Home » ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸೇನೆ, ರಕ್ಷಣಾ ಪಡೆ, ಪೊಲೀಸ್, ಇತರೆ ಸೇವೆಗಳಿಗೆ ಉಚಿತ ವಸತಿಯುತ ಪರೀಕ್ಷಾ ಪೂರ್ವ ಸಿದ್ಧತೆ ತರಬೇತಿ

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸೇನೆ, ರಕ್ಷಣಾ ಪಡೆ, ಪೊಲೀಸ್, ಇತರೆ ಸೇವೆಗಳಿಗೆ ಉಚಿತ ವಸತಿಯುತ ಪರೀಕ್ಷಾ ಪೂರ್ವ ಸಿದ್ಧತೆ ತರಬೇತಿ

by manager manager

Social Welfare Department Free Coaching : ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಕರ್ನಾಟಕದ ಪ್ರಜೆಗಳಿಗೆ ಭಾರತೀಯ ಮಿಲಿಟರಿ, ಭದ್ರತಾ ಪಡೆ, ಪೊಲೀಸ್ ಸೇವೆ ಹಾಗೂ ಇತರೆ ಮೂರು ಯೂನಿಫಾರ್ಮ್‌ ಸೇವೆಗಳಿಗೆ ಪರೀಕ್ಷಾ ಪೂರ್ವ ಸಿದ್ಧತೆಗೆ ತರಬೇತಿ ಹಾಗೂ ಮಾರ್ಗದರ್ಶನ ನೀಡಲಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ, ಅಲ್ಪಸಂಖ್ಯಾತರ ವರ್ಗಗಳ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ 15-02-2023

ಉಚಿತ ಸ್ಪರ್ಧಾತ್ಮಕ ಪರೀಕ್ಷೆ ಕೋಚಿಂಗ್ ಪಡೆಯಲು ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ಶಿಷ್ಯವೇತನವನ್ನು ಕೆಳಗಿನ ಸ್ಥಳಗಳಿಗೆ ಅನುಗುಣವಾಗಿ ನೀಡಲಾಗುತ್ತದೆ.
ದೆಹಲಿ : 10,000
ಹೈದೆರಾಬಾದ್ : ರೂ.8000
ಕರ್ನಾಟಕ : ರೂ.6000
ಚೆನ್ನೈ : ರೂ.5000

ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್‌ ವಿಳಾಸ : sw.kar.nic.in

ಯಾರು ಅರ್ಜಿ ಸಲ್ಲಿಸಬಹುದು?

  • ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳು / ಅಲ್ಪಸಂಖ್ಯಾತರ ವರ್ಗದವರು ಅರ್ಜಿ ಸಲ್ಲಿಸಬಹುದು.
  • ಸಾಮಾನ್ಯ ಪ್ರವೇಶ ಪರೀಕ್ಷಾ ದಿನಾಂಕವನ್ನು ಇಲಾಖಾ ವೆಬ್‌ನಲ್ಲಿ ಪ್ರಕಟಿಸಲಾಗುತ್ತದೆ.
  • ಕೆಇಎ ಮೂಲಕ ಅರ್ಹತಾ ಪರೀಕ್ಷೆ ನಡೆಸಲಾಗುವುದು.

ಅಪ್ಲಿಕೇಶನ್ ಹಾಕುವ ವಿಧಾನ

  • ಪ್ರೀ ಎಕ್ಸಾಮಿನೇಷನ್‌ ಟ್ರೈನಿಂಗ್ ವೆಬ್‌ಸೈಟ್‌ ವಿಳಾಸ ‘https://sw.kar.nic.in/swprelims/petccoaching/Webpages/StudentLogin.aspx‘ ಕ್ಕೆ ಭೇಟಿ ನೀಡಿ.
  • ತೆರೆದ ಮುಖಪುಟದಲ್ಲಿ ‘Create Account’ ಎಂಬಲ್ಲಿ ಕ್ಲಿಕ್ ಮಾಡಿ.
  • ಕೇಳಲಾದ ಮಾಹಿತಿಗಳನ್ನು ನೀಡಿ ಅಕೌಂಟ್ ರಚಿಸಿಕೊಳ್ಳಿ.
  • ನಂತರ ಯೂಸರ್ ಐಡಿ, ಪಾಸ್‌ವರ್ಡ್‌ ನೀಡಿ ಲಾಗಿನ್ ಆಗುವ ಮೂಲಕ ಅರ್ಜಿ ಸಲ್ಲಿಸಿ.