Home » ಪ್ರೇಮಿಗಳ ದಿನವನ್ನು (ವ್ಯಾಲೆಂಟೈನ್ಸ್ ಡೇ) ಹೇಗೆಲ್ಲ ಆಚರಿಸಬಹುದು? ಶುಭಾಶಯ, ಗಿಫ್ಟ್ ಟಿಪ್ಸ್‌ ಇಲ್ಲಿವೆ..

ಪ್ರೇಮಿಗಳ ದಿನವನ್ನು (ವ್ಯಾಲೆಂಟೈನ್ಸ್ ಡೇ) ಹೇಗೆಲ್ಲ ಆಚರಿಸಬಹುದು? ಶುಭಾಶಯ, ಗಿಫ್ಟ್ ಟಿಪ್ಸ್‌ ಇಲ್ಲಿವೆ..

by manager manager

ತನ್ನ ಪ್ರೀತಿಯನ್ನು ವ್ಯಕ್ತಪಡಿಸಲು ಇಂತಹ ದಿನವೇ ಬೇಕೆಂಬುದಿಲ್ಲ. ಪ್ರೀತಿ ಹುಟ್ಟಿದಾಗ ಅದು ಯಾರನ್ನು ಹೇಳಿಕೇಳಿ ಹೊರಹುಮ್ಮುವುದಿಲ್ಲ. ಅದೆಲ್ಲ ನಮ್ಮ ನಮ್ಮ ಮನಸ್ಸಿನ ಒಳಗೆ ಉದ್ಭವವಾಗುವ ಒಂದು ರೀತಿ ಇಷ್ಟಕಾಮ್ಯ. ಪ್ರೀತಿ ಹುಟ್ಟುವುದು ನಮಗೆ ತಿಳಿಯುವುದಿಲ್ಲ ಅದು ಹುಟ್ಟಿ ಅದರ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ನಮ್ಮ ಕೈಯಲ್ಲಿ ಏನನ್ನಾದರೂ ಮಾಡಿಸಬಲ್ಲ ಶಕ್ತಿ ಪ್ರೀತಿಗಿರುತ್ತದೆ. ಇಷ್ಟೆಲ್ಲ ಹೇಳ್ತ ಇರೋದು ಇನ್ನೇನು ಫೆಬ್ರವರಿ 14ನೇ ತಾರೀಖು ಪ್ರೇಮಿಗಳ ದಿನ ಬಂತು ಅಂತ. ಏನಪ್ಪ ಇದು ಇದಕ್ಕು ಒಂದು ದಿನ ಅಂತ ಆಚಾರಿಸಬೇಕಾ.. ಹೌದು ಏಕೆಂದರೆ ಯಾವುದೇ ಒಂದು ಶಕ್ತಿ ಅಥವಾ ಒಳ್ಳೆಯ ವಿಷಯವನ್ನು ಒಂದು ಒಳ್ಳೆಯ ದಿನ ಹೇಳಿದ್ರೆ ಅದಕ್ಕೆ ತೂಕ ಮತ್ತು ಆಯಸ್ಸು ಜಾಸ್ತಿ ಎಂಬ ನಂಬಿಕೆ ಇದೆ. ಹಾಗಾಗೀ ಪ್ರತಿಯೊಂದು ಆಚರಣೆಗೂ ಒಂದು ದಿನವನ್ನು ಸಿಮೀತಗೊಳಿಸಿದ್ದಾರೆ.

ಈ ಫೆಬ್ರವರಿ 14ನೇ ತಾರೀಕು ನಿವೇಲ್ಲ ಹೇಗೆ ಆಚರಿಸಬೇಕು ಎಂಬ ಒಂದು ಸಣ್ಣ ಸಲಹೆ ಇದೆ. ಆ ಸಲಹೆಗಳ ಮೂಲಕ ನಿಮ್ಮ ಪ್ರೇಯಸಿ ಅಥವಾ ಪ್ರಿಯತಮನನ್ನು ಬೇಟಿಯಾಗಿ ನಿಮ್ಮ ಆಲೋಚನೆಗಳು ಮತ್ತು ಪ್ರೀತಿಯನ್ನು ಹಂಚಿಕೊಳ್ಳಿ ಮತ್ತು ಮುಂದಿನ ಜೀವನದಲ್ಲಿ ಸಂತೋಷದಿಂದ ಬದುಕಿ ಬಾಳಿ. ಆ ಸಲಹೆಗಳು

ಪ್ರೇಮಿಗಳ ದಿನ ನಿಮ್ಮ ಸಂಗಾತಿಗೆ ಪ್ರೊಪೋಸ್ ಮಾಡುವ ರೀತಿ :-

ನಿಮ್ಮ ಸಂಗಾತಿಯನ್ನು ಒಂದೊಳ್ಳೆ ಜಾಗಕ್ಕೆ ಕರೆದುಕೊಂಡು ಹೋಗಿ ಮತ್ತು ನಿಮ್ಮ ಬಗ್ಗೆ ಅವಳಲ್ಲಿರುವ ಅಭಿಪ್ರಾಯವನ್ನು ತಿಳಿದುಕೊಳ್ಳಿ. ಅನಂತರವೇ ಅವಳು / ಅವನು ನಿಮ್ಮ ಬಗ್ಗೆ ಇದೇ ರೀತಿ ಪ್ರೀತಿಯ ಭಾವನೆಯನ್ನು ಹೊಂದಿದ್ದಾರೆ ಎಂದರೆ ನಿಮ್ಮ ಪ್ರೀತಿಯನ್ನು ಕಣ್ಣು ಮುಚ್ಚಿ ಹೇಳಿಬಿಡಿ. ಅದಕ್ಕೆ ಒಪ್ಪಿಗೆ ಸೂಚಿಸಿದ ಮೇಲೆ ಅವರಿಗೆ ಇಷ್ಟವಾದ ಒಂದು ಉಡುಗೊರೆಯನ್ನು ಕೊಟ್ಟು ಅವರನ್ನು ಕಣ್ಣಲ್ಲಿ ಕಣ್ಣನ್ನು ಇಟ್ಟು ನೋಡುತ್ತ ಕೂರಿ ಆಗ ಅಲ್ಲಿ ನಿಮಗೆ ನಿಜವಾದ ಪ್ರೀತಿಯ ಫೀಲ್ ಸಿಗುತ್ತೆ. ಇದನ್ನು ಮಾಡದೇ ಕೇವಲ ಪ್ರೊಪೋಸ್ ಮಾಡಿ ಬೇರೆ ಯಾವುದೇ ರೀತಿಯ ಚಟುವಟಿಕೆ ಮಾಡಿದರೆ ಅದು ಫಲ ಸಿಗುವುದಿಲ್ಲ ನಿಮಗೆ ನಿಜವಾದ ಪವಿತ್ರ ಪ್ರೀತಿಯ ಸತ್ಯಾಂಶ ತಿಳಿಯಬೇಕೆಂದರೆ ಈ ಟಿಪ್ಸ್ ಫಾಲೋ ಮಾಡಿ. ಆಗ ನಿಮಗೆ ಇದು ಪ್ರೀತಿಯೋ ಅಥವಾ ಕೇವಲ ಆಕರ್ಷಣೆಯೋ ಎಂಬುದು ತಿಳಿಯುತ್ತದೆ. ಪ್ರೊಪೋಸ್ ಮಾಡಲು ಕೆಲವೊಂದು ಸ್ಥಳಗಳಿವೆ ಅಲ್ಲಿಗೆ ಕರೆದುಕೊಂಡು ಹೋಗಿ ಪ್ರೊಪೋಸ್ ಮಾಡಿ.

ಆ ಸ್ಥಳಗಳು :-

• ನಿಸರ್ಗದ ನಡುವೆ ಅಂದರೆ ಮನಸ್ಸಿಗೆ ತಂಪನೆಯ ಮುದ ನೀಡುವ ಸ್ಥಳಕ್ಕೆ ಕರೆದುಕೊಂಡು ಹೋಗಬಹುದು..

• ಎತ್ತರದ ಪ್ರದೇಶಕ್ಕೆ ಕರೆದ್ಯೊಯಬಹುದು.. ಕಾರಣ ಅಲ್ಲಿ ಬರುವ ಗಾಳಿಯು ಹಾಗೂ ನಿಶ್ಯಬ್ದತೆಯು ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ಸಮಯದಲ್ಲಿ ಸಹಾಯ ಮಾಡುತ್ತವೆ.

• ನೀರು ಹರಿಯುವ ಸ್ಥಳದಲ್ಲಿ ನಿಮ್ಮ ಪ್ರೀತಿಯನ್ನು ಹೇಳಿಕೊಳ್ಳಿ ಆಗ ನಿಮ್ಮ ಮನಸ್ಸಿನಲ್ಲಿ ಆ ಕ್ಷಣದ ಯೋಚನೆಯನ್ನು ಬಿಟ್ಟು ಬೇರೆ ಯಾವುದೇ ಯೋಚನೆ ತಲೆಗೆ ಬರುವುದಿಲ್ಲ.

• ಮಂದ ಬೆಳಕಿರುವ ಸ್ಥಳದಲ್ಲಿ ನೀವಿಬ್ಬರೆ ಇರುವಂತೆ ನೋಡಿಕೊಂಡು ಅಲ್ಲಿ ಕೂಡ ಕತ್ತಲೆಯ ಆ ಸಣ್ಣ ಬೆಳಕಿನಲ್ಲಿ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರೆ ಅದು ಸಫಲವಾಗುತ್ತದೆ.

• ನಿಮ್ಮ ಪ್ರೀತಿಯನ್ನು ಹೇಳಿಕೊಳ್ಳುವಾಗ ನಿಮ್ಮ ಸ್ನೇಹಿತರನ್ನು ಅಥವಾ ಬೇರೆ ವ್ಯಕ್ತಿಗಳನ್ನು ಜೊತೆಯಲ್ಲಿ ಕರೆದ್ಯೊಯಬೇಡಿ ಕಾರಣ ನಿಮಗೆ ಪ್ರೈವೆಸಿ ಸಿಗದೆ ಪ್ರೀತಿಯನ್ನು ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ.

ಪ್ರೇಮಿಗಳ ದಿನ ಕೊಡಬಹುದಾದ ಗಿಫ್ಟ್‌ಗಳು

ನೀವು ಪ್ರೀತಿಯಿಂದ ನಿಮ್ಮ ಪ್ರೀತಿ ಪಾತ್ರರಿಗೆ ಯಾವ ಗಿಫ್ಟ್ ಅನ್ನು ಕೊಟ್ಟರು ಅವರು ಸಂತೋಷ ಪಡುತ್ತಾರೆ. ಹಾಗಂತ ಅವರಿಗೆ ಇಷ್ಟವಿಲ್ಲದ ವಸ್ತುವನ್ನು ಗಿಫ್ಟ್ ಕೊಡೋಕೆ ಹೋಗ್ಬೇಡಿ ಬದಲಿಗೆ ಅವರ ಇಚ್ಚೆಯನ್ನು ತಿಳಿದುಕೊಂಡು ಉಡುಗೊರೆಯನ್ನು ಕೊಡಿ. ಆಮೇಲೆ ನೀವು ಕೊಡುವ ಉಡುಗೊರೆಯು ಎಷ್ಟು ಮೌಲ್ಯವನ್ನು ಹೊಂದಿದೆ ಎಂದು ನಿಮ್ಮ ಸಂಗಾತಿ ಕೇಳುವುದಿಲ್ಲ ಬದಲಿಗೆ ಅವರಿಗೆ ಸರ್ಪೈಸ್ ಮೂಲಕ ಕೊಟ್ಟರೆ ಅವರಿಗೆ ಇನ್ನು ಹೆಚ್ಚು ಖುಷಿಯಾಗುತ್ತದೆ. ಆ ರೀತಿಯಲ್ಲಿ ಕೊಡಬಹುದಾದ ಉಡುಗೊರೆಗಳೆಂದರೆ..

ಪ್ರೇಯಸಿಗೆ ಕೊಡಬಹುದಾದ ಉಡುಗೊರೆಗಳೆಂದರೆ..

1. ಚಾಕೂಲೇಟ್ಸ್‍ಗಳನ್ನ ಕೊಡಿ

2. ಗೊಂಬೆಗಳನ್ನ ಕೊಡಿ

3. ಜೀವನಕ್ಕೆ ಅರ್ಥ ಕೊಡುವಂತಹ ಸಂದೇಶವಿರುವ ಉಡುಗೊರೆಗಳನ್ನು ಕೊಡಿ

4. ಶಕ್ತಿ ಇದ್ದರೆ ಆಭರಣಗಳನ್ನ ತೆಗೆದುಕೊಡಿ

5. ಬಟ್ಟೆಗಳನ್ನು ತೆಗೆದುಕೊಡಿ

6. ನೀವೇ ಏನಾದರೂ ಗಿಫ್ಟ್ ರೆಡಿ ಮಾಡಿ ಅದನ್ನು ಕೊಡಿ ಇದರಿಂದ ಹೆಚ್ಚು ಖುಷಿಯಾಗುತ್ತಾರೆ.

ಪ್ರಿಯತಮನಿಗೆ ಕೊಡಬಹುದಾದ ಉಡುಗೊರೆಗಳೆಂದರೆ..

1. ಬಟ್ಟೆಯನ್ನು ಕೊಡಿಸಿ

2. ವಿಶೇಷವೆನಿಸುವ ಕ್ರಿಯೇಟಿವ್ ಉಡುಗೊರೆಯನ್ನು ಕೊಡಿ

3. ರಿಂಗ್ ಕೊಡಿ ಅದರಲ್ಲೂ ವಿಶೇಷತೆ ಇದ್ದರೆ ನಿಮ್ಮ ಪ್ರಿಯತಮನಿಗೆ ಹೆಚ್ಚು ಖುಷಿಯಾಗುತ್ತದೆ.

4. ನಿಮ್ಮ ಬಳಿ ಇರುವ ವೇಸ್ಟ್ ವಸ್ತುವಿನಿಂದ ಚಮಾತ್ಕಾರವೆನಿಸುವ ಉಡುಗೊರೆ ಮಾಡಿ ಕೊಡಿ.

5. ಅತೀ ಹೆಚ್ಚು ಬೆಲೆ ಬಾಳುವ ಗಿಫ್ಟ್‍ಗಿಂತ ತುಂಬ ಅರ್ಥ ಪೂರ್ಣ ಉಡುಗೊರೆ ಕೊಡಿ ಕಾರಣ ಗಂಡು ಮಕ್ಕಳು ಅದನ್ನು ನಿರೀಕ್ಷೆ ಮಾಡುತ್ತಾರೆ.

ಗಂಡನಿಗೆ ಕೊಡಬಹುದಾದ ಉಡುಗೊರೆಗಳೆಂದರೆ..

1. ನಿಮಗೆ ಕೊಟ್ಟಿರುವ ಹಣವನ್ನು ಉಳಿಸಿ ಅದರಲ್ಲಿ ಏನನ್ನಾದರೂ ತೆಗೆದುಕೊಡಿ ಅದರಿಂದ ನಿಮ್ಮ ಗಂಡನಿಗೆ ಹೆಚ್ಚು ಸಂತೋಷವಾಗುತ್ತದೆ.

2. ಒಂದೇ ರೀತಿಯ ಬಟ್ಟೆಯನ್ನು ಸೆಲೆಕ್ಟ್ ಮಾಡಿ ಅದನ್ನು ತೆಗೆದುಕೊಡಿ ಮತ್ತು ನೀವು ಧರಿಸಿ.

3. ಅವರಿಗೆ ಇಷ್ಟವಾದ ಅಡುಗೆಯನ್ನು ಮಾಡಿ ಬಡಿಸಿ

4. ಇಷ್ಟವಾದ ಸ್ವೀಟ್ಸ್ ಅನ್ನು ನೀವೇ ಸ್ವತಃ ಮಾಡಿ ಕೊಡಿ

5. ಪ್ರೀತಿಯಿಂದ ಮಾತಾಡಿ

ಹೆಂಡತಿಗೆ ಕೊಡಬಹುದಾದ ಉಡುಗೊರೆಗಳೆಂದರೆ..

1. ಈ ಹಿಂದೆ ಕೇಳಿರುವ ಯಾವುದಾದರೊಂದು ವಸ್ತುವನ್ನು ನೆನಪಿನಲ್ಲಿಟ್ಟುಕೊಂಡು ಅದನ್ನು ಕೊಡಿ.

2. ಅವರಿಗೆ ಇಷ್ಟವೆನಿಸುವ ಅಡುಗೆಯನ್ನು ನೀವೆ ಮಾಡಿಕೊಡಿ.

3. ನಿಮ್ಮ ಬಳಿ ಅವರು ಒಡವೆಗಳನ್ನು ಕೇಳಿದ್ದರೆ ಅದನ್ನು ತೆಗೆದುಕೊಡಿ.

4. ಎಲ್ಲದ್ದಾರೂ ಆಚೆ ಕರೆದುಕೊಂಡು ಹೋಗಿ.

5. ಅವರಿಗೆ ಇಷ್ಟವಾಗುವ ಜಾಗಕ್ಕೆ ಅವರಿಗೆ ಗೊತ್ತಿಲ್ಲದ ಹಾಗೇ ಕರೆದುಕೊಂಡು ಹೋಗಿ

ಪ್ರೇಮಿಗಳ ದಿನ ನಿಮ್ಮ ಪ್ರೇಯಸಿಗೆ / ಪ್ರಿಯತಮನಿಗೆ ಕಳುಹಿಸುವ ಸಂದೇಶಗಳು ಹೀಗಿದ್ದರೆ ಚನ್ನ

• ಕೆಲವರಿಗೆ ಪ್ರೀತಿ ಎಂದರೆ ಅನುಮಾನ.

ಕೆಲವರಿಗೆ ಅದು ಸಂಬಂಧ.

ಈನ್ನು ಕೆಲವೊಬ್ಬರಿಗೆ ಅದು ಸೆಂಟಿಮೆಂಟ್.

ಆದರೆ ಅದು ನನಗೆ ಒಂದು ಪುಟ್ಟ ಜಗತ್ತು. ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು

• ಗುಲಾಬಿಗೆ ಮುಳ್ಳು ಜಾಸ್ತಿ.

ಸಮುದ್ರದಲ್ಲಿ ನೀರು ಜಾಸ್ತಿ.

ನನಗೆ ನಿನ್ನ ಮೇಲೆ ಪ್ರೀತಿ ಜಾಸ್ತಿ

ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು

• ನನ್ನ ಈ ಪುಟ್ಟ ಹೃದಯ ನನ್ನದ ಅಥವಾ ನಿನ್ನದ ಅನ್ನೋ ಸಂದೇಹ ಮೂಡಿದೆ ಏಕೆಂದರೆ ಅದು ನನಗಿಂತ ನಿನ್ನ ಬಗ್ಗೆನೇ ಜಾಸ್ತಿ ಯೋಚಿಸ್ತಾ ಇದೆ. ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು.

• ನಾನಿನ್ನ ಯಾಕೆ ಇಷ್ಟು ಹಚ್ಚಿಕೊಂಡಿದ್ದೇನೆ ಅಂತ ನನಗೆ ಗೊತ್ತಿಲ್ಲ ಆದರೆ ನನ್ನ ಪ್ರಾಣ ಇರುವವರೆಗೂ ನಿನ್ನ ಮೇಲಿನ ಪ್ರೀತಿಯಂತು ಕಮ್ಮಿ ಆಗಲ್ಲ ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು.

• ನನ್ನ ಜೀವನದಲ್ಲಿ ಪ್ರೀತಿ, ವಿಶ್ವಾಸ, ಸಂತೋಷ, ತಂದ್ದಿದಕ್ಕೆ ಧನ್ಯವಾದ ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು.

• ಈ ವರ್ಷದ ಮಳೆಗಾಲದಲ್ಲಿ ಬೀಳುವ ಹನಿಗಳನ್ನು ನಿ ಎಣಿಸು.. ನಿ ಎಣಿಸಿದ ಹನಿಗಳಷ್ಟು ನೀ ನನ್ನ ಪ್ರೀತಿಸುವೆ.. ಆದರೆ ನಿ ಎಣಿಸದೆ ಬಿಟ್ಟ ಹನಿಗಳಷ್ಟು ನಾ ನಿನ್ನ ಪ್ರೀತಿಸುವೆ.

ರಕ್ಷಾ ಬಂಧನ: ಆಚರಣೆಯ ಹಿಂದಿನ ಮಹತ್ವ, ರಕ್ಷಾಬಂಧನಕ್ಕೆ ಶುಭಾಶಯಗಳು ಇಲ್ಲಿ ತಿಳಿಯಿರಿ