Home » ಪತ್ರಿಕೋದ್ಯಮ ಪದವಿ ಪಡೆದವರಿಗೆ ಉದ್ಯೋಗ ಪಡೆಯಲು ಈ ಸರ್ಕಸ್ ಅತ್ಯಗತ್ಯ!

ಪತ್ರಿಕೋದ್ಯಮ ಪದವಿ ಪಡೆದವರಿಗೆ ಉದ್ಯೋಗ ಪಡೆಯಲು ಈ ಸರ್ಕಸ್ ಅತ್ಯಗತ್ಯ!

by manager manager

ಪತ್ರಿಕೋದ್ಯಮ(Mass Communication and Journalism) ಮಾತ್ರವಲ್ಲ, ಯಾವುದೇ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದರು ಸಹ ಆಯಾ ಕ್ಷೇತ್ರದಲ್ಲಿ ಆಸಕ್ತಿ ಇದ್ದರೆ ಮಾತ್ರ ಅದೇ ಕ್ಷೇತ್ರದಲ್ಲಿ ಉದ್ಯೋಗ ಸೇರಬಹುದು. ಹೀಗೆ ಹೇಳಲು ಕಾರಣ ಕೆಲವರು ಪಡೆದ ಶಿಕ್ಷಣಕ್ಕೆ ಬದಲಾಗಿ ಬೇರೆಯದೇ ಕ್ಷೇತ್ರದಲ್ಲಿ ತಮ್ಮ ಜೀವನ ಕಂಡುಕೊಳ್ಳುವವರು ಇದ್ದಾರೆ.

ಲೇಖನದ ತಲೆಬರಹಕ್ಕೆ ತಕ್ಕಂತೆ ಉತ್ತರ ನೀಡುವುದಾದರೆ ಪತ್ರಿಕೋದ್ಯಮ ಪದವಿ ಪಡೆದವರ ನೇಮಕಾತಿಗೆ ಸಂಬಂಧಿಸಿದಂತೆ ಕೆಲವು ಅಂಶಗಳ ಮೇಲೆ ಬೆಳಕುಚೆಲ್ಲಬೇಕಾಗುತ್ತದೆ. ಅವುಗಳೆಂದರೆ..

1. ಪತ್ರಿಕೋದ್ಯಮ ಪದವಿ ಪಡೆದವರ ಆಸಕ್ತಿ ಯಾವುದರ ಮೇಲೆ?

2. ವಿದ್ಯಾರ್ಥಿಯ ವಯಕ್ತಿಕ ಕೌಶಲ ಮತ್ತು ಸಾಮರ್ಥ್ಯ

ಇತರೆಯಾಗಿ ಹೇಳವುದಾದರೆ ಕ್ಯಾಂಪಸ್ ಸೆಲೆಕ್ಷನ್ ಮಾರ್ಗದಲ್ಲಿ ಹಲವು ಕಾಲೇಜುಗಳಲ್ಲಿ ಪತ್ರಿಕೋದ್ಯಮ ಪದವಿ ಪಡೆದವರಿಗೆ ಉದ್ಯೋಗಾವಕಾಶ ಒದಗಿಸಲಾಗುತ್ತದೆ. ಆದರೆ ಪತ್ರಿಕೋದ್ಯಮ ಪದವಿ ಪಡೆದರು ಸಹ ಆ ಕ್ಷೇತ್ರದಲ್ಲಿ ಉದ್ಯೋಗ ಪಡೆಯುವುದು ಸುಲಭದ ಕೆಲಸವಲ್ಲ. ಅಲ್ಲದೇ ಪತ್ರಕರ್ತರಾಗಿ ಉನ್ನತ ಮಟ್ಟದಲ್ಲಿ ಸಂಬಳ ಪಡೆಯುವವರೆಗೆ ಅದೇ ಕ್ಷೇತ್ರದಲ್ಲಿ ನಿಲ್ಲಲು ಅತ್ಯಧಿಕ ಮಟ್ಟದಲ್ಲಿ ತಾಳ್ಮೆ ಕಾಪಾಡಿಕೊಳ್ಳಬೇಕಾಗುತ್ತದೆ.

ಪತ್ರಿಕೋದ್ಯಮದಲ್ಲಿ(Mass Communication and Journalism) ಪದವಿ ಪಡೆದ ತಕ್ಷಣವೇ ಉದ್ಯೋಗ ಸೇರಲು ಕಾಲೇಜು ದಿನಗಳಲ್ಲೇ ಪತ್ರಿಕೆಗಳಲ್ಲಿ ತರಬೇತಿ (ಇಂರ್ಟರ್ನ್‌ಶಿಪ್) ಪಡೆಯಲು ಸಲಹೆ ನೀಡಲಾಗುತ್ತದೆ. ಇದನ್ನು ಸಕಾರಾತ್ಮಕವಾಗಿ ಸ್ವೀಕರಿಸಿದವರು ಉದ್ಯೋಗ ಹರಸಿ ಹೊರಟಾಗ ತಮ್ಮ ರೆಸ್ಯೂಮ್ ನಲ್ಲಿ ತರಬೇತಿ ಪಡೆದಿರುವುದನ್ನು ನಮೂದಿಸಿದವರಿಗೆ ಮೊದಲ ಆದ್ಯತೆ ದೊರೆಯುತ್ತದೆ. ನೆನಪಿಡಬೇಕಾದ ಮುಖ್ಯವಾದ ವಿಷಯ ಅಂದ್ರೆ ಪ್ರಸ್ತುತ ಪತ್ರಿಕಾ ಉದ್ಯಮವು ಫ್ರೆಶರ್‌ಗಳನ್ನು(ಹೊಸಬರು) ನೇಮಕ ಮಾಡಿಕೊಳ್ಳಲು ನಿರೀಕ್ಷೆ ಮಾಡಲು ಬಯಸುವುದೇ ಇಲ್ಲ. ಕೆಲವೊಮ್ಮೆ ಫ್ರೆಶರ್‌ಗಳನ್ನು ನೇಮಕ ಮಾಡಿಕೊಂಡರು ಅವರನ್ನು ಹೇಗೆ ನಡೆಸಿಕೊಳ್ಳುತ್ತಾರೆ, ಕೆಲಸ ಹೇಗೆ ತೆಗೆಸುತ್ತಾರೆ ಎಂಬುದನ್ನು ಅನುಭವಿಗಳ ಬಾಯಿಂದಲೇ ಕೇಳಿ ತಿಳಿದುಕೊಳ್ಳುವುದು ಉತ್ತಮ. ಆದ್ದರಿಂದ ಮೊದಲೇ ತಮ್ಮ ಆಸಕ್ತ ಕ್ಷೇತ್ರಗಳಲ್ಲಿ ಇಂಟರ್ನ್‌ಶಿಪ್ ಪಡೆಯುವುದು ಬೆಟರ್.

ಇಂಟರ್ನ್‌ಶಿಪ್ ಪಡೆಯಲು ಮಾಧ್ಯಮಗಳಲ್ಲಿ ಅವಕಾಶ ಸಿಗದಿದ್ದರೂ, ತಮ್ಮ ತಮ್ಮ ಆಸಕ್ತ ಕ್ಷೇತ್ರಗಳಲ್ಲಿ ಚಟುವಟಿಕೆಗಳನ್ನುಮಾಡಬೇಕು. ಉದಾಹರಣೆಗೆ ಟಿವಿ ಮತ್ತು ಸಿನಿಮಾ ಕ್ಷೇತ್ರಕ್ಕೆ ಹೋಗುವವರು ಕಿರುಚಿತ್ರ ಹಾಗೂ ಡಾಕ್ಯುಮೆಂಟರಿ ನಿರ್ಮಾಣ ಕಾರ್ಯಗಳಲ್ಲಿ, ಪತ್ರಿಕೆಗೆ ಸೇರಬಯಸುವವರು ನುಡಿಚಿತ್ರ ಬರವಣಿಗೆ, ಹಲವು ರೀತಿಯ ವಿಭಿನ್ನ ಲೇಖನಗಳನ್ನು ಬರೆಯುವುದು ಹೀಗೆ.

ನೆನಪಿಡಿ: ಆಸಕ್ತಿ ಮತ್ತು ಉತ್ಸಾಹವೇ ನಿಮ್ಮ ಉದ್ಯೋಗದ ಕೀ. ನಿಜವಾಗಿಯೂ ಇವುಗಳಿದ್ದರೇ ಮಾತ್ರ ಏನಾದರೂ ಮಾಡಿ.

In this article Kannadaadvisor giving some tips to get job after doing a Mass Communication and journalism Course. And their Application’s are here..

You may also like