Home » ಎಷ್ಟೇ ಕಡಿಮೆ ಪ್ರಮಾಣದ ಆಲ್ಕೋಹಾಲ್ ಸೇವಿಸಿದರೂ ಅನಾರೋಗ್ಯ ಕಟ್ಟಿಟ್ಟ ಬುತ್ತಿ! ಈ ವರದಿ ಓದಿರಿ

ಎಷ್ಟೇ ಕಡಿಮೆ ಪ್ರಮಾಣದ ಆಲ್ಕೋಹಾಲ್ ಸೇವಿಸಿದರೂ ಅನಾರೋಗ್ಯ ಕಟ್ಟಿಟ್ಟ ಬುತ್ತಿ! ಈ ವರದಿ ಓದಿರಿ

by manager manager

ಬಹುಸಂಖ್ಯಾತರು ಆಗಾಗ ಅಪರೂಪಕ್ಕೆ ಮದ್ಯಪಾನ(Alcohol) ಮಾಡುವುದರಿಂದ ಆರೋಗ್ಯಕ್ಕೆ ಯಾವ ತೊಂದರೆಯು ಇಲ್ಲ ಅಂತ ತಮಗೆ ತಾವೆ ಅಂದುಕೊಳ್ಳುತ್ತಾರೆ. ಅಷ್ಟೇ ಅಲ್ಲ ಇನ್ನು.. ಬಿಯರ್(beer) ಪ್ರೇಮಿಗಳಂತು ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬಾಡಿ ಬಿಲ್ಡ್‌ ಮಾಡಬಹುದು, ದೇಹದಲ್ಲಿ ಕಲ್ಲಿನ ತೊಂದರೆ ಇರುವವರು ಸೇವಿಸಿದರೆ ಒಳ್ಳೆಯದು ಎಂದು ತಮಗೆ ತಾವೇ ನಂಬಿಕೊಂಡಿದ್ದಾರೆ. ಆದರೆ ಈ ನಂಬಿಕೆಗಳು ಎಳ್ಳಷ್ಟು ಸತ್ಯವಲ್ಲ.

ಹೌದು, ಕೇವಲ ಒಂದು ಬಾರಿ ಆಲ್ಕೋಹಾಲ್(Alcohol) ಸೇವನೆ ಮಾಡಿದರೂ ಕೂಡ ದೇಹಕ್ಕೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ ಎಂದು ಇತ್ತೀಚಿನ ಅಧ್ಯಯನ ಒಂದು ವರದಿ ಮಾಡಿದೆ.

ಅಂದಹಾಗೆ ಈ ಸಂಶೋಧನೆಗಾಗಿ ಅಧ್ಯಯನಕಾರರು 22 ವರ್ಷ ಸಮಯದಲ್ಲಿ 195 ದೇಶಗಳನ್ನು ಸುತ್ತಿ, 694 ಮೂಲಗಳಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಅಲ್ಲದೇ ಈ ಅಧ್ಯಯನಕ್ಕೆ ಮುಂಚೆಯೇ ವರದಿಯಾಗಿದ್ದ 592 ಹಳೆಯ ಅಧ್ಯಯನ ವರದಿಗಳನ್ನು ಅಭ್ಯಸಿಸಿದ್ದಾರೆ. ಇವುಗಳಿಂದ ” ಮನುಷ್ಯ ಎಷ್ಟೇ ಕಡಿಮೆ ಪ್ರಮಾಣದಲ್ಲಿ ಮದ್ಯಪಾನ ಸೇವಿಸಿದರೂ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದು ಕಟ್ಟಿಟ್ಟ ಬುತ್ತಿ” ಎಂಬ ವರದಿ ಹೊರಬಿದ್ದಿದೆ.

‘ಲ್ಯಾನ್ಸೆಟ್’ ನಿಯತಕಾಲಿಕೆಯಲ್ಲಿ ಪ್ರಕಟವಾದ ವರದಿ ಪ್ರಕಾರ ಪ್ರತಿ ವರ್ಷ ಮದ್ಯಪಾನ ಸೇವನೆಯಿಂದಾಗಿ 28 ಲಕ್ಷ ಜನ ಮೃತರಾಗುತ್ತಿದ್ದಾರೆ. ಪ್ರತಿ ವರ್ಷ ಹೆಚ್ಚು ಜನರನ್ನು ಬಲಿ ಪಡೆಯುತ್ತಿರುವ ಜಾಗತಿಕ ಸಮಸ್ಯೆಗಳ ಪೈಕಿ ಆಲ್ಕೋಹಾಲ್ 7ನೇ ಸ್ಥಾನದಲ್ಲಿದೆ. 2016 ರಲ್ಲಿ ಮೃತಪಟ್ಟ ಮಹಿಳೆಯರ ಪೈಕಿ ಶೇ.2.2 ಮತ್ತು ಪುರುಷರ ಪೈಕಿ ಶೇ.6.8 ಮಂದಿ ಆಲ್ಕೋಹಾಲ್ ನಿಂದಲೇ ಸಾವನ್ನಪ್ಪಿದ್ದರು. ಕುತೂಹಲಕಾರಿ ವಿಷಯವೆಂದರೆ 15-49ರ ವಯಸ್ಸಿನ ವ್ಯಕ್ತಿಗಳ ಅನಾರೋಗ್ಯಕ್ಕೆ ಆಲ್ಕೋಹಾಲ್ ಸೇವನೆಯೇ ಪ್ರಮುಖ ಕಾರಣವಾಗಿದೆ. ಅಲ್ಲದೇ ವರ್ಷದಿಂದ ವರ್ಷಕ್ಕೆ ಜಾಗತಿಕವಾಗಿ ಆಲ್ಕೋಹಾಲ್ ಸೇವನೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

ಆಲ್ಕೋಹಾಲ್(Alcohol) ಸೇವನೆಯಿಂದ ದೇಹದ ಯಾವೆಲ್ಲಾ ಅಂಗಗಳಿಗೆ ಯಾವೆಲ್ಲಾ ಸಮಸ್ಯೆಗಳು ಉಂಟಾಗುತ್ತವೆ, ಯಾವೆಲ್ಲಾ ರೋಗಗಳು ಬರುತ್ತವೆ ಎಂಬುದು ಈ ಕೆಳಗಿನಂತಿದೆ.

ಮೆದುಳಿನ ಮೇಲೆ ದುಷ್ಪರಿಣಾಮ

– ಆಲ್ಕೋಹಾಲ್(Alcohol) ಅತಿಯಾಗಿ ಸೇವನೆ ಮಾಡುವುದರಿಂದ ಮೆದುಳಿನ ಸಂವಹನದ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೇ ಅದು ನಿರ್ವಹಿಸುವ ಕಾರ್ಯಗಳ ಮೇಲೆ ಪರಿಣಾಮ ಬೀರಿ, ವ್ಯಕ್ತಿಯ ಮನಸ್ಥಿತಿ, ನಡವಳಿಕೆ, ತೆಗೆದುಕೊಳ್ಳುವ ನಿರ್ಧಾರಗಳ ಮೇಲೆ ಪರಿಣಾಮ ಬೀರುತ್ತದೆ.

ಹೃದಯದ ಮೇಲೆ ದುಷ್ಪರಿಣಾಮ

– ತುಂಬಾ ದೀರ್ಘಕಾಲದಿಂದ ಅಥವಾ ಒಮ್ಮೆಯೇ ಹೆಚ್ಚು ಆಲ್ಕೋಹಾಲ್ ಸೇವನೆ ಮಾಡುವುದರಿಂದ ಹೃದಯಕ್ಕೆ ಈ ಕೆಳಗಿನ ತೊಂದರೆಗಳು ಉಂಟಾಗುತ್ತವೆ.

– ಕಾರ್ಡಿಯೊಮಿಯೊಪತಿ: ಹೃದಯಗಳ ಸ್ನಾಯುವಿನ ಹಿಗ್ಗಿಸುವಿಕೆಯಿಂದ ಸ್ನಾಯುಗಳು ಇಳಿಬೀಳುವಿಕೆಗೆ ಕಾರಣವಾಗುತ್ತದೆ.

– ಅನಿಯಮಿತ ಹೃದಯ ಬಡಿತ

– ಪಾರ್ಶ್ವವಾಯು (Stroke-ಸ್ಟ್ರೋಕ್)

– ರಕ್ತದ ಅತ್ಯಧಿಕ ಒತ್ತಡ ಉಂಟುಮಾಡುತ್ತದೆ

ಪಿತ್ತಜನಕಾಂಗದ ಮೇಲೆ ದುಷ್ಪರಿಣಾಮ

– ಹೆಚ್ಚಿನ ಮದ್ಯಪಾನದಿಂದ ಪಿತ್ತಜನಕಾಂಗದ ಮೇಲೆ ಹಲವು ರೀತಿಯ ತೊಂದರೆಗಳನ್ನು ಉಂಟುಮಾಡುತ್ತದೆ. ಅಲ್ಲದೇ ಪಿತ್ತಜನಕಾಂಗ ಉರಿಯೂತಕ್ಕೆ ಎಡೆಮಾಡಿಕೊಡುತ್ತದೆ.

– ಸ್ಟೆಟೊಸಿಸ್, ಅಥವಾ ಕೊಬ್ಬಿನ ಯಕೃತ್ತು

– ಆಲ್ಕೋಹಾಲಿಕ್ ಹೆಪಟೈಟಿಸ್(Alcoholic Hepatitis)

– ಫೈಬ್ರೋಸಿಸ್(Fibrosis)

– ಸಿರೋಸಿಸ್ (Cirrhosis)

ಕ್ಯಾನ್ಸರ್

– ದಿನನಿತ್ಯ ಆಲ್ಕೋಹಾಲ್ ಸೇವನೆ ಮಾಡುವುದರಿಂದ ಹಲವು ರೀತಿಯ ಕ್ಯಾನ್ಸರ್‌ಗಳಿಗೆ ಎಡೆಮಾಡಿಕೊಡುತ್ತದೆ.

– ಬಾಯಿ ಕ್ಯಾನ್ಸರ್

– ಗಂಟಲು ಕ್ಯಾನ್ಸರ್

– ಪಿತ್ತಜನಕಾಂಗ ಕ್ಯಾನ್ಸರ್

– ಸ್ತನ ಕ್ಯಾನ್ಸರ್

– ಅನ್ನನಾಳ ಕ್ಯಾನ್ಸರ್

ರೋಗ ನಿರೋಧಕ ವ್ಯವಸ್ಥೆಯ ಮೇಲೆ ದುಷ್ಪರಿಣಾಮ

ದೀರ್ಘಕಾಲ ಆಲ್ಕೋಹಾಲ್ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ, ಯಾವುದೇ ರೋಗದ ಜೊತೆ ಹೊರಾಡಲೂ ದೇಹದಲ್ಲಿ ರೋಗ ನಿರೋಧಕ ಶಕ್ತಿಯೇ ಇರುವುದಿಲ್ಲ.

ಕಡಿಮೆ ನೀರು ಕುಡಿದರೆ ಯಾವ ಸಮಸ್ಯೆ ಎದುರಿಸಬೇಕಾಗುತ್ತೆ..? ಇಲ್ಲಿದೆ ಮಾಹಿತಿ

How much alcohol is safe to drink? For health it is not good. even drinking beer is also not good bit. Alcohol effect on the whole body. Read this report in kannada.