾತ್ರಿ ವೇಳೆ ಸರಿಯಾಗಿ ನಿದ್ರೆ ಮಾಡಿದರೂ ಸಹ ಹಲವರಿಗೆ ಹಗಲು ವೇಳೆಯೂ ಕೆಲವೊಮ್ಮೆ ನಿದ್ರೆ ಸ್ವಲ್ಪ ಗಾಡವಾಗಿಯೇ ಕಾಡುತ್ತದೆ. ಅದರಲ್ಲೂ ನಿರ್ಧಿಷ್ಟ ಗುರಿ ಇಟ್ಟುಕೊಂಡು ಓದುವವರಿಗೆ ಈ ಹಗಲು ವೇಳೆ ನಿದ್ರೆ ಏನಾದ್ರು ಹೆಚ್ಚು ಕಾಡಿದರೆ ಒಮ್ಮೊಮ್ಮೆ ಅವರ ಮೇಲೆ ಅವರಿಗೆ ಹೆಚ್ಚು ಬೇಸರವಾಗುವುದು, ಜಿಗುಪ್ಸೆ ಬಂದಂತಾಗುವುದು ಸಹ ಆಗುತ್ತದೆ.

ಆರೋಗ್ಯ ಜೀವನಕ್ಕಾಗಿ 6-8 ಗಂಟೆಕಾಲ ನಿದ್ರೆ ಸಾಕು. ರಾತ್ರಿ ವೇಳೆ ಎಷ್ಟೇ ಚೆನ್ನಾಗಿ ಈ ಅವಧಿಗೂ ಮೀರಿದ ನಿದ್ರೆ ಮಾಡಿದರೂ ಸಹ ಕೆಲವರಿಗೆ ಹಗಲು ವೇಳೆ ನಿದ್ರಾದೇವಿ ಕಾಡುತ್ತಾಳೆ. ಇದಕ್ಕೆ ಹಲವು ಕಾರಣಗಳು ಇವೆ. ಈ ಕಾರಣಗಳನ್ನು ಕನ್ನಡ ಅಡ್ವೈಜರ್ ಮುಂದಿನ ಲೇಖನದಲ್ಲಿ ತಿಳಿಸಿಕೊಡಲಿದೆ.

ಅಂದಹಾಗೆ ಇಂದಿನ ಲೇಖನದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುವವರು ಮತ್ತು ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡು ಅವರ ಸಮಸ್ಯೆ ಓದುವ ವೇಳೆ ಕಾಡುವ ನಿದ್ರೆ ಮೂಡ್‌ನಿಂದ ಹೇಗೆಲ್ಲಾ ತಪ್ಪಿಸಿಕೊಳ್ಳಬಹುದು, ಸರಳವಾಗಿ ನಿದ್ರೆಯನ್ನು ಕಂಟ್ರೋಲ್ ಮಾಡುವುದು ಹೇಗೆ ಎಂಬ ಸಲಹೆಗಳನ್ನು ಇಂದಿನ ಲೇಖನದಲ್ಲಿ ನೀಡಲಾಗಿದೆ. ಆ ಸಲಹೆಗಳು ಈ ಕೆಳಗಿನಂತಿವೆ.

1. 5 ನಿಮಿಷ ಬ್ರೇಕ್ ತೆಗೆದುಕೊಳ್ಳಿ

ಕೆಲವೊಮ್ಮೆ ನಾವು ಓದುವ ವಿಷಯಗಳು ಕಠಿಣವಾಗಿದ್ದಲ್ಲಿ, ಆಸಕ್ತಿ ಇಲ್ಲದಿದ್ದಲ್ಲಿ ನಿದ್ರೆ ಕಾಡಲು ಶುರುವಾಗುತ್ತದೆ. ಇಂತಹ ಸಮಯದಲ್ಲಿ 5 ನಿಮಿಷ ಬ್ರೇಕ್ ತೆಗೆದುಕೊಳ್ಳಿ.

– ಒಂದು ಲೋಟ ನೀರು ಕುಡಿಯಿರಿ ಮತ್ತು ಹಾಗೆ ತುಸು ಸಮಯ ಸುಮ್ಮನೆ ಕೂರಿ. ನಂತರದಲ್ಲಿ ಹೆಚ್ಚಾಗಿ ವಿಷಯದ ಮೇಲೆ ಗಮನ ಕೇಂದ್ರಿಕರಿಸಿ ನೀವು ಓದುತ್ತಿರುವ ವಿಷಯವನ್ನು ಅರ್ಥ ಮಾಡಿಕೊಳ್ಳುವುದರ ಜೊತೆಗೆ ಅದರ ಬಗ್ಗೆ ಕಲ್ಪನೆ ಇರಲಿ. ಬೇರೆ ರೀತಿಯಲ್ಲಿ ಹೇಳುವುದಾದರೆ ನೀವು ಓದುತ್ತಿರುವುದನ್ನು ಎಂಜಾಯ್ ಮಾಡಿರಿ.

2 ದೀರ್ಘವಾಗಿ ಒಮ್ಮೆ ಮೈ ಮುರಿಯಿರಿ

ಮೇಲಿನ ಟಿಪ್ಸ್ ವರ್ಕ್ ಆಗಲಿಲ್ಲ ಅಂದ್ರೆ ಜಸ್ಟ್ ಓದುತ್ತಿರುವ ಪುಸ್ತಕ ಮುಚ್ಚಿಟ್ಟು ದೀರ್ಘವಾಗಿ ಒಮ್ಮೆ ಮೈ ಮುರಿಯಿರಿ. ವಾಶ್ ರೂಮ್‌ ಗೆ ಹೋಗಿ ತಣ್ಣನೆಯ ನೀರಲ್ಲಿ ಮುಖ ತೊಳೆಯಿರಿ. ನಂತರ ಬಂದು ಮತ್ತೆ ಫ್ರೆಶ್ ಮೂಡ್‌ನಲ್ಲಿ ಓದಲು ಕುಳಿತುಕೊಳ್ಳಿ.

3 ಸ್ನ್ಯಾಕ್ ಸ್ವಲ್ಪ ಪ್ರಮಾಣದಲ್ಲಿ ಇರಲಿ

ಕೆಲವರಿಗೆ ಮೇಲಿನ ಟಿಪ್ಸ್‌ಗಳನ್ನು ಫಾಲೋ ಮಾಡಲು ಆಗದಿದ್ದರೇ ಅಥವಾ ಪಾಲಿಸಿಯೂ ನಿದ್ರೆ ಮೂಡ್ ಇನ್ನೂ ಕಾಡುತ್ತಿದ್ದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಸ್ನ್ಯಾಕ್ ಸೇವಿಸಿ. ಐಸ್ ಕ್ರೀಂ, ಬಿಸ್ಕೆಟ್ ತಿನ್ನಿರಿ. ಅಥವಾ ಚೂಯಿಂಗ್ ಗಮ್ ತೆಗೆದುಕೊಳ್ಳಿ. ಆದರೆ ಈ ಸ್ನ್ಯಾಕ್‌ ಸೇವನೆ ಮಿತಿ ಇರಲಿ. ಹೆಚ್ಚಾದಲ್ಲಿ ಮೊದಲಿಗಿಂತ ಹೆಚ್ಚು ನಿದ್ರೆ ಕಾಡುವುದು ಖಂಡಿತ. ಸ್ನ್ಯಾಕ್ ತಿನ್ನುವುದರಲ್ಲಿ ಆಸಕ್ತಿ ಇಲ್ಲವಾದಲ್ಲಿ ನಿಮ್ಮ ಗಮನವನ್ನು ಡೈವರ್ಟ್ ಮಾಡಲು ಸಂಗೀತ ಆಲಿಸಿ.

4 ಓದುವ ಸ್ಥಳ ಬಿಟ್ಟು ಹೊರಗೆ ಓಡಾಡಿ

ಮೇಲಿನ ತಂತ್ರಗಳು ವರ್ಕ್ ಆಗಲಿಲ್ಲ ಅಂದ್ರೆ ಓದುವ ಸ್ಥಳ ಬಿಟ್ಟು ಹೊರಗೆ ಹೋಗಿ ಜಸ್ಟ್ ಹಾಗೆ ಒನ್ ರೌಂಡ್ ವಾಕ್ ಮಾಡಿ, ಜೊತೆಗೆ ನೀವು ಓದುತ್ತಿರುವ ಪುಸ್ತಕವನ್ನೇ ಜೊತೆಗೆ ತೆಗೆದುಕೊಂಡಿ ಹೋಗಿ. ಅಲ್ಲಿ ವಾಕ್ ಮಾಡುವಾಗ ಉಪಯೋಗಕ್ಕೆ ಬಂದರೂ ಬರಬಹುದು. ವಾಕ್ ಮಾಡಿದ ನಂತರ ಟೀ ಅಥವಾ ಕಾಫಿ ಕುಡಿಯಿರಿ. ಅದು ನಿಮಗೆ ಉಚಿತವೆನಿಸಿದರೇ.

5 ಖುರ್ಚಿಯ ಮೇಲೆ ಕುಳಿತುಕೊಳ್ಳಿ

ದೀರ್ಘಕಾಲ ಓದುವವರಿಗೆ ಕುಳಿತುಕೊಳ್ಳುವ ಪ್ರಕಾರವು ಒಂದು ಗಂಭೀರ ವಿಷಯ. ಆದ್ದರಿಂದ ನಿಮ್ಮದೇ ಆದ ಒಂದು ಟೇಬಲ್ ಮತ್ತು ಖುರ್ಚಿಯನ್ನು ಬಳಸಿ. ಇದು ಹೆಚ್ಚು ಕ್ರಿಯಾಶೀಲರಾಗಿರಲು ಅನುವುಮಾಡಿಕೊಡುತ್ತದೆ.

6 ಓದುವ ಸ್ಥಳ ಹೆಚ್ಚು ಪ್ರಕಾಶಮಾನವಾಗಿರಲಿ

ಕೆಲವರು ಓದಲು ಜಸ್ಟ್ ಒಂದು ರೀಡಿಂಗ್ ಲ್ಯಾಪ್ ಬಳಸುತ್ತಾರೆ. ಒಂದು ರೂಮ್‌ನಲ್ಲಿರೀಡಿಂಗ್ ಲ್ಯಾಪ್‌ ಬಳಸುವುದರಿಂದ ಉಳಿದ ಪ್ರದೇಶವೆಲ್ಲಾ ಮಂಕಾಗಿ ಕಾಣಿಸುವುದರಿಂದ ನಿದ್ರೆಗೆ ಆಹ್ವಾನವನ್ನು ಬಹುಬೇಗ ಕೊಡುತ್ತದೆ. ಆದ್ದರಿಂದ ಓದಲು ಕೂರುವ ಸ್ಥಳ ಹೆಚ್ಚು ಪ್ರಕಾಶಮಾನವಾಗಿರಲಿ.

7 ಹೆಚ್ಚು ನೀರು ಕುಡಿಯಿರಿ

ಓದುವಾಗ ಹೆಚ್ಚು ನೀರು ಕುಡಿಯುವುದರಿಂದ ಆಗಾಗ ಶೌಚಾಲಯಕ್ಕೆ ಹೋಗಬೇಕಾಗುತ್ತದೆ ಎಂಬುದು ಹಲವರ ಅಲೋಚನೆ. ಆದರೆ ನೀರು ಆರೋಗ್ಯಕ್ಕೆ ಮಾತ್ರವಲ್ಲದೇ ಓದುವಾಗ ಹೆಚ್ಚು ಆಕ್ಟಿವ್ ಆಗಿರಲು ಸಹ ಸಹಾಯಕಾರಿ. ಅಲ್ಲದೇ ಗಣನೀಯ ಪ್ರಮಾಣದ ನೀರು ಕುಡಿಯುವುದರಿಂದ ಮೆದುಳು ಉತ್ತಮವಾಗಿ ಹೈಡ್ರೇಟೆಡ್ ಆಗಿರುತ್ತದೆ. ಅಲ್ಲದೇ ಮಾಹಿತಿ ಗ್ರ್ಯಾಸ್ಪಿಂಗ್ ಪವರ್ ಅನ್ನು ಹೆಚ್ಚಿಸುತ್ತದೆ.

8 ಬರೆಯುತ್ತಾ ಕಲಿಯಿರಿ

ದೀರ್ಘಕಾಲ ಕೇವಲ ಓದುವುದರಿಂದ ನಿದ್ರೆಯ ಫೀಲ್ ಆಗಲು ಅಹ್ವಾನ ನಾವೇ ನೀಡಿದಂತಾಗುತ್ತದೆ. ಅದರ ಬದಲು ಆಗಾಗ ಬರೆಯುತ್ತಾ ಕಲಿಯುವುದರಿಂದ ಮೆದುಳು ಇನ್ನಷ್ಟು ಆಕ್ಟಿವ್ ಆಗಿ ಓದುವ ವಿಷಯ ಹೆಚ್ಚು ನೆನಪಿನಲ್ಲಿ ಉಳಿಯಲು ಸಾಧ್ಯವಾಗುತ್ತದೆ.

ಇವುಗಳು ಸರಳ ಟ್ರಿಕ್ಸ್‌ಗಳಾಗಿದ್ದು, ಖಚಿತವಾಗಿ ವರ್ಕ್‌ ಮಾಡುತ್ತವೆ.

ಈ ಕಾರ್ಯಗಳನ್ನು ಓದುವ ವೇಳೆ ಮಾಡಬೇಡಿ

– ಓದುವ ವೇಳೆ Power-Nap ತೆಗೆದುಕೊಳ್ಳಬೇಡಿ. ಹಾಗಿಯೂ ತೆಗೆದುಕೊಂಡರೆ ಓದುವುದನ್ನು ನಿಲ್ಲಿಸಿ ರಾತ್ರಿ ಇಡೀ ನಿದ್ದೆ ಮಾಡುತ್ತೀರಿ. ಈ ಸಲಹೆ ರಾತ್ರಿ ವೇಳೆ ಓದುವವರಿಗೆ.

– ಕತ್ತಲ ಪ್ರದೇಶದಲ್ಲಿ ಓದುವವರು ರೀಡಿಂಗ್ ಲ್ಯಾಪ್ ಬಳಸಬೇಡಿ. ಇದರ ಬಳಕೆಯಿಂದ ಇನ್ನೂ ಹೆಚ್ಚು ನಿದ್ರೆಯ ಫೀಲ್ ಆಗುತ್ತದೆ.

– ಒನ್‌ ಸಿಟ್ಟಿಂಗ್ ರೀಡಿಂಗ್‌ ನಲ್ಲಿ ಆಗಾಗ ಪುಸ್ತಕ ಹೆಚ್ಚು ಬದಲಿಸುವುದು, ಓದುವಲ್ಲಿ ಆಸಕ್ತಿಯನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಆಸಕ್ತಿ ಇರುವ ಒಂದೇ ಪುಸ್ತಕವನ್ನು, ವಿಷಯವನ್ನೋ ಓದಿರಿ.

– ನಿದ್ರೆಯ ಫೀಲ್ ಆಗುತ್ತಿದ್ದರೇ, ಮಲಗಿಕೊಂಡು ಓದುವುದು ಬೇಡ.

– ಕಾರಣ ಕಣ್ಣಿಗೆ ಹೆಚ್ಚು ಆಯಾಸಗೊಳ್ಳುತ್ತದೆ. ಇದರಿಂದ ನಂತರ ತಲೆನೋವು ಬರುವ ಚಾನ್ಸ್ ಹೆಚ್ಚು.

– ಯಾವುದೇ ಆಹಾರ ಪದಾರ್ಥವನ್ನು ಹೆಚ್ಚು ಸೇವಿಸಬೇಡಿ. ಅದು ಟೀ, ಕಾಫಿಯೇ ಆಗಿರಲಿ. ಕಾರಣ ಓದುವಾಗ ಹೆಚ್ಚು ಸೇವಿಸುವುದರಿಂದ ಓದು ಮುಂದುವರೆಸಲು ನಿಮಗೆ uneasy ಎನಿಸಬಹುದು.

– ರಾತ್ರಿ ವೇಳೆ ಅರ್ಥ ಮಾಡಿಕೊಳ್ಳಲು ಕಷ್ಟವಾದ ವಿಷಯಗಳನ್ನು ಓದುವುದನ್ನು ಕಡಿಮೆಗೊಳಿಸಿ.

– ಹೆಚ್ಚು ಊಟ ಸೇವಿಸಿದವರು, ಓದಲು ಕುಳಿತರೆ ಕಣ್ಣು ಬಿಡಲು ಕಷ್ಟಪಡಬೇಕಾಗುತ್ತದೆ.

How to control or avoid sleep during studying is your question?.. read this simple tricks to avoid sleep when reading to get out from sleepy mood.

You may also like