How To Activate Jio ESIM
ಹೊಸ ಹೊಸ ಆಲೋಚನೆಗಳು, ಆವಿಷ್ಕಾರಗಳನ್ನು ಮಾಡುತ್ತ ಬಂದಿರುವ ಜಿಯೋ ಕಂಪನಿಯು ಈಗ ಹೊಸದಾಗಿ ಜಿಯೋ ಇ-ಸಿಮ್ ಎನ್ನುವ ಹೊಸ ರೀತಿಯ ಸಿಮ್ಮನ್ನು ಆವಿಷ್ಕಾರ ಮಾಡಿದ್ದಾರೆ. ಇದು ನಿಮಗೆ ಪಿಸಿಕಲ್ ಆಗಿ ಸಿಮ್ ಸಿಗೋದಿಲ್ಲ ಅಂದರೇ ಈ ಹಿಂದೆ ಹೋಗಿ ಸಿಮ್ ಕಾರ್ಡ್ ಅನ್ನು ತೆಗೆದುಕೊಂಡ ರೀತಿ ಈ ಸಿಮ್ ಇರೋದಿಲ್ಲ ಬದಲಿಗೆ ಇದು ಅಪ್ಲಿಕೇಶನ್‌ನಲ್ಲೇ ಹೊಸದಾಗಿ ಗ್ರಾಹಕರಿಗೆ ಕೊಡ್ತಾ ಇರೋ ಡಿಜಿಟಲ್ ಸಿಮ್, ಇದನ್ನ ನೀವು ಜಿಯೋ ಸಿಮ್ ಅನ್ನು ಡೌನ್‍ಲೋಡ್ ಮಾಡಿಕೊಂಡು ಅದರಲ್ಲಿ ನಿಮ್ಮ ಪ್ರೋಫೈಲ್ ಅನ್ನು ಅಪ್‍ಡೇಟ್ ಮಾಡೊಕೊಳ್ಳಬೇಕು.
ಜಿಯೋದ ಇ-ಸಿಮ್ ಅನ್ನು ಯಾವೇಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸಬಹುದು ಗೊತ್ತೇ?
– ಆಪಲ್ ಐಫೋನ್ ಸಿರೀಸ್‍ಗಳು
– ಸ್ಯಾಮ್‍ಸ್ಯಾಂಗ್ ಗ್ಯಾಲಾಕ್ಸಿ ಸಿರೀಸ್‍ಗಳು
– ಗೂಗಲ್ ಪಿಕ್ಸಲ್ ಸಿರೀಸ್‍ಗಳು
– ಮೊಟೊರೋಲಾ ರಾಜ್ರ್ ಮತ್ತು ನೆಕ್ಸ್ಟ್ ಜನರೇಷನ್ ರಾಜ್ರ್ 5ಜಿ
ಜಿಯೋ ಇ-ಸಿಮ್ ಎಲ್ಲಿ, ಹೇಗೆ ಪಡೆಯಬೇಕು?
– ನಿಮ್ಮ ಬಳಿ ಇರುವ ಮೈ ಜಿಯೋ ಅಪ್ಲಿಕೇಶನ್‌ನಲ್ಲಿ ಸೆಟಿಂಗ್ಸ್‍ನಲ್ಲಿರುವ ನೆಟ್‍ವರ್ಕ್‍ನ ಸೆಲ್ಯುಲರ್ ಅಥವಾ ಮೊಬೈಲ್ ಡಾಡಾ ಮೇಲೆ ಕ್ಲಿಕ್ ಮಾಡಿ. ಆಗ ನಿಮಗೆ ಒಂದು ನಿಮ್ಮ ಸಿಮ್ ಕಾರ್ಡ್ ಪೋರ್ಟ್ ಕಾಣುತ್ತೆ. ನಂತರದಲ್ಲಿ ಇನ್ನೊಂದು ಸ್ಲಾಟ್ ಕಾಣುತ್ತೆ. ಅದೇ ಇ-ಸಿಮ್. ಇದನ್ನು ಆಕ್ಟಿವೇಟ್ ಮಾಡಿದ ನಂತರದಲ್ಲಿ ನಿಮ್ಮ ಮೊಬೈಲ್ ಸಿರೀಸ್‌ಗೆ ತಕ್ಕಂತೆ ಡೌನ್‍ಲೋಡ್ ಆಗುತ್ತೆ ನಂತರದಲ್ಲಿ ನಿಮ್ಮ ಮೊಬೈಲ್‍ನಲ್ಲಿ ಇ-ಸಿಮ್ ಆಕ್ಟಿವೇಟ್ ಆಗುತ್ತೆ.
– ನಿಮ್ಮಲ್ಲಿ ಈ ಮೊದಲೇ ಸಿಮ್ ಕಾರ್ಡ್ ಇದ್ರೆ ಅದನ್ನು ಇ-ಸಿಮ್‍ಗೆ ಬದಲಾವಣೆ ಮಾಡಬೇಕೆಂದರೆ ಮೊದಲಿಗೆ ನಿಮ್ಮ ಇ-ಸಿಮ್ ಅಪ್ಲಿಕೇಶನ್‌ನಲ್ಲಿ ನಿಮ್ಮ ಸಿಮ್ ಕಾರ್ಡ್‌ನಿಂದ ಒಂದು ಎಸ್‍ಎಂಎಸ್ ಕಳುಹಿಸಿ. ಅದರಿಂದ ಮುಂದೆ ಬರುವ ಪ್ರೋಸಸ್ ಅನ್ನು ಮುಂದುವರೆಸಿ. ನಿಮಗೆ ಇದರಲ್ಲಿ ಸಂದೇಹಗಳಿದ್ದರೆ ಹತ್ತಿರದ ಜಿಯೋ ಸ್ಟೋರ್‌ಗೆ ಬೇಟಿಕೊಡಿ.
ಜಿಯೋ ಇ-ಸಿಮ್ ಡಿಲೀಟ್ ಆದಲ್ಲಿ ಏನು ಮಾಡಬೇಕು?
ನಿಮಗೆ ಇಲ್ಲೊಂದು ಪ್ರಶ್ನೆ ಮೂಡಬಹುದು ಒಂದು ವೇಳೆ ಸಿಮ್ ಡಿಲೀಟ್ ಆದ್ರೆ ಹೇಗೆ ಪಡೆಯೋದು ಅಂದ್ರೆ ನಿಮ್ಮ ಹತ್ತಿರದ ಜಿಯೋ ಸ್ಟೋರ್ ರಿಲಾಯನ್ಸ್ ಡಿಜಿಟಲ್ ಅಥವಾ ಜಿಯೋ ರಿಟೈಲರ್ ಗಳನ್ನ ಬೇಟಿ ಆಗಿ. ಬೇಟಿ ಮಾಡುವ ಸಮಯದಲ್ಲಿ ನಿಮ್ಮ ಐಡಿ ಫ್ರೂಪ್ ಮತ್ತು ಒಂದು ಫೋಟೋವನ್ನು ತೆಗೆದುಕೊಂಡು ಹೋಗಿ.
ಜಿಯೋ ಇ-ಸಿಮ್‍ನ ಉಪಯೋಗಗಳೇನು?
– ಗ್ರಾಹಕರು ಈ ಸಿಮ್ ಅನ್ನು ತುಂಬ ಸುಲಭವಾಗಿ ಆಪರೇಟ್ ಮಾಡಬಹುದು.
– ಗ್ರಾಹಕರು ನೇರವಾಗಿ ತಮ್ಮ ಮೊಬೈಲ್ ಮೂಲಕವೇ ಸಿಮ್ ಇಲ್ಲದೆ ಉಪಯೋಗಿಸಬಹುದು.
– ಈ ರೀತಿಯ ಸಿಮ್ ಅನ್ನು ಮೊಬೈಲ್‍ನಲ್ಲಿ ಒಂದಕ್ಕಿಂತ ಅಧಿಕ ನಂಬರ್‍ಗಳನ್ನು ಉಪಯೋಗಿಸಬಹುದು.
– ಮೊಬೈಲ್‍ನಲ್ಲಿನ ಬ್ಯಾಟರಿಯು ಅಷ್ಟೇ ನಾವು ಈಗ ಉಪಯೋಗಿಸುವ ಸಿಮ್‍ನಲ್ಲಿ ಖರ್ಚಾಗುವಷ್ಟು ಬ್ಯಾಟರಿ ಪವರ್ ಈ ಇ-ಸಿಮ್‍ನಲ್ಲಿ ಆಗುವುದಿಲ್ಲ.
– ಒಂದು ಮೊಬೈಲ್‌ನಿಂದ ಇನ್ನೊಂದು ಮೊಬೈಲ್‌ಗೆ ಸುಲಭವಾಗಿ ಇ-ಸಿಮ್ ಅನ್ನು ಬದಲಾಯಿಸಬಹುದು.
PAN ಕಾರ್ಡ್ ಕಳೆದುಹೋದಲ್ಲಿ ಮರುಪಡೆಯುವುದು ಹೇಗೆ? ಈ ಅತೀ ಸುಲಭ ಟಿಪ್ಸ್ ಫಾಲೋ ಮಾಡಿ..