Home » ‘ಫ್ಯೂಚರ್ ಆಫ್ ಮೆಡಿಸಿನ್ 2023’ರಲ್ಲಿ ಆರೋಗ್ಯ ರಕ್ಷಣೆಯ ರೂಪಾಂತರದ ವಿನೂತನ ಪ್ರಗತಿ ಕುರಿತು ತಜ್ಞರ ಚರ್ಚೆ

‘ಫ್ಯೂಚರ್ ಆಫ್ ಮೆಡಿಸಿನ್ 2023’ರಲ್ಲಿ ಆರೋಗ್ಯ ರಕ್ಷಣೆಯ ರೂಪಾಂತರದ ವಿನೂತನ ಪ್ರಗತಿ ಕುರಿತು ತಜ್ಞರ ಚರ್ಚೆ

by manager manager

ಬೆಂಗಳೂರು, ಮಾರ್ಚ್ 11, 2023: ಆರೋಗ್ಯ ಉದ್ಯಮದಲ್ಲಿ ನಾವೀನ್ಯವನ್ನು ಉತ್ತೇಜಿಸಲು ಆರೋಗ್ಯ ಮತ್ತು ಯೋಗಕ್ಷೇಮ ಜ್ಞಾನ ವೇದಿಕೆ ಹ್ಯಾಪಿಯೆಸ್ಟ್ ಹೆಲ್ತ್, ಆಯೋಜಿಸಿದ ‘ಫ್ಯೂಚರ್ ಆಫ್ ಮೆಡಿಸಿನ್ 2023’ ಪ್ರಥಮ ವಾರ್ಷಿಕ ಶೃಂಗಸಭೆಯು ವೈದ್ಯಕೀಯ, ಸಂಶೋಧನೆ ಮತ್ತು ತಂತ್ರಜ್ಞಾನದ ಪ್ರಮುಖರ ಒಳನೋಟಗಳನ್ನು ಹಂಚಿಕೊಂಡಿತು. ಆರೋಗ್ಯ ಮತ್ತು ಔಷಧಿಯ ಭವಿಷ್ಯವನ್ನು ರೂಪಿಸಲು ಹ್ಯಾಪಿಯೆಸ್ಟ್ ಹೆಲ್ತ್ ಸಂಸ್ಥೆಯು ಈ ವೇದಿಕೆಯಲ್ಲಿ ಒಗ್ಗೂಡಿಸಿತು. ಅವರು ಆರೋಗ್ಯ ರಕ್ಷಣೆಯ ಪ್ರಾಥಮಿಕ ಸ್ತಂಭಗಳಾದ ಕೃತಕ ಬುದ್ಧಿಮತ್ತೆ (AI) ಮತ್ತು ಯಂತ್ರ ಕಲಿಕೆ (ML), ಮನುಷ್ಯನ ಕರುಳಿನ ಸೂಕ್ಷ್ಮಜೀವಿಗಳಿಗೆ ಸಂಬಂಧಿಸಿದ ಸಿದ್ಧಾಂತಗಳು, ಕಾಂಡ ಕೋಶ ಜೀನೋಮಿಕ್ಸ್, ಬಯೋಇನ್ಫೋರ್ಮ್ಯಾಟಿಕ್ಸ್ ಮತ್ತಿತರ ಕ್ಷೇತ್ರಗಳ ವಿನೂತನ ಪ್ರವೃತ್ತಿಗಳ ಕುರಿತು ಚರ್ಚಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ಹ್ಯಾಪಿಯೆಸ್ಟ್ ಹೆಲ್ತ್ ಅಧ್ಯಕ್ಷ ಅಶೋಕ್ ಸೂತ ಮಾತನಾಡಿ, “ಮಾನವನ ಆರೋಗ್ಯವನ್ನು ಸುಧಾರಿಸಲು ಅತ್ಯಾಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಸಂಯೋಗದಲ್ಲಿ ಸಂಭಾವ್ಯತೆಯನ್ನು ಅನ್ವೇಷಿಸಲು ಉದ್ಯಮದ ಪ್ರಮುಖರನ್ನು ಪ್ರೋತ್ಸಾಹಿಸುವ ಸಂವಾದಾತ್ಮಕ ಅನುಭವವನ್ನು ರಚಿಸುವುದು ‘ಔಷಧದ ಭವಿಷ್ಯ’ಕ್ಕೆ ಸಂಬಂಧಿಸಿ ನಮ್ಮ ದೃಷ್ಟಿಕೋನವಾಗಿದೆ. ಆರೋಗ್ಯಪೂರ್ಣ ಭವಿಷ್ಯಕ್ಕಾಗಿ ನಾವು ಶ್ರಮಿಸಬೇಕಿದ್ದರೆ, ಯೋಗಕ್ಷೇಮ ಮತ್ತು ಔಷಧದ ಕಲ್ಪನೆ, ಆರೋಗ್ಯ ಸೇವೆಗಳ ಮಾದರಿ ಮತ್ತು ಫಲಿತಾಂಶಗಳನ್ನು ಸುಧಾರಿಸಿ, ಇನ್ನಷ್ಟು ಜೀವಗಳನ್ನು ಉಳಿಸುವುದಕ್ಕಾಗಿ ವಿವಿಧ ಕ್ಷೇತ್ರಗಳನ್ನು ಒಗ್ಗೂಡಿಸುವ ವಿಧಾನವನ್ನು ಮರುವ್ಯಾಖ್ಯಾನಿಸಲು ಆರೋಗ್ಯ ಕ್ಷೇತ್ರವು ಸಹಕರಿಸಬೇಕಿದೆ” ಎಂದರು.

ಪ್ರಧಾನ ಭಾಷಣ ಮಾಡಿದ ನಾರಾಯಣ ಹೃದಯಾಲಯ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ ಮತ್ತು ಮಜುಂದಾರ್ ಶಾ ಮೆಡಿಕಲ್ ಫೌಂಡೇಶನ್‌ ವ್ಯವಸ್ಥಾಪಕ ನಿರ್ದೇಶಕ ಮತ್ತು ಸ್ಕಾನ್ ರಿಸರ್ಚ್ ಟ್ರಸ್ಟ್‌ಉಪಾಧ್ಯಕ್ಷ ಡಾ. ಪಾಲ್ ಸಾಲಿನ್ಸ್ ಅವರು, “ಆರೋಗ್ಯ ಮತ್ತು ಔಷಧವು ಸಂಪೂರ್ಣವಾಗಿ ಹೊಸ ವಲಯವನ್ನು ಪ್ರವೇಶಿಸುತ್ತಿದೆ. AI/ML ನಂತಹ ತಂತ್ರಜ್ಞಾನ ಮತ್ತು ವೈದ್ಯಕೀಯ ಸಾಧನಗಳಿಂದ ಲಭಿಸುವ ದತ್ತಾಂಶವು ಆರೋಗ್ಯ ರಕ್ಷಣೆಯಲ್ಲಿ ರೋಗ-ಕೇಂದ್ರಿತದಿಂದ ಆರೋಗ್ಯ-ಕೇಂದ್ರಿತ ಮಾದರಿಗೆ ಒಂದು ಕ್ರಾಂತಿಕಾರಿ ಬದಲಾವಣೆಯನ್ನು ಸೃಷ್ಟಿಸುತ್ತದೆ” ಎಂದು ಹೇಳಿದರು.

ಕಾಯಿಲೆಗಳಿಗೆ ಹೇಗೆ ಚಿಕಿತ್ಸೆ ನೀಡಬೇಕು ಎನ್ನುವುದಕ್ಕಿಂತ ತಮ್ಮ ಆರೋಗ್ಯವನ್ನು ಹೇಗೆ ಉತ್ತಮವಾಗಿ ನಿರ್ವಹಿಸುವುದು ಎಂಬ ಕುರಿತು ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಇದು ವಿನೂತನ ಆಧುನಿಕ ಆರೋಗ್ಯ ಪರಿಸರ ವ್ಯವಸ್ಥೆಯಾಗಿ ಭಾರತದ ಆಯುರ್ವೇದ ಔಷಧ ಪದ್ಧತಿಯನ್ನು ಇನ್ನಷ್ಟು ಪ್ರಸ್ತುತಗೊಳಿಸುತ್ತದೆ.

ಬೆಂಗಳೂರಿನ ಟ್ರಾನ್ಸ್-ಡಿಸಿಪ್ಲಿನರಿ ಯೂನಿವರ್ಸಿಟಿಯ BOG ಸದಸ್ಯ ಹಾಗೂ ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಆಫ್ ಆಯುರ್ವೇದ ಅಂಡ್ ಇಂಟಿಗ್ರೇಟೆಡ್ ಮೆಡಿಸಿನ್ (I-AIM) ವೈದ್ಯಕೀಯ ಸಲಹೆಗಾರರಾಗಿರುವ ಡಾ. ನರೇಂದ್ರ ಪೆಂಡ್ಸೆ ಮಾತನಾಡಿ, ಆಯುರ್ವೇದ ಜೀವಶಾಸ್ತ್ರದ ವಿನೂತನ ಕ್ಷೇತ್ರವು ಭಾರತೀಯ ಆರೋಗ್ಯ ವಿಜ್ಞಾನದ ಪ್ರಗತಿಗೆ ಕೊಡುಗೆ ನೀಡಬಹುದೇ ಎಂದು ಅನ್ವೇಷಿಸಲು ವೈದ್ಯಕೀಯದ ಎಲ್ಲ ಕ್ಷೇತ್ರಗಳ ನಡುವಿನ ಅಂತರವನ್ನು ನಿವಾರಿಸುವ ನಿಟ್ಟಿನಲ್ಲಿ ಸಹಯೋಗ ಮತ್ತು ಸಂಭಾಷಣೆಯಲ್ಲಿ ತೊಡಗುವಂತೆ ಕರೆ ನೀಡಿದರು. “ತಂತ್ರಜ್ಞಾನ ಮತ್ತು ಸಾಧನಗಳನ್ನು ಬಳಸಿಕೊಂಡು ಆರೋಗ್ಯಕ್ಕೆ ಸ್ಥೂಲ-ಪರಿಸರದ ಅಂಶವನ್ನು ನೀಡಬಹುದಾದ ಪ್ರಸ್ತುತ ಜಗತ್ತಿನಲ್ಲಿ, ಆಯುರ್ವೇದವು ಭೌಗೋಳಿಕ ವ್ಯತ್ಯಾಸಗಳು ಮತ್ತು ಪ್ರತಿಯೊಬ್ಬ ವ್ಯಕ್ತಿಯ ವಿಶಿಷ್ಟ ಆನುವಂಶಿಕ ರಚನೆಯನ್ನು ಲೆಕ್ಕಹಾಕುವ ಮೂಲಕ ಸಾಮೂಹಿಕ ಪ್ರಮಾಣದಲ್ಲಿ ವೈಯಕ್ತಿಕಗೊಳಿಸಿದ ಆರೈಕೆಯನ್ನು ನೀಡಬಹುದು ಎಂದು ಅವರು ಹೇಳಿದರು.

ಪ್ರಮುಖ ಭಾಷಣಕಾರರಾಗಿ ಗ್ರೇಮ್ ಬ್ರೌನ್, (ಚೀಫ್ ಬಿಸಿನೆಸ್ ಆಫೀಸರ್, ಕ್ವಾಡ್ರಮ್ ಇನ್‌ಸ್ಟಿಟ್ಯೂಟ್ ಬಯೋಸೈನ್ಸ್), ಪ್ರೊ ಅರ್ಜನ್ ನರ್ಬಾದ್ (ಟ್ರಾನ್ಸಾಕ್ಷನಲ್ ಮೈಕ್ರೋಬಯೋಮ್ ಗ್ರೂಪ್ ಲೀಡರ್, ಕ್ವಾಡ್ರಮ್ ಇನ್‌ಸ್ಟಿಟ್ಯೂಟ್ ಬಯೋಸೈನ್ಸ್, ನಾರ್ವಿಚ್, ಇಂಗ್ಲೆಂಡ್), ಡಾ. ಯೋಗೇಶ್ ಶೌಕೆ (ನ್ಯಾಷನಲ್ ಸೆಂಟರ್ ಫಾರ್ ಮೈಕ್ರೋಬಿಯಲ್ ರಿಸೋರ್ಸ್‌, ನ್ಯಾಷನಲ್ ಸೆಂಟರ್ ಫಾರ್ ಸೆಲ್ ಸೈನ್ಸ್ ಸಂಸ್ಥೆಯ ಪ್ರಧಾನ ತಪಾಸಣಾಧಿಕಾರಿ), ಡಾ. ಜ್ಯೋತಿ ನಂಗಾಲಿಯಾ (ಚಿಕಿತ್ಸಕ ವಿಜ್ಞಾನಿ ಮತ್ತು ಕನ್ಸಲ್ಟೆಂಟ್ ಹೆಮಟಾಲಜಿಸ್ಟ್, ಕೇಂಬ್ರಿಡ್ಜ್ ಸ್ಟೆಮ್ ಸೆಲ್ ಇನ್‌ಸ್ಟಿಟ್ಯೂಟ್, ಯುಕೆ), ಡಾ. ನರೇಂದ್ರ ಪೆಂಡ್ಸೆ (ರುಮಟಾಲಜಿಸ್ಟ್, ಆಯುರ್ವೇದ, / ಸದಸ್ಯ BOG, ಟ್ರಾನ್ಸ್-ಡಿಸಿಪ್ಲಿನರಿ ಯೂನಿವರ್ಸಿಟಿ, ಬೆಂಗಳೂರು, ವೈದ್ಯಕೀಯ ಸಲಹೆಗಾರರು, ಇನ್‌ಸ್ಟಿಟ್ಯೂಟ್ ಆಫ್ ಆಯುರ್ವೇದ ಅಂಡ್ ಇಂಟಿಗ್ರೇಟಿವ್ ಮೆಡಿಸಿನ್ (I-AIM), ಬೆಂಗಳೂರು), ಪ್ರೊ. ಸಂಜೀವ್ ಜೈನ್ (ಪ್ರಧಾನ ತಪಾಸಣಾಧಿಕಾರಿ, SKAN ಯೋಜನೆಗಳು, ನಿಮ್ಹಾನ್ಸ್) ಮತ್ತು ವಿಶಾಲ್ ಬಾಲಿ, (ಕಾರ್ಯನಿರ್ವಾಹಕ ಅಧ್ಯಕ್ಷರು, ಏಷ್ಯಾ ಹೆಲ್ತ್‌ಕೇರ್ ಹೋಲ್ಡಿಂಗ್ಸ್) ಪಾಲ್ಗೊಂಡಿದ್ದರು.

ಹ್ಯಾಪಿಯೆಸ್ಟ್ ಹೆಲ್ತ್ ಅಧ್ಯಕ್ಷರು ಮತ್ತು ಸಿಇಒ ಅನಿಂದ್ಯಾ ಚೌಧರಿ ಪ್ರತಿಕ್ರಿಯಿಸಿ, “ಆರೋಗ್ಯ ಉದ್ಯಮಕ್ಕೆ ಸ್ಪಷ್ಟವಾದ ವ್ಯತ್ಯಾಸವನ್ನು ಉಂಟುಮಾಡಲು, ಉದ್ಯಮದ ಪ್ರಮುಖರು ಉದಯೋನ್ಮುಖ ಪ್ರವೃತ್ತಿಗಳ ನಾಡಿಮಿಡಿತವನ್ನು ಅರಿತಿರಬೇಕು. ಆರೋಗ್ಯಕರ ಭವಿಷ್ಯಕ್ಕಾಗಿ ಆರೋಗ್ಯ ಪರಿಸರ ವ್ಯವಸ್ಥೆಯನ್ನು ಹೆಚ್ಚಿಸುವ ಹೊಸ ಜ್ಞಾನವನ್ನು ನಿಯಮಿತವಾಗಿ ಸಂಪರ್ಕಿಸಲು ಮತ್ತು ಹಂಚಿಕೊಳ್ಳಲು ಉದ್ಯಮದ ಪ್ರಮುಖರಿಗೆ ‘ಫ್ಯೂಚರ್ ಆಫ್ ಮೆಡಿಸಿನ್’ ಒಂದು ಮಾರ್ಗವಾಗುವುದು ನಮ್ಮ ಆಶಯವಾಗಿದೆ”ಎಂದು ಹೇಳಿದರು.